Asianet Suvarna News Asianet Suvarna News

ಅಕೌಂಟ್ ಅಗ್ರಿಗೇಟರ್: ಮುಕ್ತ ಬ್ಯಾಂಕಿಂಗ್ ವ್ಯವಸ್ಥೆ ತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆ!

* ಭಾರತದಲ್ಲಿ ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ ಆರಂಭ

* ಲಕ್ಷಾಂತರ ಗ್ರಾಹಕರಿಗೆ ತಮ್ಮ ಹಣಕಾಸಿನ ದಾಖಲೆಗಳ ಮೇಲೆ ಹೆಚ್ಚಿನ ಲಭ್ಯತೆ 

* ಏನಿದು ಅಕೌಂಟ್ ಅಗ್ರಿಗೇಟರ್? ಇಲ್ಲಿದೆ ಮಾಹಿತಿ

Know all about Account Aggregator Network a financial data sharing system
Author
Bangalore, First Published Sep 10, 2021, 11:45 AM IST

ಭಾರತ ಕಳೆದ ವಾರ ಅಕೌಂಟ್ ಅಗ್ರಿಗೇಟರ್ (ಎಎ) ಜಾಲವನ್ನು ಅನಾವರಣಗೊಳಿಸಿದೆ. ಇದು ಹೂಡಿಕೆ ಮತ್ತು ಸಾಲ ನೀಡುವ ವಿಚಾರದಲ್ಲಿ ಕ್ರಾಂತಿಕಾರಕ ವ್ಯವಸ್ಥೆಯಾಗಲಿದೆ. ಲಕ್ಷಾಂತರ ಗ್ರಾಹಕರಿಗೆ ತಮ್ಮ ಹಣಕಾಸಿನ ದಾಖಲೆಗಳ ಮೇಲೆ ಹೆಚ್ಚಿನ ಲಭ್ಯತೆ ಮತ್ತು ನಿಯಂತ್ರಣ ನೀಡುವುದರೊಂದಿಗೆ ಸಾಲದಾತರು ಮತ್ತು ಫಿನ್ ಟೆಕ್ ಕಂಪನಿಗಳಿಗೆ ಸಂಭಾವ್ಯ ಗ್ರಾಹಕರ ಸಮೂಹವನ್ನು ವಿಸ್ತರಿಸುತ್ತದೆ. ಅಕೌಂಟ್ ಅಗ್ರಿಗೇಟರ್ ಸಾರ್ವಜನಿಕರಿಗೆ ತಮ್ಮ ವೈಯಕ್ತಿಕ ಹಣಕಾಸು ದತ್ತಾಂಶದ ಮೇಲೆ ನಿಯಂತ್ರಣ ಹೊಂದುವ ಅಧಿಕಾರ ನೀಡುತ್ತದೆ, ಇಲ್ಲವಾದರೆ ಅದು ಗುಪ್ತವಾಗಿಯೇ ಉಳಿಯುತ್ತದೆ.

ಭಾರತದಲ್ಲಿ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆ ತರುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಮತ್ತು ಲಕ್ಷಾಂತರ ಗ್ರಾಹಕರು ತಮ್ಮ ಹಣಕಾಸು ದತ್ತಾಂಶಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಮತ್ತು ಎಲ್ಲ ಸಂಸ್ಥೆಗಳ ನಡುವೆ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನದ ಮೂಲಕ ಹಂಚಿಕೊಳ್ಳುವ ಅಧಿಕಾರವನ್ನು ನೀಡುತ್ತದೆ.

ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ ದೇಶದ ಎಂಟು ದೊಡ್ಡ ಬ್ಯಾಂಕುಗಳಲ್ಲಿ ಆರಂಭವಾಗಿದೆ. ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆ ಸಾಲ ನೀಡಿಕೆಯನ್ನು ಮತ್ತು ಸಂಪತ್ತು ನಿರ್ವಹಣೆಯನ್ನು ಇನ್ನಷ್ಟು ತ್ವರಿತ ಮತ್ತು ಅಗ್ಗಗೊಳಿಸಲಿದೆ.

ಫೋನ್ ಕಳುವಾದರೆ ಬ್ಯಾಂಕಿಂಗ್ ವಿವರ, ಆನ್‌ಲೈನ್ ವ್ಯಾಲೆಟ್ ಸುರಕ್ಷತೆಗೆ ಹೀಗೆ ಮಾಡಿ..!

1) ಅಕೌಂಟ್ ಅಗ್ರಿಗೇಟರ್ ಎಂದರೇನು?

ಅಕೌಂಟ್ ಅಗ್ರಿಗೇಟರ್ (ಎಎ), ಆರ್ ಬಿಐ ನಿಯಂತ್ರಿತ ಒಂದು ವರ್ಗದ ಸಂಸ್ಥೆ (ಎನ್ ಬಿಎಫ್ ಸಿಒಳಗೊಂಡ-ಎಎ ಪರವಾನಗಿ) ಯಾಗಿದ್ದು, ಇದರಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಪಡೆಯಬಹುದು ಮತ್ತು ಅದನ್ನು ಎಎ ಮೂಲಕ ತಾವು ಖಾತೆ ಹೊಂದಿರುವ ಒಂದು ಹಣಕಾಸು ಸಂಸ್ಥೆಯಿಂದ ಮತ್ತೊಂದು ನಿಯಂತ್ರಿತ ಹಣಕಾಸು ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಸಾರ್ವಜನಿಕರ ಒಪ್ಪಿಗೆಯಿಲ್ಲದೆ ದತ್ತಾಂಶವನ್ನು ಹಂಚಿಕೆ ಮಾಡಲಾಗುವುದಿಲ್ಲ.

ಹಲವು ಅಕೌಂಟ್ ಅಗ್ರಿಗೇಟರ್‌ಗಳಿರಲಿದ್ದು, ಅವರುಗಳ ನಡುವೆ ಸಾರ್ವಜನಿಕರು ಆಯ್ಕೆ ಮಾಡಿಕೊಳ್ಳಬಹುದು.

ಅಕೌಂಟ್ ಅಗ್ರಿಗೇಟರ್  ‘ಖಾಲಿ ಚೆಕ್‘ ಸ್ವೀಕೃತಿಯ ದೀರ್ಘಾವಧಿಯ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುತ್ತದೆ, ನಿಮ್ಮ ದತ್ತಾಂಶದ ಪ್ರತಿ ಬಳಕೆಯು ಪ್ರತಿ ಹಂತದಲ್ಲಿ  ಅನುಮತಿ ಮತ್ತು ನಿಯಂತ್ರಣ ಹೊಂದಿರುತ್ತದೆ.

* ಅಕೌಂಟ್ ಅಗ್ರಿಗೇಟರ್ ಒಂದು ಇಂಟರ್ ಆಪರಬಲ್ ಡಾಟಾ ಬ್ಲೈಂಡ್ ಕನ್ಸಂಟ್ ಮ್ಯಾನೇಜರ್
* ಎಎಗಳು ಗ್ರಾಹಕರ ದತ್ತಾಂಶ ಓದುವುದಿಲ್ಲ.
* ಅವು ಗ್ರಾಹಕರ ದತ್ತಾಂಶವನ್ನು ಮರು ಮಾರಾಟ ಮಾಡುವುದಿಲ್ಲ.  
* ಎಎ ಅಡಿಯಲ್ಲಿ ಗ್ರಾಹಕರು ಆಯ್ದ ದತ್ತಾಂಶವನ್ನು ಹಂಚಿಕೆ ಮಾಡಿಕೊಳ್ಳಬಹುದು ಮತ್ತು ಒಮ್ಮೆ ಹಂಚಿಕೆ ಮಾಡಿಕೊಂಡ ದತ್ತಾಂಶವನ್ನು ಹಿಂಪಡೆಯಲು ಕೂಡ ಅಧಿಕಾರವಿರುತ್ತದೆ.
* ಎಎಗಳು ಗ್ರಾಹಕರಿಗೆ ನಿಷ್ಠವಾಗಿ ಕರ್ತವ್ಯ ನಿರ್ವಹಿಸುತ್ತವೆ ಮತ್ತು ಅವು ಆರ್ ಬಿಐ ನಿಯಂತ್ರಣ ಸಂಸ್ಥೆಗಳಾಗಿರುತ್ತವೆ. ಅವು ಡಿಜಿಟಲ್ ಸಹಿ ಹಾಕಿದ ಮತ್ತು ಎನ್ ಕ್ರಿಪ್ಟ್ ಮಾಡಲಾದ ದತ್ತಾಂಶ ಹಂಚಿಕೊಳ್ಳಬಹುದು.
* ಭಾರತದಲ್ಲಿನ ಅಕೌಂಟ್ ಅಗ್ರಿಗೇಟರ್ ಪೂರಕ ವ್ಯವಸ್ಥೆ

2) ಸಾಮಾನ್ಯ ವ್ಯಕ್ತಿಯ ಆರ್ಥಿಕ ಜೀವನ ಹೊಸ ಅಕೌಂಟ್ ಅಗ್ರಿಗೇಟರ್ ಜಾಲದಿಂದ ಹೇಗೆ ಸುಧಾರಣೆಯಾಗುತ್ತದೆ?

ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ಇಂದು ಗ್ರಾಹಕರು ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ – ಭೌತಿಕವಾಗಿ ಸಹಿ ಮಾಡಿದ ಮತ್ತು ಸ್ಕ್ಯಾನ್ ಮಾಡಲಾದ ಬ್ಯಾಂಕ್ ಪ್ರತಿಗಳನ್ನು ಹಂಚಿಕೊಳ್ಳುವುದು, ನೋಟರಿ ಮಾಡಿಸುವುದು ಅಥವಾ ಮುದ್ರಾಂಕ ದಾಖಲೆಗಳಿಗಾಗಿ ಅಲೆದಾಡುವುದು ಅಥವಾ ನಿಮ್ಮ ಹಣಕಾಸು ಹಿನ್ನೆಲೆಯನ್ನು ಮೂರನೇ ವ್ಯಕ್ತಿಗೆ ನೀಡಲು ವೈಯಕ್ತಿಕ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಹಂಚಿಕೊಳ್ಳುವುದು ಇತ್ಯಾದಿಗಳು ಸೇರಿವೆ. ಅಕೌಂಟ್ ಅಗ್ರಿಗೇಟರ್ ಜಾಲ, ಮೊಬೈಲ್ ಆಧಾರಿತ ಒಂದು ಸರಳ, ಸುಲಭ ಮತ್ತು ಸುರಕ್ಷಿತ ಡಿಜಿಟಲ್ ದತ್ತಾಂಶ ಲಭ್ಯತೆ ಮತ್ತು ಹಂಚಿಕೆ ಪ್ರಕ್ರಿಯೆ ಮೂಲಕ ಈ ಎಲ್ಲವುಗಳನ್ನು ಬದಲಾಯಿಸಲಿದೆ. ಇದರಿಂದಾಗಿ ಹೊಸ ಬಗೆಯ ಸೇವೆಗಳಲ್ಲಿ ಅವಕಾಶಗಳು ಅಂದರೆ ಉದಾಹರಣೆಗೆ ಹೊಸ ವಿಧಾನದ ಸಾಲಗಳು ಸೃಷ್ಟಿಯಾಗಲಿವೆ.

ಬ್ಯಾಂಕ್ ಖಾತೆ ಹೊಂದಿರುವ ಸಾರ್ವಜನಿಕರು ಅಕೌಂಟ್ ಅಗ್ರಿಗೇಟರ್ ಜಾಲಕ್ಕೆ ಸೇರ್ಪಡೆಯಾಗಬಹುದು.  8 ಬ್ಯಾಂಕುಗಳು ಈಗಾಗಲೇ ಇದನ್ನು ಆರಂಭಿಸಿದ್ದು, ನಾಲ್ಕು ಬ್ಯಾಂಕುಗಳು ಈಗಾಗಲೇ ದತ್ತಾಂಶ ಹಂಚಿಕೆಗೆ ಒಪ್ಪಿಗೆ ಸೂಚಿಸಿವೆ.(ಆಕ್ಸಿಸ್, ಐಸಿಐಸಿಐ, ಎಚ್ ಡಿಎಫ್ ಸಿ ಮತ್ತು ಇಂಡುಸ್ ಲ್ಯಾಂಡ್) ಮತ್ತು ಸದ್ಯದಲ್ಲೇ ನಾಲ್ಕು ಬ್ಯಾಂಕುಗಳು ಹಂಚಿಕೆ ಮಾಡಿಕೊಳ್ಳಲಿವೆ.(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊಟಕ್ ಮಹೇಂದ್ರ ಬ್ಯಾಂಕ್,  ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್)

ಇನ್ಫೋಸಿಸ್‌ನಿಂದ ಸಹಕಾರ ಬ್ಯಾಂಕ್‌ಗೆ ಡಿಜಿಟಲ್ ಸಾಸ್ ಸೇವೆ!

ಅಕೌಂಟ್ ಅಗ್ರಿಗೇಟರ್ ನಲ್ಲಿ ಸಾರ್ವಜನಿಕರಿಗೆ ತಮ್ಮ ವೈಯಕ್ತಿಕ ಹಣಕಾಸು ದತ್ತಾಂಶದ ಮೇಲೆ ನಿಯಂತ್ರಣ ಹೊಂದುವ ಅಧಿಕಾರ ನೀಡುತ್ತದೆ, ಇಲ್ಲವಾದರೆ ಅದು ಗೌಪ್ಯವಾಗಿ ಉಳಿದು ಬಿಡುತ್ತದೆ

* ಅಕೌಂಟ್ ಅಗ್ರಿಗೇಟರ್

- ದತ್ತಾಂಶ ಹಂಚಿಕೆಗೆ ಒಪ್ಪಿಗೆ
- ಮುಕ್ತ ಎಪಿಐಗಳ ಮೂಲಕ ದತ್ತಾಂಶಕ್ಕೆ ಮನವಿ
- ಎಫ್ ಐಯುಎಸ್ ಮೂಲಕ ದತ್ತಾಂಶ ಕೊನೆಯ ವರೆಗೆ ಎನ್ ಕ್ರಿಪ್ಟ್ ಆಗಿರುತ್ತದೆ; ಡಿಜಿಟಲ್ ಸಹಿ ಹಾಕಿರುವ ಮತ್ತು ನಕಲು ಮಾಡಲಾಗದ, ಸಕಾಲಿಕ ಮಾಹಿತಿ.

* ಹಣಕಾಸು ಮಾಹಿತಿ ಪೂರೈಕೆದಾರರು

- ಬ್ಯಾಂಕುಗಳು/ಎನ್ ಬಿಎಫ್ ಸಿಗಳು
- ಮ್ಯೂಚುಯಲ್ ಫಂಡ್ ಹೌಸ್ ಗಳು
- ವಿಮಾ ಸೌಲಭ್ಯ ಒದಗಿಸುವವರು
- ಇನ್ ವಾಯ್ಸ್/ ತೆರಿಗೆ ವೇದಿಕೆ

* ಹಣಕಾಸು ಮಾಹಿತಿ ಬಳಕೆದಾರರು:

- ನಗದು ಹರಿವು ಆಧಾರಿತ ಸಾಲ(ಬ್ಯಾಂಕ್/ಎನ್ ಬಿಎಫ್ ಸಿ)
- ವೈಯಕ್ತಿಕ ಹಣಕಾಸು ನಿರ್ವಹಣೆ
- ಸಂಪತ್ತು ನಿರ್ವಹಣೆ
- ರೋಬೋ ಸಲಹೆಗಾರರು

ಚೆಕ್‌ ಮೂಲಕ ಹಣ ಪಾವತಿ ಇನ್ನು ಸುಲಭವಿಲ್ಲ, ಆರ್‌ಬಿಐ ಹೊಸ ನಿಯಮ ಜಾರಿ!

3) ಅಕೌಂಟ್ ಅಗ್ರಿಗೇಟರ್, ಆಧಾರ್ ಇಕೆವೈಸಿ ದತ್ತಾಂಶ ಹಂಚಿಕೆ, ಕ್ರೆಡಿಟ್ ಬ್ಯೂರೋ ದತ್ತಾಂಶ ಹಂಚಿಕೆ ಮತ್ತು ಸಿಕೆವೈಸಿಯಂತಹ ವೇದಿಕೆಗಳಿಗಿಂತ ಹೇಗೆ ಭಿನ್ನವಾದುದು?

ಆಧಾರ್ ಇಕೆವೈಸಿ ಮತ್ತು ಸಿಕೆವೈಸಿ ಕೇವಲ ನಿಮ್ಮ ಗುರುತಿನ ನಾಲ್ಕು ದತ್ತಾಂಶ ಕ್ಷೇತ್ರಗಳು ಕೆವೈಸಿ ಉದ್ದೇಶಕ್ಕಾಗಿ ಹಂಚಿಕೆ ಮಾಡಲು(ಉದಾಹರಣೆಗೆ ಹೆಸರು, ವಿಳಾಸ, ಲಿಂಗ ಇತ್ಯಾದಿ) ಅವಕಾಶ ನೀಡುತ್ತದೆ. ಅಂತೆಯೇ ಕ್ರೆಡಿಟ್ ಬ್ಯೂರೋ ದತ್ತಾಂಶದಲ್ಲಿ ಕೇವಲ ಸಾಲದ ಹಿನ್ನೆಲೆ ಮತ್ತು ಅಥವಾ ಕ್ರೆಡಿಟ್ ಸ್ಕೋರ್ ಮಾತ್ರ ನೋಡಬಹುದಾಗಿದೆ. ಅಕೌಂಟ್ ಅಗ್ರಿಗೇಟರ್ ಜಾಲದಲ್ಲಿ ಉಳಿತಾಯ/ನಿಶ್ಚಿತ/ಚಾಲ್ತಿ ಖಾತೆಗಳ ಬ್ಯಾಂಕ್ ವಹಿವಾಟು ವಿವರ ಅಥವಾ ವಹಿವಾಟಿನ ದತ್ತಾಂಶವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

4) ಯಾವ ಬಗೆಯ ದತ್ತಾಂಶವನ್ನು ಹಂಚಿಕೊಳ್ಳಬಹುದು?

ಇಂದು ಎಲ್ಲ ಬ್ಯಾಂಕ್ ಗಳ ನಡುವೆ ನೇರವಾಗಿ ಜಾಲದ ಮೂಲಕ ಬ್ಯಾಂಕಿಂಗ್ ವಹಿವಾಟು ದತ್ತಾಂಶವನ್ನು ಹಂಚಿಕೊಳ್ಳಲು ಲಭ್ಯವಿದೆ.(ಉದಾಹರಣೆಗೆ ಚಾಲ್ತಿ ಅಥವಾ ಉಳಿತಾಯ ಖಾತೆ ಬ್ಯಾಂಕ್ ವಿವರಗಳು)

ಕ್ರಮೇಣ ಎಎ ಜಾಲವನ್ನು ಎಲ್ಲಾ ಹಣಕಾಸು ದತ್ತಾಂಶ ಲಭ್ಯತೆಯನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ, ಅವುಗಳೆಂದರೆ ತೆರಿಗೆ ದತ್ತಾಂಶ, ಪಿಂಚಣಿ ದತ್ತಾಂಶ, ಷೇರುಗಳ ದತ್ತಾಂಶ (ಮ್ಯೂಚುಯಲ್ ಫಂಡ್ ಮತ್ತು ಬ್ರೋಕರೇಜ್) ಮತ್ತು ವಿಮಾ ದತ್ತಾಂಶ ಗ್ರಾಹಕರಿಗೆ ಲಭ್ಯವಿದೆ. ಅಲ್ಲದೆ ಎಎ ಮೂಲಕ ಹಣಕಾಸು ವಲಯ ಹೊರತುಪಡಿಸಿದಂತೆ ಆರೋಗ್ಯ ರಕ್ಷಣೆ ಮತ್ತು ದೂರವಾಣಿ ದತ್ತಾಂಶಕ್ಕೂ ವಿಸ್ತರಿಸಲು ಅವಕಾಶ ನೀಡುತ್ತದೆ.

5) ಎಎಗಳ ದೃಷ್ಟಿಕೋನ ಅಥವಾ ಅಗ್ರಿಗೇಟ್ ವೈಯಕ್ತಿಕ ದತ್ತಾಂಶ?  ದತ್ತಾಂಶ ಹಂಚಿಕೆ ಸುರಕ್ಷಿತವೇ?

ಅಕೌಂಟ್ ಅಗ್ರಿಗೇಟರ್ಸ್ ದತ್ತಾಂಶವನ್ನು ನೋಡಲಾಗದು, ಸಾರ್ವಜನಿಕರ ನಿರ್ದೇಶನ ಮತ್ತು ಒಪ್ಪಿಗೆ ಆಧರಿಸಿ ಒಂದು ಹಣಕಾಸು ಸಂಸ್ಥೆಯಿಂದ ಮತ್ತೊಂದಕ್ಕೆ ವರ್ಗಾಯಿಸಿಕೊಳ್ಳಬಹುದು. ಹೆಸರಿಗೆ ವ್ಯತಿರಿಕ್ತವಾಗಿ ಅವರು ನಿಮ್ಮ ಡಾಟಾವನ್ನು ಅಗ್ರಿಗೇಟ್ ಮಾಡಲಾಗದು. ಎಎಗಳು ತಂತ್ರಜ್ಞಾನ ಕಂಪನಿಗಳ ರೀತಿ ಅಲ್ಲ. ಅವುಗಳು ನಿಮ್ಮ ದತ್ತಾಂಶವನ್ನು ಅಗ್ರಿಗೇಟ್ ಮಾಡುತ್ತವೆ ಮತ್ತು ನಿಮ್ಮ ವಿಸ್ತೃತ ವಿವರಗಳನ್ನು ಸೃಷ್ಟಿಸುತ್ತವೆ.

ಎಎಗಳ ದತ್ತಾಂಶ ಹಂಚಿಕೆ ಕಳುಹಿಸುವವರು ಮಾತ್ರ ಎನ್ ಕ್ರಿಪ್ಟ್ ಮಾಡಬಹುದಾಗಿದೆ ಮತ್ತು ಅದನ್ನು ಸ್ವೀಕರಿಸುವವರು ಮಾತ್ರ ಡಿಕ್ರಿಪ್ಟ್ ಮಾಡಬಹುದು. ಮೊದಲಿನಿಂದ ಕೊನೆಯವರೆಗೆ ಎನ್ ಕ್ರಿಪ್ಶನ್ ಮತ್ತು ಡಿಜಿಟಲ್ ಸಹಿಯಂತಹ ತಂತ್ರಜ್ಞಾನ ಬಳಕೆಯು ಕಾಗದದ ದಾಖಲೆಗಳನ್ನು ಹಂಚಿಕೊಳ್ಳುವುದಕ್ಕಿಂತ  ಪ್ರಕ್ರಿಯೆನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ.

6) ಗ್ರಾಹಕರು ತಾವು ದತ್ತಾಂಶ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧರಿಸಬಹುದೇ?

ಹೌದು ಖಂಡಿತ. ಎಎಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಗ್ರಾಹಕರಿಗೆ ಸಂಪೂರ್ಣ ಸ್ವಯಂ ಪ್ರೇರಿತವಾದುದು. ಗ್ರಾಹಕರು ಬಳಸುವ ಬ್ಯಾಂಕ್ ಆ ಜಾಲಕ್ಕೆ ಸೇರ್ಪಡೆಯಾಗಿದ್ದರೆ ಆ ವ್ಯಕ್ತಿ ಎಎಗೆ ನೋಂದಣಿ ಮಾಡಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ತಮ್ಮ ಯಾವ ಖಾತೆಯನ್ನು ಲಿಂಕ್ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಒಂದು ಅಕೌಂಟ್ ಅಗ್ರಿಗೇಟರ್ ಮೂಲಕ ಹೊಸ ಸಾಲಗಾರ ಅಥವಾ ಹಣಕಾಸು ಸಂಸ್ಥೆಗ ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ತಮ್ಮ ಖಾತೆಗಳ ವಿವರಗಳನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡಬೇಕು. ಗ್ರಾಹಕರು ಯಾವುದೇ ಸಮಯದಲ್ಲೂ ಮಾಹಿತಿ ಹಂಚಿಕೆಯ ತಮ್ಮ ಒಪ್ಪಿಗೆಯನ್ನು ತಿರಸ್ಕರಿಸಬಹುದು. ಒಂದು ವೇಳೆ ಗ್ರಾಹಕರು ಒಂದು ಅವಧಿಗೆ(ಅಂದರೆ ಸಾಲದ ಅವಧಿ ನಿರ್ದಿಷ್ಟ ವಿಧಾನದಲ್ಲಿ ದತ್ತಾಂಶ ಹಂಚಿಕೆಯನ್ನು ಒಪ್ಪಿಕೊಳ್ಳಬಹುದು. ನಂತರ ಗ್ರಾಹಕರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಆ ನಿರ್ಧಾರವನ್ನು ವಾಪಸ್ ಪಡೆಯಬಹುದು)

7) ಗ್ರಾಹಕರು ಒಮ್ಮೆ ಸಂಸ್ಥೆಯೊಂದಿಗೆ ತಮ್ಮ ದತ್ತಾಂಶ ಹಂಚಿಕೊಂಡಿದ್ದರೆ ಅದನ್ನು ಎಷ್ಟು ದೀರ್ಘ ಅವಧಿಯರೆಗೆ ಬಳಕೆ ಮಾಡಿಕೊಳ್ಳಬಹುದು?

ದತ್ತಾಂಶ ಹಂಚಿಕೆಗಾಗಿ ಒಪ್ಪಿಗೆಯ ಸಮಯದಲ್ಲಿ ಸ್ವೀಕರಿಸುವ ಸಂಸ್ಥೆಯು ನಿಖರವಾದ ಅವಧಿಯನ್ನು ಗ್ರಾಹಕರು ತೋರಿಸುತ್ತದೆ.

ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ ಈ ಬ್ಯಾಂಕ್‌ ಹೊರಕ್ಕೆ

8) ಗ್ರಾಹಕರು ಹೇಗೆ ಎಎಅಡಿ ನೋಂದಣಿ ಮಾಡಿಕೊಳ್ಳಬೇಕು?

ನೀವು ಆಪ್ ಅಥವಾ ವೆಬ್ ಸೈಟ್ ಮೂಲಕ ಎಎಅಡಿ ನೋಂದಣಿ ಮಾಡಿಕೊಳ್ಳಬೇಕು. ಎಎ ಒಪ್ಪಿಗೆ ಪ್ರಕ್ರಿಯೆ ನೀಡಲು(ಯೂಸರ್ ನೇಮ್) ಮತ್ತಿತರವುಗಳನ್ನು ಬಳಕೆ ಮಾಡಲಾಗುವುದು.

ಇಂದು ಎಎಗಳಿಗೆ ಕಾರ್ಯಾಚರಣೆಯ ಪರವಾನಗಿಯನ್ನು ಪಡೆದುಕೊಂಡಿರುವ ನಾಲ್ಕು ಆಪ್ ಗಳು ಡೌನ್ ಲೋಡ್ ಗೆ ಲಭ್ಯವಿವೆ.(ಫಿನ್ ವಿವು ಒನ್ ಮನಿ, ಸಿಎಎಂಎಸ್, ಫಿನ್ ಸರ್ವ್ ಮತ್ತು ಎನ್ಎಡಿಎಲ್). ಇನ್ನೂ ಮೂರು ಸಂಸ್ಥೆಗಳು ಆರ್ ಬಿಐನಿಂದ ತಾತ್ವಿಕ ಅನುಮೋದನೆಯನ್ನು ಸ್ವೀಕರಿಸಿವೆ.(ಫೋನ್ ಪೆ, ಯೋಡ್ಲಿ ಮತ್ತು ಪೆರ್ ಫಿಯೋಸ್) ಮತ್ತು ಅವುಗಳು ಸದ್ಯದಲ್ಲೇ ಆಪ್ ಗಳನ್ನು ಆರಂಭಿಸಬಹುದು.

9) ಪ್ರತಿಯೊಂದು ಎಎಯಲ್ಲೂ ಗ್ರಾಹಕರು ನೋಂದಣಿ ಮಾಡಿಕೊಳ್ಳುವ ಅಗತ್ಯವಿದೆಯೇ?

ಇಲ್ಲ. ಜಾಲದಲ್ಲಿನ ಯಾವುದೇ ಬ್ಯಾಂಕ್ ನ ಯಾವುದೇ ದತ್ತಾಂಶವನ್ನು ಪಡೆಯಲು ಗ್ರಾಹಕರು ಎಎನೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.  

10) ಈ ಸೌಕರ್ಯ ಬಳಕೆಗಾಗಿ ಗ್ರಾಹಕರು ಎಎಗೆ ಹಣ ಪಾವತಿ ಮಾಡುವ ಅಗತ್ಯವಿದೆಯೇ?

ಇದು ಎಎಅನ್ನು ಅವಲಂಬಿಸಿದೆ. ಕೆಲವು ಎಎಗಳು ಉಚಿತವಾದವು, ಏಕೆಂದರೆ ಅವುಗಳು ಹಣಕಾಸು ಸಂಸ್ಥೆಗಳಿಗೆ ಸೇವಾ ಶುಲ್ಕವನ್ನು ವಿಧಿಸುತ್ತವೆ. ಕೆಲವು ಸಣ್ಣ ಮಟ್ಟದಲ್ಲಿ ಬಳಕೆದಾರರ ಶುಲ್ಕವನ್ನು ವಿಧಿಸಬಹುದು.

11) ಗ್ರಾಹಕರ ಬ್ಯಾಂಕ್ ಎಎ ಜಾಲದ ಮೂಲಕ ದತ್ತಾಂಶ ಹಂಚಿಕೆಗೆ ಸೇರ್ಪಡೆಯಾಗಿದ್ದರೆ ಯಾವ ಬಗೆಯ ಹೊಸ ಸೇವೆಗಳು ಲಭ್ಯವಾಗುತ್ತವೆ?

ಸಾಲಗಳ ಲಭ್ಯತೆ ಮತ್ತು ಹಣಕಾಸು ನಿರ್ವಹಣೆ ಈ ಎರಡು ಪ್ರಮುಖ ಸೇವೆಗಳಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸುಧಾರಣೆಗಳಾಗಲಿವೆ. ಗ್ರಾಹಕರು ಸಣ್ಣ ವ್ಯಾಪಾರ ಅಥವಾ ವೈಯಕ್ತಿಕ ಸಾಲವನ್ನು ಇಂದು ಬಯಸಿದರೆ ಸಾಲ ನೀಡುವ ಸಂಸ್ಥೆಯ ಜತೆ ಹಲವು ದಾಖಲೆಗಳನ್ನು ಹಂಚಿಕೆ ಮಾಡಿಕೊಳ್ಳುವ ಅಗತ್ಯವಿದೆ. ಇದು ಅತ್ಯಂತ ಕ್ಲಿಷ್ಟಕರ ಮತ್ತು ಇಂದಿನ ಭೌತಿಕ ಪ್ರಕ್ರಿಯೆ ಮೂಲಕ ಸಾಲ ಪಡೆದಿರುವುದು, ಸಾಲದ ಲಭ್ಯತೆಯ ಮೇಲೂ ಪರಿಣಾಮಗಳಾಗಬಹುದು. ಅಂತೆಯೇ ಇಂದು ಹಣಕಾಸು ನಿರ್ವಹಣೆ ಅತ್ಯಂತ ಕಷ್ಟಕರ. ಏಕೆಂದರೆ ದತ್ತಾಂಶ ಹಲವು ಭಿನ್ನ ಸ್ಥಳಗಳಲ್ಲಿ ಸಂಗ್ರಹವಾಗಿರುತ್ತದೆ.

ಅಕೌಂಟ್ ಅಗ್ರಿಗೇಟರ್ ಮೂಲಕ ಕಂಪನಿಯು ತ್ವರಿತವಾಗಿ ಮತ್ತು ಅಗ್ಗವಾಗಿ ನಕಲು ಮಾಡಲಾಗದಂತಹ ದತ್ತಾಂಶ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಸಾಲ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ಸಾಲ ದೊರಕಲಿದೆ. ಭೌತಿಕ ಖಾತ್ರಿ ಇಲ್ಲದೆ ಗ್ರಾಹಕರು ಸಾಲವನ್ನು ಪಡೆಯಬಹುದಾಗಿದೆ. ಭವಿಷ್ಯದ ಇನ್ ವಾಯ್ಸ್ ಮಾಹಿತಿ ಹಂಚಿಕೆ ಅಥವಾ ಜಿಎಸ್ ಟಿ ಅಥವಾ ಜಿಎಂ ಮೂಲಕ ಸರ್ಕಾರದ ವ್ಯವಸ್ಥೆಗೆ ನೇರವಾಗಿ ಸ್ವೀಕೃತಿ ಅಥವಾ ನಗದು ಹರಿವಾಗಲಿದೆ.

Follow Us:
Download App:
  • android
  • ios