Asianet Suvarna News Asianet Suvarna News

ಈ ಶತಮಾನ ಭಾರತಕ್ಕೆ ಸೇರಿದ್ದು: ವೆಂಚರ್ ಕ್ಯಾಪಿಟಲ್ ಜೀನಿಯಸ್ ಬ್ರೆಂಡನ್ ರೋಜರ್ಸ್ ಭವಿಷ್ಯ

ಭಾರತದ ಸ್ಟಾರ್ಟಪ್‌ ಎಕೋಸಿಸ್ಟಮ್‌ ಭವಿಷ್ಯವು ಎಂದಿಗಿಂತಲೂ ಉಜ್ವಲವಾಗಿ ಕಾಣುತ್ತಿದೆ ಎಂದು ವೆಂಚರ್ ಕ್ಯಾಪಿಟಲಿಸ್ಟ್ ಮತ್ತು ಮಾರ್ಗದರ್ಶಕ ಬ್ರೆಂಡನ್ ರೋಜರ್ಸ್ ಹೇಳಿದರು. ಹಾಗೂ, ಭಾರತವು ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರರ ಮೂಲವಾಗಿದೆ, ಇದು ಸುಮಾರು 7% ಜಿಡಿಪಿಯೊಂದಿಗೆ ವೇಗವಾಗಿ ಬೆಳೆಯುತ್ತಿದೆ ಎಂದೂ ಅವರು ಹೇಳಿದರು.

it will be indias century predicts venture capital genius brendan rogers ash
Author
First Published Dec 11, 2022, 1:01 PM IST

ಕೋವಿಡ್ - 19 ಕರಿನೆರಳಿನ ನಡುವೆಯೂ ಭಾರತ ಜಿಡಿಪಿ, ಆರ್ಥಿಕತೆ ಗಮನಾರ್ಹವಾಗಿದ್ದು, ವಿಶ್ವದ ಹಲವು ರಾಷ್ಟ್ರಗಳು, ನಾಯಕರು, ತಜ್ಞರ ಮೆಚ್ಚುಗೆ ಗಳಿಸಿದೆ. ಇದೇ ರೀತಿ, ಭಾರತದ  (India) ಸ್ಟಾರ್ಟಪ್‌ ಎಕೋಸಿಸ್ಟಮ್‌ ಭವಿಷ್ಯವು (Startup Ecosystem) ಎಂದಿಗಿಂತಲೂ ಉಜ್ವಲವಾಗಿ ಕಾಣುತ್ತಿದೆ ಎಂದು ಬ್ರೆಂಡನ್ ರೋಜರ್ಸ್ (Brendan Rogers) ಅವರು ನಮ್ಮ ದೇಶವನ್ನು ಹೊಗಳಿದ್ದಾರೆ. ಇವರು ಸಾಹಸೋದ್ಯಮ ಬಂಡವಾಳಶಾಹಿ (Venture Capitalist) ಮತ್ತು ಸಲಹೆಗಾರ (Advisor) ಹಾಗೂ ಪ್ರಪಂಚದಾದ್ಯಂತದ ಅನೇಕ ಕಂಪನಿಗಳು, ವೇಗವರ್ಧಕಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಮಾರ್ಗದರ್ಶಕರಾಗಿದ್ದಾರೆ (Mentor). ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಏಕೆ ಹೂಡಿಕೆ ಮಾಡಬೇಕು ಎಂಬ ಕಾರಣಗಳ ಬಗ್ಗೆಯೂ ಇವರು ಬೆಳಕು ಚೆಲ್ಲಿದ್ದಾರೆ. 

ಸಾಮಾಜಿಕ ಜಾಲತಾಣ ಹಾಗೂ ನೆಟ್‌ವರ್ಕಿಂಗ್‌ ಪ್ಲಾಟ್‌ಫಾರ್ಮ್‌ ಲಿಂಕ್ಡ್‌ಇನ್‌ನಲ್ಲಿ ಇವರು 2022 ಭಾರತದ ಶತಮಾನ ಎಂದು ಬರೆದಿದ್ದಾರೆ. 2022 ರಲ್ಲಿ, ನಾನು 10 ದೇಶಗಳಿಗೆ ಪ್ರಯಾಣಿಸಿದ್ದೇನೆ. ಇದು ಭಾರತದ ಶತಮಾನ ಏಕೆ ಎಂದು ಜಗತ್ತಿಗೆ ಹೇಳುತ್ತಿದ್ದೇನೆ. ಭಾರತದ ಸಂಸ್ಥಾಪಕರಲ್ಲಿ ಹೂಡಿಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ನೂರಾರು ಹೂಡಿಕೆದಾರರ ಮುಂದೆ ಮುಖ್ಯ ಭಾಷಣಕಾರನಾಗಲು ನಾನು ಅದೃಷ್ಟಶಾಲಿಯಾಗಿದ್ದೆ ಎಂದು ಬ್ರೆಂಡನ್ ರೋಜರ್ಸ್ ಅವರು ಪೋಸ್ಟ್‌ ಮಾಡಿದ್ದಾರೆ. 

ಇದನ್ನು ಓದಿ: ಭಾರತದ ಜಿಡಿಪಿ ದರ ನಿರೀಕ್ಷೆ ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್‌

ಸರಾಸರಿ 28 ವರ್ಷ ವಯಸ್ಸಿನ ಭಾರತವು ವಿಶ್ವದ ಅತ್ಯಂತ ಕಿರಿಯ ದೇಶವನ್ನು ಹೊಂದಿದೆ ಎಂದು ಪ್ರಸ್ತಾಪಿರುವುದಾಗಿ ರೋಜರ್ಸ್‌ ವಿವರಿಸಿದ್ದಾರೆ. "ಭಾರತವು ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರರ ಮೂಲ ಆಗಿದೆ. 7% GDP ಯಲ್ಲಿ ಈ ದೇಶ ವೇಗವಾಗಿ ಬೆಳೆಯುತ್ತಿದೆ" ಎಂದೂ ಅವರು ಹೇಳಿದರು.

ಭಾರತವು ಪಟ್ಟುಬಿಡದ ತಾಂತ್ರಿಕ ಸಂಸ್ಥಾಪಕರನ್ನು ಹೊಂದಿದೆ, ಮತ್ತು ಅವರು ವಿದೇಶಕ್ಕೆ ಹೋಗದೆ ತವರು ದೇಶದಲ್ಲೇ ಉಳಿಯಲು ಮತ್ತು ಹೊರಗಿನ ಬಂಡವಾಳದ ಮೂಲಕ ಶತಕೋಟಿ ಡಾಲರ್‌ಗಳ ಒಳಹರಿವಿಗೆ ಹೆಸರುವಾಸಿಯಾಗಿದ್ದಾರೆ ಎಂದೂ ಬ್ರೆಂಡನ್‌ ರೋಜರ್ಸ್ ಹೇಳಿದರು. ಭಾರತದ ಸ್ಟಾರ್ಟಪ್‌ ಪರಿಸರ ವ್ಯವಸ್ಥೆಯ ಅಥವಾ ಎಕೋಸಿಸ್ಟಮ್‌ ಭವಿಷ್ಯವು ಎಂದಿಗಿಂತಲೂ ಉಜ್ವಲವಾಗಿ ಕಾಣುತ್ತಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: Q2 GDP Data: ಜಾಗತಿಕ ಸವಾಲುಗಳ ನಡುವೆ ರಿಲೀಫ್‌ ನೀಡಿದ ಭಾರತದ ಆರ್ಥಿಕತೆ, ಶೇ.6.3ಗೆ ಏರಿಕೆ!

ಈ ವಾರದ ಆರಂಭದಲ್ಲಿ, ವಿಶ್ವ ಬ್ಯಾಂಕ್ 2022-2023 ರ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇಕಡಾ 6. 5 ರಿಂದ ಶೇಕಡಾ 6.9ಕ್ಕೆ ಹೆಚ್ಚಿಸಿದೆ. ಚೀನಾ, ಯುಎಸ್ ಮತ್ತು ಯೂರೋ ಪ್ರದೇಶಗಳು ಭಾರತದ ಮೇಲೆ ಪ್ರಭಾವ ಬೀರುತ್ತವೆ ಎಂದು ವಿಶ್ವ ಬ್ಯಾಂಕ್‌ನ ಇಂಡಿಯಾ ಡೆವಲಪ್‌ಮೆಂಟ್ ಅಪ್‌ಡೇಟ್ ಹೇಳಿದೆ. ಇನ್ನು, 2022-2023 ರಲ್ಲಿ, ಸರ್ಕಾರವು ತನ್ನ ಬಜೆಟ್ ಕೊರತೆಯ ಗುರಿಯನ್ನು GDP ಯ 6.4% ಸಾಧಿಸುತ್ತದೆ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು 7.1%  ಆಗಲಿದೆ ಎಂದೂ ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ.

ಬ್ರೆಂಡನ್‌ ರೋಜರ್ಸ್ ಪ್ರಸ್ತುತ 2am [VC] ಎಂಬ ಆರಂಭಿಕ ಹಂತದ ಇಂಡಿಯಾ ಫಂಡ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಹಾಗೂ, ಇವರು ಅಮೆರಿಕದಲ್ಲಿನ ಅತಿ ದೊಡ್ಡ PET ಪ್ಲಾಟ್‌ಫಾರ್ಮ್‌ ಆದ (NASDAQ) PET ಆದ ವಾಗ್‌ನ ಸಹ-ಸ್ಥಾಪಿಸಿದ್ದಾರೆ. ಅಲ್ಲದೆ, ಪ್ರಪಂಚದ ಕೆಲವು ದೊಡ್ಡ ಸ್ಟಾರ್ಟಪ್ ಸಮ್ಮೇಳನಗಳಲ್ಲಿ ಆಗಾಗ್ಗೆ ಭಾಷಣಕಾರರೂ ಆಗಿದ್ದಾರೆ ರೋಜರ್ಸ್‌.

ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ: ಎಸ್ & ಪಿ ವರದಿ

ಇನ್ನು, ಇದಕ್ಕೂ ಮುನ್ನ ಭಾರತದಲ್ಲಿ ಹೂಡಿಕೆ ಮಾಡಲು ಕಾರಣವನ್ನು ಬಹಿರಂಗಪಡಿಸಿದ್ದರು ಬ್ರೆಂಡನ್‌ ರೋಜರ್ಸ್‌. 2025 ರ ವೇಳೆಗೆ, ಭಾರತದಲ್ಲಿನ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು ಒಂದೂವರೆ ಲಕ್ಷಕ್ಕೂ ಹೆಚ್ಚಾಗುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಯಲ್ಲಿ 3.25+ ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅದೇ ಸಮಯದಲ್ಲಿ, ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿನ ಒಟ್ಟು ನಿಧಿಯು 150 ಬಿಲಿಯನ್‌ ಡಾಲರ್‌ಗೆ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಒಟ್ಟು ಮೌಲ್ಯ ಸೃಷ್ಟಿಯು 500 ಬಿಲಿಯನ್ ಡಾಲರ್‌ಗೂ ಮೀರಲಿದೆ ಎಂದೂ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ ಮಾಡಿದ್ದರು. 

ಅಲ್ಲದೆ, ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೋಲಿಸಿದರೆ, "2014 ರಲ್ಲಿ, 5 ಯುನಿಕಾರ್ನ್‌ಗಳು, 3 ಬಿಲಿಯನ್ ಡಾಲರ್‌ಗೂ ಹೆಚ್ಚು ವಿಸಿ ಫಂಡಿಂಗ್‌, 4,000 ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಮತ್ತು 50 ಕ್ಕೂ ಹೆಚ್ಚು ಸ್ಕೂಲ್‌ ಸಂಸ್ಥಾಪಕರಿದ್ದರು. ಅದರೆ, 2022 ರಲ್ಲಿ 102 ಯುನಿಕಾರ್ನ್‌ಗಳು, 45 ಬಿಲಿಯನ್ ಡಾಲರ್‌ಗೂ ಅಧಿಕ ವಿಸಿ ಫಂಡಿಂಗ್, 66,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು ಒಂದು ಸಾವಿರಕ್ಕೂ ಅಧಿಕ ಸ್ಕೂಲ್‌ ಸಂಸ್ಥಾಪಕರಿದ್ದಾರೆ ಎಂದೂ ವೆಂಚರ್ ಕ್ಯಾಪಿಟಲ್ ಜೀನಿಯಸ್ ಬ್ರೆಂಡನ್ ರೋಜರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: 2027ಕ್ಕೆ ಭಾರತ ವಿಶ್ವದ 3ನೇ ದೊಡ್ಡ ಆರ್ಥಿಕತೆ: ಹಣಕಾಸು ಸೇವಾ ಸಂಸ್ಥೆ ಮಾರ್ಗನ್‌ ಸ್ಟ್ಯಾನ್ಲಿ ಭವಿಷ್ಯ

Follow Us:
Download App:
  • android
  • ios