ಭಾರತಕ್ಕೆ ಗ್ಯಾಸ್ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಶಾಕ್, ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಬೆಂಗಳೂರು ಸೇರಿದಂತೆ ಎಲ್ಲೆಡೆ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. 

ಬೆಂಗಳೂರು (ಮಾ.20) ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಮಸ್ಯೆಗಳು ತೀವ್ರಗೊಳ್ಳುತ್ತಿದೆ. ಗ್ಯಾಸ್ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದ ಬೆಂಗಳೂರು ಸೇರಿದಂತೆ ಎಲ್ಲೆಡೆ ಗ್ಯಾಸ್ ಸಿಲಿಂಡರ್ ಸಮಸ್ಯೆ ತಲೆದೋರಿದೆ. ಹಲವು ಹೊಟೆಲ್‌ಗಳು ಮುಚ್ಚಿದೆ. ದೇವಸ್ಥಾನಗಳಲ್ಲಿ ಪ್ರಸಾದಗಳಿಗೂ ಸಮಸ್ಯೆಯಾಗುತ್ತಿದೆ. ಗ್ಯಾಸ್ ಆತಂಕದ ನಡುವೆ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಶಾಕ್ ಎದುರಾಗಿದೆ. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೀ ಡೀಸೆಲ್ ದರದಲ್ಲಿ ಶೆಲ್ ಪೆಟ್ರೋಲ್ 2 ರೂಪಾಯಿ ಏರಿಕೆ ಮಾಡಿದೆ.

Add Asianetnews Kannada as a Preferred SourcegooglePreferred

ಶೆಲ್ ಪೆಟ್ರೋಲ್‌ನಲ್ಲಿ ಪ್ರತಿ ಲೀಟರ್‌ಗೆ 2 ರೂ ಏರಿಕೆ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಶೆಲ್ ಪೆಟ್ರೋಲ್ ಪೂರೈಕೆದಾರರು ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳ ಮಾಡಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿಇಂಧನ ದರ ಏರಿಕೆಯಾಗಿದೆ. ಲೀಟರ್‌ಗೆ 106 ರೂಪಾಯಿ ಇದ್ದ ಪೆಟ್ರೋಲ್ ದರ 108.50 ರೂಪಾಯಿಗೆ ಏರಿಕೆಯಾಗಿದೆ. ಇನ್ನು 91 ರೂಪಾಯಿ ಇದ್ದ ಡೀಸೆಲ್ ದರ ಇದೀಗ 93.50 ರೂಪಾಯಿ ಏರಿಕೆ ಮಾಡಲಾಗಿದೆ.

ಇತರ ಇಂಧನ ಪೂರೈಕೆದಾರರಿಂದಲೂ ದರ ಏರಿಕೆ ಆತಂಕ

ಸದ್ಯ ಶೆಲ್ ಪೆಟ್ರೋಲ್ ಪೂರೈಕೆದಾರರು ಪ್ರತಿ ಲೀಟರ್ ಇಂಧನ ದರದಲ್ಲಿ 2 ರೂಪಾಯಿ ಏರಿಕೆ ಮಾಡಿದ್ದಾರೆ. ಇದೀಗ ಇತರ ಪೂರೈಕೆದಾರರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಹಾಗೂ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆಯಾಗಿದೆ.

ಸಿಲಿಂಡರ್ ಅಭಾವದಿಂದ ಹೊಟೆಲ್ ಉದ್ಯಮ ಕಂಗಾಲು

ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ಹೊರ್ಮುಜ್ ಜಲಸಂಧಿ ಮೂಲಕ ಸರಾಗವಾಗಿ ಸರಕು ಸಾಗಣೆ ಹಡಗುಗಳು ಸಾಗುತ್ತಿಲ್ಲ. ದಾಳಿ ಆತಂಕ ಕಾರಣ ಪ್ರಯಾಸದ ಕೆಲಸವಾಗಿದೆ. ಇದರಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತದ ತುರ್ತು ಅಗತ್ಯಕ್ಕಾಗಿ ಇರಾನ್ ಜೊತೆ ಮಾತುಕತೆ ನಡೆಸಿ ಗ್ಯಾಸ್ ಪೂರೈಕೆ ಹಡುಗು ಭಾರತಕ್ಕೆ ಆಗಮಿಸುವಂತೆ ಮಾಡಿದೆ. ಆದರೂ ಎಂದಿನಂತೆ ಸರಕು ಸಾಗಣೆ ಹಡಗುಗಳು ಜಲಸಂಧಿ ಮೂಲಕ ಸಾಗುತ್ತಿಲ್ಲ. ಹೀಗಾಗಿ ನಿರಂತರ ಪೂರೈಕೆಯಾಗುತ್ತಿಲ್ಲ. ಸದ್ಯ ಆಗಮಿಸಿರುವ ಗ್ಯಾಸ್ ಆಸ್ಪತ್ರೆ ಸೇರಿದಂತೆ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಇತ್ತ ಭಾರತದಲ್ಲೂ ಉತ್ಪಾದನೆ ಹೆಚ್ಚಿಸಲಾಗಿದೆ.