ಭಾರತ ಪಾಕಿಸ್ತಾನ ಎಲ್ಒಸಿ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಿದ ಭಾರತೀಯ ಸೇನೆ
ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆಯು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಿದೆ. ಪೂಂಚ್ ಸೆಕ್ಟರ್‌ನಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಭಾರತ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರತೀಯ ಸೇನಾ ಸಿಬ್ಬಂದಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಇದರ ವಿಡಿಯೋ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಪ್ರತಿಮೆಯನ್ನು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ, ಎಲ್‌ಒಸಿಗೆ ಹತ್ತಿರದಲ್ಲಿಯೇ ಸ್ಥಾಪಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕುದುರೆಮುಖ ಉದ್ಯಾನವನದ 25ಕ್ಕೂ ಹೆಚ್ಚು ಕಡೆ ಬೆಂಕಿ: ಹೊತ್ತಿ ಉರಿಯುತ್ತಿರುವ ಅಪರೂಪದ ಶೋಲಾ ಹುಲ್ಲುಗಾವಲು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋಗಳಲ್ಲಿ ಸೈನಿಕರು ದಟ್ಟವಾದ ಕಾಡುಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳ ನಡುವೆ ಶಿವಾಜಿ ಪ್ರತಿಮೆಯನ್ನು ಇರಿಸುತ್ತಿರುವುದು ಕಂಡು ಬಂದಿದೆ. ಸೇನಾ ಸಿಬ್ಬಂದಿ ಪ್ರತಿಮೆಯ ಮುಂದೆ ನಮಸ್ಕರಿಸಿ, ಮಿಲಿಟರಿ ತಂತ್ರ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ ಮರಾಠಾ ರಾಜನಿಗೆ ಗೌರವ ಸಲ್ಲಿಸುವುದನ್ನು ಫೋಟೋ ವೀಡಿಯೋಗಳಲ್ಲಿ ಕಾಣಬಹುದು.
ಇದನ್ನೂ ಓದಿ: ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ದುರಂತ: ಚಿಕಿತ್ಸೆ ನೀಡುತ್ತಿದ್ದ ವೇಳೆ ನೀರಾನೆ ದಾಳಿಗೆ ಪಶುವೈದ್ಯೆ ಬಲಿ
ಇಲ್ಲಿ ಸ್ಥಾಪಿಸಲಾದ ಶಿವಾಜಿ ಪ್ರತಿಮೆಯೂ ಕಠಿಣ ಮತ್ತು ಹೆಚ್ಚಿನ ಅಪಾಯದ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಸೈನಿಕರನ್ನು ಪ್ರೇರೇಪಿಸುವ ಸಾಂಕೇತಿಕ ಸೂಚಕವಾಗಿದೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ವರದಿ ಮಾಡಿದ್ದು, ಈ ವಿಚಾರ ಈಗ ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದೆ, ಅನೇಕ ಬಳಕೆದಾರರು ಇದನ್ನು ಪ್ರಬಲವಾದ ಗೌರವ ಎಂದು ಕರೆದಿದ್ದಾರೆ. ಹಾಗೂ ಶಿವಾಜಿ ಮಹಾರಾಜರ ಚೈತನ್ಯ ಮತ್ತು ಗೆರಿಲ್ಲಾ ಯುದ್ಧದ ಪರಂಪರೆಯನ್ನು ಭಾರತದ ಗಡಿಗಳನ್ನು ಕಾಯುವ ಸೈನಿಕರ ಮನೋಭಾವಕ್ಕೆ ಹೋಲಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮೊದಲೇ ಇಂದು ನಾಮಪತ್ರ ಸಲ್ಲಿಸಲ್ಲಿರುವ ಸಮರ್ಥ ಶಾಮನೂರು
ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಇದೇ ರೀತಿ ಶಿವಾಜಿ ಮಹಾರಾಜರ ಪ್ರತಿಮೆಗಳ ಸ್ಥಾಪನೆಗಳು ಈ ಹಿಂದೆಯೂ ನಡೆದಿತ್ತು. ಆದರೂ ಈ ನಿರ್ದಿಷ್ಟವಾದ ವೀಡಿಯೋ ನೈತಿಕತೆ ಮತ್ತು ಮಿಲಿಟರಿ ಸಂಪ್ರದಾಯದ ಕುರಿತು ಚರ್ಚೆಗೆ ಕಾಣವಾಗಿದೆ. ಆದರೆ ವೈರಲ್ ವೀಡಿಯೊದ ಕುರಿತು ಭಾರತೀಯ ಸೇನೆಯು ಇಲ್ಲಿಯವರೆಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೂ ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ.
ಇದನ್ನೂ ಓದಿ: ಸೈಲೆಂಟ್ ಕಟ್ಟರ್ ಬಳಸಿ 10,000ಕ್ಕೂ ಅಧಿಕ ಮರಗಳ ಕಡಿತ: ದೂರು ನೀಡಿದ ಫಾರೆಸ್ಟ್ ಗಾರ್ಡ್‌ಗೆ ಅಮಾನತಿನ ಶಿಕ್ಷೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

