ಸಾಲ ತೀರಿಸಲು ಮನೆ ಮಾರಲು ಹೊರಟವನಿಗೆ ₹1ಕೋಟಿ ಲಾಟರಿ
ಸಾಲ ತೀರಿಸಲು ಮನೆ ಮಾರಲು ಹೊರಡುವ ಕೆಲವೇ ಗಂಟೆಗಳ ಮುಂಚೆ ಕೇರಳದ ವ್ಯಕ್ತಿಯೊಬ್ಬರಿಗೆ 1 ಕೋಟಿ ಲಾಟರಿ ಹೊಡೆದಿದೆ
ಕೇರಳ (ಆ. 09): ನಾನು ತುಂಬಾ ಅನ್‌ಲಕ್ಕಿ. ಜೀವನದಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ಜೀವನದಲ್ಲಿ ಒಳ್ಳೆಯದಾಗುವುದು ಯಾವಾಗ....? ನಿತ್ಯ ಜೀವನದಲ್ಲಿ ಇಂತಹ ಹಲವು ಹೇಳಿಕೆಗಳನ್ನು ನೀವು ಕೇಳಿರಬಹುದು ಮತ್ತು ಹೇಳಿರಬಹುದು. ಆದರೆ ಅದೃಷ್ಟ ಎಂಬುದು ಯಾವಾಗ ಬದಲಾಗುತ್ತೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅದೃಷ್ಟ ಹಾಗೂ ಹಣೆಬರಹ ನಮ್ಮ ಬದುಕಿನ ದಿಕ್ಕನ್ನು ಸಂಪೂರ್ಣವವಾಗಿ ಬದಲಾಯಿಸಬಹುದು.ಅಷ್ಟಕ್ಕೂ ನಿಮಗೆ ಅದೃಷ್ಟದಲ್ಲಿ ನಂಬಿಕೆ ಇದೆಯಾ? ನೀವು ಲಕ್ ಅಥವಾ ಅದೃಷ್ಟವನ್ನು ನಂಬದಿದ್ದರೂ ಸಹ, ಈ ಸುದ್ದಿಯನ್ನು ಓದಿದ ಬಳಿಕ ನಿಮಗೆ ಆಶ್ಚರ್ಯವೆನಿಸಬಹುದು.
ಕೇರಳದಲ್ಲಿ ವ್ಯಕ್ತಿಯೊಬ್ಬರ ಅದೃಷ್ಟ ಖುಲಾಯಿಸಿದ್ದು ಸಾಲ ತೀರಿಸಲು ಮನೆ ಮಾರಲು ಹೊರಡುವ ಕೆಲವೇ ಗಂಟೆಗಳ ಮುಂಚೆ 1 ಕೋಟಿ ಲಾಟರಿ ಹೊಡೆದಿದೆ. ಈ ಅದೃಷ್ಟದ ಆಟ ನೋಡಿ ಈಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಭಾನುವಾರ ಸಂಜೆ ಟೋಕನ್ ಹಣ ತೆಗೆದುಕೊಳ್ಳಬೇಕಿತ್ತು: ಈ ಕಥೆ ಮಂಜೇಶ್ವರದ ಪೇಂಟರ್ ಮೊಹಮ್ಮದ್ ಬಾವಾ ಅವರದ್ದು. ಮೊಹಮ್ಮದ್ ಬಾವಾ ತಲೆ ಮೇಲೆ ದೊಡ್ಡ ಮೊತ್ತದ ಸಾಲದ ಹೊರೆ ಇತ್ತು. ಈ ಸಾಲ ತೀರಿಸಲು ಅವರ ಮನೆಯನ್ನೇ ಮಾರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಅವರ ಅದೃಷ್ಟ ಖುಲಾಯಿಸಿದ್ದು ಸಾಲ ತೀರಿಸಿ ಹೊಸ ಮನೆ ಖರೀದಿಸುವಷ್ಟು ಹಣ ಅವರ ಕೈ ಸೇರಿದೆ.
ತಪ್ಪಾಗಿ ಬೇರೆ ಖಾತೆಗೆ 7 ಲಕ್ಷ ಹಣ ಕಳಿಸಿದ ಮಹಿಳೆ: ಲಾಟರಿ ಅಂತ ಹಂಗೆ ಇಟ್ಕೊಳ್ಳೋದಾ ಭೂಪ
ವಾಸ್ತವವಾಗಿ, ಸಾಲವನ್ನು ಮರುಪಾವತಿಸಲು, ಪೇಂಟರ್ ಬಾವಾ ತಮ್ಮ 2 ಸಾವಿರ ಚದರ ಅಡಿ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಗ್ರಾಹಕರೊಬ್ಬರ ಜತೆ ಒಪ್ಪಂದ ಮಾಡಿಕೊಂಡ ಬಳಿಕ ಭಾನುವಾರ ಸಂಜೆಯೇ ಅವರಿಂದ ಟೋಕನ್ ಹಣ ಪಡೆಯಲು ಹೋಗುವವರಿದ್ದರು.
ಅನಿವಾರ್ಯವಾಗಿ ₹40 ಲಕ್ಷಕ್ಕೆ ಮನೆ ಮಾರಾಟ: ಸಾಲ ತೀರಿಸಲು ಬಾವಾಗೆ 45 ಲಕ್ಷ ಬೇಕು ಎಂದು ಹೇಳಲಾಗಿತ್ತು. ಅದಕ್ಕೇ ಮನೆಯನ್ನು ಕಡಿಮೆ ಬೆಲೆಗೆ ಮಾರಲು ಹೊರಟಿದ್ದರು. ಹೀಗಾಗಿ 40 ಲಕ್ಷಕ್ಕೆ ಮನೆ ಮಾರಲು ಒಪ್ಪಿಗೆ ಸೂಚಿಸಿದ್ದರು. ಆದರೆ ವಿಧಿಯ ಆಟ ಬೇರೇನೋ ಇತ್ತು. ವಾಸ್ತವವಾಗಿ, ಭಾನುವಾರ ಮಧ್ಯಾಹ್ನ ಕುಟುಂಬವು ತಮ್ಮ ಮನೆಯನ್ನು ಖರೀದಿಸುವವರಿಗಾಗಿ ಕಾಯುತ್ತಿದ್ದಾಗ, ಬಾವಾ ಮಾರುಕಟ್ಟೆಗೆ ಹೋದರು. ಅಲ್ಲಿ ಅವರು ಕೇರಳ ಸರ್ಕಾರದ 50-50 ಲಾಟರಿಯ 4 ಟಿಕೆಟ್‌ಗಳನ್ನು ಖರೀದಿಸಿದರು.
ಗೃಹಸಾಲ ಪಡೆಯೋದು ಅಷ್ಟು ಸುಲಭನಾ? ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೀರಾ?
50-50 ಲಾಟರಿಯಲ್ಲಿ ₹1 ಕೋಟಿ ಜಾಕ್‌ಪಾಟ್: ವಾಸ್ತವವಾಗಿ, ಬಾವಾ ಕಳೆದ 4 ತಿಂಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಒಂದಿಲ್ಲ ಒಂದು ಬಾರಿ ತಮ್ಮ ಅದೃಷ್ಟ ಖುಲಾಯಿಸಬಹುದು ಎಂದು ಬಾವಾ ಭಾವಿಸಿದ್ದರು. ಆದರೆ ಅವರ ಅದೃಷ್ಟ ಬಾಗಿಲು ಭಾನುವಾರ ತೆರೆದುಕೊಳ್ಳುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ! ಹೌದು, ಭಾನುವಾರ ಖರೀದಿಸಿದ ಲಾಟರಿ ಅವರಿಗೆ ಜಾಕ್‌ಪಾಟ್ ತಂದುಕೊಟ್ಟಿದೆ. ಅಂದರೆ, ಕೆಲವೇ ಗಂಟೆಗಳಲ್ಲಿ ಬಾವಾ ಸಂಪೂರ್ಣ 1 ಕೋಟಿ ರೂ.ಗೆ ಮಾಲೀಕರಾಗಿದ್ದಾರೆ. ತೆರಿಗೆ ಕಡಿತಗೊಳಿಸಿದ ನಂತರ ಬಾವಾ 63 ಲಕ್ಷ ರೂ ಪಡೆದುಕೊಂಡಿದ್ದಾರೆ.