ಭಾರತದ ರೈಲ್ವೆ ಕೇಂದ್ರಬಿಂದುವಾಗಲಿದೆ ಈ ನಗರ: ಸಾವಿರಾರು ಕೋಟಿ ರೂ. ಯೋಜನೆ ಘೋಷಿಸಿದ ಅಶ್ವಿನಿ ವೈಷ್ಣವ್

ಮಧ್ಯಪ್ರದೇಶದ ಆರ್ಥಿಕ ಕೇಂದ್ರವಾಗಿರುವ ಇಂದೋರ್ ನಗರದಲ್ಲಿ ಸಾವಿರಾರು ಕೋಟಿ ಮೌಲ್ಯದ ರೈಲ್ವೆ ಯೋಜನೆಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.

indore to become india  s railway epicenter ashwini vaishnaw announces projects worth thousands of crores details here ash

ನವದೆಹಲಿ (ನವೆಂಬರ್ 5, 2023): ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಧ್ಯಪ್ರದೇಶದ ಆರ್ಥಿಕ ಕೇಂದ್ರವಾಗಿರುವ ಇಂದೋರ್ ನಗರದಲ್ಲಿ ಸಾವಿರಾರು ಕೋಟಿ ಮೌಲ್ಯದ ರೈಲ್ವೆ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ವೇಳೆ ಇಂದೋರ್ ಪ್ರಮುಖ ರೈಲ್ವೆ ಹಬ್ ಆಗಿ ಮಹತ್ವದ ರೂಪಾಂತರಕ್ಕೆ ಒಳಗಾಗುತ್ತಿದೆ ಎಂದು ಘೋಷಿಸಿದರು.

ಇಂದೋರ್-2 ಕ್ಷೇತ್ರ ಪ್ರತಿನಿಧಿಸುವ ಹಾಲಿ ಬಿಜೆಪಿ ಶಾಸಕ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ರಮೇಶ್ ಮೆಂಡೋಲಾ ಅವರ ಪ್ರಾಥಮಿಕ ಪ್ರಚಾರ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಅಶ್ವಿನಿ ವೈಷ್ಣವ್ ಶುಕ್ರವಾರ ಈ ಘೋಷಣೆ ಮಾಡಿದರು.

ಇದನ್ನು ಓದಿ: ಸಾಯಲು ಬಂದ ಹೆಂಡ್ತಿ ಸಮಾಧಾನಪಡಿಸಲು ರೈಲ್ವೆ ಹಳಿಯಲ್ಲಿ ತಬ್ಬಿಕೊಂಡ ಪತಿ: ವಿಧಿ ಬಯಸಿದ್ದೇ ಬೇರೆ..

ಇಂದೋರ್ - ಪ್ರಮುಖ ರೈಲ್ವೆ ಕೇಂದ್ರ
ಇಂದೋರ್‌ನ ಸ್ಥಾನಮಾನವನ್ನು ಪ್ರಮುಖ ರೈಲ್ವೆ ಕೇಂದ್ರವಾಗಿ ಉನ್ನತೀಕರಿಸಲು, ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯನ್ನು ಒಳಗೊಂಡಿರುವ ವ್ಯಾಪಕ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ. ಈ ಯೋಜನೆಗಳು ನಗರದೊಳಗೆ 6 ವಿಭಿನ್ನ ದಿಕ್ಕುಗಳಲ್ಲಿ ಹೊಸ ರೈಲು ಮಾರ್ಗಗಳ ವಿಸ್ತರಣೆ, ಹಾಗೆಯೇ ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆ ಮತ್ತು ಗೇಜ್ ಪರಿವರ್ತನೆಗಳನ್ನು ಒಳಗೊಳ್ಳುತ್ತವೆ.

ರತ್ಲಾಮ್-ಇಂದೋರ್-ಮೊವ್-ಖಾಂಡ್ವಾ-ಅಕೋಲಾ ರೈಲು ಮಾರ್ಗ, ಇಂದೋರ್-ಮನ್ಮಾಡ್ ರೈಲು ಮಾರ್ಗ, ಇಂದೋರ್-ದಹೋಡ್ ರೈಲು ಮಾರ್ಗ, ಮತ್ತು ಇಂದೋರ್-ಜಬಲ್ಪುರ್ ರೈಲು ಮಾರ್ಗ ಈ ಯೋಜನೆಗಳಲ್ಲಿ ಗಮನಾರ್ಹವಾದವು.

ಇದನ್ನೂ ಓದಿ: ವಂದೇ ಭಾರತ್‌ ರೈಲು ಅಪಘಾತಕ್ಕೆ ಮಹಾ ಸಂಚು: ರೈಲ್ವೆ ಹಳಿ ಮೇಲೆ ರಾಶಿ ರಾಶಿ ಕಲ್ಲು, ರಾಡ್‌ ಇಟ್ಟ ಕಿಡಿಗೇಡಿಗಳು!

ಇಂದೋರ್‌ನ ಅಸ್ತಿತ್ವದಲ್ಲಿರುವ ರೈಲು ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದೋರ್‌ನ ಮುಖ್ಯ ರೈಲು ನಿಲ್ದಾಣ ಮತ್ತು ಲಕ್ಷ್ಮೀಬಾಯಿ ನಗರ ರೈಲು ನಿಲ್ದಾಣದ ಗುಣಮಟ್ಟವನ್ನು ಹೆಚ್ಚಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಹೇಳಿದರು. ಹಾಗೂ ಈ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಯ ಸೌಲಭ್ಯಗಳನ್ನು ಮಾಡುವ ಆಕಾಂಕ್ಷೆ ಹೊಂದಿರುವುದಾಗಿಯೂ ತಿಳಿಸಿದರು. ಇದಲ್ಲದೆ, ಈ ಪ್ರದೇಶದಲ್ಲಿ ಬಹು - ಮಾದರಿ ಕಾರ್ಗೋ ಟರ್ಮಿನಲ್‌ಗಾಗಿ ಸಕ್ರಿಯ ಅಭಿವೃದ್ಧಿ ನಡೆಯುತ್ತಿದೆ ಎಂದೂ ಹೇಳಿದರು. 

ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಬರಲಿದೆ. ಮಧ್ಯ ಪ್ರದೇಶ ಮಾತ್ರವಲ್ಲದೆ, ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ತೆಲಂಗಾಣ ಸೇರಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. 

ಇದನ್ನು ಓದಿ: ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್

Latest Videos
Follow Us:
Download App:
  • android
  • ios