ಡೇಟಾ ನವಯುಗದ ತೈಲ: ಬೊಗಸೆ ತುಂಬಾ ಮೊಗೆದು ಕೊಟ್ಟ ನಿರ್ಮಲಾ!

  • ಡಿಜಿಟಲ್ ಸಂಪರ್ಕ, ಕ್ವಾಂಟಮ್ ತಂತ್ರಜ್ಞಾನಕ್ಕೆ ನಿರ್ಮಲಾ ಒತ್ತು
  • ಭಾರತ್‌ನೆಟ್  ಫೈಬರ್ ಟು ಹೋಮ್ (FTH) ಸಂಪರ್ಕಕ್ಕೆ 6000 ಕೋಟಿ
  • ಕ್ವಾಂಟಮ್‌ ತಂತ್ರಜ್ಞಾನ ಅಭಿವೃದ್ಧಿಗೆ  8000 ಕೋಟಿ
     
Union Budget 2020 Nirmala Sitharaman Stresses Digital Quantum Tech

ನವದೆಹಲಿ (ಫೆ.01): 2020-21ರ ಬಜೆಟ್‌ನಲ್ಲಿ 21ನೇ ಶತಮಾನದ ತಂತ್ರಜ್ಞಾನಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಒತ್ತು ನೀಡಿದ್ದಾರೆ. ಡೇಟಾ (ಮಾಹಿತಿ) ಈ ಯುಗದ ತೈಲವಿದ್ದಂತೆ ಎಂದು ಹೇಳಿರುವ ನಿರ್ಮಲಾ, ದೇಶಾದ್ಯಂತ ಡೇಟಾ ಪಾರ್ಕ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸುವುದಾಗಿ ಹೇಳಿದ್ದಾರೆ.

ಮಾಹಿತಿ, ವಿಶ್ಲೇಷಣೆ, ಫಿನ್‌ಟೆಕ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ತಂತ್ರಜ್ಞಾನವು ಜೀವನಶೈಲಿಯ ಸ್ವರೂಪವನ್ನೇ ಬದಲಾಯಿಸಿದೆ.ಹಾಗಾಗಿ, ಗ್ರಾಮ ಪಂಚಾಯತ್‌ನಿಂದ ಹಿಡಿದು, ಪ್ರಾಥಮಿಕ ಆರೋಗ್ಯ ಕೇಂದ್ರ,  ಅಂಗನವಾಡಿ, ಸರ್ಕಾರಿ ಶಾಲೆ, ಅಂಚೆ ಕಚೇರಿ,  ಪೊಲೀಸ್ ಸ್ಟೇಷನ್‌ಗಳಿಗೆ  ಡಿಜಿಟಲ್ ಸಂಪರ್ಕ ಕಲ್ಪಿಸಲಾಗುವುದು, ಎಂದು ನಿರ್ಮಲಾ ಹೇಳಿದ್ದಾರೆ.

ಇದನ್ನೂ ಓದಿ | ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್: ಮನೆ ಮಾಡಿದ ನಿರಾಶೆ, ಹತಾಶೆ!...  

ಅದಕ್ಕಾಗಿ 1 ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಭಾರತ್‌ನೆಟ್  ಫೈಬರ್ ಟು ಹೋಮ್ (FTH) ಸಂಪರ್ಕದ ವ್ಯವಸ್ಥೆ ಒದಗಿಸಲಾಗುವುದು. 2020-21ನೇ ಸಾಲಿಗೆ 6000 ಕೋಟಿ ರೂ.ವನ್ನು ಮೀಸಲಿಡಲಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 3D ಪ್ರಿಂಟಿಂಗ್, ಡ್ರೋನ್, ಡಿಎನ್‌ಎ ಸ್ಟೋರೆಜ್, ಕ್ವಾಂಟಮ್ ಕಂಪ್ಯೂಟಿಂಗ್ ಜಗತ್ತಿನ ಹೊಸ ವ್ಯವಸ್ಥೆಗೆ ಭಾಷ್ಯ ಬರೆಯುತ್ತಿವೆ ಎಂದು ನಿರ್ಮಲಾ ಅಭಿಪ್ರಾಯಪಟ್ಟಿದ್ದಾರೆ. 

ಹಾಗಾಗಿ ಈ ತಂತ್ರಜ್ಞಾನಾಧಾರಿತ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡಲು ವಿವಿಧ  ಯೋಜನೆಗಳನ್ನು ಈ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ | ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!...

ಕಂಪ್ಯೂಟಿಂಗ್, ಕಮ್ಯೂನಿಕೆಶನ್ ಕ್ಷೇತ್ರ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಪ್ರಭಾವಶಾಲಿಯಾಗಿರುವ ಕ್ವಾಂಟಮ್‌ ತಂತ್ರಜ್ಞಾನಕ್ಕೆ ನಿರ್ಮಲಾ ಭಾರೀ ಒತ್ತು ನೀಡಿರುವುದು ಈ ಬಜೆಟ್‌ನ ವಿಶೇಷ. ರಾಷ್ಟ್ರೀಯ ಕ್ವಾಂಟಮ್ ತಂತ್ರಜ್ಞಾನ ಮತ್ತು ಅನ್ವಯಿಕ ಮಿಷನ್‌ಗೆ 5 ವರ್ಷ ಅವಧಿಗೆ 8000 ಕೋಟಿ ಮೀಸಲಿಟ್ಟಿರುವುದೇ ಅದಕ್ಕೆ ಸಾಕ್ಷಿ.

Latest Videos
Follow Us:
Download App:
  • android
  • ios