ITR Filing:ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡೋದು ಹೇಗೆಂದು ಗೊತ್ತಿಲ್ವಾ? ಹಾಗಾದ್ರೆ ಈ ವಿಧಾನ ಅನುಸರಿಸಿ
ನೀವು ಇನ್ನೂ 2021-22ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿಲ್ವಾ? ಹೇಗೆ ಫೈಲ್ ಮಾಡೋದು ಎಂದು ತಿಳಿದಿಲ್ಲವಾದರೆ ಇಲ್ಲಿದೆ ನೋಡಿ ಹಂತ ಹಂತವಾದ ವಿವರಣೆ. ಈ ಹಂತಗಳನ್ನು ಅನುಸರಿಸಿದ್ರೆ ಸಾಕು, ನೀವೇ ನಿಮ್ಮ ಸಿಸ್ಟ್ಂನಿಂದಲೇ ಸುಲಭವಾಗಿ ಐಟಿಆರ್ ಸಲ್ಲಿಕೆ ಮಾಡಬಹುದು.
Business Desk: 2021-22ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಇನ್ನು ಅಡಿಟ್ ಗೊಳಪಡೋ ಇತರ ತೆರಿಗೆ ಪಾವತಿದಾರರಿಗೆ ರಿಟರ್ನ್ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನಾಂಕ. ಆದಾಯ ತೆರಿಗೆ ರಿಟರ್ನ್ (ITR) ಮೂಲತಃ ಒಂದು ದಾಖಲೆಯಾಗಿದ್ದು,ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಿಗೆ ಅನುಗುಣವಾಗಿ ಫೈಲ್ ಮಾಡಲಾಗುತ್ತದೆ.ಇದರಲ್ಲಿ ಆ ವ್ಯಕ್ತಿಯ ಆದಾಯ,ಲಾಭ ಹಾಗೂ ನಷ್ಟಗಳ ಜೊತೆಗೆ ಇತರ ತೆರಿಗೆ ಕಡಿತಗಳ ಮಾಹಿತಿಗಳೂ ಇರುತ್ತವೆ.
ಯಾವೆಲ್ಲ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ?
*ವೇತನದಿಂದ ಬಂದ ಆದಾಯ
*ಮನೆ ಆಸ್ತಿಯಿಂದ ಬಂದ ಆದಾಯ
*ಉದ್ಯಮಗಳು ಹಾಗೂ ವೃತ್ತಿಯಿಂದ ಬಂದ ಆದಾಯ
*ಬಂಡವಾಳ ಗಳಿಕೆಯಿಂದ ಬಂದ ಆದಾಯ
*ಇತರ ಮೂಲಗಳಿಂದ ಗಳಿಸಿದ ಆದಾಯ
Gold Price: ಕುಸಿದ ಚಿನ್ನ,ಬೆಳ್ಳಿ ಬೆಲೆ; ಖರೀದಿಗೆ ಇದು ಸೂಕ್ತ ಸಮಯನಾ? ತಜ್ಞರು ಏನ್ ಹೇಳ್ತಾರೆ?
ಆನ್ ಲೈನ್ ನಲ್ಲಿ ಐಟಿಆರ್ ಸಲ್ಲಿಕೆ ಹೇಗೆ?
ಈಗ ನಿಮ್ಮ ಐಟಿಆರ್ ಅನ್ನು ನೀವೇ ಆನ್ ಲೈನ್ ನಲ್ಲಿ ಸಲ್ಲಿಕೆ ಮಾಡಬಹುದು. ಈ ಕೆಳಗಿನ ಹಂತಗಳನ್ನು ಪಾಲಿಸಿದರೆ ಆನ್ ಲೈನ್ ನಲ್ಲಿ ಐಟಿಆರ್ ಸಲ್ಲಿಕೆ ಸುಲಭ.
ಹಂತ 1: ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ www.incometaxindiaefiling.gov.in ಲಾಗಿ ಇನ್ ಆಗಿ.
ಹಂತ 2: ನಿಮ್ಮ ಪ್ಯಾನ್ ಬಳಸಿ ಲಾಗಿ ಇನ್ ಆಗಿ ಅಥವಾ ನೋಂದಣಿ ಮಾಡಿ.
ಹಂತ 3: ಪೇಜ್ ನಲ್ಲಿರುವ click on e-file ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಇ-ಫೈಲ್ ಆಯ್ಕೆ ಮಾಡಿ.
ಹಂತ 4: ಈಗ 'File Income Tax Return' ಆಯ್ಕೆ ಮಾಡಿ.
ಹಂತ 5: ಸಂಬಂಧಿತ 'Assessment year'ಆರಿಸಿ.
ಹಂತ 6: ಇದಾದ ಬಳಿಕ ನಿಮಗೆ ಆನ್ ಲೈನ್ ಅಥವಾ ಆಪ್ ಲೈನ್ ಆಯ್ಕೆ ಒದಗಿಸಲಾಗುತ್ತದೆ.
ಹಂತ 7: ನೀವು ಆನ್ ಲೈನ್ ಆಯ್ಕೆ ಬಯಸಿದ್ರೆ 'Personal'ಆಯ್ಕೆಯನ್ನು ಆರಿಸಿ.
ಹಂತ 8: ITR-1 ಅಥವಾ ITR-4 ಆಯ್ಕೆಗಳಲ್ಲಿ ಒಂದರ ಮೇಲೆ ಕ್ಲಿಕ್ ಮಾಡಿ.
ಹಂತ 9: ಒಂದು ವೇಳೆ ನೀವು ವೇತನ ಪಡೆಯುವ ಉದ್ಯೋಗಿಯಾಗಿದ್ರೆ ITR-1 ಆಯ್ಕೆ ಮಾಡಿ.
ಹಂತ 10: ಇದಾದ ಬಳಿಕ ಐಟಿಆರ್ ರಿಟರ್ನ್ ಅರ್ಜಿ ನಿಮ್ಮ ಸಿಸ್ಟ್ಂನಲ್ಲಿ ಡೌನ್ ಲೋಡ್ ಆಗುತ್ತದೆ.
ಹಂತ 11: ಫೈಲಿಂಗ್ ಮಾದರಿ 139(1) ಆಯ್ಕೆ ಮಾಡಿ.
ಹಂತ 12: ನೀವು ತಕ್ಷಣ ಮನವಿ ಮಾಡಿರುವ ಮಾಹಿತಿ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಗಳನ್ನು ತಕ್ಷಣ ಸೇವ್ ಮಾಡಬೇಕು.
ಹಂತ 13: ಆನ್ ಲೈನ್ ದೃಢೀಕರಣ ಮುಗಿದ ತಕ್ಷಣ ಆ ಪ್ರತಿಯನ್ನು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಇಲ್ಲವೇ ಡೌನ್ ಲೋಡ್ ಮಾಡಬಹುದು. ಆದಾಯ ತೆರಿಗೆ ಇಲಾಖೆಗೆ ಕಳುಹಿಸಬೇಕು.
ಈ ಕಂಪನಿ ಉದ್ಯೋಗಿಗಳ ವೇತನ ಕೇಳಿದ್ರೆ ತಲೆ ತಿರುಗುತ್ತೆ!220 ಮಂದಿ ವಾರ್ಷಿಕ ಪ್ಯಾಕೇಜ್ 1ಕೋಟಿ ರೂ.ಗಿಂತಲೂ ಅಧಿಕ
ಇ-ಪರಿಶೀಲನೆ ಮಾಡೋದು ಹೇಗೆ?
ರಿಟರ್ನ್ ಇ-ಪರಿಶೀಲನೆ (e-verification) ಮಾಡಲು ಆರು ವಿಧಾನಗಳನ್ನು ಅನುಸರಿಸಬಹುದು. ನೆಟ್ ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ, ಡಿಮ್ಯಾಟ್ ಖಾತೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ.
ವಿಳಂಬವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?
ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಮೊತ್ತ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ಮೊತ್ತಕ್ಕಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ.