Asianet Suvarna News Asianet Suvarna News

ಕರ್ನಾಟಕದ ನವೋದ್ಯಮ ಬೆಳೆವಣಿಗೆಗೆ ಮೆಚ್ಚುಗೆ: ಐಟಿ-ಬಿಟಿ ಸಚಿವರನ್ನು ಭೇಟಿಯಾದ ಇಸ್ರೇಲ್ ನಿಯೋಗ

*   ರಾಜ್ಯಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿದ ಇಸ್ರೇಲ್ ನಿಯೋಗ
*  ರಾಜ್ಯದಲ್ಲಿ ನವೋದ್ಯಮವು ಶಕ್ತಿಶಾಲಿಯಾಗಿ ಬೆಳೆಯುತ್ತಿದೆ
*  ಯೂನಿಕಾರ್ನ್ ಸ್ಥಾನಮಾನ ಹೊಂದಿದ ಸ್ಟಾರ್ಟಪ್ ಕಂಪನಿಗಳು 
 

Israel Delegation Met Karnataka IT BT Minister CN Ashwathnarayan in Bengaluru grg
Author
Bengaluru, First Published Apr 7, 2022, 10:17 AM IST

ಬೆಂಗಳೂರು(ಏ.07):  ಇಸ್ರೇಲ್(Israel) ದೇಶದ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಉನ್ನತ ನಿಯೋಗವು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(CN Ashwathnarayan) ಅವರನ್ನು ಬುಧವಾರ ಭೇಟಿಯಾಗಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮ ಕಾರ್ಯ ಪರಿಸರ ಕುರಿತು ವಿಚಾರ ವಿನಿಮಯ ನಡೆಸಿತು.

ವಿಕಾಸಸೌಧದಲ್ಲಿ ನಡೆದ ಭೇಟಿಯಲ್ಲಿ ಸಚಿವರು, ರಾಜ್ಯದಲ್ಲಿರುವ(Karnataka) ಐಟಿ, ಬಿಟಿ(IT BT), ಸ್ಟಾರ್ಟಪ್(Startup) ಮತ್ತು ರಕ್ಷಣಾ ಸಂಶೋಧನೆ ಹಾಗೂ ತಂತ್ರಜ್ಞಾನ(Defense Research & Technology)ಕಾರ್ಯ ಪರಿಸರವನ್ನು ಕುರಿತು ಹಲವು ವಿಚಾರಗಳನ್ನು ಆ ದೇಶದ ನಿಯೋಗದೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಸಚಿವರು, ಇತ್ತೀಚೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಇಸ್ರೇಲಿನ ಪ್ರಧಾನಿಗಳು ಮಾತನಾಡಿದ್ದನ್ನು ನೆನಪು ಮಾಡಿಕೊಂಡರು.

Israel Delegation Met Karnataka IT BT Minister CN Ashwathnarayan in Bengaluru grg

ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್‌ ಹೆಚ್ಚಳ: ರಾಜೀವ್‌ ಚಂದ್ರಶೇಖರ್‌

ಈ ಸಂದರ್ಭದಲ್ಲಿ ಇಸ್ರೇಲ್ ನಿಯೋಗದ ಸದಸ್ಯರು, ತಮ್ಮ ದೇಶದಲ್ಲಿರುವ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ(National Defence College) ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧಗಳು, ವಿಶ್ವಸಂಸ್ಥೆ(United Nations), ಯೂರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೋ ಮುಂತಾದ ವಿಷಯಗಳನ್ನು ಕುರಿತು ನಾಲ್ಕು ಹಂತಗಳಲ್ಲಿ ಹೇಗೆ ಕಲಿಸಲಾಗುತ್ತದೆ ಎನ್ನುವುದನ್ನು ವಿವರಿಸಿದರು.

ಕರ್ನಾಟಕದಲ್ಲಿ ನವೋದ್ಯಮವು ದೃಢವಾಗಿ ಬೆಳೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗವು ರಾಜ್ಯಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿತು. 

ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ ಅವರು, ರಾಜ್ಯದಲ್ಲಿ ನವೋದ್ಯಮವು ಶಕ್ತಿಶಾಲಿಯಾಗಿ ಬೆಳೆಯುತ್ತಿರುವುದನ್ನು ಮತ್ತು 34ಕ್ಕೂ ಹೆಚ್ಚಿನ ಸ್ಟಾರ್ಟಪ್ ಕಂಪನಿಗಳು ಯೂನಿಕಾರ್ನ್ ಸ್ಥಾನಮಾನ ಹೊಂದಿರುವುದನ್ನು ಇಸ್ರೇಲ್ ನಿಯೋಗದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ನಿಯೋಗದ ಪ್ರತಿನಿಧಿಗಳು ಮಾತನಾಡಿ, ಕಳೆದ 30 ವರ್ಷಗಳಿಂದ ಈಚೆಗೆ ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ರಾಜತಾಂತ್ರಿಕ ಬಾಂಧವ್ಯ ಮತ್ತು ರಕ್ಷಣಾ ಸಹಕಾರ ಹೇಗೆ ವೃದ್ಧಿಸಿಕೊಂಡು ಬಂದಿದೆ ಎನ್ನುವುದರ ಬಗ್ಗೆ ಹೇಳಿದರು. 

ಇಸ್ರೇಲ್ ನಿಯೋಗದಲ್ಲಿ ಕರ್ನಲ್ ಯೆಹೂದಾ ಯೋಹನಾನಾಫ್, ಕರ್ನಲ್ ಸ್ಯಾಮ್ಯುಯೆಲ್ ಬೌಮೆನ್ಡಿಲ್, ಅಲ್ಲಿನ ಪ್ರಧಾನಮಂತ್ರಿಗಳ ಕಚೇರಿಯ ಉನ್ನತಾಧಿಕಾರಿ ಶಾಯ್ ಜೊಂಟ್ಯಾಗ್, ಕಮಾಂಡರ್ ನಾವಾ ಬ್ಯಾರಿನಾ ಬೆನ್ ಸಹರ್, ಲೆ.ಕ. ಕೆಲ್ಲಿ ಬೊರುಕ್ ಹುವಿಚ್ ಮತ್ತು ಬಿಲ್ ವ್ಯಾಲೇಸ್, ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಶ್ರೀಮತಿ ಶರೋನ್ ರೆಜೆವ್, ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಅವಿ ಜುಬೈಯಾ ಮುಂತಾದವರಿದ್ದರು.

Tata Nano Electric ಎಲೆಕ್ಟ್ರಾ EV ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಪಡೆದ ರತನ್ ಟಾಟಾ!

ರಾಜ್ಯ ಸರಕಾರದ ಪರವಾಗಿ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಮುಂತಾದವರಿದ್ದರು.

2021ರಲ್ಲಿ ಅತ್ಯಧಿಕ ಸ್ಟಾರ್ಟ್ಅಪ್ ಗಳಿರೋ ನಗರ ಬೆಂಗಳೂರಲ್ಲ, ನವದೆಹಲಿ!

ಕಳೆದ ಕೆಲವು ವರ್ಷಗಳಲ್ಲಿ ಭಾರತವು  ಸ್ಟಾರ್ಟ್‌ಅಪ್  ( Startup) ವಲಯದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಭಾರತದಲ್ಲಿ ಸಾಕಷ್ಟು ಸ್ಟಾರ್ಟ್‌ಅಪ್ ಗಳು ತಲೆ ಎತ್ತಿವೆ.  ಅತ್ಯಧಿಕ ಸ್ಟಾರ್ಟ್‌ಅಪ್ ಗಳನ್ನು ಹೊಂದಿರೋ ಮೂಲಕ ಬೆಂಗಳೂರು ಸ್ಟಾರ್ಟ್ಅಪ್ ಸಿಟಿ ಎಂಬ ಹೆಗ್ಗಳಿಕೆ ಗಳಿಸಿತ್ತು. ಆದ್ರೆ 2021ರಲ್ಲಿ ರಾಷ್ಟ್ರ ರಾಜ್ಯಧಾನಿ ನವದೆಹಲಿ (New Delhi) ಬೆಂಗಳೂರನ್ನು ಹಿಂದಿಕ್ಕಿ ಅತ್ಯಧಿಕ ಸ್ಟಾರ್ಟ್ ಅಪ್ ಗಳನ್ನು ಹೊಂದಿರೋ ನಗರಗವಾಗಿ ಹೊರಹೊಮ್ಮಿದೆ ಎಂದು ಆರ್ಥಿಕ ಸಮೀಕ್ಷೆ(Economic Survey) ತಿಳಿಸಿದೆ.

2019ರ ಏಪ್ರಿಲ್ ಹಾಗೂ 2021ರ ಡಿಸೆಂಬರ್ ನಡುವೆ ದೆಹಲಿಯಲ್ಲಿ 5,000ಕ್ಕೂ ಅಧಿಕ ಅಂಗೀಕೃತ  ಸ್ಟಾರ್ಟ್‌ಅಪ್ ಗಳು ಸೇರ್ಪಡೆಗೊಂಡಿದ್ರೆ, ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 4,514  ಸ್ಟಾರ್ಟ್‌ಅಪ್ ಗಳು (startups) ಪ್ರಾರಂಭವಾಗಿವೆ. ಇನ್ನು ರಾಜ್ಯಗಳ ವಿಚಾರಕ್ಕೆ ಬಂದ್ರೆ ಮಹಾರಾಷ್ಟ್ರ ಅತ್ಯಧಿಕ ಸ್ಟಾರ್ಟ್‌ಅಪ್ ಗಳನ್ನು ಹೊಂದಿರೋ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 11,308 ಅಂಗೀಕೃತ  ಸ್ಟಾರ್ಟ್‌ಅಪ್ ಗಳು ಕಾರ್ಯನಿರ್ವಹಿಸುತ್ತಿವೆ. 
 

Follow Us:
Download App:
  • android
  • ios