ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಒಡೆತನದ SpaceX IPO ಇಂದು ಷೇರು ಮಾರುಕಟ್ಟೆ ಪ್ರವೇಶ ಮಾಡಲಿದ್ದು, ಇತಿಹಾಸ ನಿರ್ಮಿಸುವ ನಿರೀಕ್ಷೆ ಇದೆ. ಒಂದ್ವೇಳೆ ನಿರೀಕ್ಷೆಯಂತೆ ಆದಲ್ಲಿ ಎಲಾನ್ ಮಸ್ಕ್ ಇತಿಹಾಸ ಸೃಷ್ಟಿಸಲಿದ್ದಾರೆ. 

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್‌ ಮಸ್ಕ್ (Elon Musk) ಶೀಘ್ರದಲ್ಲೇ ಇತಿಹಾಸ ನಿರ್ಮಿಸಿ ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಸಾಧ್ಯತೆ ದಟ್ಟವಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1.11 ಟ್ರಿಲಿಯನ್ ಡಾಲರ್ಗಳಿಗೆ ಏರಬಹುದು ಎಂದು ಅಂದಾಜಿಸಲಾದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

SpaceX IPO ಪ್ರಮುಖ ಕಾರಣ

ವರದಿಗಳ ಪ್ರಕಾರ, ಮಸ್ಕ್ ಅವರ ಬಾಹ್ಯಾಕಾಶ ಕಂಪನಿ SpaceX ಸಾರ್ವಜನಿಕ ಷೇರು ಮಾರುಕಟ್ಟೆಗೆ (IPO) ಇಂದು ಪ್ರವೇಶ ಮಾಡಲಿದೆ. ಬಹು ನಿರೀಕ್ಷಿತ SpaceX IPO ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ಲಿಸ್ಟಿಂಗ್ಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗುತ್ತಿದೆ. Elon Musk ಅವರ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯು Nasdaq ನಲ್ಲಿ SPCX ಎಂಬ ಟಿಕ್ಕರ್ ಚಿಹ್ನೆಯಡಿ ಲಿಸ್ಟ್ ಆಗಲಿದೆ. ಜೂನ್‌ 12 ರಂದು ಅಮೆರಿಕದ ಪೂರ್ವ ಸಮಯದ ಪ್ರಕಾರ ಬೆಳಿಗ್ಗೆ 9. 30 ಅಂದ್ರೆ ಭಾರತೀಯ ಸಮಯ ಸಂಜೆ 7 ಗಂಟೆಗೆ ಲೀಸ್ಟಿಂಗ್‌ ಆಗಲಿದೆ. ಕಂಪನಿಯ ಮೌಲ್ಯ ಸುಮಾರು 1.77 ಟ್ರಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ.

Currency Notes: ನಮ್ಮ ದೇಶದಲ್ಲಿ ಹತ್ತು ರೂಪಾಯಿಯಿಂದ 500 ರೂಪಾಯಿ ನೋಟು ಎಲ್ಲಿ ಮುದ್ರಿಸುತ್ತಾರೆ ಗೊತ್ತಾ?

ಮಸ್ಕ್ ಅವರ ಬಳಿ SpaceXನಲ್ಲಿ ಸುಮಾರು ಅರ್ಧದಷ್ಟು ಪಾಲುದಾರಿಕೆ ಇದೆ. ಈ ಮೌಲ್ಯಮಾಪನ ನಿಜವಾದರೆ, ಅವರ ವೈಯಕ್ತಿಕ ಆಸ್ತಿ ಮೌಲ್ಯವು 1.11 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇದೆ. 1 ಟ್ರಿಲಿಯನ್ ಡಾಲರ್ ಆಸ್ತಿ ಮೌಲ್ಯವು ತೈವಾನ್, ಐರ್ಲೆಂಡ್, ಸ್ವೀಡನ್ ಮತ್ತು ಸಿಂಗಾಪುರದಂತಹ ದೇಶಗಳ ವಾರ್ಷಿಕ GDPಗಿಂತಲೂ ಹೆಚ್ಚು.

ಸ್ಯಾಲರಿ ಚೆನ್ನಾಗಿದ್ರೂ ಸೇವಿಂಗ್ಸ್‌ ಮಾಡೋಕೆ ಆಗ್ತಿಲ್ವಾ? ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸೋ 5 ಗೋಲ್ಡನ್ ಫೈನಾನ್ಸ್ ಟಿಪ್ಸ್

ಈಗಿನ ಆಸ್ತಿ ಎಷ್ಟು?

ಇತ್ತೀಚಿನ ಅಂದಾಜಿನ ಪ್ರಕಾರ, ಎಲನ್ ಮಸ್ಕ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 707 ಬಿಲಿಯನ್ ಡಾಲರ್ ಆಗಿದೆ. 2026ರಲ್ಲಿ ಮಾತ್ರವೇ ಅವರ ಆಸ್ತಿಯಲ್ಲಿ ಸುಮಾರು 87.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.