ಸಾಯಲು ಬಂದ ಹೆಂಡ್ತಿ ಸಮಾಧಾನಪಡಿಸಲು ರೈಲ್ವೆ ಹಳಿಯಲ್ಲಿ ತಬ್ಬಿಕೊಂಡ ಪತಿ: ವಿಧಿ ಬಯಸಿದ್ದೇ ಬೇರೆ..
ಪ್ರಾಣ ಕಳೆದುಕೊಳ್ಳಲು ರೈಲ್ವೆ ಹಳಿಗೆ ಹೋಗಿದ್ದ ಹೆಂಡತಿಯನ್ನು ಸಮಾಧಾನಪಡಿಸಲು ಗಂಡ ಹೋಗಿದ್ದು, ಆದರೆ ರೈಲು ವೇಗವಾಗಿ ಬಂದ ಕಾರಣ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ವಾರಾಣಾಸಿ (ಯುಪಿ) (ಅಕ್ಟೋಬರ್ 14, 2023): ಪತಿಯ ಮದ್ಯದ ಚಟದಿಂದ ಬೇಸತ್ತ ಪತ್ನಿ ತನ್ನ ಜೀವವನ್ನು ಕಳೆದುಕೊಳ್ಳಲು ರೈಲ್ವೆ ಹಳಿಯ ಬಳಿ ನಿಂತುಕೊಂಡಿರುತ್ತಾಳೆ. ಬಳಿಕ, ಆಕೆಯನ್ನು ಸಮಾಧಾನಪಡಿಸಲು ಹೋದ ಪತಿ ಹೆಂಡತಿಯನ್ನು ತಬ್ಬಿಕೊಂಡಿದ್ದಾರೆ.
ಗಂಡನ ಕುಡಿತದ ಚಟಕ್ಕೆ ಬೇಸತ್ತ ಹಾಗೂ ಜಗಳದ ಬಳಿಕ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಅಂತ ರೈಲ್ವೆ ಹಳಿ ಬಳಿ ಹೋಗಿರುತ್ತಾರೆ. ನಂತರ, ಆಕೆಯನ್ನು ಸಮಾಧಾನಪಡಿಸಲು ಗಂಡ ಅಲ್ಲಿಗೆ ಹೋಗಿ ಆಕೆಯನ್ನು ತಬ್ಬಿಕೊಳ್ಳುತ್ತಾನೆ. ಹಾಗೂ, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಪ್ರಯತ್ನಿಸುತ್ತಾನೆ.
ಇದನ್ನು ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್!
ಆದರೆ, ಅದೇ ವೇಳೆ ರೈಲು ಬಂದಿದ್ದು, ಇಬ್ಬರ ಪ್ರಾಣವನ್ನೂ ತೆಗೆದುಕೊಂಡು ಹೋಗಿದೆ. ಇಂತಹ ದಾರುಣ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ವಾರಾಣಸಿಯ ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಶಿ ರೈಲ್ವೆ ಕ್ರಾಸಿಂಗ್‌ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಗೋವಿಂದ್ ಸೋಂಕರ್ (30) ಅವರು ಮದ್ಯದ ಚಟ ಹೊಂದಿದ್ದರು ಮತ್ತು ಬುಧವಾರ ರಾತ್ರಿಯೂ ಕುಡಿಯುತ್ತಿದ್ದರು. ಇದಕ್ಕೆ ಪತ್ನಿ ಖುಷ್ಬು ಸೋಂಕರ್ (28) ವಿರೋಧ ವ್ಯಕ್ತಪಡಿಸಿದ್ದರು ಎಂದೂ ಸಾರಾನಾಥ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಬ್ರಿಜೇಶ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಇದನ್ನು ಓದಿ: ಹೊಸಕೋಟೆ ಬಿರಿಯಾನಿ ಹೋಟೆಲ್ ಮಾಲೀಕರಿಂದ ಜಿಎಸ್‌ಟಿ ವಂಚನೆ: ಕೋಟಿ ಕೋಟಿ ಹಣ ವಶಕ್ಕೆ!
ಕುಡಿದ ಅಮಲಿನಲ್ಲಿದ್ದ ಗೋವಿಂದ್ ಆಕೆಯೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಇದರ ಬೆನ್ನಲ್ಲೇ ಆಕೆ ರೈಲ್ವೆ ಹಳಿಯ ಬಳಿ ಹೋಗಿದ್ದಾಳೆ. ಗೋವಿಂದ್ ತನ್ನ ಹೆಂಡತಿಯನ್ನು ಸಮಾಧಾನಪಡಿಸಲು ಹಿಂಬಾಲಿಸಿ ಆಕೆಯನ್ನು ತಬ್ಬಿಕೊಂಡರು. ಆದರೆ, ವೇಗವಾಗಿ ಬಂದ ರೈಲಿಗೆ ಇಬ್ಬರೂ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ಎಸ್‌ಎಚ್‌ಒ ತಿಳಿಸಿದ್ದು, ಮಗನಿಗೆ 6 ವರ್ಷ, ಇಬ್ಬರು ಹೆಣ್ಣುಮಕ್ಕಳಿಗೆ ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷ ಆಗಿದೆ. ಗೋವಿಂದ್ ಹಣ್ಣು ಮಾರುತ್ತಿದ್ದರು ಎಂದಿದ್ದಾರೆ. ಇನ್ನೊಂದಿಗೆ, ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ