Asianet Suvarna News Asianet Suvarna News

ತೈವಾನ್ ಚಿಪ್ ಉತ್ಪಾದನೆ ಘಟಕ ಭಾರತಕ್ಕೆ ತರಲು ಮಾತುಕತೆ; ಚೀನಾಗೆ ತಳಮಳ!

  • 7.6 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಚಿಪ್ ಪ್ಲಾಂಟ್
  • ತೈವಾನ್ ಚಿಪ್ ಘಟಕ ಭಾರತಕ್ಕೆ ತರಲು ಮಹತ್ವದ ಮಾತುಕತೆ
  • ಸೆಮಿಕಂಡಕ್ಟರ್ ಉತ್ಪಾದಿಸುವ ಘಟಕ ಮಾತುಕತೆ ಅಂತಿಮ ಹಂತಕ್ಕೆ
  • ಚೀನಾ ಕಣ್ಣು ಕೆಂಪಾಗಿಸಲಿದೆ ಭಾರತ ಹಾಗೂ ತೈವಾನ್ ಆತ್ಮೀಯತೆ
India talks with taiwan on chip manufacturing plant along with tariff reductions on components ckm
Author
Bengaluru, First Published Sep 27, 2021, 8:40 PM IST

ನವದೆಹಲಿ(ಸೆ.27): ಸೆಮಿಕಂಡಕ್ಟರ್ ಸೇರಿದಂತೆ ಚಿಪ್ ಉತ್ಪಾದನೆ ಘಟಕವನ್ನು ದಕ್ಷಿಣ ಏಷ್ಯಾಗೆ ತರಲು ಭಾರತ ತೈವಾನ್ ಜೊತೆ ಭಾರತ ಮಹತ್ವದ ಮಾತುಕತೆ ನಡೆಸಿದೆ. ಮಾತುಕತೆ ಅಂತಿಮ ಹಂತ ತಲುಪಿದೆ ಅನ್ನೋ ವಿಚಾರವೂ ಬೆಳಕಿಗೆ ಬಂದಿದೆ. ವರ್ಷದ ಅಂತ್ಯದ ವೇಳೆಗೆ ಸೆಮಿಕಂಡಕ್ಟರ್ ಉತ್ಪಾದಿಸುವ ಘಟಕದ ಮೇಲಿನ ಸುಂಕ ಕಡಿತಗೊಳಿಸಲು ಭಾರತ ನಿರ್ಧರಿಸಿದೆ. ಭಾರತದ ಈ ನಡೆ ಚೀನಾ ಜೊತೆ ಹೊಸ ಉದ್ವಿಗ್ನತೆ ಸಷ್ಟಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾಕ್ಕೆ ಶಾಕ್‌ ನೀಡಲು ತೈವಾನ್‌, ಭಾರತ ಒಪ್ಪಂದ?

ಟೆಲಿಕಾಂ ಕ್ಷೇತ್ರದ 5ಜಿ ಸಾಧನ, ಎಲೆಕ್ಟಿಕ್ ಕಾರುಗಳ ಸಾಧನೆ ಸೇರಿದಂತೆ ಚಿಪ್, ಸೆಮಿಕಂಡಕ್ಟರ್ ಸೇರಿದಂತೆ ಭಾರತ ಹಾಗೂ ಏಷ್ಯಾದ ಅಗತ್ಯತೆ ಪೂರೈಕೆ ಮಾಡಲು ಭಾರತ ಅತೀ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತಕ್ಕೆ ಅಂದಾಜು 7.5 ಮಿಲಿಯನ್ ಅಮೆರಿಕನ್ ಡಾಲರ್ ಚಿಪ್ ಪ್ಲಾಂಟ್ ಅಗತ್ಯವಿದೆ. ಹೀಗಾಗಿ ಕಳೆದ ವಾರದಲ್ಲಿ ತೈವಾನ್ ಅಧಿಕಾರಿಗಳು ಹಾಗೂ ಭಾರತದ ಅಧಿಕಾರಿಗಳು ಈ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

ನೆರೆಯ ತೈವಾನ್‌ ವಶಕ್ಕೆ ಚೀನಾದಿಂದ ಮಸಲತ್ತು?

ಭಾರತ ತೈವಾನ್ ಘಟಕ ಸ್ಥಾಪಿಸಲು ಎಲ್ಲಾ ನೆರವು ನೀಡಲು ಸಜ್ಜಾಗಿದೆ. 2023ರಿಂದ ಬಂಡವಾಲ ವೆಚ್ಚದ ಶೇಕಡಾ 50 ರಷ್ಟು ಹಣಕಾಸು ನೆರವು ನೀಡಲು ಮುಂದಾಗಿದೆ. ಇದರ ಜೊತೆಗೆ ತೆರಿಗೆ ವಿನಾಯಿತಿ ಹಾಗೂ ಇತರ ನೆರವು ನೀಡುವುದಾಗಿ ಭಾರತ ಹೇಳಿದೆ. 

ಭಾರತದಲ್ಲಿ ಚಿಪ್ ಪ್ಲಾಂಟ್ ಘಟಕ ಉತ್ಪಾದನೆಯಿಂದ ಭಾರತದ ಟೆಲಿಕಾಂ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಪೂರೈಕೆ ಸರಾಗವಾಗಲಿದೆ. ಇದರ ಜೊತೆಗೆ ಉತ್ಪಾದನೆ ವೆಚ್ಚವೂ ಕಡಿಮೆಯಾಗಲಿದೆ. ಇನ್ನು ಸ್ಥಳೀಯ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ. ಇನ್ನು ಭಾರತ ರಫ್ತಿನಲ್ಲಿ ಗಣನೀಯ ಏರಿಕೆ ಕಾಣಲಿದೆ.

ಚೀನಾಗೆ ಬಿಜೆಪಿ ನಾಯಕನ ತಿರುಗೇಟು; ಎಂಬಸ್ಸಿ ಮುಂದೆ ತೈವಾನ್ ರಾಷ್ಟೀಯ ದಿನಾಚರಣೆ ಪೋಸ್ಟರ್!

ಭಾರತ ಹಾಗೂ ತೈವಾನ್ ಈ ಕುರಿತು ಗೌಪ್ಯ ಮಾತುಕತೆ ನಡೆಸಿದೆ. ಭಾರತ ಹಾಗೂ ತೈವಾನ್ ಜೊತೆಗಿನ ಮಾತುಕತೆ ಹೊಸ ಸಂಘರ್ಷಕ್ಕೆ ಕಾರಣವಾಗಲಿದೆಯಾ ಅನ್ನೋ ಅನುಮಾನ ಕೂಡ ಕಾಡತೊಡಗಿದೆ. ತೈವಾನ್ ಚೀನಾದ ಅಧೀನ ಹಾಗೂ ಚೀನಾದ ಭಾಗ ಎಂದು ಹೇಳಿಕೊಂಡಿದೆ. ತೈವಾನ್ ಚೀನಾದಿಂದ ಸ್ವತಂತ್ರಗೊಳ್ಳಲು ಹಲವು ಹೋರಾಟಗಳನ್ನೇ ನಡೆಸಿದೆ. ತೈವಾನ್ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದೆ. ಇದೀಗ ತೈವಾನ್ ಜೊತೆಗಿನ ಚಿಪ್ ಪ್ಲಾಂಟ್ ಒಪ್ಪಂದ ಚೀನಾ ಕಣ್ಣು ಕೆಂಪಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Follow Us:
Download App:
  • android
  • ios