Asianet Suvarna News Asianet Suvarna News

ಫೋನ್ ಕಳುವಾದರೆ ಬ್ಯಾಂಕಿಂಗ್ ವಿವರ, ಆನ್‌ಲೈನ್ ವ್ಯಾಲೆಟ್ ಸುರಕ್ಷತೆಗೆ ಹೀಗೆ ಮಾಡಿ..!

ಸ್ಮಾರ್ಟ್ ಫೋನ್ ಇಂದು ಜೀವನದ ಅತಿ ಅವಶ್ಯಕ ಭಾಗವಾಗಿದೆ. ಬಹುತೇಕ ಎಲ್ಲ ವ್ಯವಹಾರಗಳಿಗೆ ಫೋನ್ ಬೇಕೇ ಬೇಕಿದೆ. ಆದರೆ, ಆ ಫೋನ್ ಕಳೆದುಹೋದರೆ ಆಗುವ ಚಿಂತೆ ಅಷ್ಟಿಷ್ಟಲ್ಲ. ಅದರಲ್ಲಿ ಇರುವ ನಿಮ್ಮ ಬ್ಯಾಂಕ್ ಮತ್ತು ಇತರ ಆನ್‌ಲೈನ್ ವ್ಯಾಲೆಟ್‌ಗಳ ಪ್ರಮುಖ ವಿವರಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲೊಂದಿಷ್ಟು ಸರಳ ಹಾಗೂ ತುರ್ತು ವಿಧಾನಗಳಿದ್ದು, ಅನುಸರಿಸಿ, ಸುರಕ್ಷಿತವಾಗಿರಿ. ಅವುಗಳು ಯಾವುವು ಎಂಬುದರ ಬಗ್ಗೆ ನೋಡೋಣ ಬನ್ನಿ...

If the phone is stolen, do this for banking details online wallet safety
Author
Bangalore, First Published Jul 19, 2021, 5:41 PM IST
  • Facebook
  • Twitter
  • Whatsapp

ಇದು ಡಿಜಿಟಲ್ ಯುಗವಾಗಿದೆ. ಜಗತ್ತೇ ಡಿಜಿಟಲ್ ಕ್ಷೇತ್ರದಲ್ಲಿ ವೇಗವಾಗಿ ಓಡುತ್ತಿದೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ಈಗಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹ ಡಿಜಿಟಲ್ ಇಂಡಿಯಾಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ಉತ್ತೇಜನವನ್ನೂ ನೀಡಲಾಗುತ್ತಿದೆ. ಅಷ್ಟರಲ್ಲಿ ಕೊರೋನಾ ಮಹಾಮಾರಿ ಇಡೀ ವಿಶ್ವವನ್ನೇ ವ್ಯಾಪಿಸಿಕೊಂಡಾಗ ಡಿಜಿಟಲ್ ಕ್ಷೇತ್ರಕ್ಕೆ ಇನ್ನಷ್ಟು ಬೇಡಿಕೆ ಬಂದಿದೆ. ಹೆಚ್ಚಿನ ಎಲ್ಲ ವ್ಯವಹಾರಗಳು ಸಹ ಇಂದು ಮೊಬೈಲ್ ಬ್ಯಾಂಕಿಂಗ್, ಯುಪಿಐ ಪೇಮೆಂಟ್ ಇತ್ಯಾದಿಗಳ ಮೂಲಕವೇ ನಡೆದುಹೋಗಿಬಿಡುತ್ತವೆ. ಆದರೆ, ಅಂಗೈಯಲ್ಲೇ ಬ್ಯಾಂಕಿಂಗ್ ಚಟುವಟಿಕೆಯನ್ನು ನಡೆಸುವ ಸ್ಮಾರ್ಟ್ ಫೋನ್ ಕಳೆದು ಹೋದರೆ..? 

ಹೌದು. ಕಳೆದು ಹೋದರೆ ಅದರಲ್ಲಿನ ಬ್ಯಾಂಕಿಂಗ್ ವಿವರಗಳು, ಮೊಬೈಲ್ ವ್ಯಾಲೆಟ್ ಗಳ ಸುರಕ್ಷತೆಯನ್ನು ಹೇಗೆ ಮಾಡುವುದು..? ನಿಮ್ಮ ಹಣವನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಬಗ್ಗೆ ನೋಡೋಣ…

ಇದನ್ನು ಓದಿ: ಯೂಟ್ಯೂಬ್, ಇನ್‌ಸ್ಟಾ, ಫೇಸ್ಬುಕ್‌ಗೆ ವಿಡಿಯೋ ಹಾಕಲು ಇಲ್ಲಿದೆ ಸೂಪರ್ ಎಡಿಟಿಂಗ್ ಆ್ಯಪ್ಸ್

ಸಿಮ್ ಬ್ಲಾಕ್ ಮಾಡಿ
ನಿಮ್ಮ ಸ್ಮಾರ್ಟ್ ಫೋನ್ ಕಳೆದುಹೋದರೆ ಇಲ್ಲವೇ ಕಳ್ಳತನವಾದರೆ ಮೊದಲು ಬ್ಯಾಂಕಿಂಗ್ ವಿವರಗಳ ಸಹಿತ ಮೊಬೈಲ್ ವ್ಯಾಲೆಟ್‌ಗಳ ಸುರಕ್ಷತೆ ಬಗ್ಗೆ ನೀವು ಹೆಚ್ಚಿನ ನಿಗಾ ವಹಿಸಬೇಕಿದೆ. ಕಾರಣ, ಈಗ ಎಲ್ಲವಕ್ಕೂ ಮೊಬೈಲ್ ಸಿಮ್ ಲಿಂಕ್ ಆಗಿರುವುದರಿಂದ ನಿಮ್ಮ ಮೊಬೈಲ್ ಪಾಸ್ವರ್ಡ್ ಇಲ್ಲವೇ ಪ್ಯಾಟರ್ನ್ ಒಂದನ್ನು ಭೇದಿಸಿದರೆ ಸಾಕು, ಅಷ್ಟೂ ವಿವರಗಳು ಬೇಡವೆಂದರೂ ಅವರಿಗೆ ದಕ್ಕಿಬಿಡುತ್ತದೆ, ನಿಮ್ಮ ಖಾತೆಯಲ್ಲಿರುವ ಸಂಪೂರ್ಣ ಹಣಕ್ಕೂ ಕೊನೆಗೆ ಕನ್ನ ಬೀಳಲಿದೆ. ಹೀಗಾಗಬಾರದು ಎಂದಾದರೆ ನೀವು ಮೊದಲು ಮಾಡಬೇಕಾದ ಕೆಲಸವೇ ಸಿಮ್ ಬ್ಲಾಕ್. ಹೀಗೆ ಮಾಡಿದರೆ ಒಟಿಪಿಗಳ ಅವಶ್ಯಕತೆ ಇರುವ ಎಲ್ಲ ಮೊಬೈಲ್ ಅಪ್ಲಿಕೇಶನ್‌ಗಳನ್ನೂ ಸಹ ನೀವು ಬ್ಲಾಕ್ ಮಾಡಿದಂತೆಯೇ ಆಗುತ್ತದೆ. ಸಿಮ್ ಬ್ಲಾಕ್ ಮಾಡಿದ ಒಂದೆರೆಡು ದಿನದಲ್ಲಿ ನೀವು ಹೊಸ ಸಿಮ್ ಕಾರ್ಡ್ ಅನ್ನು ಪಡೆಯಬಹುದಾಗಿದ್ದರಿಂದ ಯಾವುದೇ ಸಮಸ್ಯೆಯಾಗದು.  


ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ನಿರ್ಬಂಧ 
ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯು ಸಿಮ್ ಜೊತೆಗೆ ಪರಸ್ಪರ ಕೊಂಡಿಯಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಹೀಗಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ನಿರ್ಬಂಧಿಸುವುದು ಸಹ ಮುಖ್ಯವಾಗುತ್ತದೆ. ಒಟಿಪಿ ಇಲ್ಲದೆ ಒಟಿಪಿ ಇಲ್ಲದೆ ಯಾವುದೇ ಹಣ ವರ್ಗಾವಣೆ, ಖರೀದಿಯು ಸಂಭವಿಸುವುದಿಲ್ಲ. ಹೀಗಾಗಿ ಸ್ಮಾರ್ಟ್ ಫೋನ್ ಕಳೆದುಹೋದರೆ, ಕೂಡಲೇ ಈ ಸೇವೆಗಳನ್ನೂ  ನಿರ್ಬಂಧಿಸಿದರೆ ನಿಮ್ಮ ಖಾತೆಯಲ್ಲಿ ಹಣ ಸುರಕ್ಷಿತವಾಗಿರುತ್ತದೆ.

ಇದನ್ನು ಓದಿ: ಏಕಕಾಲಕ್ಕೆ 4 ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಕೆ ಸೌಲಭ್ಯ!

ಯುಪಿಐ ಪಾವತಿ ಸೇವೆ ಸ್ಥಗಿತ ಮಾಡಿ
ಸಿಮ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಅಷ್ಟನ್ನೇ ನೀವು ಲಾಕ್ ಮಾಡಿದರೆ, ಮಾಡಿಸಿದರೆ ಸಾಲದು. ಇನ್ನೊಂದು ಪ್ರಮುಖ ವಿಚಾರವೆಂದರೆ ಯುಪಿಐ ಪಾವತಿ ಸೇವೆಯನ್ನು ಸಹ ಸ್ಥಗಿತಗೊಳಿಸಬೇಕಿದೆ. ಆನ್‌ಲೈನ್ ಬ್ಯಾಂಕಿಂಗ್‌ಗಳ ಮೇಲೆ ನಿರ್ಬಂಧವನ್ನು ಹೇರಿದರೂ ಯುಪಿಐ ಪಾವತಿ ಸೇವೆಯ ಮೂಲಕ ಹಣ ಖದಿಯುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಈ ಬಗ್ಗೆ ಕೂಡಲೇ ಗಮನಹರಿಸುವುದು ಒಳಿತು.

ಮೊಬೈಲ್ ವ್ಯಾಲೆಟ್‌ಗಳ ನಿರ್ಬಂಧಿಸಿ
ಇಂದು ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಅನೇಕ ಮೊಬೈಲ್ ವ್ಯಾಲೆಟ್‌ಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಕೆಲವರು ಈ ರೀತಿಯ ಒಂದೇ ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿದರೆ ಮತ್ತೆ ಕೆಲವರು ಹಲವಾರು ವ್ಯಾಲೆಟ್‌ಗಳನ್ನು ಹೊಂದಿರುತ್ತಾರೆ. ಆದರೆ, ಮೊಬೈಲ್ ಕಳುವಾದರೆ ಮೊದಲು ಆಯಾ ಅಪ್ಲಿಕೇಶನ್‌ಗಳ ಹೆಲ್ಪ್ ಡೆಸ್ಕ್ ಇಲ್ಲವೇ ಇ-ಮೇಲ್ ಮೂಲಕ ಸಂಪರ್ಕಿಸಿ, ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಿ. 

ಇದನ್ನು ಓದಿ: ಆಗಸ್ಟ್‌ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?

ಎಫ್ಐಆರ್ ದಾಖಲಿಸಿ
ಪೊಲೀಸ್ ಠಾಣೆಗೆ ಭೇಟಿ ಕೊಡುವುದು ಸಹ ಬಹುಮುಖ್ಯವಾದ ಹಂತ. ನೀವು ಈ ಮೇಲಿನ ಎಲ್ಲ ಪ್ರಕ್ರಿಯೆಯನ್ನು ಮಾಡಿದರೂ ಸಹ ಪೊಲೀಸರಿಗೆ ದೂರು ನೀಡುವುದು ಹಣದ ಹಾಗೂ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಉತ್ತಮ. ಒಮ್ಮೆ ಎಫ್‌ಐಆರ್ ದಾಖಲಾದರೆ ನೀವು ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆಯಲೂ ಸಹಾಯಕವಾಗುವುದಲ್ಲದೆ, ಅಷ್ಟರ ಮೇಲೂ ಹಣ ಕಳವಾದರೆ ನಿಮಗೆ ಕಾನೂನು ಕ್ರಮದ ಬಲವೂ ಸಿಕ್ಕಂತಾಗುತ್ತದೆ.

Follow Us:
Download App:
  • android
  • ios