Asianet Suvarna News Asianet Suvarna News

Bank Strike : ಇನ್ನೆರಡು ದಿನ ಸರ್ಕಾರಿ ಬ್ಯಾಂಕ್ ಗಳಲ್ಲಿ ಕೆಲಸ ನಿಧಾನವಾಗಬಹುದು ಎಚ್ಚರ!


ಸರ್ಕಾರಿ ಬ್ಯಾಂಕ್ ಯೂನಿಯನ್ ಹಾಗೂ ಉದ್ಯೋಗಿಗಳ ಸ್ಟ್ರೈಕ್
ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕ್ ಗಳ ದೈನಂದಿನ ಕೆಲಸಗಳಿಗೆ ಅಡ್ಡಿ ಸಾಧ್ಯತೆ
ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ನಿರ್ಧಾರದ ವಿರುದ್ಧ  2 ದಿನಗಳ ಸ್ಟ್ರೈಕ್

Two day Bank strike from tomorrow sbi and Other govt lenders operations likely to hit san
Author
New Delhi, First Published Dec 15, 2021, 6:21 PM IST

ನವದೆಹಲಿ (ಡಿ.15): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸೇರಿದಂತೆ ಸಾಕಷ್ಟು ಸರ್ಕಾರಿ ಬ್ಯಾಂಕ್ ಗಳ ಉದ್ಯೋಗಿಗಳು ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಮುಷ್ಕರ (Bank strike ) ನಡೆಸಲಿದ್ದಾರೆ. ದೇಶದ ಹಲವು ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ದಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) (United Forum of Bank Unions)ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. 9 ಸರ್ಕಾರಿ ಬ್ಯಾಂಕ್ ಗಳ ಯೂನಿಯನ್ ಗಳು ಯುಎಫ್ ಬಿಯು ಅಡಿಯಲ್ಲಿ ಬರಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಪ್ರಮುಖ ಸರ್ಕಾರಿ ಬ್ಯಾಂಕ್ ಗಳ ಕೆಲಸ ನಿಧಾನವಾಗುವ ಸಾಧ್ಯತೆ ಇದೆ.

ಅದರಂತೆ ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್, ದೇಶದ ಅಗ್ರ ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ಮಾಹಿತಿಯನ್ನು ನೀಡಿದ್ದು, ಡಿಸೆಂಬರ್ 16 ಹಾಗೂ 17 ರಂದು ಬ್ಯಾಂಕಿನ ದೈನಂದಿನ ಕಾರ್ಯಗಳಲ್ಲಿ ಕೆಲ ಅಡ್ಡಿಗಳು ಎದುರಾಗಬಹುದು ಎಂದು ಹೇಳಿದೆ. ಇಂಡಿಯನ್ಸ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ನೀಡಿರುವ (lndian Banks' Association) ಸಲಹೆಯ ಪ್ರಕಾರ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ಈಗಾಗಲೇ ಸ್ಟ್ರೈಕ್ ಡೆಸುವ ನಿಟ್ಟಿನಲ್ಲಿ ನೋಟಿಸ್ ನೀಡಿದೆ.

ಅದರಂತೆ ಯುಎಫ್ ಬಿಯು ಅಡಿಯಲ್ಲಿರುವ ಯೂನಿಯನ್ ಗಳೂ ಕೂಡ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಮುಷ್ಕರದ ದಿನ ಬ್ಯಾಂಕ್ ನ ಎಲ್ಲಾ ಶಾಖೆಗಳು ಹಾಗೂ ಕಚೇರಿಗಳಲ್ಲಿ ಕೆಲಸ ಸರಾಗವಾಗಿ ಸಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೂ, ಮುಷ್ಕರದ ಕಾರಣದಿಂದಾಗಿ ಬ್ಯಾಂಕ್ ನ ಕಾರ್ಯ ಕಲಾಪಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ' ಎಂದು ಸ್ಟಾಕ್ ಎಕ್ಸ್ ಚೇಂಜ್ ಗೆ ನೀಡಿರುವ ಪತ್ರದಲ್ಲಿ ಹೇಳಿದೆ.
 


ಎಸ್ ಬಿಐ ಬಳಿಕ, ಇತರ ಸರ್ಕಾರಿ ಬ್ಯಾಂಕ್ ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) (Punjab National Bank), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಮತ್ತು ಆರ್ ಬಿಎಲ್ (RBL) ಕೂಡ ತನ್ನ ದೈನಂದಿನ ವ್ಯವಹಾರಗಳಲ್ಲಿ ಅಡೆತಡೆಗಳು ಆಗುವ ಬಗ್ಗೆ ನೋಟಿಸ್ ಅನ್ನು ರವಾನಿಸಿದೆ.

ಸೋಮವಾರ ತನ್ನ ಉದ್ಯೋಗಳಿಗೆ, ಎರಡು ದಿನದ ಮುಷ್ಕರದ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಎಸ್ ಬಿಐ ಹೇಳಿತ್ತು. ಮುಷ್ಕರದಿಂದಾಗಿ ಗ್ರಾಹಕರಿಗೆ ಬ್ಯಾಂಕ್ ನ ಮೇಲೆ ಆಸಕ್ತಿ ಕಡಿಮೆಯಾಗಬಹುದು ಎನ್ನುವ ಕಾರಣ ನೀಡಿ ಮುಷ್ಕರ ಹಿಂತೆಗೆದುಕೊಳ್ಳುವಂತೆ ಕೇಳಿತ್ತು. "ಡಿಸೆಂಬರ್ 16 ಹಾಗೂ 17ಕ್ಕೆ ನಿಗದಿಯಾಗಿರುವ ಎರಡು ದಿನಗಳ ಮುಷ್ಕರದಲ್ಲಿ ನಮ್ಮ ಉದ್ಯೋಗಿಗಳು ಭಾಗವಹಿಸದೇ ಇರುವ ನಿರ್ಧಾರ ಮಾಡಿ ಎಂದು ನಾವು ಕೇಳಿಕೊಳ್ಳುತ್ತೇವೆ. ಬ್ಯಾಂಕ್ ನ ಗ್ರಾಹಕರು, ಹೂಡಿಕೆದಾರರ ದೃಷ್ಟಿಯಲ್ಲಿ ಈ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿದ್ದೇವೆ"  ಎಸ್ ಬಿಐ ಟ್ವಿಟರ್ ನಲ್ಲಿ ಪ್ರಕಟಿಸಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Bank Strike: ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಡಿ.16,17ರಂದು ಬ್ಯಾಂಕ್ ಬಂದ್
ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫೆಡರೇಷನ್ (ಎಐಬಿಒಸಿ) ನೇತೃತ್ವದಲ್ಲಿ (All India Bank Officers Confederation ) ಡಿಸೆಂಬರ್ 1 ರಿಂದ ನವದೆಹಲಿಯ ಜಂತರ್ ಮಂತರ್ ನಲ್ಲಿ (Jantar Mantar ) "ಬ್ಯಾಂಕ್ ಬಚಾವೋ, ದೇಶ್ ಬಚಾವೋ" (Bank Bachao, Desh Bachao) ಎನ್ನುವ ಹೆಸರಿನಲ್ಲಿ ಪ್ರತಿಭಟನಾ ಹೋರಾಟ ನಡೆಯುತ್ತಿದ್ದು, ಉದ್ಯೋಗಿಗಳು ಹಾಗೂ ಟ್ರೇಡ್ ಯೂನಿಯನ್ ಗಳು ಇದರಲ್ಲಿ ಭಾಗಿಯಾಗಿವೆ.

ಮೊದಲ ದಿನದ ಬ್ಯಾಂಕ್‌ ಮುಷ್ಕರ: ಬ್ಯಾಂಕಿಂಗ್‌ ಸೇವೆ ಸಂಪೂರ್ಣ ಸ್ತಬ್ಧ!
ಸಾರ್ವಜನಿಕ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕ್ರಮವು ಆರ್ಥಿಕತೆಯ ಆದ್ಯತೆಯ ವಲಯಗಳಿಗೆ ಸಾಲ ನೀಡುವುದರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ವ-ಸಹಾಯ ಗುಂಪುಗಳಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಸಾಲದ ಹರಿವಿಗೆ ಅಡ್ಡಿಪಡಿಸುತ್ತದೆ. ದೇಶದ ಒಟ್ಟು ಠೇವಣಿಗಳಲ್ಲಿ 70% ರಷ್ಟು ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ (ಪಿಎಸ್‌ಬಿ) ಇವೆ. ಇವುಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರ ಮಾಡುವುದರಿಂದ ಜನಸಾಮಾನ್ಯರ ಠೇವಣಿಗಳನ್ನು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಎಐಬಿಒಸಿ ಮುಖ್ಯ ಕಾರ್ಯದರ್ಶಿ ಸಂಜಯ್ ದಾಸ್ (Sanjay Das) ಹೇಳಿದ್ದಾರೆ.

Follow Us:
Download App:
  • android
  • ios