Gold Price: ಕುಸಿದ ಚಿನ್ನ,ಬೆಳ್ಳಿ ಬೆಲೆ; ಖರೀದಿಗೆ ಇದು ಸೂಕ್ತ ಸಮಯನಾ? ತಜ್ಞರು ಏನ್ ಹೇಳ್ತಾರೆ?
ಚಿನ್ನ ಖರೀದಿಸೋರು ಬೆಲೆ ಇಳಿಕೆಗೆ ಕಾಯೋದು ಸಾಮಾನ್ಯ.ಈಗ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಆದ್ರೆ ಚಿನ್ನ, ಬೆಳ್ಳಿ ದರ ಇನ್ನಷ್ಟು ಇಳಿಕೆಯಾಗುತ್ತಾ? ಅಥವಾ ಈಗಲೇ ಚಿನ್ನ ಖರೀದಿಸೋದು ಉತ್ತಮನಾ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ? ಇಲ್ಲಿದೆ ಮಾಹಿತಿ.
ನವದೆಹಲಿ (ಜೂ.23): ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಗುರುವಾರ ಭಾರೀ ಇಳಿಕೆ ಕಂಡುಬಂದಿದೆ. ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮೆ ಪೊವೆಲ್ ಬಡ್ಡಿದರ ಏರಿಕೆಗೆ ಸಂಬಂಧಿಸಿ ಬುಧವಾರ ಹೇಳಿಕೆ ನೀಡಿದ ಬೆನ್ನಲ್ಲೇ ಚಿನ್ನದ ದರದಲ್ಲಿ ಕುಸಿತವಾಗಿದೆ. ಇಂದು ಮಲ್ಟಿ ಕಾಮೋಡಿಟಿ ಎಕ್ಸ್ ಚೇಂಜ್ ನಲ್ಲಿ (MCX) 10ಗ್ರಾಂ ಚಿನ್ನದ ಬೆಲೆ ಶೇ.0.20 ಇಳಿಕೆ ಕಂಡು 50,800ರೂ. ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಶೇ.0.63ರಷ್ಟು ಕುಸಿತ ಕಂಡು ಕೆಜಿಗೆ 60,266ರೂ. ತಲುಪಿದೆ. ಹಾಗಾದ್ರೆ ಚಿನ್ನ, ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯನಾ?
ಅಮೆರಿಕದ (United States) ಫೆಡರಲ್ ರಿಸರ್ವ್ ( Federal Reserve) ಮುಖ್ಯಸ್ಥ ಜೆರೋಮೆ ಪೊವೆಲ್ (Jerome Powell) ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಬಡ್ಡಿದರವನ್ನು ಬೃಹತ್ ಪ್ರಮಾಣದಲ್ಲಿ ಏರಿಕೆ ಮಾಡೋದು ಅನಿವಾರ್ಯ ಎಂಬ ಹೇಳಿಕೆ ನೀಡಿದ ಬಳಿಕ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ತೀವ್ರ ಒತ್ತಡಕ್ಕೆ ಸಿಲುಕಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ (Spot gold) ಬೆಲೆ ಶೇ.0.2 ಕುಸಿತ ಕಂಡು ಪ್ರತಿ ಔನ್ಸ್ ಗೆ (ounce) 1,832.91 ಡಾಲರ್ ತಲುಪಿದೆ. ಸ್ಪಾಟ್ ಚಿನ್ನ ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಆಗುವ ಚಿನ್ನದ ಬೆಲೆ. ಇನ್ನು ಯುಎಸ್ ಚಿನ್ನ (US gold) ಕೂಡ ಶೇ.0.2ರಷ್ಟು ಇಳಿಕೆಯಾಗಿ 1,834.30 ಡಾಲರ್ ಮುಟ್ಟಿದೆ. ಇನ್ನು ಸ್ಪಾಟ್ ಬೆಳ್ಳಿ ಬೆಲೆ ಕೂಡ ಶೇ.0.5 ಇಳಿಕೆಯಾಗಿ ಪ್ರತಿ ಔನ್ಸ್ ಗೆ 21.28 ಡಾಲರ್ ಇದೆ.
ಈ ಕಂಪನಿ ಉದ್ಯೋಗಿಗಳ ವೇತನ ಕೇಳಿದ್ರೆ ತಲೆ ತಿರುಗುತ್ತೆ!220 ಮಂದಿ ವಾರ್ಷಿಕ ಪ್ಯಾಕೇಜ್ 1ಕೋಟಿ ರೂ.ಗಿಂತಲೂ ಅಧಿಕ
ಹಣದುಬ್ಬರ ಎಷ್ಟು ಬೇಗ ಇಳಿಕೆಯಾಗಲಿದೆ ಎನ್ನೋದರ ಆಧಾರದಲ್ಲಿ ಭವಿಷ್ಯದ ಬಡ್ಡಿದರ ಏರಿಕೆ ನಿರ್ಧಾರವಾಗಲಿದೆ ಎಂದು ಪೊವೆಲ್ ಬುಧವಾರ ತಿಳಿಸಿದ್ದಾರೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಈ ತಿಂಗಳ ಪ್ರಾರಂಭದಲ್ಲಿ ಬೆಂಚ್ ಮಾರ್ಕ್ ಬಡ್ಡಿದರವನ್ನು 75 ಬೇಸಿಸ್ ಪಾಯಿಂಟ್ ಗಳಷ್ಟು ಅಂದ್ರೆ ಶೇ.1.5ರಿಂದ ಶೇ.1.75 ಏರಿಕೆ ಮಾಡಿದೆ. ಬೆಲೆಯೇರಿಕೆಗೆ ಕಡಿವಾಣ ಹಾಕಲು ಫೆಡರಲ್ ರಿಸರ್ವ್ ಈ ನಿರ್ಧಾರ ಕೈಗೊಂಡಿತ್ತು. ಈ ಬಡ್ಡಿದರ ಏರಿಕೆಯು ಮೂರು ದಶಕಗಳಲ್ಲೇ ಅತ್ಯಧಿಕ ಪ್ರಮಾಣದ್ದಾಗಿದೆ.
ಭವಿಷ್ಯದಲ್ಲಿ ಚಿನ್ನದ ದರ ಇಳಿಕೆಯಾಗುತ್ತಾ?
ಹಣದುಬ್ಬರಕ್ಕೆ ಕಡಿವಾಣ ಹಾಕಬೇಕೆಂದು ಅಮೆರಿಕದ ಫೆಡರಲ್ ರಿಸರ್ವ್ ನಿರ್ಧರಿಸಿದ್ದು, ಈ ಪ್ರಕ್ರಿಯೆಯಲ್ಲಿ ಆರ್ಥಿಕ ಹಿಂಜರಿತವಾಗದಂತೆ ತಡೆಯಲು ಪ್ರಯತ್ನಿಸುತ್ತಿದೆ. ಇದರ ಹೊರತಾಗಿಯೂ ಏಷ್ಯಾದ ಮಾರುಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಸ್ಪಾಟ್ ಹಾಗೂ ಕೊಮೆಕ್ಸ್ ಚಿನ್ನದ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ಡಾಲರ್ ಹಾಗೂ ಅಮೆರಿಕದ ಟ್ರೆಷರ್ ಯೀಲ್ಡ್ಸ್ ದುರ್ಬಲಗೊಳ್ಳುತ್ತಿರೋದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಕೂಡ ಕುಸಿತ ಕಂಡುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ 60,140ರೂ.-61,130ರೂ. ಇದೆ.
Business Ideas: ಕಡಿಮೆ ಹೂಡಿಕೆ ಮಾಡಿ ಹೆಚ್ಚು ಶ್ರಮ ವಹಿಸಿದ್ರೆ ಲಾಭ ನಿಶ್ಚಿತ
ರಷ್ಯಾ-ಉಕ್ರೇನ್ ಯುದ್ಧ, ಆರ್ಥಿಕ ಹಿಂಜರಿತ ಮುಂತಾದ ಕಾರಣಗಳಿಂದ ಚಿನ್ನದ ಬೆಲೆಯಲ್ಲಿಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೊರೋನಾ (Corona) ಬಳಿಕ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಗಮನಾರ್ಹ ಏರಿಕೆಯಾಯ್ತು.ಇದ್ರಿಂದ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಜನರು ಹಿಂದೇಟು ಹಾಕಿದ್ದರು. ಆದ್ರೆ 2021ರ ಪ್ರಾರಂಭದಲ್ಲಿ ಚಿನ್ನದ ದರದಲ್ಲಿ ಅಲ್ಪ ಇಳಿಕೆ ಕಂಡುಬಂದಿತ್ತು.ಆದ್ರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಿತ್ತು ಕೂಡ. ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಹಾವೇಣಿ ಆಟ ಸಾಮಾನ್ಯ. ಹೀಗಾಗಿ ಚಿನ್ನದ ದರ ಇಷ್ಟೇ ಇರಲಿದೆ ಎಂದು ಊಹಿಸೋದು ಕಷ್ಟ. ಆದರೂ ಅಂತಾರಾಷ್ಟ್ರೀಯ ಮಟ್ಟದ ಕೆಲವು ವಿದ್ಯಮಾನಗಳು ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೆ ಪ್ರಭಾವ ಬೀರುವ ಕಾರಣ ಏರಿಳಿತದ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪರಿಗಣಿಸಿ ಹೂಡಿಕೆದಾರರು ನಿರ್ಧಾರ ಕೈಗೊಳ್ಳುವುದು ಉತ್ತಮ.