* ದೊಡ್ಡ ಮೊತ್ತದ ಚೆಕ್‌ಗೆ ಇನ್ನು ‘ಪಾಸಿಟಿವ್‌ ಪೇ’* ಇಂದಿನಿಂದ ಹೊಸ ನಿಯಮ ಜಾರಿ* 2 ಲಕ್ಷ ರು. ದಾಟಿದರೆ ದೃಢೀಕರಣ ಬೇಕು

ನವದೆಹಲಿ(ಜೂ.01): ಜೂನ್‌ 1ರಿಂದ ಆದಾಯ ತೆರಿಗೆ, ಬ್ಯಾಂಕಿಂಗ್‌ ವ್ಯವಸ್ಥೆ, ವಿಮಾನಯಾನ ಸೇರಿದಂತೆ ಹಲವಾರು ಆರ್ಥಿಕ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಲಿವೆ. ಈ ಪೈಕಿ 2 ಲಕ್ಷ ರು.ಗಿಂತ ಹೆಚ್ಚು ಮೊತ್ತದ ಚೆಕ್‌ ನೀಡುವಾಗ ಕೆಲವು ಮಾಹಿತಿಯನ್ನು ಬ್ಯಾಂಕ್‌ಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂಬುದು ಮಹತ್ವದ ಸಂಗತಿ.

ಚಲಾವಣೆಯಿಂದ 2 ಸಾವಿರ ಮುಖ ಬೆಲೆಯ ನೋಟು ಹಿಂದೆ ಪಡೆಯುವ ಬಗ್ಗೆ ಮತ್ತಷ್ಟು ಸುಳಿವು?

ಚೆಕ್‌ ಮೂಲಕ ನಡೆಸುವ ವಹಿವಾಟನ್ನು ಇನ್ನಷ್ಟುಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಆರ್‌ಬಿಐ ಕೆಲ ಸಮಯದ ಹಿಂದೆ ‘ಪಾಸಿಟಿವ್‌ ಪೇ ಕನ್ಫರ್ಮೇಷನ್‌’ ಎಂಬ ಹೊಸ ಪದ್ಧತಿ ಜಾರಿಗೊಳಿಸಿತ್ತು. ಇದು ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಜೂನ್‌ 1ರಿಂದ ಜಾರಿಗೆ ಬರಲಿದೆ. ಈ ಯೋಜನೆ ಅನ್ವಯ, ಯಾವುದೇ ವ್ಯಕ್ತಿ 2 ಲಕ್ಷ ರು.ಗಿಂತ ಹೆಚ್ಚಿನ ಮೊತ್ತದ ಚೆಕ್‌ ನೀಡಿದ್ದರೆ, ಅದು ಬ್ಯಾಂಕ್‌ನಲ್ಲಿ ಕ್ಲಿಯರ್‌ ಆಗುವ ಮುನ್ನ, ಚೆಕ್‌ನಲ್ಲಿನ ಅಂಶಗಳ ಬಗ್ಗೆ ಮತ್ತೊಮ್ಮೆ ಖಚಿತಪಡಿಸಬೇಕು.

ಬ್ಯಾಕಿಂಗ್ ನಿಯಮ ಉಲ್ಲಂಘನೆ: HDFC ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ!

ಅಂದರೆ ಚೆಕ್‌ ನಂಬರ್‌, ದಿನಾಂಕ, ಚೆಕ್‌ ಮೂಲಕ ಹಣ ಪಡೆಯುವವರ ಹೆಸರು, ಬ್ಯಾಂಕ್‌ ಖಾತೆ ನಂ., ಹಣದ ಮೊತ್ತ ಸೇರಿದಂತೆ ಇತರೆ ಹಲವು ಮಾಹಿತಿಗಳನ್ನು ನೀಡಬೇಕು. ಇವುಗಳನ್ನು ಎಸ್‌ಎಂಎಸ್‌, ಮೊಬೈಲ್‌ ಆ್ಯಪ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಇನ್ನಿತರೆ ವಿಧಾನಗಳ ಮೂಲಕವೂ ಖಚಿತಪಡಿಸಬಹುದು.

ಇತರೆ ಹಲವು ಬ್ಯಾಂಕ್‌ಗಳಲ್ಲಿ ಕೂಡಾ ಇಂಥ ವ್ಯವಸ್ಥೆ ಜಾರಿಯಾಗಿದೆ. ಆದರೆ ಅದು ಕಡ್ಡಾಯವಲ್ಲ.