ಮುಂಬೈ(ಫೆ.01): ಅತ್ತ ಕೇಂದ್ರ ಬಜೆಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೇ ಇತ್ತ ಮುಂಬೈ ಷೇರು ಮಾರುಕಟ್ಟೆ ಕುಸಿತದ ಆಘಾತ ಅನುಭವಿಸಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣಕ್ಕೂ ಮೊದಲೇ ಮುಂಬೈ ಷೇರು ಮಾರುಕಟ್ಟೆ ಕುಸಿತ ಕಂಡಿದ್ದರೂ, ಬಜೆಟ್ ಭಾಷಣದ ಮಧ್ಯದಲ್ಲಿ ಮಾರುಕಟ್ಟೆ ಕೊಂಚ ಏರಿಕೆ ಕಂಡು ನಿರಾಳ ಭಾವ ಮೂಡಿಸಿತ್ತು.

ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!

ಆದರೆ ಬಜೆಟ್ ಭಾಷಣ ಪೂರ್ಣಗೊಂಡ ಬಳಿಕ ಮತ್ತೆ ಷೇಉ ಮಾರುಕಟ್ಟೆ ಕುಸಿತದ ಹಾದಿ ಹಿಡಿಯಿತು. ಕೇಂದ್ರ ಬಜೆಟ್‌ನಲ್ಲಿ ಕೈಗಾರಿಕೆ ವಲಯದ ಉತ್ತೇಜನಕ್ಕೆ ಅಷ್ಟೊಂದು ಮಹತ್ವ ನೀಡದಿರುವುದು ಹಾಗೂ ಎಲ್‌ಐಸಿಯಿಂದ ಸರ್ಕಾರದ ಬಂಡವಾಳ ಹಿಂತೆಗೆತನ ನಿರ್ಧಾರ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​ 987 ಅಂಕ ಕುಸಿತ ಕಂಡಿದ್ದು, 39,735.53 ಪಾಯಿಂಟ್ಸ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ನಿಫ್ಟಿ ಕೂಡ 300 ಅಂಕ ಕುಸಿತ ಕಂಡಿದ್ದು, ಬಜೆಟ್ ಮಂಡನೆ ಬಳಿಕವೂ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ.

ಬಜೆಟ್‌ನಲ್ಲಿ ಆಟೋಮೊಬೈಲ್​, ರಿಯಲ್​ ಎಸ್ಟೇಟ್​ ಸೇರಿ ಹಲವು ವಲಯಗಳ ಕಡೆಗಣನೆಯಾಗಿದ್ದು, ಇದರ ಪರಿಣಾಮವಾಗಿ ಈ ವಲಯದ ಷೇರುಗಳ ವಹಿವಾಟು ಮಂದಗತಿಯಲ್ಲಿ ಸಾಗಿದೆ ಎಂದು ಷೇರು ಮಾರುಕಟ್ಟೆ ಮೂಲಗಳು ಖಚಿತಪಡಿಸಿವೆ.

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ಆದಾಯ ತೆರಿಗೆ ಇಳಿಕೆ ಬಗ್ಗೆ ಮಧ್ಯಮ ವರ್ಗದಲ್ಲಿ ಗೊಂದಲವಿದ್ದು, ಬಜೆಟ್‌ನಲ್ಲಿ ಹೂಡಿಕೆದಾರರಿಗೆ ಲಾಭ ಗಳಿಕೆ ಯೋಜನೆಗಳಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.

"