Asianet Suvarna News Asianet Suvarna News

ಹಾರಾಟದ ವೇಳೆ ದ್ವಾರ ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ!

* ತುರ್ತು ನಿರ್ಗಮನ ದ್ವಾರವನ್ನು ತೆರೆದು ವಿಮಾನದ ರೆಕ್ಕೆಯ ಮೇಲೆ ಕಸರತ್ತು

* ಅಮೆರಿಕದ ಷಿಕಾಗೋದಲ್ಲಿ ವರದಿಯಾದ ಅಚ್ಚರಿ ಘಟನೆ

* ಹುಚ್ಚು ಸಾಹಸ ಮಾಡಿದ್ದಕ್ಕಾಗಿ ವಶಕ್ಕೆ ಪಡೆದ ಪೊಲೀಸರು

Man on United Airlines flight exited moving plane jumped onto its wing at Chicago airport pod
Author
Bangalore, First Published May 7, 2022, 7:34 AM IST

ನ್ಯೂಯಾರ್ಕ್(ಮೇ.08): ಪ್ರಯಾಣಿಕನೊಬ್ಬನು ಹಾರಾಡುತ್ತಿರುವ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದು ವಿಮಾನದ ರೆಕ್ಕೆಯ ಮೇಲೆ ನಡೆದ ವಿಚಿತ್ರ ಘಟನೆ ಅಮೆರಿಕದ ಷಿಕಾಗೋದಲ್ಲಿ ವರದಿಯಾಗಿದೆ.

ಯುನೈಟೆಡ್‌ ಏರ್‌ಲೈನ್ಸ್‌ ವಿಮಾನದಲ್ಲಿದ್ದ ಕ್ಯಾಲಿಫೋರ್ನಿಯಾದ 57 ವರ್ಷದ ಪ್ರಯಾಣಿಕ ರಾರ‍ಯಂಡಿ ಫ್ರಾಂಕ್‌ ಡವಿಲಾ ಎಂಬುವವನು ಚಿಕಾಗೋದ ಓಹಾರೇ ಅಂತರಾಷ್ಟ್ರೀಯ ವಿಮಾನದ ಗೇಟ್‌ ಸಮೀಪಿಸುತ್ತಿದ್ದಂತೆ ತಕ್ಷಣ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದಾರೆ. ನಂತರ ವಿಮಾನದ ರೆಕ್ಕೆಯ ಮೇಲೆ ನಡೆದಾಡಿದ್ದಾನೆ. ಈ ಹುಚ್ಚು ಸಾಹಸ ಮಾಡಿದ್ದಕ್ಕಾಗಿ ಡವಿಲಾ ಅವರನ್ನು ಪೊಲೀಸರು ಪ್ರಕರಣ ದಾಖಲಿಸಿ, ವಶಕ್ಕೆ ಪಡೆದುಕೊಂಡೊದ್ದಾರೆ. ಜೂ.27 ರಂದು ಈತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮೊದಲು ಅಮೆರಿಕನ್‌ ಏರ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬನು ಪ್ರಯಾಣದ ನಡುವೆಯೇ ವಿಮಾನದ ಮುಖ್ಯಬಾಗಿಲನ್ನು ತೆರೆಯಲು ಪ್ರಯತ್ನಿದಾಗ, ಆತನನ್ನು ನಿಯಂತ್ರಿಸಲು ವಿಮಾನದ ಸಿಬ್ಬಂದಿಯು ಕಾಫಿ ಮಾಡುವ ಪಾತ್ರೆಯಲ್ಲಿ ಹೊಡೆದಿದ್ದು ವರದಿಯಾಗಿತ್ತು. ಕಳೆದ ವರ್ಷ ಸುಮಾರು 5500ಕ್ಕೂ ಹೆಚ್ಚು ಪ್ರಯಾಣಿಕರ ಅಶಿಸ್ತಿನ ವರ್ತನೆಯ ವಿರುದ್ಧ ದೂರು ಅಮೆರಿಕದ ವೈಮಾನಿಕ ಆಡಳಿತಕ್ಕೆ ದೂರು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಶಿಸ್ತು ತೋರಿದ ಕೆಲವರಿಗೆ ದಂಡ ವಿಧಿಸಿದರೆ, ಕೆಲವರ ಅಂತರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧವನ್ನು ಹೇರಲಾಗಿತ್ತು.

 ಕಾಕ್ ಪಿಟ್ ನಲ್ಲಿ ಪೈಲಟ್ ಸಿಗರೇಟ್ ಹಚ್ಚಿದ್ದರಿಂದ ವಿಮಾನಕ್ಕೆ ಬೆಂಕಿ!

ಈಜಿಪ್ಟ್ (Egypt) ದೇಶ ಕಂಡ ಭೀಕರ ದುರಂತದಲ್ಲಿ 2016ರ ಈಜಿಪ್ಟ್ ಏರ್ ( EgyptAir ) ವಿಮಾನ ಅಪಘಾತವೂ ಒಂದು. ಈ ದುರಂತದಲ್ಲಿ ವಿಮಾನದಲ್ಲಿದ್ದ(Flight) ಎಲ್ಲಾ 66 ಮಂದಿಯೂ ಸಾವಿಗೀಡಾಗಿದ್ದರು. ಅಂದಾಜು ಆರು ವರ್ಷಗಳ ಬಳಿಕ ಫ್ರೆಂಚ್ ವಾಯುಯಾನ ತಜ್ಞರು (French aviation experts) ಈ ದುರಂತದ ಕುರಿತಾದ ತಜ್ಞ ವರದಿಯನ್ನ ಪ್ರಕಟಿಸಿದ್ದು, ಕಾಕ್ ಪಿಟ್ ನಲ್ಲಿ ಪೈಲಟ್ ಸಿಗರೇಟ್ ಹಚ್ಚುವ ಸಲುವಾಗಿ ಬೆಂಕಿ ಹೊತ್ತಿಸಿದ್ದರಿಂದ ದುರಂತ ಸಂಭವಿಸಿದೆ ಎಂದು ಹೇಳಿದೆ.

ಈ ವರದಿಯು 134 ಪುಟ ಹೊಂದಿದೆ. ಎಂಎಸ್804 ವಿಮಾನದ ಪೈಲಟ್ ಕಾಕ್ ಪಿಟ್ ನಲ್ಲಿ ಸಿಗರೇಟ್ ಹಚ್ಚುವ ಪ್ರಯತ್ನ ಮಾಡಿದ್ದ. ಆದರೆ, ಈ ವೇಳೆ ಎಮರ್ಜೆನ್ಸಿ ಮಾಸ್ಕ್ ನಿಂದ ಆಮ್ಲಜನಕ ಸೋರಿಕೆಯಾಗಿದ್ದರಿಂದ ಇಡೀ ವಿಮಾನ ಪೂರ್ತಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದೆ. 

ವರದಿಯ ಪ್ರಕಾರ, ಈಜಿಪ್ಟ್ ಪೈಲಟ್‌ಗಳು ನಿಯಮಿತವಾಗಿ ಕಾಕ್‌ಪಿಟ್‌ನಲ್ಲಿ ಧೂಮಪಾನ ಮಾಡುತ್ತಾರೆ ಮತ್ತು ಅಭ್ಯಾಸವನ್ನು 2016 ರಲ್ಲಿ ವಿಮಾನಯಾನ ಸಂಸ್ಥೆಯು ನಿಷೇಧ ಮಾಡುವ ಗೋಜಿಗೆ ಹೋಗಲಿಲ್ಲ. ವರದಿಯನ್ನು ಪ್ಯಾರಿಸ್‌ನ ಮೇಲ್ಮನವಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ.

ಮೇ 2016 ರಲ್ಲಿ, ಏರ್‌ಬಸ್ ಎ 320 ಪ್ಯಾರಿಸ್‌ನಿಂದ ಕೈರೋಗೆ ತೆರಳುತ್ತಿದ್ದಾಗ ಅಚ್ಚರಿಯ ರೀ

Follow Us:
Download App:
  • android
  • ios