ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್‌ ಹೆಚ್ಚಳ: ರಾಜೀವ್‌ ಚಂದ್ರಶೇಖರ್‌

*   2, 3ನೇ ಹಂತದ ನಗರಗಳಲ್ಲೂ ಸ್ಟಾರ್ಟಪ್‌ಗಳ ಸ್ಥಾಪನೆ
*   ಉದ್ಯಮಿಗಳ ಜತೆ ಸಂವಾದದಲ್ಲಿ ಕೇಂದ್ರ ಸಚಿವ ಹೇಳಿಕೆ
*   ಕೌಶಲ್ಯಯುತ ಕೆಲಸಗಳತ್ತ ಮಹಿಳೆಯರ ಹೆಚ್ಚು ಆಸಕ್ತಿ 
 

Increase Startup By the Central Government Policy Says Union Minister Rajeev Chandrasekhar grg

ಬೆಂಗಳೂರು(ಮಾ.08):  ನವೋದ್ಯಮಗಳು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗದಂತೆ ಕೇಂದ್ರ ಸರ್ಕಾರ(Central Government) ನೋಡಿಕೊಳ್ಳುತ್ತಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಸ್ಟಾರ್ಟಪ್‌ಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹೇಳಿದ್ದಾರೆ. ಸೋಮವಾರ ಇಂಡಿಯಾ ಗ್ಲೋಬಲ್‌ ಫೋರಂ (IGF) ನಿಂದ ಏರ್ಪಡಿಸಿದ್ದ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ನವೋದ್ಯಮಗಳು ಮಹಾನಗರಗಳಿಗೆ ಮಾತ್ರ ಸೀಮಿತವಾಗದೆ ರಾಜ್ಯಗಳ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಸ್ಥಾಪನೆಯಾಗುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ. ಇದರಿಂದಾಗಿ ಉದ್ಯಮಿಗಳು ಅದರಲ್ಲೂ ಯುವ ಜನರು ಸ್ಟಾರ್ಟಪ್‌ಗಳನ್ನು(Startup) ಸ್ಥಾಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದು ವಿವರಿಸಿದರು.

Defamation Case: ಕೇಂದ್ರ ಸಚಿವ ಆರ್‌ಸಿ ವಿರುದ್ಧದ ಮಾನನಷ್ಟ ಕೇಸ್‌ ವಜಾ

ಕೋವಿಡ್‌(Covid19) ಬಳಿಕ ಕಳೆದ ಎರಡು ವರ್ಷದಲ್ಲಿ ಮಹಿಳೆಯರು(Women) ಕಾರ್ಯನಿರ್ವಹಿಸುವ ಕ್ಷೇತ್ರಗಳೂ ವಿಸ್ತಾರ ಹೊಂದಿವೆ. ಕೌಶಲ್ಯಯುತ ಕೆಲಸಗಳತ್ತ ಮಹಿಳೆಯರು ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಉತ್ತಮ ಅವಕಾಶಗಳೂ ಅವರನ್ನು ಅರಸಿಕೊಂಡು ಬರುತ್ತಿವೆ. ಕಳೆದ 5 ವರ್ಷದಲ್ಲಿ ದೇಶದ ಆರ್ಥಿಕ ಸ್ಥಿತಿಯ ಚಿತ್ರಣವೇ ಬದಲಾಗಿದೆ ಎಂದು ವಿವರಿಸಿದರು.

ಭವಿಷ್ಯದ ದೃಷ್ಟಿಕೋನ: ದಶಕದ ಹಿಂದೆ ಭಾರತದಲ್ಲಿ(India) ಕಡಿಮೆ ಅವಕಾಶಗಳಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರವು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Russia-Ukraine Crisis: ಕನ್ನಡಿಗರ ರಕ್ಷಣೆಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಯತ್ನ

30ಕ್ಕೂ ಅಧಿಕ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಿರ್ದೇಶಕರು, ಮುಖ್ಯಸ್ಥರು ಸಂವಾದದಲ್ಲಿ ಹಾಜರಿದ್ದರು. ಎಲೆಕ್ಟ್ರಿಕ್‌ ವಾಹನಗಳ ಬಳಕೆ ಪ್ರೋತ್ಸಾಹಿಸಬೇಕು. ಬೆಂಗಳೂರಿನ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂಬುದು ಸೇರಿದಂತೆ ಹಲವು ಸಲಹೆ ಸಂವಾದದಲ್ಲಿ ಕೇಳಿ ಬಂದವು.

"

ವಿಶ್ವದ ಹಲವು ರಾಷ್ಟ್ರಗಳ ಉದ್ಯಮಿಗಳೊಂದಿಗೆ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ(International Trade) ಸಂಬಂಧಿಸಿದ ವೇದಿಕೆ ಒದಗಿಸುವುದು ಐಜಿಎಫ್‌ ಉದ್ದೇಶವಾಗಿದೆ. ಮುಖಾಮುಖಿ ಚರ್ಚೆ ಏರ್ಪಡಿಸುವ ಕೊತೆಗೆ ವರ್ಚುವಲ್‌ ಮೂಲಕವೂ ಸಂವಾದ ಕಾರ್ಯಕ್ರಮವನ್ನು ಇದರಡಿ ಆಯೋಜಿಸಲಾಗುತ್ತಿದೆ. ದೇಶದಲ್ಲಿರುವ ಅವಕಾಶ, ಸೌಲಭ್ಯಗಳ ಬಗ್ಗೆ ತಿಳಿಸಲು ಕೇಂದ್ರ ಸರ್ಕಾರವು ಐಜಿಎಫ್‌ ಅನ್ನು ಬಳಸಿಕೊಳ್ಳಲು ಮುಂದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭವಿಷ್ಯದಲ್ಲಿ ಬೆಂಗಳೂರಿನ(Bengaluru) ಚಿತ್ರಣ ಬದಲಿಸಲಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಇಂಡಿಯಾ ಗ್ಲೋಬಲ್‌ ಫೋರಂ(IGF) ನಿಂದ ಏರ್ಪಡಿಸಿದ್ದ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ಸಂಚಾರ ದಟ್ಟಣೆ, ಉತ್ತಮ ರಸ್ತೆ ಕೊರತೆ, ತ್ಯಾಜ್ಯ ನಿರ್ವಹಣೆ ಮತ್ತಿತರ ಸಮಸ್ಯೆಗಳನ್ನು ಮೊದಲಿನಿಂದಲೂ ಬೆಂಗಳೂರಿಗರು ಎದುರಿಸುತ್ತಾ ಬಂದಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಹೊಸ ದೃಷ್ಟಿಕೋನ ಹೊಂದಿದ್ದು, ನಗರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲಿದ್ದಾರೆ. ಕೆಲ ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ ಎಂದು ಅಭಿಪ್ರಾಯಪಟ್ಟರು.
 

Latest Videos
Follow Us:
Download App:
  • android
  • ios