Tata Nano Electric ಎಲೆಕ್ಟ್ರಾ EV ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಪಡೆದ ರತನ್ ಟಾಟಾ!

  • ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾಗೆ ನ್ಯಾನೋ ಇವಿ ಡೆಲವರಿ
  • ರತನ್ ಟಾಟಾ ಸ್ಥಾಪಿಸಿದ ಎಲೆಕ್ಟ್ರಾ ಇವಿ ಪುಣೆ ಕಂಪನಿಯಿಂದ ಕಾರು ಅಭಿವೃದ್ಧಿ
  • ಮಾಡಿಫಿಕೇಶನ್ ಮಾಡಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಹೇಗಿದೆ?
Ratan tata takes Delivery of Electra EV startup built Tata Nano Electric car ckm

ಮುಂಬೈ(ಫೆ.11):  ಭಾರತದ ಉದ್ಯಮಿ, ಅಪ್ರತಮಿ ದೇಶಭಕ್ತ ರತನ್ ಟಾಟಾ(Ratan Tata) ಈಗಾಗಲೇ ಹಲವು ಸ್ಟಾರ್ಟ್ಅಪ್‌ಗಳಲ್ಲಿ(Startup) ಹಣ ಹೂಡಿಕೆ ಮಾಡಿದ್ದಾರೆ. ಯುವಕರ ಸ್ಟಾರ್ಟ್‌ಅಪ್‌ಗೆ ಬೆಂಬಲವಾಗಿ ನಿಂತು ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನೆರವಾಗಿದ್ದಾರೆ. ಇದೀಗ ರತನ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ(Electra EV) ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಪಡೆದುಕೊಂಡಿದ್ದಾರೆ. 

ರತನ್ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ದೇಶದಲ್ಲಿ ಎಲಕ್ಟ್ರಿಕ್ ವಾಹನ ಟೆಕ್ನಾಲಜಿ, ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್, ಪವರ್‌ಟ್ರೈನ್ ಅಭಿವೃದ್ಧಿ ಸೇರಿದಂತೆ ಇವಿ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ನ್ಯಾನೋ(Tata Nano EV) ಕಾರನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿದೆ. ರತನ್ ಟಾಟಾಗಾಗಿ ವಿನ್ಯಾಸ, ಇಂಟಿರಿಯರ್ ಸೇರಿದಂತೆ ಹಲವು ಮಾಡಿಫಿಕೇಶನ್ ಮಾಡಲಾಗಿದೆ. 

Air India ಪ್ರಯಾಣಿಕರೊಂದಿಗೆ ರತನ್ ಟಾಟಾ ಮಾತು, 18 ಸೆಕೆಂಡ್ ಆಡಿಯೋದಲ್ಲಿ ಹೇಳಿದ್ದಿಷ್ಟು

ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದಿ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾಗೆ ನೀಡಲಾಗಿದೆ. ಈ ಕುರಿತು ಎಲೆಕ್ಟ್ರಾ ಇವಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ(Electric Car) ಸಂಸ್ಥಾಪಕರು ಪ್ರಯಾಣಿಸಿದ್ದಾರೆ. ಇದೀಗ ಈ ನೂತನವಾಗಿ ಅಭಿವೃದ್ಧಿಪಡಿಸಿರುವ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾಗೆ ನೀಡಲಾಗುತ್ತಿದೆ. ಅವರಿಂದ ಅತ್ಯಮ್ಯೂಲ್ಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಎಲಕ್ಟ್ರಾ ಇವಿ ಸ್ಟಾರ್ಟ್ಅಪ್ ಹೇಳಿದೆ.

ಎಲೆಕ್ಟ್ರಾ ಇವಿ ಹಳೆ ಇಂಧನ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾಗ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ. ರತನ್ ಟಾಟಾಗೆ ನೀಡಲಾಗಿರುವ ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂಂದು ಬಾರಿ ಚಾರ್ಜ್ ಮಾಡಿದರ 160 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ. 

ಮಳೆಗೆ ಆಸರೆ ಹುಡುಕುತ್ತಿದ್ದ ನಾಯಿಗೆ ಕೊಡೆ ಹಿಡಿದ ಉದ್ಯೋಗಿ; ಹೃದಯಸ್ಪರ್ಶಿ ಘಟನೆ ಕೊಂಡಾಡಿದ ಟಾಟಾ!

ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ 72V ಮೋಟಾರ್ ಪ್ಯಾಕ್ ಬಳಸಲಾಗಿದೆ. ಶಕ್ತಿಶಾಲಿ ಎಂಜಿನ್ ಬಳಸಿರುವ ಕಾರಣ 0-100 ಕಿಮೀ ವೇಗವನ್ನು 10 ಸೆಕೆಂಡ್‌ನಲ್ಲಿ ತೆಗೆದುಕೊಳ್ಳಲಿದೆ. ಪೆಟ್ರೋಲ್ ನ್ಯಾನೋ ಕಾರು ಇದೀಗ ಎಲೆಕ್ಟ್ರಿಕ್ ಕಾರಾಗಿ ಬದಲಾಗಿದೆ.  ಇದೀಗ ಎಲೆಕ್ಟ್ರಾ ಇವಿ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ನಗರದಲ್ಲಿ ಅತ್ಯಂತ ಯಶಸ್ವಿ ಇವಿಯಾಗಿ ಮಾರ್ಪಡಲಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಟಾಟಾ ನ್ಯಾನೋ ಕಾರು ರತನ್ ಟಾಟಾ ಅವರ ಕನಸಿನ ಕಾರಾಗಿದೆ. ದೇಶದ ಪ್ರತಿಯೊಬ್ಬರಿಗೆ ಕೈಗೆಟುಕುವ ದರಲ್ಲಿ ಕಾರು ಲಭ್ಯವಾಗಬೇಕು ಎಂದು ನಾನ್ಯೋ ಕಾರನ್ನು ಬಿಡುಗಡೆ ಮಾಡಲಾಯಿತು. ಇದು ವಿಶ್ವದ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ನ್ಯಾನೋ ಕಾರು ಭಾರತದಲ್ಲಿ ನಿರೀಕ್ಷಿಯ ಯಶಸ್ಸು ಕಂಡಿಲ್ಲ. ಸಣ್ಣ ಕಾರನ್ನು ಖರೀದಿಸಲು ಭಾರತೀಯರು ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೆ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ನ್ಯಾನೋ ಕಾರು ಮಾರುಕಟ್ಟೆ ಪ್ರವೇಶಿಸಿದರೆ ಹೊಸ ಸಂಚಲನ ಸೃಷ್ಟಿಸುವುದರಲ್ಲಿ ಅನುಾನವಿಲ್ಲ.

ಮಾಜಿ ಉದ್ಯೋಗಿ ಆರೋಗ್ಯ ವಿಚಾರಿಸಲು 150 ಕಿ.ಮೀ ಪ್ರಯಾಣ, ಟಾಟಾ ಕಾಳಜಿಗೆ ನೆಟ್ಟಿಗರು ಫಿದಾ!

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್  ಎರಡು ಅತ್ಯುತ್ತಮ ಕಾರುಗಳನ್ನು ಬಿಡುಗಡೆ ಮಾಡಿದೆ.  ಟಾಟಾ ನೆಕ್ಸಾನ್ ಇವಿ ಹಾಗೂ ಟಾಟಾ ಟಿಗೋರ್ ಇವಿ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿ ಭಾರಿ ಯಶಸ್ಸು ಸಾಧಿಸಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಮೂಲಕ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.

Latest Videos
Follow Us:
Download App:
  • android
  • ios