ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ರಾಜಸ್ಥಾನದ ಗಂಗಾರಾರ್ - ಸೋನಿಯಾನಾ ವಿಭಾಗದಲ್ಲಿ ಟ್ರ್ಯಾಕ್‌ನ ಜೋಗಲ್ ಪ್ಲೇಟ್‌ನಲ್ಲಿ ಕಲ್ಲುಗಳು ಮತ್ತು ಎರಡು ಒಂದು ಅಡಿ ರಾಡ್‌ಗಳನ್ನು ಇರಿಸಿರುವುದನ್ನು ತೋರಿಸುತ್ತದೆ.

ಜೈಪುರ (ಅಕ್ಟೋಬರ್ 2, 2023): ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ವಂದೇ ಭಾರತ್ ರೈಲು ಅಪಘಾತಕ್ಕೆ ದುಷ್ಕರ್ಮಿಗಳು ಪ್ಲ್ಯಾನ್ ಮಾಡಿದ್ದರಾ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ, ಹಳಿಗಳ ಮೇಲೆ ಕಲ್ಲು, ರಾಡ್‌ ಮತ್ತು ಇತರ ಅಡೆತಡೆಗಳನ್ನು ಗಮನಿಸಿದ ನಂತರ ಅನಾಹುತ ತಪ್ಪಿದೆ. ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲಟ್‌ಗಳು ಸೋಮವಾರ ಇದನ್ನು ಗಮನಿಸಿದ್ದು, ದೊಡ್ಡ ಅಪಘಾತ ತಪ್ಪಿದೆ ಎನ್ನಹುದು.

ರೈಲು ಹಳಿ ಮೇಲೆ ಕಲ್ಲು, ಅಡೆತಡೆಗಳನ್ನು ಗಮನಿಸಿದ ಲೋಕೋಮೋಟಿವ್ ಪೈಲಟ್‌ಗಳು ತುರ್ತು ಬ್ರೇಕ್ ಹಾಕಿದರು ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ರಾಜಸ್ಥಾನದ ಗಂಗಾರಾರ್ - ಸೋನಿಯಾನಾ ವಿಭಾಗದಲ್ಲಿ ಟ್ರ್ಯಾಕ್‌ನ ಜೋಗಲ್ ಪ್ಲೇಟ್‌ನಲ್ಲಿ ಕಲ್ಲುಗಳು ಮತ್ತು ಎರಡು ಒಂದು ಅಡಿ ರಾಡ್‌ಗಳನ್ನು ಇರಿಸಿರುವುದನ್ನು ತೋರಿಸುತ್ತದೆ.

ಇದನ್ನು ಓದಿ: ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಜಿಹಾದಿ ಕೃತ್ಯ: ಎನ್‌ಐಎ ಚಾರ್ಜ್‌ಶೀಟ್

Scroll to load tweet…

ಈ ಸಂಬಂಧ ಹೇಳಿಕೆ ನೀಡಿದ ರೈಲು ಸಚಿವಾಲಯ "ರೈಲು ಸಂಖ್ಯೆ 20979 ವಂದೇ ಭಾರತ್ ಉದಯಪುರ-ಜೈಪುರ್ ಗಂಗಾರಾರ್-ಸೋನಿಯಾನ ವಿಭಾಗದಲ್ಲಿ KM ನಂ 158/18, 158/19 ನಲ್ಲಿ ನಿಂತಿತ್ತು. ಜೋಗಲ್ ಪ್ಲೇಟ್‌ನಲ್ಲಿ ಹೇಳಲಾದ ಕಿಮೀ ಮೇಲಿನ ಟ್ರ್ಯಾಕ್ ಮೇಲೆ ತಲಾ ಒಂದು ಅಡಿಯ ಎರಡು ರಾಡ್‌ಗಳನ್ನು ಇರಿಸಿದ್ದ ಕಾರಣ ನಿಇಂತಿತ್ತು. ಈ ಘಟನೆಯು ಸುಮಾರು 09:55 ಗಂಟೆಗೆ RPF/ಪೋಸ್ಟ್/ಭಿಲ್ವಾರಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸ್ಥಳವು ಚಿತ್ತೋರ್‌ಗಢ್ ಜಿಲ್ಲೆಯ SHO/ಗಂಗಾರರ್ ಅವರ ಅಧಿಕಾರ ವ್ಯಾಪ್ತಿಗೆ ಬರುತ್ತದೆ’’ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಡಿಎಸ್‌ಸಿ ಅಜ್ಮೀರ್, ಐಪಿಎಫ್ ಭಿಲ್ವಾರಾ, ಪಿಡಬ್ಲ್ಯುಐ ಗಂಗರಾರ್, ಸ್ಥಳೀಯ ಪೊಲೀಸರು ಮತ್ತು ಜಿಆರ್‌ಪಿ ಅಧಿಕಾರಿಗಳು ಭೇಟಿ ನೀಡಿದ ನಂತರ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬೆಳಗ್ಗೆ 9.55ರ ಸುಮಾರಿಗೆ ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಫ್ರೀ ಆಗಿ ಹೇಗೆ ಪ್ರಯಾಣಿಸಬಹುದೆಂದು ತೋರಿಸಿದ ಯೂಟ್ಯೂಬರ್‌: ವಿಡಿಯೋ ವೈರಲ್‌

ಉದಯಪುರ - ಜೈಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಚಲಿಸುತ್ತದೆ. ಉದಯಪುರ ನಗರದಿಂದ ಬೆಳಗೆ 7:50 ಕ್ಕೆ ಹೊರಟು 14:05 ಕ್ಕೆ ಜೈಪುರ ತಲುಪುತ್ತದೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಇಂದು 9 ವಂದೇ ಭಾರತ್‌ ರೈಲುಗಳಿಗೆ ಚಾಲನೆ: ಕರ್ನಾಟಕಕ್ಕೂ ಸಿಗುತ್ತೆ ಮತ್ತೊಂದು ಐಷಾರಾಮಿ ರೈಲು