ನವದೆಹಲಿ(ಅ.10);  ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿದೆ. ಗಡಿ ಸಂಘರ್ಷದ ಕಾರಣ ಉಭಯ ದೇಶ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದೆ. ಇದರ ಬೆನ್ನಲ್ಲೇ ತೈವಾನ್ ರಾಷ್ಟ್ರೀಯ ದಿನಾಚರಣೆ ಇದೀಗ ಭಾರಿ ಸದ್ದು ಮಾಡುತ್ತಿದೆ. ತೈವಾನ್ ರಾಷ್ಟ್ರೀಯ ದಿನಾಚರಣೆ ಜಾಹೀರಾತು ಕುರಿತು ಭಾರತೀಯ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದ ಚೀನಾ ರಾಯಭಾರಿ ಕಚೇರಿಗೆ ಇದೀಗ ಬಿಜೆಪಿ ನಾಯಕ ತಿರುಗೇಟು ನೀಡಿದ್ದಾರೆ. ಕಚೇರಿ ಮುಂದೆ ತೈವಾನ್ ರಾಷ್ಟ್ರೀಯ ದಿನಾಚರಣೆ ಪೋಸ್ಟರ್ ಅಂಟಿಸಿದ್ದಾರೆ.

ಭಾರತೀಯ ಮಾಧ್ಯಮಕ್ಕೆ ಚೀನಾ ಎಚ್ಚರಿಕೆ, GET LOST ಎಂದ ತೈವಾನ್!.

ತೈವಾನ್ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ, ಭಾರತೀಯ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ತೈವಾನ್ ಪ್ರಧಾನಿ ಫೋಟೋ ಇರುವ ಈ ಜಾಹೀರಾತಿಗೆ ಚೀನಾ ಗರಂ ಆಗಿತ್ತು. ಬಳಿಕ ಚೀನಾ ರಾಯಭಾರಿ ಕಚೇರಿ ಭಾರತೀಯ ಮಾಧ್ಯಮಗಳಿಗೆ ನೊಟೀಸ್ ನೀಡಿತ್ತು. ತೈವಾನ್ ರಾಷ್ಟ್ರವಲ್ಲ, ಚೀನಾದ ಭಾಗ ಎಂದಿತ್ತು. ಇಷ್ಟೇ ಅಲ್ಲ ಭಾರತೀಯ ಮಾಧ್ಯಮಗಳು ನಿಯಮ ಉಲ್ಲಂಘಿಸಿಬಾರದು ಎಂದು ಸೂಚಿಸಿತ್ತು.

 

ಚೀನಾ ಸೂಚನೆ ಭಾರಿ ಸಂಚಲನ ಸೃಷ್ಟಿಸಿತ್ತು.  ಈ ಕುರಿತು ತೈವಾನ್ ವಿದೇಶಾಂಗ ಇಲಾಖೆ ಸಚಿವ, ತಕ್ಕ ತಿರುಗೇಟು ನೀಡಿದ್ದರು. ಭಾರತದಲ್ಲಿ ಮಾಧ್ಯಮದ ಮೇಲೆ ಯಾರ ಒತ್ತಡವಿಲ್ಲ, ಯಾರ ಹಿಡಿತದಲ್ಲೂ ಇಲ್ಲ. ಇದಕ್ಕೆ ತೈವಾನ್ ಆಪ್ತ ಭಾರತೀಯರ ಉತ್ತರ ಗೆಟ್ ಲಾಸ್ಟ್ ಎಂದಿದ್ದರು. ಈ ಘಟನೆಯಿಂದ ಚೀನಾ ವಿರುದ್ಧ ಭಾರತೀಯ ಆಕ್ರೋಶ ಹೆಚ್ಚಾಗಿತ್ತು. ಇದೀಗ ತೈವಾನ್ ರಾಷ್ಟ್ರೀಯ ದಿನಾಚರಣೆಗೆ ಶುಭಕೋರುತ್ತಾ ಬಿಜೆಪಿ ನಾಯಕ ತಜೀಂದರ್ ಸಿಂಗ್ ಪಾಲ್ ಬಾಗ, ಚೀನಾ ರಾಯಭಾರಿ ಕಚೇರಿ ಮುಂದೆ ಪೋಸ್ಟ್ ಅಂಟಿಸಿದ್ದಾರೆ

ಬಿಜಿಪಿ ನಾಯಕನ ಪೋಸ್ಟರ್ ಇದೀಗ ಚೀನಾಗೆ ಮತ್ತಷ್ಟು ಇರಿಸು ಮುರಿಸು ತಂದಿದೆ. ಸುಖಾಸುಮ್ಮನೆ ಭಾರತೀಯ ಮಾಧ್ಯಮಗಳಿಗೆ ವಾರ್ನಿಂಗ್ ನೀಡಿದ ಚೀನಾಗೆ ಇದೀಗ ಪೋಸ್ಟರ್ ಮತ್ತಷ್ಟು ಸಂಕಷ್ಟ ತಂದಿದೆ