ಕಾರ್ಟ್ ಲೇನ್ ಸಂಸ್ಥೆ ಸಂಸ್ಥಾಪಕ ಮಿಥುನ್ ಸಚೆಟಿ ಉದ್ಯಮ ಪ್ರಾರಂಭಿಸಿದ ಕಿರು ಅವಧಿಯಲ್ಲಿ ಭಾರೀ ಲಾಭ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದು ಸಾಧ್ಯವಾದದ್ದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಉದ್ಯಮ ರಂಗದಲ್ಲಿ ಯಶಸ್ಸು ಸಿಗಲು ಶ್ರಮಪಡೋದು ಅಗತ್ಯ. ಕೆಲವರು ಒಂದೇ ಉದ್ಯಮದಲ್ಲಿ ಹೂಡಿಕೆ ಮಾಡುವ ಬದಲು ಬೇರೆ ಉದ್ಯಮಗಳಲ್ಲಿ ಕೂಡ ಹೂಡಿಕೆ ಮಾಡುವ ಮೂಲಕ ಯಶಸ್ಸು ಗಳಿಸುತ್ತಾರೆ. ಅಂಥವರಲ್ಲಿ ಮಿಥುನ್ ಸಚೆಟಿ ಕೂಡ ಒಬ್ಬರು. ಮಿಥುನ್ ಸಚೆಟಿ ಮುಂಬೈನಲ್ಲಿ ಜೈಪುರ್ ಜೆಮ್ಸ್ ಪ್ರಾರಂಭಿಸುವ ಮೂಲಕ ಉದ್ಯಮ ರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರು ಚೆನ್ನೈ ಮೂಲದ ಕಾರ್ಟ್ ಲೇನ್ ಎಂಬ ಸಂಸ್ಥೆ ಸ್ಥಾಪಿಸುವ ಮೂಲಕ ಯಶಸ್ಸು ಗಳಿಸಿದರು. ಪ್ರಸ್ತುತ ಈ ಕಂಪನಿ ಮೌಲ್ಯ 17,000 ಕೋಟಿ ರೂ.
ಮಿಥುನ್ ತನ್ನ ಆನ್ ಲೈನ್ ಜ್ಯುವೆಲ್ಲರಿ ಪ್ಲಾಟ್ ಫಾರ್ಮ್ 'ಕಾರ್ಟ್ ಲೇನ್' ಸಂಸ್ಥೆಯ ಶೇ.27ರಷ್ಟು ಷೇರುಗಳನ್ನು ವಾಚ್ ನಿರ್ಮಾಣ ಸಂಸ್ಥೆ 'ಟೈಟಾನ್'ಗೆ 4,621 ಕೋಟಿ ರೂ.ಗೆ ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದು ಭಾರತೀಯ ಕನ್ಸೂಮರ್ ಇಂಟರ್ನೆಟ್ ಉದ್ಯಮಿಯ ಅತ್ಯಂತ ಯಶಸ್ವಿ ನಿರ್ಗಮನ ಷೇರು ಮಾರಾಟವಾಗಿದೆ. ಇನ್ನು ಈ ಕಂಪನಿಯ ಮೌಲ್ಯ 17,000 ಕೋಟಿ ರೂ. ತಲುಪಿದೆ. ಇದು ಫ್ಲಿಪ್ ಕಾರ್ಟ್ ಮುಖ್ಯಸ್ಥ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಅವರ ಬಳಿಕದ ಎರಡನೇ ಅತೀದೊಡ್ಡ ನಿರ್ಗಮನವಾಗಿದೆ.
ಒಂದೇ ವರ್ಷದಲ್ಲಿ ಅಂದಾಜು 40 ಕೋಟಿ ಗಳಿಸಿದ ಉದ್ಯಮಿ, ಮಾಡ್ತಿರೋ ಬಿಸಿನೆಸ್ ಏನು?
2016ರಲ್ಲಿ ನ್ಯೂಯಾರ್ಕ್ ಮೂಲದ ಹೂಡಿಕೆ ಸಂಸ್ಥೆ ಟೈಗರ್ ಗ್ಲೋಬಲ್ ಮೂಲಕ ಟೈಟಾನ್ ಸಂಸ್ಥೆಗೆ ಶೇ.62ರಷ್ಟು ಷೇರುಗಳನ್ನು ಕಾರ್ಟ್ ಲೇನ್ ಸಂಸ್ಥೆ ಮಾರಾಟ ಮಾಡಿತ್ತು. ಈ ವಹಿವಾಟಿನಿಂದ ಸ್ಟಾರ್ಟ್ ಅಪ್ ಮೌಲ್ಯ 536 ಕೋಟಿ ರೂ. ತಲುಪಿತು. ಸಚೆಟಿ ಟಾಟಾ ಗ್ರೂಪ್ ಸಂಸ್ಥೆಯನ್ನು ಷೇರುದಾರರಾಗಿ ಪ್ರವೇಶಿಸಿದ್ದರು.
ಅಂದ ಹಾಗೇ ಜೈಪುರ್ ಜೆಮ್ಸ್ ಮಿಥುನ್ ಸಚೆಟಿ ಅವರ ಕುಟುಂಬ ಉದ್ಯಮವಾಗಿದೆ. ಈ ಸಂಸ್ಥೆಯನ್ನು 1974ರಲ್ಲಿ ಮುಂಬೈನಲ್ಲಿ ಸ್ಥಾಪಿಸಲಾಗಿತ್ತು. ಪ್ರಾರಂಭದಲ್ಲಿ ಈ ಕಂಪನಿ ಸೇರಿದ ಸಚೆಟಿ ಅವರಿಗೆ ಆ ಬಳಿಕ ಇ-ಕಾಮರ್ಸ್ ಕ್ಷೇತ್ರ ಪ್ರವೇಶಿಸುವ ಮನಸ್ಸಾಯಿತು. ಆದರೆ, ಇ-ಕಾಮರ್ಸ್ ಉದ್ಯಮ ಪ್ರಾರಂಭಿಸಲು ಎಷ್ಟು ಬಂಡವಾಳ ಅಗತ್ಯ ಎಂಬ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ.
ಸಿಡೆನ್ ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಹಾಗೂ ಎಕನಾಮಿಕ್ಸ್ ನಲ್ಲಿ ಸಚೆಟಿ ಪದವಿ ಪೂರ್ಣಗೊಳಿಸಿದ್ದರು. ಅವರ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ ಅವರು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ಸಾಕಷ್ಟು ಸಿರಿವಂತ ಕುಟುಂಬದ ಹಿನ್ನೆಲೆ ಹೊಂದಿರುವ ಸಚೆಟಿ, ಸ್ವಂತ ಉದ್ಯಮ ಪ್ರಾರಂಭಿಸುವ ಯೋಚನೆ ಮಾಡಿದ್ದರು. ಅದರ ಪ್ರತಿಫಲವೇ ಕಾರ್ಟ್ ಲೇನ್. ಚೆನ್ನೈಯನ್ನು ಕೇಂದ್ರಸ್ಥಾನವಾಗಿಸಿಕೊಂಡು ಈ ಸಂಸ್ಥೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. 2016ರಲ್ಲಿ ಟಾಟಾ ಗ್ರೂಪ್ ಕಾರ್ಟ್ ಲೇನ್ ಸಂಸ್ಥೆಯ ಬಹುತೇಕ ಷೇರುಗಳನ್ನು ಖರೀದಿಸಿತ್ತು. ಇನ್ನು ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ ಕಾರ್ಟ್ ಲೇನ್ ಪ್ರತಿಸ್ಪರ್ಧಿ ಬ್ಲೂ ಸ್ಟೋನ್ ನಲ್ಲಿ ತಮ್ಮ ವೈಯಕ್ತಿಕ ಹಣವನ್ನು ತೊಡಗಿಸಿದ್ದರು.
ತನ್ನ 8ಲಕ್ಷ ಕೋಟಿ ರೂ ಮೌಲ್ಯದ ಕಂಪೆನಿಯಿಂದ ಬೃಹತ್ ಕ್ರಿಸ್ಮಸ್ ಉಡುಗೊರೆ ಸ್ವೀಕರಿಸಲು ರೆಡಿಯಾದ ಇಶಾ ಅಂಬಾನಿ
ಕಾರ್ಟ್ ಲೇನ್ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಯಶಸ್ಸು ಗಳಿಸಿತು. ಹಾಗೆಯೇ ಆ ಸಂಸ್ಥೆಯಿಂದ ಸಚೆಟಿ ಉತ್ತಮ ಆದಾಯ ಕೂಡ ಗಳಿಸಿದರು. ಕಾರ್ಟ್ ಲೇನ್ ಅನ್ನು ಸಚೆಟಿ ಅತ್ಯುತ್ತಮ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು ಕೂಡ. ಅವರ ಜಾಣತನದ ಬಗ್ಗೆ ಆ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ನನಗೆ ಜೀವನದಲ್ಲಿ ಹಣ ಎನ್ನೋದು ಒಂದು ಸಾಧನೆ ಅಷ್ಟೇ.ಅದಕ್ಕಿಂತಲೂ ದೊಡ್ಡಲು ಬದುಕಿನಲ್ಲಿ ಪ್ರಗತಿ ಸಾಧಿಸೋದು ನನಗೆ ದೊಡ್ಡ ಸವಾಲು ಎಂದು ಸಚೆಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
