ಮಹಿಳೆಯರನ್ನು ಸ್ವಾವಲಂಭಿಯಾಗಿ ಮಾಡಲು ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತರ್ತಿದೆ. ಅದ್ರಲ್ಲಿ ಲಖ್ಪತಿ ದೀದಿ ಯೋಜನೆ ಸೇರಿದೆ. ಅದ್ರ ಲಾಭವೇನು, ಅರ್ಜಿ ಎಲ್ಲಿ ಸಲ್ಲಿಸೋದು ಎಂಬ ಮಾಹಿತಿ ಇಲ್ಲಿದೆ.

ಭಾರತ ಸರ್ಕಾರ (Government of India) ಮಹಿಳೆಯರ ಸಬಲೀಕರಣಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದೇ ಇದ್ರ ಗುರಿಯಾಗಿದೆ. ಈಗ ಮಹಿಳೆಯರು ನಾಲ್ಕು ಗೋಡೆ ಮಧ್ಯೆ ಬಂಧಿಯಾಗಿಲ್ಲ. ವ್ಯಾಪಾರ, ನವೋದ್ಯಮ, ಕೃಷಿ, ಡೈರಿ ಮತ್ತು ಸೇವಾ ವಲಯದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಕ್ಷೇತ್ರಗಳಿಗೆ ಹೆಚ್ಚಿನ ಮಟ್ಟದಲ್ಲಿ ಮಹಿಳೆಯರು ಬರುವಂತೆ ಮಾಡಲು ಸರ್ಕಾರ ಈಗ ಲಖ್ಪತಿ ದೀದಿ ಯೋಜನೆ ಎಂಬ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ.

ಲಖ್ಪತಿ ದೀದಿ ಯೋಜನೆ (Lakhpati Didi Scheme)

ಈ ಯೋಜನೆ ಸ್ವಂತ ಬ್ಯುಸಿನೆಸ್ (Own Business) ಪ್ರಾರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಸಣ್ಣ ವ್ಯವಹಾರಗಳನ್ನು ವಿಸ್ತರಿಸಲು ಬಯಸುವ ಮಹಿಳೆಯರಿಗೆ ಹೊಸ ಭರವಸೆಯ ಕಿರಣವಾಗಿದೆ. ಈ ಯೋಜನೆಯಡಿಯಲ್ಲಿ, ಮಹಿಳೆಯರಿಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಬ್ಯುಸಿನೆಸ್ ಮಾಡಲು ಅಥವಾ ಬ್ಯುಸಿನೆಸ್ ವಿಸ್ತರಿಸಲು ಭಯಪಡುವ ಮಹಿಳೆಯರಿಗೆ ಇದು ಆಶಾಕಿರಣವಾಗಿದೆ.

ಕೋಟಿಗಟ್ಟಲೆ ಹಣಕ್ಕೆ ಪುಣೆಯ ಐಷಾರಾಮಿ ಜಾಗ ಮಾರಾಟ ಮಾಡಿದ ರಾಕೇ

ಲಖ್ಪತಿ ದೀದಿ ಯೋಜನೆ ಎಂದರೇನು?

ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಲಖ್ಪತಿ ದೀದಿ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರು 5 ಲಕ್ಷದವರೆಗೆ ಬಡ್ಡಿರಹಿತ ಸಾಲ (Interest Free Loan)ಗಳನ್ನು ಪಡೆಯಬಹುದು. ಮಹಿಳೆಯರು ಈ ಹಣವನ್ನು ಸ್ವ-ಉದ್ಯೋಗವನ್ನು ಪ್ರಾರಂಭಿಸಲು, ಸಣ್ಣ ಉದ್ಯಮವನ್ನು ಸ್ಥಾಪಿಸಲು ಅಥವಾ ಈಗಿರುವ ಬ್ಯುಸಿನೆಸ್ ವಿಸ್ತರಿಸಲು ಬಳಸಬಹುದು. ಸರ್ಕಾರವು ಈ ಯೋಜನೆಯಡಿಯಲ್ಲಿ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿಗಳನ್ನು ಒದಗಿಸುತ್ತದೆ.

ಬ್ಯಾಂಕ್ ಸಾಲಗಳಿಗಿಂತ ಈ ಯೋಜನೆ ಹೆಚ್ಚು ಪ್ರಯೋಜನಕಾರಿ. ಈ ಯೋಜನೆಯು ಕೃಷಿ, ಪಶುಸಂಗೋಪನೆ, ಡೈರಿ, ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ಸೇವಾ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆಯಲು ಅವಕಾಶಗಳನ್ನು ಒದಗಿಸುತ್ತದೆ.

ಯಾರು ಪ್ರಯೋಜನ ಪಡೆಯಬಹುದು?

 • ಮಾನ್ಯತೆ ಪಡೆದ ಸ್ವಸಹಾಯ ಗುಂಪಿನ ಸದಸ್ಯರಾಗಿರುವ ಮಹಿಳೆಯರು ಮಾತ್ರ ಲಖ್ಪತಿ ದೀದಿ ಯೋಜನೆಯಿಂದ ಪ್ರಯೋಜನ ಪಡೆಯಬಹುದು. 

• ಈ ಯೋಜನೆಯು ಸಾಲಗಳನ್ನು ಮಾತ್ರವಲ್ಲದೆ ಕೌಶಲ್ಯ ತರಬೇತಿಯನ್ನೂ ನೀಡುತ್ತದೆ. •ಮಹಿಳೆಯರು ಹಣವನ್ನು ಪಡೆಯುವುದು ಮಾತ್ರವಲ್ಲದೆ ಸರಿಯಾದ ತರಬೇತಿಯ ಮೂಲಕ ಸುಸ್ಥಿರ ವ್ಯವಹಾರಗಳನ್ನು ನಿರ್ಮಿಸಬೇಕೆಂದು ಸರ್ಕಾರ ಬಯಸುತ್ತದೆ. 

• ಈ ಯೋಜನೆಯು ಮಹಿಳೆಯರ ವಾರ್ಷಿಕ ಆದಾಯವನ್ನು ಹೆಚ್ಚಿಸುವ ಮತ್ತು ಅವರನ್ನು ಲಖ್ಪತಿ ದೀದಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. 

• ಇದು ಮಹಿಳೆಯರಿಗೆ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಲು, ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ವೃತ್ತಿಪರವಾಗಿ ತಮ್ಮ ವ್ಯವಹಾರಗಳನ್ನು ನಡೆಸಲು ಸಹಾಯ ಮಾಡುತ್ತದೆ.

ಸುಲಭವಾಗಿ ಕೇವಲ 72 ಗಂಟೆಗಳಲ್ಲಿ ಇಲ್ಲಿ ಸಿಗುತ್ತೆ ₹5 ಲಕ್ಷ ಸಾಲ..! ಬ್ಯಾಂಕ್‌ಗೆ ಹೋಗುವ ಕೆಲಸವೂ ಇಲ್ಲ

ಅರ್ಜಿ ಸಲ್ಲಿಸುವುದು ಹೇಗೆ? 

18 ರಿಂದ 50 ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು. ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಮೊದಲು ಸ್ವಸಹಾಯ ಗುಂಪಿಗೆ ಸೇರುವುದು ಅವಶ್ಯಕ. ಕೌಶಲ್ಯ ತರಬೇತಿ ಪಡೆದ ನಂತರ, ಅವರು ತಮ್ಮ ಕೆಲಸವನ್ನು ವಿವರಿಸುವ ಸ್ಪಷ್ಟ ವ್ಯವಹಾರ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಮಹಿಳೆಯರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಸ್ವಸಹಾಯ ಸಂಘ ಕಚೇರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಅಥವಾ ಹತ್ತಿರದ ಬ್ಯಾಂಕಿನಲ್ಲಿ ಫಾರ್ಮ್ ಅನ್ನು ಆಫ್ಲೈನ್ನಲ್ಲಿ ಸಲ್ಲಿಸುವ ಆಯ್ಕೆಯೂ ಇದೆ.