ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತು ಕೇಳಿ ಬೆಳೆದ ಭಾರತೀಯರು, ಮನಸ್ಸಿಗೆ ಬಂದಂತೆ ವ್ಯಯಿಸುತ್ತಿದ್ದು, ತಮ್ಮಿಷ್ಟ ಬಂದಂತೆ ಖರ್ಚು ಮಾಡುತ್ತಾರಂತೆ. ಹೊಟ್ಟೆಗೆ ಹಿಟ್ಟಿಲ್ಲದೇ ಹೋದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ದುಡ್ಡನ್ನು ಪೋಲ್ ಮಾಡುತ್ತಾರೆ.

ನಾವು ಭಾರತೀಯರು ಬಿಂದಾಸ್ ಬಿಡಿ. ನಮಗೆ ಎಷ್ಟು ಆದಾಯ ಬರ್ತಿದೆ ಎನ್ನುವುದು ಮುಖ್ಯ ಅಲ್ವೇ ಅಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತು ನಮಗೆ ಅನ್ವಯ ಆಗೋದೇ ಇಲ್ಲ. ಸಾಲ ಮಾಡಿಯಾದ್ರೂ ತುಪ್ಪ ತಿನ್ನುವ ಎನ್ನುವವರು ನಾವು. ಬಹುತೇಕ ಭಾರತೀಯರು ಗಳಿಸುವ ಆದಾಯಕ್ಕಿಂತ ಮಾಡುವ ಖರ್ಚು ಹೆಚ್ಚಿರುತ್ತದೆ. ಮನೆಯಲ್ಲಿ ದುಡಿಯೋರು ಒಬ್ಬರಾದ್ರೆ ಕುಳಿತು ತಿನ್ನೋರ ಸಂಖ್ಯೆ ಮೂರಕ್ಕಿಂತ ಹೆಚ್ಚಿರುತ್ತದೆ. ಒಂದ್ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ನಿರುದ್ಯೋಗ ಸಮಸ್ಯೆ ಮತ್ತೊಂದು ಕಡೆ ದುಬಾರಿ ಶಿಕ್ಷಣ, ಜೀವನ ಶೈಲಿಯಿಂದಾಗಿ ಕೈಗೆ ಬರುವ ಸಂಬಳ ಯಾವುದಕ್ಕೂ ಸಾಲ್ತಿಲ್ಲ ಅಂತಾ ಕಡು ಬಡವರು ಹೇಳುತ್ತಾರೆ. ಆದ್ರೆ ಕೈತುಂಬ ಹಣ ಸಂಪಾದನೆ ಮಾಡೋರು ಕೂಡ ತಿಂಗಳ ಕೊನೆಯಲ್ಲಿ ಕೈ ಖಾಲಿ ಮಾಡಿಕೊಳ್ತಾರೆ. ಅವರ ಉಳಿತಾಯ ಕೂಡ ಬಹಳ ಕಡಿಮೆ.

ಉತ್ತಮ ಜೀವನಕ್ಕೆ ಉಳಿತಾಯ (Saving) ಮಾಡಿ ಅಂತಾ ತಜ್ಞರು ಸಲಹೆ ನೀಡ್ತಾರೆ ಆದ್ರೆ ಉಳಿತಾಯ ಮಾಡೋಕೆ ಹಣ ಬೇಕಲ್ವಾ? ಭಾರತ (India) ದಲ್ಲಿ ಬಹುತೇಕರ ಆದಾಯ (income) ಖರ್ಚಿಗಿಂತ ಬಹಳ ಕಡಿಮೆ ಇದೆ. ಇದೇ ಕಾರಣಕ್ಕೆ ಇಲ್ಲಿನ ಜನರು ತುರ್ತು ಪರಿಸ್ಥಿತಿಯಲ್ಲಿ ಸಾಲ ಪಡೆಯುತ್ತಾರೆ. ಆಸ್ಪತ್ರೆ ಖರ್ಚಿಗೂ ಇವರ ಬಳಿ ಹಣವಿರೋದಿಲ್ಲ. ಇದನ್ನು ನಾವು ಹೇಳ್ತಿಲ್ಲ. ವರದಿಯೊಂದು ಭಾರತದ ಆರ್ಥಿಕ ಸ್ಥಿತಿಯನ್ನು ಬಿಚ್ಚಿಟ್ಟಿದೆ. ಪೀಪಲ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸ್ಯೂಮರ್ ಎಕಾನಮಿ (PRICE) ಈ ಬಗ್ಗೆ ವರದಿ ನೀಡಿದೆ. ಈ ವರದಿಯ ಪ್ರಕಾರ, ದೇಶದಲ್ಲಿ 900 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಥವಾ ಶೇಕಡಾ 60 ರಷ್ಟು ಜನರು ಕಡಿಮೆ ಆದಾಯವನ್ನು ಹೊಂದಿದ್ದಾರೆ. ಆದರೆ ಅವರ ಖರ್ಚು ಹೆಚ್ಚು. ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಅವರು ಚಿಕಿತ್ಸೆಗೂ ಸಾಲ ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಥ್ರೆಡ್ಸ್‌ ಲಾಂಚ್‌ ಬಳಿಕ ಕಂಗಾಲಾದ ಎಲಾನ್‌ ಮಸ್ಕ್‌: ಟ್ವಿಟ್ಟರ್‌ ಖರೀದಿಗೆ ಒತ್ತಾಯಿಸಿದ ಕಾನೂನು ಸಂಸ್ಥೆ ಮೇಲೆ ಕೇಸ್‌!

ಆದಾಯ ಕಡಿಮೆ ಇರುವ ಕಾರಣ, ಭಾರತೀಯರಿಗೆ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. 25 ರಾಜ್ಯಗಳಲ್ಲಿ 40,000 ಕುಟುಂಬಗಳನ್ನು ಸಮೀಕ್ಷೆ ಮಾಡಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕುಟುಂಬದ ಸದಸ್ಯರ ಆದಾಯ, ಖರ್ಚು ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ.

ಮುಖೇಶ್ ಅಂಬಾನಿ ಮುಂಬೈ ನಿವಾಸ ಅಂಟಿಲಿಯಾ ಎಲ್ಲರಿಗೂ ಗೊತ್ತು; ಆದ್ರೆ ಲಂಡನ್ ನಲ್ಲಿರುವ ಈ ಐಷಾರಾಮಿ ಬಂಗ್ಲೆ ಗೊತ್ತಾ?

ವರದಿಯ ಪ್ರಕಾರ, ವಾರ್ಷಿಕ 30 ಲಕ್ಷದವರೆಗೆ ಆದಾಯ ಗಳಿಸುವ ದೇಶದ 43 ಕೋಟಿ ಮಧ್ಯಮ ವರ್ಗದ ಜನರು ಎಲ್ಲ ತೆರಿಗೆ ಪಾವತಿಸಿದ ನಂತ್ರ ಸುಮಾರು 9.25 ಲಕ್ಷ ರೂಪಾಯಿ ಸರಾಸರಿ ಆದಾಯ ಹೊಂದಿರುತ್ತಾರೆ. ಆದ್ರೆ ಅವರ ಉಳಿತಾಯ ಮಾತ್ರ ಶೇಕಡಾ 14 ರಷ್ಟಿರುತ್ತದೆ. 30 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ 5.6 ಕೋಟಿ ಜನರ ಅರ್ಹ ಆದಾಯ 35.77 ಲಕ್ಷ ರೂಪಾಯಿ. ಅವರು ತಮ್ಮ ಹಣವನ್ನು ಸುಮಾರು ಶೇಕಡಾ 57ರಷ್ಟು ಅಗತ್ಯಗಳಿಗಾಗಿ ಖರ್ಚು ಮಾಡುತ್ತಾರೆ. ಶೇಕಡಾ 17ರಷ್ಟು ಮಾತ್ರ ಉಳಿತಾಯ ಮಾಡುತ್ತಾರೆ. ಅಂದ್ರೆ ಹೆಚ್ಚು ಆದಾಯ ಗಳಿಸುವವರು ಕೂಡ ಉಳಿತಾಯ ಮಾಡೋದು ಕಡಿಮೆ ಎಂದಾಯ್ತು. ಮಧ್ಯಮ ವರ್ಗಕ್ಕಿಂತ ಶೇಕಡಾ 3ರಷ್ಟು ಹೆಚ್ಚು ಉಳಿತಾಯ ಮಾಡ್ತಾರೆ. ಇನ್ನು 5 ಲಕ್ಷದವರೆಗೆ ಗಳಿಸುವ 93 ಕೋಟಿ ಜನರ ಅಗತ್ಯಗಳು ಅವರ ಆದಾಯಕ್ಕಿಂತ ಹೆಚ್ಚು. ಅವರಿಗೆ ಉಳಿತಾಯ ಮಾಡುವ ಅವಕಾಶವೇ ಇಲ್ಲ. ಅವರು ತಮ್ಮ ನಿತ್ಯದ ಖರ್ಚು, ಚಿಕಿತ್ಸೆಗಳಿಗೂ ಅನೇಕ ಬಾರಿ ಸಾಲ ಮಾಡಬೇಕಾಗುತ್ತದೆ. ವರದಿಯ ಪ್ರಕಾರ ಪ್ರಪಂಚದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗವನ್ನು ಭಾರತ ಹೊಂದಿದೆ. ಅವರು ಖರ್ಚು ಮಾಡುವ ಶಕ್ತಿ ಕೂಡ ಬಹಳಷ್ಟು ಹೆಚ್ಚಾಗಿದೆ.