ಜಗತ್ತಿನ ಬಲಿಷ್ಠ ಆರ್ಥಿಕತೆಗಳಿಗಿಂತ ಭಾರತದಲ್ಲಿ ಹಣದುಬ್ಬರ ಕಡಿಮೆ; ಹಾಗಾದ್ರೆ ಯಾವ ರಾಷ್ಟ್ರಗಳಲ್ಲಿ ಹೆಚ್ಚಿದೆ?

*ಶೇ.85.51 ಹಣದುಬ್ಬರ ಹೊಂದಿರುವ ಮೂಲಕ ಮೊದಲ ಸ್ಥಾನದಲ್ಲಿದೆ ಟರ್ಕಿ
*ದ್ವಿತೀಯ ಸ್ಥಾನದಲ್ಲಿ ಅರ್ಜೆಂಟೈನಾ
*ಚೀನಾದಲ್ಲಿ ಅತೀಕಡಿಮೆ ಹಣದುಬ್ಬರ

Inflation Rates Across The World Know Where India Stands

ನವದೆಹಲಿ (ನ.4): ಹಣದುಬ್ಬರ ಏರಿಕೆ ಇಡೀ ಜಗತ್ತನ್ನೇ ಸುಡುತ್ತಿದೆ. ಇಡೀ ಜಗತ್ತಿನಾದ್ಯಂತ ವಾರ್ಷಿಕ ಹಣದುಬ್ಬರ ದರ ಅಧಿಕ ಮಟ್ಟದಲ್ಲಿದ್ದು, ಆರ್ ಬಿಐ ಸೇರಿದಂತೆ ಆಯಾ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಬಡ್ಡಿದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿವೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬುಧವಾರ ಬಡ್ಡಿದರವನ್ನು ಶೇ.0.75 ಪಾಯಿಂಟ್ಸ್ ಹೆಚ್ಚಳ ಮಾಡಿದ್ದು, ಇದು ಈ ವರ್ಷದ ಆರನೇ ಏರಿಕೆಯಾಗಿದೆ. ಇನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಬಡ್ಡಿ ದರವನ್ನು ಶೇ.2.25ರಿಂದ ಶೇ.3ಗೆ ಹೆಚ್ಚಳ ಮಾಡಿದೆ. ಇದು ಕಳೆದ 33 ವರ್ಷಗಳಲ್ಲೇ ಅತ್ಯಧಿಕ ಮಟ್ಟದ ಬಡ್ಡಿದರ ಏರಿಕೆಯಾಗಿದೆ. ಈ ನಡುವೆ ವಿಶ್ವದಲ್ಲೇ ಅತ್ಯಧಿಕ ಹಣದುಬ್ಬರ ಹೊಂದಿರುವ ರಾಷ್ಟ್ರಗಳನ್ನು ಪಟ್ಟಿ ಮಾಡಲಾಗಿದ್ದು, ಶೇ.85.51 ಹಣದುಬ್ಬರ ಹೊಂದಿರುವ ಟರ್ಕಿ ಮೊದಲ ಸ್ಥಾನದಲ್ಲಿದೆ. ಇದು ಟರ್ಕಿಯಲ್ಲಿ ಕಳೆದ 24 ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಮಟ್ಟದ ಹಣದುಬ್ಬರ. ಟರ್ಕಿ ನಂತರದ ಅಂದರೆ ಎರಡನೇ ಸ್ಥಾನದಲ್ಲಿ ಅರ್ಜೆಂಟೈನಾ ಇದ್ದು, ಅಲ್ಲಿ ಶೇ.83ರಷ್ಟು ಹಣದುಬ್ಬರವಿದೆ. ಇನ್ನು ನೆದರ್ಲೆಂಡ್ ನಲ್ಲಿ ಹಣದುಬ್ಬರ ಶೇ.14.5, ರಷ್ಯಾದಲ್ಲಿ ಶೇ.13.7, ಇಟಲಿಯಲ್ಲಿ ಶೇ.11.9, ಜರ್ಮನಿಯಲ್ಲಿ ಶೇ.10.4, ಇಂಗ್ಲೆಂಡ್ ನಲ್ಲಿ ಶೇ.10.1, ಅಮೆರಿಕದಲ್ಲಿ ಶೇ.8.2 ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶೇ.7.5ರಷ್ಟಿದೆ. ಈ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಹಣದುಬ್ಬರ ಕಡಿಮೆ ಇದೆ. ಪ್ರಸ್ತುತ ಭಾರತದಲ್ಲಿ ಶೇ. 7.4 ಹಣದುಬ್ಬರವಿದೆ. 

ಭಾರತದ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದ್ದು, ಅಲ್ಲಿ ಶೇ.7.3 ಹಣದುಬ್ಬರವಿದೆ. ಬ್ರೆಜಿಲ್ ನಲ್ಲಿ ಶೇ.7.1, ಕೆನಡಾದಲ್ಲಿ ಶೇ.6.9, ಫ್ರಾನ್ಸ್ ನಲ್ಲಿ ಶೇ.6.2, ಇಂಡೋನೇಷ್ಯಾದಲ್ಲಿ ಶೇ.5.9, ದಕ್ಷಿಣ ಕೊರಿಯಾದಲ್ಲಿ ಶೇ.5.6, ಸೌದಿ ಅರೇಬಿಯಾದಲ್ಲಿ ಶೇ.3.1, ಜಪಾನ್ ನಲ್ಲಿ ಶೇ.3 ಹಾಗೂ ಚೀನಾದಲ್ಲಿ ಶೇ.2.8ರಷ್ಟಿದೆ. ಭಾರತದಲ್ಲಿ ಕಳೆದ 9 ತಿಂಗಳಿಂದ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಸಹನ ಮಟ್ಟ ಶೇ.4ಕ್ಕಿಂತ ಹೆಚ್ಚಿದ್ದರು ಕೂಡ ಅಮೆರಿಕ, ಇಂಗ್ಲೆಂಡ್‌ , ರಷ್ಯಾ, ಜರ್ಮನಿ, ಟರ್ಕಿ, ದಕ್ಷಿಣ ಆಫ್ರಿಕಾ ಹಾಗೂ ಇಟಲಿಯಂತಹ ಜಗತ್ತಿನ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಕಡಿಮೆಯಿದೆ. 

ಹಣದುಬ್ಬರ ನಿಯಂತ್ರಿಸಲು ಅಮೆರಿಕದಲ್ಲಿ ದರ ಏರಿಕೆ, ಭಾರತಕ್ಕೆ ಎಚ್ಚರಿಕೆ ಗಂಟೆ!

ಭಾರತದ ಮೇಲೆ ಹೇಗೆ ಪ್ರಭಾವ ಬೀರಲಿದೆ?
ಜಗತ್ತಿನಾದ್ಯಂತ ಹೆಚ್ಚುತ್ತಿರುವ ಹಣದುಬ್ಬರ ಬಿಗಿಯಾದ ಹಣಕಾಸು ನೀತಿಗಳನ್ನು ಕೈಗೊಳ್ಳಲು ಕೇಂದ್ರ ಬ್ಯಾಂಕ್ ಗಳ ಮೇಲೆ ಒತ್ತಡ ಹೇರುತ್ತಿದೆ. ರೇಟಿಂಗ್ ಏಜೆನ್ಸಿ ಕ್ರಿಸಿಲ್ (Crisil) ಇತ್ತೀಚಿನ ವರದಿ ಪ್ರಕಾರ ಕೇಂದ್ರ ಬ್ಯಾಂಕ್ ಗಳು ಹಣದುಬ್ಬರ ಹತ್ತಿಕ್ಕಲು ಬಡ್ಡಿದರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿದ್ದು, ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳುತ್ತಿವೆ ಎಂದು ತಿಳಿಸಿದೆ. 'ಬಿಗಿಯಾದ ನೀತಿಗಳಿಂದ ಮುಂದುವರಿದ ಆರ್ಥಿಕತೆಗಳಲ್ಲಿ ಬೆಳವಣಿಗೆ ದರ ಕುಂಠಿತಗೊಳ್ಳುತ್ತಿದ್ದು, ಇದು ರಫ್ತಿನಲ್ಲಿ ಕುಸಿತ ಹಾಗೂ ಎಫ್ ಪಿಐ ಹೊರಹರಿವಿನ ಮೂಲಕ ಭಾರತದ ಮೇಲೆ ಈಗಾಗಲೇ ಪರಿಣಾಮ ಬೀರಲು ಪ್ರಾರಂಭಿಸಿದೆ. ಮುಂದುವರಿದ ಆರ್ಥಿಕತೆಗಳಲ್ಲಿನ ಬಡ್ಡಿದರ ಹೆಚ್ಚಳ ಮುಂದಿನ ವರ್ಷ ಇನ್ನಷ್ಟು ಗಂಭೀರ ಪರಿಣಾಮ ಬೀರಲಿದೆ' ಎಂದು ಕ್ರಿಸಿಲ್ ತಿಳಿಸಿದೆ. 

ಗುರುವಾರ (ನ.4) ಆರ್ ಬಿಐ ಹಣಕಾಸು ಸಮಿತಿ ಸಭೆ ನಡೆಸಿದೆ. ಈ ಸಭೆಯಲ್ಲಿ ಕೇಂದ್ರ ಬ್ಯಾಂಕ್ ಚಿಲ್ಲರೆ ಹಣದುಬ್ಬರ ದರವನ್ನು ಈ ವರ್ಷದ ಜನವರಿಯಿಂದ ಈ ತನಕ ಸತತ ಮೂರು ತ್ರೈಮಾಸಿಕದಲ್ಲಿ ಶೇ.6ಕ್ಕಿಂತ ಕೆಳಗಿಡುವಲ್ಲಿ ಏಕೆ ವಿಫಲವಾಗಿದೆ ಎಂಬ ಬಗ್ಗೆ ಚರ್ಚಿಸಲಾಯಿತು. ಹಾಗೆಯೇ ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲು ವರದಿ ಸಿದ್ಧಪಡಿಸಲಾಯಿತು. 

ಬೆಂಗಳೂರು: ಜಿಮ್‌ಗೆ ಫೇಸ್‌ಬುಕ್‌ ಒಡೆಯನ ಸೋದರಿ..!

ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟವಾದ ಶೇ.7.41ಕ್ಕೆ ಏರಿಕೆಯಾಗಿದೆ. ಈ ಮೂಲಕ ಸತತ 9 ತಿಂಗಳಿಂದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರ ಆರ್ ಬಿಐ ಗರಿಷ್ಠ ಸಹನ ಮಟ್ಟ ಶೇ.6ಕ್ಕಿಂತ ಹೆಚ್ಚಿದೆ. 

Latest Videos
Follow Us:
Download App:
  • android
  • ios