Live| ಕೇಂದ್ರ ಬಜೆಟ್ 2020: ತೆರಿಗೆದಾರರಿಗೆ ಬಂಪರ್, ಭಾರೀ ರಿಯಾಯ್ತಿ ಘೋಷಣೆ!

ಬಹು ನಿರೀಕ್ಷಿತ ಮೋದಿ ಸರಕಾರ 2.0ರ 2ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಕಾಶ್ಮೀರಿ ಕವನದೊಂದಿಗೆ ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ, ಕೃಷಿ ವಲಯಕ್ಕೆ ಆದ್ಯತೆ ನೀಡುವುದರೊಂದಿಗೆ, ಬೀಳುತ್ತಿರುವ ಆರ್ಥಿಕತೆಗೆ ಚೈತನ್ನ ನೀಡಲು ಒತ್ತು ನೀಡುವಂತೆ ಕಾಣುತ್ತಿದೆ. ಬಜೆಟ್‌ನ ವಿಶ್ಲೇಷಣಾ ಸುದ್ದಿಗಳಿಗೆ ಲೈವ್ ಬ್ಲಾಗ್ ಫಾಲೋ ಮಾಡಿ...
ಆಯವ್ಯಯ ಪರ ನಿರ್ಮಲಾ ಬ್ಯಾಟ್
ನಿರ್ಮಲಾ ಬಜೆಟ್‌ನಲ್ಲಿ ತಂತ್ರಜ್ಞಾನಕ್ಕೆ ದಕ್ಕಿದ್ದು ಇಷ್ಟು
ಇದು ತೇಪೆ ಹಾಕಿದ ಬಜೆಟ್ ಎಂದು ಸಿದ್ದರಾಮಯ್ಯ
ನಿರ್ಮಲಾ ಮಂಡಿಸಿದ್ದು ಟಿಂಕರಿಂಗ್ ಬಜೆಟ್
ಬಜೆಟ್‌ಗೆ ಎಚ್.ಡಿ.ರೇವಣ್ಣ ಹೇಳಿದ್ದಿಷ್ಟು
ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್
ನಿರ್ಮಲಾ ಬಜೆಟ್ ಮಂಡಿಸಿದ ಬಳಿಕ ಕುಸಿಯಿತು ಶೇರುಪೇಟೆ
ಇದೊಂದು ಅದ್ಭುತ ಬಜೆಟ್: ತೇಜಸ್ವಿ ಸೂರ್ಯ
ಬೆಂಗಳೂರು ಸೌತ್ ಸಂಸದ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದು ಹೇಗೆ?
ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!
ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ಷಣಾರ್ಧದಲ್ಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಒದಗಿಸುವ ವಿನೂತನ ವ್ಯವಸ್ಥೆ ಜಾರಿಗೆ ತಂದಿದೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು ಕೇಂದ್ರ ಬಜೆಟ್ ಮಮಡಿಸಿದ್ದಾರೆ. ಈ ವೇಳೆ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ್ದರೂ, ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಮಂಡನೆ ವೇಳೆ ನಿರ್ಮಲಾ ಆರೋಗ್ಯ ಹದಗೆಟ್ಟ ಪರಿಣಾಮ ಬಜೆಟ್ ನ ಕೊನೆಯ ಕೆಲ ಪುಟಗಳನ್ನು ಓದಲು ಆಗಲಿಲ್ಲ.
ಮುಂದೇನಾಯ್ತು? ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೆಲಕಚ್ಚಿದ ಕೈಗಾರಿಕೆ: ಉತ್ತೇಜನಕ್ಕೆ ಮೋದಿ ತಂತ್ರಗಾರಿಕೆ!
ನೆಲಕಚ್ಚಿರುವ ಕೈಗಾರಿಕಾ ವಲಯವನ್ನು ಮೇಲೆತ್ತಲು ಈ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಪ್ರಮುಖವಾಗಿ ಮೂಲ ಸೌಕರ್ಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಲಾಗಿದೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರ್ಮಲಾ ಶ್ಲಾಘಿಸಿದ ಯೋಗಿ!
ನಿರ್ಮಲಾ ಬಜೆಟ್ ಮಂಡಿಸಿದ ಬೆನ್ನಲ್ಲೇ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಣಕಾಸು ಸಚಿವೆ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. ಈ ಬಜೆಟ್ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಅಲ್ಲದೇ ಇದೊಂದು ಅಭಿವೃದ್ಧಿ ಹಾಗೂ ರೈತ ಪರ ಬಜೆಟ್ ಎಂದಿದ್ದಾರೆ.
ಬ್ಯಾಂಕ್ ಠೇವಣಿ ವಿಮೆ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ!
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರ್ಮಲಾ ಬಜೆಟ್‌ಗೆ ರಾಹುಲ್ ಪ್ರತಿಕ್ರಿಯೆ
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಯಿಸುತ್ತಾ 'ಇದು ಇತಿಹಾಸದಲ್ಲೇ ಅತಿ ಉದ್ದದ ಬಜೆಟ್ ಭಾಷಣವಾಗಿರಬಹುದು ಆದರೆ ಬಜೆಟ್‌ನ್ಲಲಿ ಏನೂ ಇಲ್ಲ, ಇದು ಸಂಪೂರ್ಣ ಟೊಳ್ಳು' ಎಂದಿದ್ದಾರೆ
ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ
ಮೋದಿ ಸರ್ಕಾರದ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಬಜೆಟ್ ಮಂಡಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಿದೆ. ತೆರಿಗೆದಾರರಿಗೂ ಸಿಹಿ ಸುದ್ದಿ ಕೊಟ್ಟಿರುವ ನಿರ್ಮಲಾ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಬಿಡಿ ಮುಟ್ಟಿಸಿದ್ದಾರೆ. ಹಾಗಾದ್ರೆ ಬಜೆಟ್ ಜಾರಿ ಬಳಿಕ ಯಾವುದೆಲ್ಲಾ ಅಗ್ಗವಾಗುತ್ತೆ? ಯಾವೆಲ್ಲಾ ವಸ್ತುಗಳು ದುಬಾರಿಯಾಗುತ್ತೆ? ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

LIC ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್: ಏನಾಗಲಿದೆ ನಿಮ್ಮ ಇನ್ಸೂರೆನ್ಸ್ ಪಾಲಿಸಿ?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.
ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಜೆಟ್ ಮಂಡನೆ ಮುಕ್ತಾಯ: ಕಲಾಪ ಸೋಮವಾರಕ್ಕೆ ಮುಂದೂಡಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಮಂಡನೆ ಬಳಿಕ ಈ ಕುರಿತಾದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ
ಆಮದು ವೈದ್ಯೋಪಕರಣಗಳ ಮೇಲೆ ಸೆಸ್ , ಚಪ್ಪಲಿ, ಪೀಠೋಪಕರಣ ದುಬಾರಿ
ಆಮದು ವೈದ್ಯೋಪಕರಣಗಳ ಮೇಲೆ ಸೆಸ್ , ಚಪ್ಪಲಿ, ಪೀಠೋಪಕರಣ ದುಬಾರಿ
ಸಹಕಾರಿ ಸಂಘಗಳ ಹೋರಾಟಕ್ಕೆ ಸಿಕ್ತು ದೊಡ್ಡ ಗೆಲುವು!
ಸಹಕಾರಿ ಸಂಘಗಳ ಹೋರಾಟಕ್ಕೆ ಸಿಕ್ತು ದೊಡ್ಡ ಗೆಲುವು, ಸಹಕಾರಿ ಸಂಘಗಳ ಮೇಲಿನ ತೆರಿಗೆ ಶೇ.30ರಿಂದ 22ಕ್ಕೆ ಇಳಿಕೆ, ತೆರಿಗೆ ಇಳಿಕೆಗೆ 16 ವರ್ಷದಿಂದ ನಡೆದ ಹೋರಾಟಕ್ಕೆ ಮನ್ನಣೆ
ಪಾನ್ ಕಾರ್ಡ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ
ಪಾನ್ ಕಾರ್ಡ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ!, ಆಧಾರ್ ಸಂಖ್ಯೆಯ ಆಧಾರದ ಮೇಲೆ ಪ್ಯಾನ್ ಕಾರ್ಡ್ ಮಂಜೂರು
ವಿವಾದದಿಂದ ವಿಶ್ವಾಸ ಸ್ಕೀಮ್!
ಬಾಕಿ ತೆರಿಗೆ ಕಟ್ಟಿದರೆ ದಂಡ, ಬಡ್ಡಿ ಮನ್ನಾಗೆ ಸ್ಕೀಮ್
ಯಾವುದೇ ವಿವಾದ ಇಲ್ಲ.. ಬರೀ ನಂಬಿಕೆ - ಸ್ಕೀಮ್
ಹಿಂದಿನ ಸಾಲಿನಲ್ಲಿ ಸಬ್ ಕಾ ವಿಶ್ವಾಸ್ ಹೆಸರಲ್ಲಿ ತೆರಿಗೆ\
ತೆರಿಗೆ ವಿವಾದ ಬಗೆಹರಿಸಲು ಹೊಸ ಸ್ಕೀಮ್ ಜಾರಿಗೆ
2020ರ ಮಾರ್ಚ್ ಒಳಗೆ ತೆರಿಗೆ ಬಾಕಿ ಕಟ್ಟಿದ್ರೆ ಸಾಕು
ತೆರಿಗೆ ಮೇಲೆ ಯಾವುದೇ ಬಡ್ಡಿ ವಿಧಿಸುವ ಪ್ರಶ್ನೆ ಇಲ್ಲ
ಯಾವುದೇ ದಂಡ, ಯಾವುದೇ ತೆರಿಗೆ ವಿಧಿಸುವುದಿಲ್ಲ
4.83 ಲಕ್ಷ ನೇರ ತೆರಿಗೆ ಕೇಸುಗಳ ಇತ್ಯರ್ಥಕ್ಕೆ ಸ್ಕೀಮ್


