ತಪ್ಪಾಗಿ ಬೇರೆ ಖಾತೆಗೆ 7 ಲಕ್ಷ ಹಣ ಕಳಿಸಿದ ಮಹಿಳೆ: ಲಾಟರಿ ಅಂತ ಹಂಗೆ ಇಟ್ಕೊಳ್ಳೋದಾ ಭೂಪ

ಬ್ಯಾಂಕಿನಿಂದ ಬ್ಯಾಂಕ್‌ಗೆ ಹಣ ವರ್ಗಾವಣೆ ವೇಳೆ ಬಹಳ ಜಾಗರೂಕರಾಗಿರಬೇಕು. ಒಂದು ಸಣ್ಣ ತಪ್ಪು ಕೂಡ ನಿಮ್ಮ ಖಾತೆಯನ್ನು ಬರಿದು ಮಾಡಬಹುದು. ಅದರಲ್ಲೂ ಇಂಟರ್‌ನೆಟ್‌ ಬ್ಯಾಂಕಿಂಗ್ (Internet Banking) ವೇಳೆ ಆಗುವ ಅನಾಹುತಗಳು ಒಂದೆರಡಲ್ಲ. 

woman from mumbai accidentally transfers Rs 7 lakh to wrong account, account holder refused to return money akb

ಮುಂಬೈ: ಬ್ಯಾಂಕಿನಿಂದ ಬ್ಯಾಂಕ್‌ಗೆ ಹಣ ವರ್ಗಾವಣೆ ವೇಳೆ ಬಹಳ ಜಾಗರೂಕರಾಗಿರಬೇಕು. ಒಂದು ಸಣ್ಣ ತಪ್ಪು ಕೂಡ ನಿಮ್ಮ ಖಾತೆಯನ್ನು ಬರಿದು ಮಾಡಬಹುದು. ಅದರಲ್ಲೂ ಇಂಟರ್‌ನೆಟ್‌ ಬ್ಯಾಂಕಿಂಗ್ (Internet Banking) ವೇಳೆ ಆಗುವ ಅನಾಹುತಗಳು ಒಂದೆರಡಲ್ಲ. ಬ್ಯಾಂಕ್ ಈ ಬಗ್ಗೆ ಸಾಕಷ್ಟು ಎಚ್ಚರಿಕೆಗಳನ್ನು ಕಾಲ ಕಾಲಕ್ಕೆ ನೀಡುತ್ತಿದ್ದರೂ ಜನ ಮಾತ್ರ ಬುದ್ದಿಕಲಿಯುವುದೇ ಇಲ್ಲ. ಈಗ ಮಹಿಳೆಯೊಬ್ಬರು ತಾವು ಮಾಡಿದ ಅಚಾತುರ್ಯದಿಂದಾಗಿ 7 ಲಕ್ಷ ನಗದು ಕಳೆದುಕೊಳ್ಳುವಂತಾಗಿದೆ.

ಆನ್‌ಲೈನ್‌ನಲ್ಲಿ ಹಣ ಟ್ರಾನ್ಸ್‌ಫರ್‌ ಮಾಡುವ ವೇಳೆ 38 ವರ್ಷದ ಮಹಿಳೆಯೊಬ್ಬರು ಹಣವನ್ನು ಕಣ್ತಪ್ಪಿ ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ಹಣ ವಾಪಸ್ ನೀಡುವಂತೆ ತಾನು ಹಣ ವರ್ಗಾವಣೆ ಮಾಡಿದ ಖಾತೆಯನ್ನು ಹೊಂದಿದ್ದ ವ್ಯಕ್ತಿಗೆ ಮಹಿಳೆ ಕೇಳಿದ್ದಾಳೆ. ಆದರೆ ಹಣ ವಾಪಸ್ ನೀಡಲು ಆತ ನಿರಾಕರಿಸಿದ್ದು, ತನಗೆ ಲಾಟರಿ ಹೊಡೆದಿದ್ದಾಗಿ ಆತ ಹೇಳಿದ್ದಾನೆ. 

ಫೇಮಸ್ ಮಾಡಿದ ಯೂಟ್ಯೂಬರ್ ವಿರುದ್ಧವೇ ಬಾಬಾ ಕಾ ಡಾಬಾ ಮಾಲೀಕನಿಂದ ದೂರು!

ಜೂನ್‌ 19 ರಂದು ಮಹಿಳೆ ತಮ್ಮ ದೂರದ ಸಂಬಂಧಿಗೆ 7 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ (Money Transfer) ಮಾಡಿದ್ದಾರೆ. ಆದರೆ ಇವರು ತಪ್ಪಾಗಿ ಬ್ಯಾಂಕ್‌ ಖಾತೆ ಸಂಖ್ಯೆಯನ್ನು (Bank account Number) ಬರೆದ ಕಾರಣ ಮುಂಬೈನಲ್ಲಿ ವಾಸಿಸುತ್ತಿರುವ ಬೇರೆ ವ್ಯಕ್ತಿಯೊಬ್ಬರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಮಹಿಳೆಗೆ ತನ್ನ ತಪ್ಪಿನ ಅರಿವಾಗಿದ್ದು, ಕೂಡಲೇ ಅವರು ಬ್ಯಾಂಕ್ ಮಂದಿಯನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ತನಗೆ ಸಹಾಯ ಮಾಡುವಂತೆ ಕೇಳಿದ್ದಾರೆ. ಆದರೆ ಬ್ಯಾಂಕ್‌ನವರು ನಮಗೂ ಅದಕ್ಕೂ ಸಂಬಂಧವಿಲ್ಲ. ಇದು ನೀವೇ ಮಾಡಿದ ತಪ್ಪು ಎಂದು ಕೈ ಎತ್ತಿದ್ದಾರೆ. 

ಬ್ಯಾಂಕ್‌ನವರು ಸಹಾಯ ಮಾಡಲು ನಿರಾಕರಿಸಿದ ಮೇಲೆ ದಿಕ್ಕು ತೋಚದಾದ ಮಹಿಳೆ ಕೊನೆಗೆ ಜೂನ್‌ 20ರಂದು ಮುಂಬೈನ ಮೀರಾ ಭಯಾಂದರ್‌ ವಸೈ ವಿರಾರ್ (Mira Bhayander Vasai Virar) ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ಇದಾದ ಬಳಿಕ  7 ಲಕ್ಷ ರೂಪಾಯಿ ಹಣ ಬಿದ್ದ ಖಾತೆಯ ಹಾಗೂ ಖಾತೆದಾರನ ಮಾಹಿತಿ ಪಡೆದ ಪೊಲೀಸರು ಹಣ ನೀಡುವಂತೆ ಆತನಿಗೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರ ಮನವಿಯ ನಂತರವೂ ಆತ ಹಣ ನೀಡಲೂ ನಿರಾಕರಿಸಿದ್ದಾನೆ. ಅಲ್ಲದೇ ತನಗೆ ಲಾಟರಿ ಮಗುಚಿದ್ದಾಗಿ ಆತ ಹೇಳಿದ್ದಾನೆ. ಇದಾದ ಬಳಿಕ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ನಂತರ ಆತ ಜುಲೈ 2 ರಂದು ಹಣವನ್ನು ಮಹಿಳೆ ಖಾತೆಗೆ ಮರು ವರ್ಗಾವಣೆ ಮಾಡಿದ್ದೇನೆ. 

ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್: ಹೌಹಾರಿದ ಪೊಲೀಸರು!

ಕೆಲ ದಿನಗಳ ಹಿಂದೆ ಚಿಲಿ ದೇಶದ ಸಂಸ್ಥೆಯೊಂದು ಉದ್ಯೋಗಿಗೆ ಆಕಸ್ಮಿಕವಾಗಿ ಆತನ ಸಂಬಳದ 286 ಪಟ್ಟು ಹಣವನ್ನು ಆತನ ಖಾತೆಗೆ ಜಮೆ ಮಾಡಿತ್ತು. ಇದು ತಿಳಿದ ಬಳಿಕ ಸಂಸ್ಥೆ ಆತನಲ್ಲಿ ಹಣ ಹಿಂತಿರುಗಿಸುವಂತೆ ಮನವಿ ಮಾಡಿತ್ತು. ಆದರೆ ಹಣ ನೀಡುವುದಾಗಿ ಭರವಸೆ ನೀಡಿದ ಆತ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾದ ಘಟನೆ ಕೆಲ ದಿನಗಳ ಹಿಂದೆ ವರದಿಯಾಗಿತ್ತು. 

ನಾಪತ್ತೆಯಾದ ವ್ಯಕ್ತಿ ಚಿಲಿಯ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್)ನಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯು ಆಕಸ್ಮಿಕವಾಗಿ ಈ ಉದ್ಯೋಗಿಗೆ ಆತನ ಸಂಬಳವಾಗಿದ್ದ  500,000 ಪೆಸೊಗಳ (ರೂ. 43,000) ಬದಲು 165,398,851 ಚಿಲಿಯ ಪೆಸೊಗಳನ್ನು(ಚಿಲಿಯ ಕರೆನ್ಸಿ)(Chilean pesos) (ರೂ 1.42 ಕೋಟಿ ಭಾರತೀಯ ರೂಪಾಯಿ) ಪಾವತಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ನಂತರ ಕಂಪನಿಗೆ ಈ ತಪ್ಪು ಹಣ ವರ್ಗಾವಣೆ ಗಮನಕ್ಕೆ ಬಂದಿದ್ದು, ಕಂಪನಿಯ ಆಡಳಿತ ಮಂಡಳಿಯು ಉದ್ಯೋಗಿಯ ದಾಖಲೆಗಳನ್ನು ಪರಿಶೀಲಿಸಿತು ಮತ್ತು ಉದ್ಯೋಗಿಗೆ ಅವರ ಮಾಸಿಕ ವೇತನದ ಸುಮಾರು 286 ಪಟ್ಟು ಹೆಚ್ಚು ಪಾವತಿಸಲಾಗಿದೆ ಎಂಬುದನ್ನು ದೃಢಪಡಿಸಿತು. ನಂತರ ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಉದ್ಯೋಗಿಯನ್ನು ಕೇಳಲಾಯಿತು. ಈ ವೇಳೆ ಉದ್ಯೋಗಿ ತನಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ತನ್ನ ಬ್ಯಾಂಕ್‌ಗೆ ಹೋಗಲು ಒಪ್ಪಿಕೊಂಡನು. ಆದಾಗ್ಯೂ ಆತ ಹಣವನ್ನು ಹಿಂದಿರುಗಿಸಲು ಬಯಸಲಿಲ್ಲ. 

Latest Videos
Follow Us:
Download App:
  • android
  • ios