ಹಣದುಬ್ಬರ ನಿಯಂತ್ರಿಸಲು ಅಮೆರಿಕದಲ್ಲಿ ದರ ಏರಿಕೆ, ಭಾರತಕ್ಕೆ ಎಚ್ಚರಿಕೆ ಗಂಟೆ!

ಜಾಗತೀಯ ಆರ್ಥಿಕತೆ ಮೇಲಿನ ಹೊಡೆತದಿಂದ ಅಮೆರಿಕ ತನ್ನ ವಿತ್ತೀಯ ನೀತಿ ಬಿಗಿಗೊಳಿಸುವ ಅನಿವಾರ್ಯತೆಗೆ ಇಳಿದಿದೆ. ಅಮೆರಿಕದಲ್ಲಿನ ಹಣದುಬ್ಬರ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

RBI needs to open a two-front war to mitigate the fallout of US rate hikes says Barclays Vice President Shishu Ranjan ckm

ನವದೆಹಲಿ(ನ.03) ಕೊರೋನಾ ಹೊಡೆದಿಂದ ನಿಧಾನವಾಗಿ ಚೇತರಿಸಿಕೊಳ್ಳುವ ಹೊತ್ತಲ್ಲೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಅಮೆರಿಕ, ಭಾರತ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳ ಆರ್ಥಿಕತೆ ಮೇಲೆ ತೀವ್ರ  ಹೊಡೆತ ನೀಡಿದೆ. ಇದೀಗ ಅಮೆರಿಕದ ಫೆಡರಲ್ ರಿಸರ್ವ್ ಇದೀಗ ಒಂದೇ ವರ್ಷದಲ್ಲಿ 6ನೇ ಬಾರಿಗೆ ಹಣದುಬ್ಬರ ಒತ್ತಡ ಕಡಿಮೆ ಮಾಡುವ ಯತ್ನ ಮಾಡಿದೆ.  ಆರ್ಥಿಕತೆಯ ಮೇಲಿನ ಹಣದುಬ್ಬರದ ಒತ್ತಡ ಇಳಿಸಲು ದರಗಳನ್ನು 3 ಕ್ವಾರ್ಟರ್‌ ಪಾಯಿಂಟ್‌ನಷ್ಟು ಹೆಚ್ಚಿಸಿದೆ. ಯುಎಸ್ ಫೆಡರಲ್ ರಿಸರ್ವ್ ಇದಕ್ಕೆ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಿಂದ ಪೂರೈಕೆ ಸರಪಳಿಯಲ್ಲಾಗಿರುವ ಅಡಚಣೆ ಕಾರಣ ಎಂದಿದೆ. ಜಾಗತೀಯ ಆರ್ಥಿಕತೆ ಮೇಲಿನ ಹೊಡೆತದಿಂದ ಅಮೆರಿಕ ತನ್ನ ವಿತ್ತೀಯ ನೀತಿ ಬಿಗಿಗೊಳಿಸುವ ಅನಿವಾರ್ಯತೆಗೆ ಇಳಿದಿದೆ ಎಂದಿದೆ. ಆದರೆ ಬರೋಬ್ಬರಿ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಹಣದುಬ್ಬರ ಈ ಮಟ್ಟದ ಹೊಡೆತ ನೀಡಿದೆ. ಅಮೆರಿಕದ ಈ ನಿರ್ಧಾರ ಭಾರತಕ್ಕೂ ಎಚ್ಚರಿಕೆ ಗಂಟೆಯಾಗಿದೆ. ಕಾರಣ ಭಾರತ ಹಣದುಬ್ಬರ ನಿಯಂತ್ರಿಸಲು ಈಗಾಗಲೇ 3 ಬಾರಿ ರೆಪೋ ದರ ಹೆಚ್ಚಿಸಿದೆ. ಇದೀಗ ಬೆಲೆ ಏರಿಕೆ ನಿಯಂತ್ರಿಸಲು ಸೆಂಟ್ರಲ್ ಬ್ಯಾಂಕ್ ತನ್ನ ದರಗಳನ್ನು ಮತ್ತೆ ಹೆಚ್ಚಿಸುವ ಸಾಧ್ಯತೆಗಳು ದಟ್ಟವಾಗಿದೆ. 

ಅಮೆರಿಕದಲ್ಲಿನ ಹಣದುಬ್ಬರ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ. ಭಾರತದಲ್ಲಿ ರೆಪೋ ದರ ಹೆಚ್ಚಳ, ಬೆಲೆ ಏರಿಕೆ ನಿಯಂತ್ರಣದ ಮುಂದಿರುವ ಸಾವಲುಗಳ ಕುರಿತು ಬಾರ್ಕ್ಲೇಸ್ ಉಪಾಧ್ಯಶ್ರ ಶಿಶು ರಂಜನ್ ಏಷ್ಯಾನೆಟ್ ನ್ಯೂಸ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.  ಅಮೆರಿಕದಲ್ಲಿನ ಆರ್ಥಿಕತೆ ವಿಶ್ವದ ಇತರ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ. ಕಾರಣ ಫೆಡರಲ್ ರಿಸರ್ವ್ 75 ಪಾಯಿಂಟ್ಸ್ ದರ ಹೆಚ್ಚಳ ಸಾಮಾನ್ಯ ನಿರೀಕ್ಷೆಗೆ ಅನುಗುಣವಾಗಿದೆ. ಅಮೆರಿಕ ಆರ್ಥಿಕತೆ ಶೇಕಡಾ 8ಕ್ಕಿಂತ ಹೆಚ್ಚಿನ ಹಣದುಬ್ಬರ ಕಂಡಿದೆ. ಕಳೆದ 40 ವರ್ಷಗಳಲ್ಲೇ ಅತ್ಯಧಿಕವಾಗಿದೆ. ದರ ಏರಿಕೆಯು ಮೂಲ ದರವನ್ನು ಸೊನ್ನೆಯಿಂದ ನಾಲ್ಕು ಶೇಕಡಾ ಹೆಚ್ಚಿಸಿದೆ ಎಂದು ರಂಜನ್ ಹೇಳಿದ್ದಾರೆ.

ಹಜಿರಾ ಪ್ಲಾಂಟ್ ಸ್ಟೀಲ್ ಕೇಂದ್ರದ ವಿಸ್ತರಣೆಯಿಂದ ಆರ್ಥಿಕತೆ ಸದೃಢ, ಪ್ರಧಾನಿ ಮೋದಿ ಭಾಷಣ!

ಭಾರತದ ಆರ್ಥಿಕತೆಯಲ್ಲಿ ಯುಎಸ್ ಎರಡನೇ ಅತಿದೊಡ್ಡ ಹೂಡಿಕೆದಾರ ಮತ್ತು ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿರುವುದರಿಂದ, ಭಾರತೀಯ ಆರ್ಥಿಕತೆಯು ಎರಡು ರಂಗಗಳಲ್ಲಿ ಬಿಸಿಯನ್ನು ಎದುರಿಸುತ್ತಿದೆ. ಮೊದಲನೆಯದಾಗಿ, US ಹೂಡಿಕೆದಾರರಿಗೆ ನಿಧಿಗಳ ವೆಚ್ಚವು ಹೆಚ್ಚಾಗುತ್ತದೆ, ಇದು ಭಾರತದಿಂದ ಬಂಡವಾಳದ ಹಾರಾಟವನ್ನು ಪ್ರಚೋದಿಸುತ್ತದೆ, FDIಗಳು ಮತ್ತು FII ಗಳನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಎರಡನೆಯದಾಗಿ, ಯುಎಸ್ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆದುಕೊಳ್ಳುವಿಕೆಯು ಡಾಲರ್-ರೂಪಾಯಿ ವಿನಿಮಯ ದರದ ಮೇಲೆ ಕೆಳಮುಖ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗಳ ಹೆಚ್ಚಿನ ಬೇಡಿಕೆಯಿಂದಾಗಿ ರೂಪಾಯಿ ಮೌಲ್ಯವನ್ನು ಕುಸಿಯುತ್ತದೆ, ”ಎಂದು ರಂಜನ್ ಸೇರಿಸಲಾಗಿದೆ.

ರೂಪಾಯಿ ಮೌಲ್ಯ ಕುಸಿತವಾಗುತ್ತಿದ್ದಂತೆ ಆಮದು ದುಬಾರಿಯಾಗುತ್ತದೆ. ಭಾರತ ರಫ್ತುಗಿಂತ ಹೆಚ್ಚಾಗಿ ಆಮದು ಅವಲಂಬಿಸಿದೆ. ಇದು ಆರ್ಥಿಕತೆ ಮೇಲೆ ತೀವ್ರ ಹೊಡೆತ ನೀಡಲಿದೆ. ವ್ಯಾಪಾರದ ಸಮತೋಲನದ ಮೇಲೆ ನಿವ್ವಳ ಪರಿಣಾಮ ಪ್ರತಿಕೂಲವಾಗುತ್ತದೆ. ಇರುವ ರಫ್ತು ಕೂಡ ಸ್ಪರ್ಧಾತ್ಮಕವಾಗಲಿದೆ ಎಂದು ರಂಜನ್ ಹೇಳಿದ್ದಾರೆ. 

2047ರ ವೇಳೆಗೆ Indian Economy 30 ಟ್ರಿಲಿಯನ್ ಡಾಲರ್‌ ಮೌಲ್ಯ ಆಗಲಿದೆ: Piyush Goyal ವಿಶ್ವಾಸ

ಭಾರತದ ವಿದೇಶಿ ವಿನಿಮಯ ಮೀಸಲು 100 ಬಿಲಿಯನ್ ಅಮೆರಿಕನ್ ಡಾಲರ್ ಕಡಿಮೆಯಾಗಿದೆ. ನಿಧಿಗಳ ವೆಚ್ಚ ಹಾಗೂ ಇತರ ವೆಚ್ಚಗಳಿಂದ ಭಾರತದ ಆರ್ಥಿಕತೆಯಲ್ಲಿ ಸಾಮಾನ್ಯ ಹಣದುಬ್ಬರ ಹೆಚ್ಚಾಗುತ್ತದೆ. ಅಮೆರಿಕದಲ್ಲಿನ ಹಣದುಬ್ಬರ ಪರಿಣಾಮ ಭಾರತದ ಮೇಲೂ ಪರಿಣಾಮ ಬೀರಲಿದೆ. ಇದರಿಂದ ಮುನ್ನಚ್ಚೆರಿಕೆ ವಹಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಎರಡು ದಾರಿಗಳಿವೆ. ಹಣದುಬ್ಬರ ನಿಯಂತ್ರಿಸಲು ಭಾರದಲ್ಲೂ ದರ ಹೆಚ್ಚಳ ಅನಿವಾರ್ಯವಾಗಲಿದೆ. ರೂಪಾಯಿ ಮೌಲ್ಯ ಕುಸಿತದಿಂದ ಹಣದುಬ್ಬದರ ಆಮದು ನಿಯಂತ್ರಿಸಲು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್‌ಬಿಐ ಮಧ್ಯಪ್ರವೇಶಿಸಬೇಕು ಎಂದು ರಂಜನ್ ಹೇಳಿದ್ದಾರೆ.   
 

Latest Videos
Follow Us:
Download App:
  • android
  • ios