Asianet Suvarna News Asianet Suvarna News

ಹೊಲಗಳಲ್ಲಿ ಉಳಿದ ಒಣಹುಲ್ಲಿನಲ್ಲಿ ಅಣಬೆ ಬೆಳೆದು ತಿಂಗಳಿಗೆ 20 ಲಕ್ಷ ಗಳಿಸುತ್ತಿದ್ದಾರೆ ಇಂದೋರಿನ ಈ ಮಹಿಳೆ

ವಿನೂತನ ಯೋಚನೆಯೊಂದಿಗೆ ಉದ್ಯಮ ಪ್ರಾರಂಭಿಸಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಇಂದೋರಿನ ಪೂಜಾ ದುಬೆ ಪಾಂಡೆ ಅತ್ಯುತ್ತಮ ನಿದರ್ಶನ. ಕಸದಿಂದ ರಸ ಎಂಬಂತೆ ಕೃಷಿ ತ್ಯಾಜ್ಯದಿಂದಲೇ ಅಣಬೆ ಬೆಳೆದು ಈಕೆ ತಿಂಗಳಿಗೆ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. 
 

Indore Woman Cultivates Mushroom From Stubble Generates Monthly Sales Of Nearly Rs 20 Lakh anu
Author
First Published Dec 29, 2023, 4:05 PM IST

Business Desk: ದೆಹಲಿ ಎಂದ ತಕ್ಷಣ ಮನಸ್ಸಿನಲ್ಲಿ ಮೂಡೋದು ಅಲ್ಲಿನ ಹೊಗೆ ಮುಸುಕಿದ ವಾತಾವರಣ. ದೆಹಲಿಯ ವಾಯು ಮಾಲಿನ್ಯಕ್ಕೆ ಮುಖ್ಯಕಾರಣ ಸಮೀಪದ ರಾಜ್ಯಗಳಲ್ಲಿ ಬೇಳೆ ಕಟಾವಿನ ಬಳಿಕ ಉಳಿದ ಹುಲ್ಲು ಮುಂತಾದ ಕೃಷಿ ತ್ಯಾಜ್ಯಗಳನ್ನು ಸುಡುವುದು. ಇದರಿಂದ ಉತ್ಪತ್ತಿಯಾದ ಹೊಗೆ ದೆಹಲಿಯ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಮೇಲೆ ಪರಿಣಾಮ ಬೀರುತ್ತಿದೆ. ಕೃಷಿ ತ್ಯಾಜ್ಯಗಳನ್ನು ಸುಡೋದು ಇಲ್ಲಿನ ದೀರ್ಘಾವಧಿ ಸಮಸ್ಯೆಯಾಗಿದೆ. ಹೀಗಿರುವಾಗ ಇಂದೋರ್ ಮೂಲದ ಮಹಿಳೆಯೊಬ್ಬರು ಈ ಕೃಷಿ ತ್ಯಾಜ್ಯಗಳನ್ನೇ ಆಧಾರವಾಗಿಸಿಕೊಂಡು ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ. ಈ  ಉಳಿದ ಹುಲ್ಲನ್ನು ಅಣಬೆ ಬೆಳೆಯಲು ಬಳಸುವ ಮೂಲಕ ಈಕೆ ಜನರಿಗೆ ರಾಸಾಯನಿಕಮುಕ್ತ ಸಾವಯವ ಅಣಬೆಗಳನ್ನು ಒದಗಿಸುತ್ತಿರುವ ಜೊತೆಗೆ ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ.

ಈ ರೀತಿ ಅಣಬೆ ಕೃಷಿ ಮೂಲಕ ಪರಿಸರ ಮಾಲಿನ್ಯ ತಡೆಯುತ್ತಿರುವ ಈಕೆ ಹೆಸರು ಪೂಜಾ ದುಬೆ ಪಾಂಡೆ. ಇಂದೋರ್ ನಲ್ಲಿ ವೈದ್ಯರಾಗಿರುವ ಈಕೆ ಅಣಬೆ ಕೃಷಿ ಕೈಗೊಳ್ಳಲು ಪ್ರೇರಣೆಯಾಗಿದ್ದು ಆಕೆಯ ದೆಹಲಿ ಭೇಟಿ. ಅಲ್ಲಿನ ಮಾಲಿನ್ಯವನ್ನು ಗಮನಿಸಿದ ಆಕೆಗೆ  ಆ ಸಮಯದಲ್ಲಿ ಇಂಥದೊಂದು ವಿನೂತನ ಯೋಚನೆ ಹೊಳೆಯಿತು. ಈ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕೃಷಿ ತ್ಯಾಜ್ಯವನ್ನೇ ಬಳಸಿಕೊಂಡು ಉದ್ಯಮ ಏಕೆ ಪ್ರಾರಂಭಿಸಬಾರದು ಎಂಬ ಯೋಚನೆಯಿಂದ ಅಣಬೆ ಕೃಷಿ ಪ್ರಾರಂಭಿಸಿದರು. ಸಾಮಾನ್ಯವಾಗಿ ಯಾವುದೇ ಬೆಳೆಯ ಕಟಾವಿನ ಬಳಿಕ ಉಳಿಯುವ ಹುಲ್ಲು ಅಥವಾ ಇನ್ನಿತರ ಕಳೆಗಳನ್ನು ಬಳಸಿಕೊಂಡು ಅಣಬೆ ಬೆಳೆಯಬಹುದು. ಇದನ್ನೇ ಪೂಜಾ ಕೂಡ ಮಾಡಿದರು. 

ವಿದೇಶದಲ್ಲಿನ ಉನ್ನತ ಹುದ್ದೆ ತೊರೆದ ಐಐಟಿ ಪದವೀಧರ ಈಗ 3000 ಕೋಟಿ ಮೌಲ್ಯದ ಕಂಪನಿ ಒಡೆಯ

2017ರಲ್ಲಿ ಇಂದೋರ್ ನಲ್ಲಿ ಅಣಬೆ ಕೃಷಿ ತರಬೇತಿ ಹಾಗೂ ಸಂಶೋಧನಾ ಕೇಂದ್ರವನ್ನು ಡಾ.ಪೂಜಾ ದುಬೆ ಪಾಂಡೆ ಪ್ರಾರಂಭಿಸಿದರು. ಈ ಕೇಂದ್ರಕ್ಕೆ ಅವರು ಬೇಟಿ (BETi) ಎಂಬ ಹೆಸರಿಟ್ಟರು. BETi ಅಂದ್ರೆ ಬಯೋಟೆಕ್ ಎರಾ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ. ಇದನ್ನು ಸಂಶೋಧನೆ ಹಾಗೂ ತರಬೇತಿಯ ಉದ್ದೇಶಕ್ಕಾಗಿಯೇ ಅವರು ಪ್ರಾರಂಭಿಸಿದರು. ಭಾರತದಲ್ಲಿ ಅಣಬೆ ಬೆಳೆಯೋರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡೋದು ಈ ಸಂಸ್ಥೆ ಉದ್ದೇಶ. 2019ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಅವರ ಕಂಪನಿ ಡಿಪಿಐಐಟಿ ಪ್ರಮಾಣೀಕೃತ ಸ್ಟಾರ್ಟ್ ಅಪ್ ಆಗಿ ಬೆಳೆಯಿತು. ಈ ಕಂಪನಿಗೆ ಪೂಜಾ ಹಾಗೂ ಪ್ರದೀಪ್ ಪಾಂಡೆ ಎಂಬ ಇಬ್ಬರು ನಿರ್ದೇಶಕರಿದ್ದಾರೆ.

ಪೂಜಾ ಸಂಶೋಧನೆಯಲ್ಲಿನ ತನ್ನ 10 ವರ್ಷಗಳ ಅನುಭವವನ್ನು ಅಣಬೆ ಕೃಷಿ ಸಂಶೋಧನಾ ಪ್ರಯೋಗಾಲಯದಲ್ಲಿ ಬಳಸಿಕೊಳ್ಳುತ್ತಾರೆ. ಹಾಗೆಯೇ ಅಣಬೆ ಕೃಷಿಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತರಬೇತಿ, ಇಂಟರ್ನ್ ಶಿಪ್ ಹಾಗೂ ಸಂಶೋಧನಾ ಪ್ರಾಜೆಕ್ಟ್ ಗಳನ್ನು ಕೂಡ ನೀಡುತ್ತಾರೆ. ಅಣಬೆ ಕೃಷಿ ಮಾಡೋದು ಹೇಗೆ, ಅದರ ಮಾರುಕಟ್ಟೆ ಸೇರಿದಂತೆ ಸಮಗ್ರ ತರಬೇತಿಯನ್ನು ಶಿಬಿರಾರ್ಥಿಗಳಿಗೆ ಇಲ್ಲಿ ನೀಡಲಾಗುತ್ತದೆ. ಹೀಗೆ ಪೂಜಾ ತಾವು ಕೂಡ ಅಣಬೆ ಕೃಷಿಯಿಂದ ಆರ್ಥಿಕವಾಗಿ ಸದೃಢರಾಗುವ ಜೊತೆಗೆ ಇತರರಿಗೆ ಕೂಡ ಈ ಕೃಷಿ ಕೈಗೊಳ್ಳುವಂತೆ ಪ್ರೋತ್ಸಾಹ ಹಾಗೂ ಬೆಂಬಲ ನೀಡುತ್ತಿದ್ದಾರೆ. 

ಇ-ಕಾಮರ್ಸ್ ಕಂಪನಿ ಸ್ಥಾಪಿಸಿ, ಕೆಲವೇ ವರ್ಷಗಳಲ್ಲಿ ಮಾರಾಟ ಮಾಡಿ 17000 ಕೋಟಿ ಗಳಿಸಿದ ಉದ್ಯಮಿ

ಒಂದು ಸಂದರ್ಶನದಲ್ಲಿ ಪ್ರದೀಪ್ ಪಾಂಡೆ ಬೇಟೆ ಉತ್ಪನ್ನಗಳನ್ನು ಶ್ರೀಲಂಕಾ, ನೇಪಾಳ ಹಾಗೂ ಜಪಾನ್ ಮುಂತಾದ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಬಗ್ಗೆ ಕೂಡ ಮಾಹಿತಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಅವರ ಸ್ಟಾರ್ಟ್ ಅಪ್ ನಲ್ಲಿ 25 ಮಂದಿ ಉದ್ಯೋಗಿಗಳಿದ್ದಾರೆ. ಇನ್ನು ಪ್ರತಿ ತಿಂಗಳು ಅವರ ಸಂಸ್ಥೆ ವಹಿವಾಟು 15ರಿಂದ 20 ಲಕ್ಷ ರೂ. ಇದೆ. ಇನ್ನು  ಅಣಬೆ ಕೃಷಿ ಹೊರತಾಗಿ ಅವರು ಬಿಸ್ಕೆಟ್ಸ್ , ನಮ್ಕೀನ್ ಹಾಗೂ ಇತರ ಉತ್ಪನ್ನಗಳನ್ನು ಕೂಡ ಸಿದ್ಧಪಡಿಸುತ್ತಾರೆ. 

Follow Us:
Download App:
  • android
  • ios