ಜಾಗತಿಕ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ 2ನೇ ಸ್ಥಾನ..!

ಕೆಂಪೇಗೌಡ ಏರ್‌ಪೋರ್ಟ್‌  84.08 ಪ್ರತಿಶತದಷ್ಟು ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ನಿರ್ಗಮಿಸಿದ್ದು, ಈ ಹಿನ್ನೆಲೆ ಈ ಜಾಗತಿಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

kempegowda international airport second in on time departures among global airports ash

2022 ಮುಗಿದಿದ್ದು, 2023ಕ್ಕೆ ಜಗತ್ತು ಈಗಾಗಲೇ ಲಗ್ಗೆ ಇಟ್ಟಿದೆ. ಕೊರೊನಾ (COVID - 19) ಪ್ರಕರಣಗಳ ಸಂಖ್ಯೆ ಸ್ವಲ್ಪ ಏರುಗತಿಯಲ್ಲಿದ್ದರೂ ವಿಮಾನಗಳ ಸೇವೆ (Flight Service) ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ (Bengaluru International Airport) ಪ್ರತಿನಿತ್ಯ ಸಾವಿರಾರು ವಿಮಾನಗಳನ್ನು ನಿರ್ವಹಿಸುತ್ತಿದೆ. ಅಲ್ಲದೆ, ವಿಶ್ವದಲ್ಲೇ ಅತ್ಯುತ್ತಮ ಏರ್‌ಪೋರ್ಟ್‌ಗಳ (Airport) ಪೈಕಿಯೂ ಬೆಂಗಳೂರು (Bengaluru) ಒಂದೆನಿಸಿಕೊಂಡಿದೆ. ಸಕಾಲಕ್ಕೆ ವಿಮಾನಗಳು ಇಲ್ಲಿ ಇತರೆ ಸ್ಥಳಗಳಿಂದ ಆಗಮಿಸುತ್ತಿರುತ್ತದೆ, ಹಾಗೆ ಸಮಯಕ್ಕೆ ಸರಿಯಾಗಿ ಇಲ್ಲಿಂದ ವಿಮಾನಗಳು ನಿರ್ಗಮಿಸುತ್ತಿರುತ್ತದೆ. ಈ ಹಿನ್ನೆಲೆ ಜಾಗತಿಕ ಪಟ್ಟಿಯೊಂದರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. 

2022 ರಲ್ಲಿ ಒಟ್ಟಾರೆ 2,01,897 ವಿಮಾನಗಳನ್ನು ನಿರ್ವಹಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ (ಕೆಐಎ)  (Kempegowda International Airport) (KIA) ನಲ್ಲಿ 84.08 ಪ್ರತಿಶತದಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ನಿರ್ಗಮಿಸಿವೆಯಂತೆ. ಇದನ್ನು ನಾವ್‌ ಹೇಳ್ತಿರೋದಲ್ಲ. ಏವಿಯೇಷನ್ ಡೇಟಾ ಅನಾಲಿಟಿಕ್ಸ್ ಕಂಪನಿ ಸಿರಿಯಮ್ (Cirium) ಬಿಡುಗಡೆ ಮಾಡಿದ ಉನ್ನತ-ಕಾರ್ಯನಿರ್ವಹಣೆಯ ವಿಮಾನ ನಿಲ್ದಾಣಗಳು ಮತ್ತು ಏರ್‌ಲೈನ್‌ಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) 2022 ರಲ್ಲಿ ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ನಿರ್ಗಮಿಸುವ ಕಾರಣದಿಂದ ಜಾಗತಿಕ ವಿಮಾನ ನಿಲ್ದಾಣಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ವರದಿ ಮಾಡಿದೆ. ಏವಿಯೇಷನ್ ಡೇಟಾ ಅನಾಲಿಟಿಕ್ಸ್ ಕಂಪನಿ ಸಿರಿಯಮ್ ಯುಕೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 

ಇದನ್ನು ಓದಿ: ವಿಮಾನ ಸೇವೆಯಲ್ಲಿ ವಿಶ್ವದಲ್ಲೇ ಬೆಂಗಳೂರು ಏರ್‌ಪೋರ್ಟ್‌ ಉತ್ತಮ..!

ಕೆಂಪೇಗೌಡ ಏರ್‌ಪೋರ್ಟ್‌  84.08 ಪ್ರತಿಶತದಷ್ಟು ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ನಿರ್ಗಮಿಸಿದ್ದು, ಈ ಹಿನ್ನೆಲೆ ಈ ಜಾಗತಿಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು, 373,264 ವಿಮಾನಗಳ ಪೈಕಿ ಶೇಕಡ 90.33 ರಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ನಿರ್ಗಮಿಸಿದ ಕಾರಣ ಜಪಾನ್‌ ರಾಜಧಾನಿ ಟೋಕಿಯೋದ ಹನೇಡಾ ವಿಮಾನ ನಿಲ್ದಾಣವು ಮೊದಲ ಸ್ಥಾನದಲ್ಲಿದೆ. ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 7 ನೇ ಸ್ಥಾನದಲ್ಲಿದ್ದು, ಇದು ಜಾಗತಿಕ ಪಟ್ಟಿಯಲ್ಲಿನ ಟಾಪ್‌ 10 ಸ್ಥಾನ ಪಡೆದಿರುವ ಇತರ ಭಾರತೀಯ ವಿಮಾನ ನಿಲ್ದಾಣವಾಗಿದೆ. 

ಡೆಲ್ಟಾ ಏರ್‌ಲೈನ್ಸ್‌ಗೆ ಸಿರಿಯಮ್‌ ಪ್ಲಾಟಿನಂ ಪ್ರಶಸ್ತಿ
ಇನ್ನೊಂದೆಡೆ, ಡೆಲ್ಟಾ ಏರ್‌ಲೈನ್ಸ್‌  ಜಾಗತಿಕ ಕಾರ್ಯಾಚರಣೆಯ ಶ್ರೇಷ್ಠತೆಗಾಗಿ ಸಿರಿಯಮ್‌ ಕಂಪನಿಯ ಪ್ಲಾಟಿನಂ ಪ್ರಶಸ್ತಿ ವಿಜೇತರಾಗಿದೆ. ಕಳೆದ ವರ್ಷವೂ ಡೆಲ್ಟಾ ಏರ್‌ಲೈನ್ಸ್‌ ಈ ಪ್ರಶಸ್ತಿ ಪಡೆದುಕೊಂಡಿದ್ದು, ಈ ಹಿನ್ನೆಲೆ ಎರಡನೇ ಸತತ ವರ್ಷ ಈ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. 

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಕಡ್ಡಾಯ ಸ್ಕ್ರೀನಿಂಗ್; ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕ್ರಮ

ಇನ್ನು, ಬ್ರೆಜಿಲ್‌ನ ಕಡಿಮೆ-ವೆಚ್ಚದ ವಾಹಕ ಅಜುಲ್ ಸಂಸ್ಥೆಯ ವಿಮಾನಗಳು 88.93 ಪ್ರತಿಶತ ಸಮಯಕ್ಕೆ ಸರಿಯಾಗಿ ಆಗಮಿಸುತ್ತವೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಈ ಪಟ್ಟಿಯಲ್ಲಿ ಅಗ್ರ ಜಾಗತಿಕ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದೆ. ಅದೇ ರೀತಿ, ಜಪಾನ್‌ನ ಆಲ್ ನಿಪ್ಪಾನ್ ಏರ್‌ವೇಸ್ ಮತ್ತು ಜಪಾನ್ ಏರ್‌ಲೈನ್ಸ್‌ನ ವಿಮಾನಗಳು ಅನುಕ್ರಮವಾಗಿ 88.61 ಪ್ರತಿಶತ ಮತ್ತು 88 ಪ್ರತಿಶತದಷ್ಟು ಸಮಯಕ್ಕೆ ಸರಿಯಾಗಿ ಆಗಮಿಸುತ್ತವೆ ಎಂದು ತಿಳಿದುಬಂದಿದೆ. ಆದರೆ, ಯಾವುದೇ ಯುರೋಪಿಯನ್ ಖಂಡದ ಏರ್‌ಲೈನ್ಸ್‌ ವಾಹಕಗಳು ಈ ಜಾಗತಿಕ ಪಟ್ಟಿಯಲ್ಲಿ ಟಾಪ್‌ 10 ರಲ್ಲಿ ಕಾಣಿಸಿಕೊಂಡಿಲ್ಲ.

ಈ ಮಧ್ಯೆ, ಸಿರಿಯಮ್ ಪ್ರಕಾರ ಏಷ್ಯಾ-ಪೆಸಿಫಿಕ್ ಪ್ರದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ, ಇಂಡಿಗೋ 5 (ಶೇ. 84.11), ಏರ್ ಏಷ್ಯಾ ಇಂಡಿಯಾ 6 (ಶೇ. 83.7), ಮತ್ತು ವಿಸ್ತಾರಾ 9 (ಶೇ. 80.98) ನೇ ಸ್ಥಾನ ಪಡೆದುಕೊಂಡಿದೆ. ಹಾಗೆ, ಶೇ. 91.56 ರಷ್ಟು ಸಮಯಕ್ಕೆ ಸರಿಯಾಗಿ ಆಗಮಿಸುವ ಮೂಲಕ ಥಾಯ್ ಏರ್‌ವೇಸ್‌ ವಿಮಾನಗಳು ಏರ್‌ಏಷ್ಯಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ, ಶೇ. 91.38 ರಷ್ಟು ಸಮಯಕ್ಕೆ ಸರಿಯಾಗಿ ಆಗಮಿಸುವ ಓಮನ್ ಏರ್‌ ವಿಮಾನಗಳು ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ವಲಯದಲ್ಲಿ ಮುಂಚೂಣಿಯಲ್ಲಿದೆ.
ಸಮಯಕ್ಕೆ ಸರಿಯಾಗಿ ವಿಮಾನಗಳು ಆಗಮಿಸುವುದು - ನಿರ್ಗಮಿಸುವುದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಅಂತೀರಾ..? ವಿಮಾನ ನಿಲ್ದಾಣಕ್ಕೆ ಬರಬೇಕಾದ ಸಮಯಕ್ಕೆ ಸರಿಯಾಗಿ ಅಥವಾ ಗರಿಷ್ಠ 15 ನಿಮಿಷಗಳಷ್ಟು ವಿಳಂಬವಾದರೆ ವಿಮಾನಗಳು ಆನ್‌ - ಟೈಮ್‌ಗೆ ಬಂದಿವೆ ಎಂದು ಹೇಳಬಹುದು. ಅದೇ ರೀತಿ, ನಿಗದಿತ ಸಮಯಕ್ಕೆ ಸರಿಯಾಗಿ ಅಥವಾ ಗರಿಷ್ಠ 15 ನಿಮಿಷಗಳಷ್ಟು ವಿಳಂಬವಾಗಿ ನಿರ್ಗಮಿಸಿದರೆ ಆನ್‌ - ಟೈಮ್‌ಗೆ ವಿಮಾನಗಳು ನಿರ್ಗಮಿಸಿವೆ ಎಂದರ್ಥ. 

ಇದನ್ನೂ ಓದಿ: ಹೀಥ್ರೂ, ಸಿಂಗಾಪುರ ಏರ್‌ಪೋರ್ಟ್‌ ಬಿಟ್ಹಾಕಿ.. ಕೆಂಪೇಗೌಡ ಏರ್‌ಪೋರ್ಟ್‌ ಹೇಗಾಗಿದೆ ನೋಡಿದ್ರಾ!

Latest Videos
Follow Us:
Download App:
  • android
  • ios