LIC ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್: ಏನಾಗಲಿದೆ ನಿಮ್ಮ ಇನ್ಸೂರೆನ್ಸ್ ಪಾಲಿಸಿ?
ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ನಿರ್ಮಲಾ ಸೀತಾರಾಮನ್| LIC ಖಾಸಗೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರ| ಎಲ್‌ಐಸಿಯಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲು ನಿರ್ಧಾರ| ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾಹಿತಿ| ಎಲ್‌ಐಸಿಯಲ್ಲಿರುವ ಸರ್ಕಾರದ ಸ್ವಲ್ಪ ಷೇರು ಮಾರಾಟಕ್ಕೆ ಸಜ್ಜು| ಬಂಡವಾಳ ಹಿಂತೆಗತದ ಆಧಾರದಲ್ಲಿ ಎಲ್‌ಐಸಿ ಷೇರು ಮಾರಾಟ|
ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.
ಆದರೆ ಕೇಂದ್ರ ಸರ್ಕಾರಿ ಸ್ವಾಮಿತ್ವದ ಎಲ್‌ಐಸಿಯ ಖಾಸಗೀರಣಕ್ಕೆ ಮುಂದಡಿ ಇಟ್ಟಿರುವ ಮೋದಿ ಸರ್ಕರ, ಎಲ್‌ಐಸಿಯಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.
ಎಲ್‌ಐಸಿಯಲ್ಲಿರುವ ಸರ್ಕಾರದ ಸ್ವಲ್ಪ ಷೇರು ಮಾರಾಟಕ್ಕೆ ನಿರ್ಧರಿಸಲಾಗಿದ್ದು, ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ನಿರ್ಮಲಾ ಸೀತಾರಾಮನ್, ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಯನ್ನು ಖಾಸಗಿ ಹೂಡಿಕೆಯ ಮೂಲಕ ಮೇಲೆತ್ತುವುದು ಅನಿವಾರ್ಯ ಎಂದು ಹೇಳಿದ್ದಾರೆ.
ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!
ಎಲ್‌ಐಸಿಯಲ್ಲಿರುವ ಪಬ್ಲಿಕ್ ಷೇರ್ ಮಾರಾಟಕ್ಕೆ ಸರ್ಕಾರ ನಿರ್ಧರಿಸಿದ್ದು, ಇನಿಷಿಯಲ್ ಪಬ್ಲಿಕ್ ಆಫರ್‌ಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಜೀವ ವಿಮಾ ನಿಗಮದ ಸರ್ಕಾರಿ ಷೇರು ಮಾರಾಟಕ್ಕೆ ಸಜ್ಜಾಗಿದ್ದು, ಬಂಡವಾಳ ಹಿಂತೆಗತದ ಆಧಾರದಲ್ಲಿ ಎಲ್‌ಐಸಿ ಷೇರು ಮಾರಾಟ ಮಾಡಲು ನಿರ್ಧರಿಸಲಾಗಿದೆ.