ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್
ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ಒಂದು ಮಗು ಸೇರಿದಂತೆ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದರು.
ಕೊಚ್ಚಿ (ಅಕ್ಟೋಬರ್ 1, 2023): ಕೇರಳದ ರೈಲಿಗೆ ಬೆಂಕಿ ಹಚ್ಚಿದ ಘಟನೆಯು ಜಿಹಾದಿ ಭಯೋತ್ಪಾದಕ ಕೃತ್ಯವಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಕರಣದ ಏಕೈಕ ಆರೋಪಿ, ಸ್ವಯಂ ಉಗ್ರಗಾಮಿ ಶಾಹೀನ್ ಬಾಗ್ ನಿವಾಸಿಯಾಗಿದ್ದಾನೆ. ಈತ ಜನರನ್ನು ಕೊಲ್ಲುವ ಉದ್ದೇಶದಿಂದ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನ ಬೋಗಿಗೆ ಬೆಂಕಿ ಹಚ್ಚಿದ್ದಾನೆ ಎಂದು ಎನ್‌ಐಎ ಶುಕ್ರವಾರ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ಒಂದು ಮಗು ಸೇರಿದಂತೆ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಆರೋಪಿ ಶಾರುಖ್ ಅಲಿಯಾಸ್ ಶಾರುಖ್ ಸೈಫಿ (27) ವಿರುದ್ಧ ಐಪಿಸಿ, ಯುಎ (ಪಿ) ಎ ಆಕ್ಟ್, ರೈಲ್ವೇಸ್ ಆಕ್ಟ್ ಮತ್ತು ಪಿಡಿಪಿಪಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು
"ಎನ್ಐಎ ತನಿಖೆಗಳು ಸೈಫಿ ಗುರುತಿಸಲಾಗದ ಸ್ಥಳದಲ್ಲಿ ತನ್ನ ಜಿಹಾದಿ ಕೃತ್ಯವನ್ನು ಮಾಡಲು ಬಯಸಿದ್ದರು. ಈ ಹಿನ್ನೆಲೆ ಭಯೋತ್ಪಾದನೆ ಮತ್ತು ಅಗ್ನಿಸ್ಪರ್ಶವನ್ನು ಒಳಗೊಂಡಿರುವ ಕೃತ್ಯಕ್ಕೆ ಕೇರಳವನ್ನು ಆರಿಸಿಕೊಂಡಿದ್ದರು ಎಂದು ತೋರಿಸುತ್ತದೆ. ಈ ಕೃತ್ಯದ ನಂತರ ಸಾಮಾನ್ಯ ಜೀವನಕ್ಕೆ ಮರಳಲು ಉದ್ದೇಶಿಸಿದ್ದರು. ಸಾರ್ವಜನಿಕರ ಮನಸ್ಸಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದರು ಎಂದೂ ಎನ್ಐಎ ಹೇಳಿದೆ.
ಏಪ್ರಿಲ್ 2, 2023 ರಂದು ಪ್ರಯಾಣಿಕರ ಮೇಲೆ ಪೆಟ್ರೋಲ್ ಎಸೆದು ಮತ್ತು ಚಿಮುಕಿಸಿ ಬೋಗಿಗೆ ಬೆಂಕಿ ಹಚ್ಚಿದ ಆರೋಪ ಸೈಫಿ ಮೇಲಿದೆ. ರೈಲಿಗೆ ಹತ್ತಿ, ಭಯೋತ್ಪಾದಕ ಕೃತ್ಯ ಎಸಗಿದ್ದಾನೆ ಮತ್ತು ಅದೇ ರೈಲಿನಲ್ಲಿ ಕಣ್ಣೂರಿನವರೆಗೆ ಪ್ರಯಾಣಿಸುತ್ತಿದ್ದ ಮತ್ತು ಮಹಾರಾಷ್ಟ್ರದ ರತ್ನಗಿರಿಗೆ ತಪ್ಪಿಸಿಕೊಂಡು ಹೋಗಿದ್ದ ಎಂದು ಸಂಸ್ಥೆ ಹೇಳಿದ್ದು, ಅಲ್ಲಿಂದ ಅವನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕೇರಳ ರೈಲಿಗೆ ಬೆಂಕಿ ಹಿಂದೆ ಉಗ್ರ ನಂಟಿನ ಶಂಕೆ; ಸಂಪೂರ್ಣ ರೈಲು ಸುಡುವ ದುರುದ್ದೇಶ: ಎನ್‌ಐಎಗೆ ಸ್ಫೋಟಕ ಸುಳಿವು
ಮಾರ್ಚ್ 31 ರಂದು ನವದೆಹಲಿಯಿಂದ ಪ್ರಯಾಣ ಆರಂಭಿಸಿದ ಆರೋಪಿ ಏಪ್ರಿಲ್ 2 ರಂದು ಕೇರಳ ತಲುಪಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಶೋರನೂರಿನಲ್ಲಿರುವ ಬಂಕ್‌ನಿಂದ ಪೆಟ್ರೋಲ್ ಮತ್ತು ರೈಲು ನಿಲ್ದಾಣದ ಅಂಗಡಿಯಿಂದ ಲೈಟರ್ ಖರೀದಿಸಿದ್ದ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆರಂಭದಲ್ಲಿ ಕೋಝಿಕ್ಕೋಡ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ, ಏಪ್ರಿಲ್ 17 ರಂದು ಎನ್ಐಎ ತನಿಖೆಯನ್ನು ವಹಿಸಿಕೊಂಡಿದೆ. ಬಳಿಕ ಎನ್‌ಐಎ ದೆಹಲಿಯ 10 ಸ್ಥಳಗಳಲ್ಲಿ ಶೋಧ ನಡೆಸಿತು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿತು ಮತ್ತು ಹಲವಾರು ಸಾಕ್ಷಿಗಳನ್ನು ಪ್ರಶ್ನಿಸಿತ್ತು ಎಂದೂ ವರದಿಯಾಗಿದೆ.
ಇದನ್ನೂ ಓದಿ:NIA ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್ ಸೈಫಿ ಬಂಧನ