ಕೃಷಿ ಸಂಸ್ಕರಿತ ಉತ್ಪನ್ನದ ರಫ್ತು 200 ಮಿಲಿಯನ್ ಅಮೇರಿಕನ್ ಡಾಲರ್ ಗಡಿ ದಾಟಿದೆಉಪ್ಪಿನಕಾಯಿ ಸೌತೆಕಾಯಿಯನ್ನು ಜಾಗತಿಕವಾಗಿ ಗರ್ಕಿನ್ಸ್ ಅಥವಾ ಕಾರ್ನಿಕಾನ್ ಎಂದು ಕರೆಯಲಾಗುತ್ತದೆ2020-21ರಲ್ಲಿ ಭಾರತವು 2,23,515 ಮೆಟ್ರಿಕ್ ಟನ್ ಸೌತೆಕಾಯಿ ಮತ್ತು ಗೆರ್ಕಿನ್‌ಗಳನ್ನು ರವಾನಿಸಿದೆ.

ನವದೆಹಲಿ (ಜ. 23): ಖಾದ್ಯದಲ್ಲಿ ಭಾರತೀಯರು ಬಹುವಾಗಿ ಬಳಕೆ ಮಾಡುವ ಸೌತೆಕಾಯಿಯ (cucumber) ಕುರಿತಾಗಿ ಹೆಮ್ಮೆ ಪಡುವಂಥ ಸುದ್ದಿ ಇದು. ಭಾರತ (India) ದೇಶವು ವಿಶ್ವದಲ್ಲಿಯೇ ಸೌತೆಕಾಯಿಯನ್ನು ರಫ್ತು ಮಾಡುವ ಅತೀದೊಡ್ಡ ದೊಡ್ಡ ದೇಶ ಎನ್ನುವ ದಾಖಲೆ ಮಾಡಿದೆ. ಸೌತೆಕಾಯಿ ಹಾಗೂ ಸೌತೆಕಾಯಿ ಇನ್ನೊಂದು ವಿಧ ಗರ್ಕಿನ್ಸ್ (ಉಪ್ಪಿನ ಕಾಯಿ ಸೌತೆ ಅಥವಾ ಎಳೇ ಸೌತೆ) ಉತ್ಪನ್ನದ ಅತೀದೊಡ್ಡ ರಫ್ತುದಾರನಾಗಿ (exporter) ಭಾರತ ಗುರುತಿಸಿಕೊಂಡಿದೆ. ಭಾರತವು ಏಪ್ರಿಲ್-ಅಕ್ಟೋಬರ್(2020-21) ಅವಧಿಯಲ್ಲಿ 114 ಮಿಲಿಯನ್ ಅಮೇರಿಕನ್ ಡಾಲರ್ ಮೌಲ್ಯದ 1, 23, 846 ಮೆಟ್ರಿಕ್ ಟನ್ ಗಳಷ್ಟು ಸೌತೇಕಾಯಿ ಹಾಗೂ ಕಾರ್ನಿಕಾನ್ಸ್ ಎಂದೂ ಕರೆಯಲ್ಪಡುವ ಗರ್ಕಿನ್ಸ್ (gherkins) ಅನ್ನು ರಫ್ತು ಮಾಡಿದೆ.ಕಳೆದ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ ಗೆರ್ಕಿನ್ಸ್ ಅಥವಾ ಕಾರ್ನಿಕಾನ್ಸ್ ಎಂದು ಕರೆಯಲ್ಪಡುವ ಕೃಷಿ ಸಂಸ್ಕರಿತ ಉತ್ಪನ್ನ- ಉಪ್ಪಿನಕಾಯಿ ಸೌತೆಕಾಯಿಯ ರಫ್ತಿನ 200 ಅಮೆರಿಕನ್ ಮಿಲಿಯನ್ ಡಾಲರ್ ಗಡಿಯನ್ನು ಭಾರತ ದಾಟಿದೆ.

2020-21 ರಲ್ಲಿ, ಭಾರತವು 2,23,515 ಮೆಟ್ರಿಕ್ ಟನ್ ಸೌತೆಕಾಯಿ ಮತ್ತು ಗರ್ಕಿನ್ಸ್ ಗಳನ್ನು 223 ಮಿಲಿಯನ್ ಅಮೇರಿಕನ್ ಡಾಲರ್ ಮೌಲ್ಯದಲ್ಲಿ ವಿಶ್ವದಾದ್ಯಂತ ರವಾನೆ ಮಾಡಿದೆ. ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ನಿರ್ದೇಶನಗಳನ್ನು ಅನುಸರಿಸಿ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಮೂಲಸೌಕರ್ಯ ಅಭಿವೃದ್ಧಿ, ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನ ಪ್ರಚಾರ ಮತ್ತು ಸಂಸ್ಕರಣೆಯಲ್ಲಿ ಆಹಾರ ಸುರಕ್ಷತಾ ನಿರ್ವಹಣಾ ವ್ಯವಸ್ಥೆಯನ್ನು ಅನುಸರಿಸುವಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದರಿಂದ ಇಂಥದ್ದೊಂದು ಸಾಧನೆ ಸಾಧ್ಯವಾಗಿದೆ. 

ಗರ್ಕಿನ್ ಕೃಷಿ, ಸಂಸ್ಕರಣೆ ಮತ್ತು ರಫ್ತು ಭಾರತದಲ್ಲಿ 1990 ರ ದಶಕದ ಆರಂಭದಲ್ಲಿ ಕರ್ನಾಟಕದಲ್ಲಿ (Karnataka)ಸಾಧಾರಣ ಪ್ರಚಾರದೊಂದಿಗೆ ಆರಂಭವಾಗಿತ್ತು ಆ ನಂತರ ನೆರೆಯ ರಾಜ್ಯಗಳಾದ ತಮಿಳುನಾಡು (Tamil Nadu), ಆಂಧ್ರ ಪ್ರದೇಶ (Andhra Pradesh) ಮತ್ತು ತೆಲಂಗಾಣಕ್ಕೆ (Telangana)ವಿಸ್ತರಿಸಿತು. ಪ್ರಪಂಚದ ಗರ್ಕಿನ್‌ಗೆ ಅಗತ್ಯವಿರುವ ಸುಮಾರು 15 ಪ್ರತಿಶತ ಉತ್ಪಾದನೆಯನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಗರ್ಕಿನ್ಸ್ ಅನ್ನು ಪ್ರಸ್ತುತ 20 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಅಮೆರಿಕ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸ್ಪೇನ್, ದಕ್ಷಿಣ ಕೊರಿಯಾ, ಕೆನಡಾ, ಜಪಾನ್, ಬೆಲ್ಜಿಯಂ, ರಷ್ಯಾ, ಚೀನಾ, ಶ್ರೀಲಂಕಾ ಹಾಗೂ ಇಸ್ರೇಲ್ ದೇಶಗಳಿಗೆ ಇವುಗಳ ರಫ್ತು ಆಗುತ್ತಿವೆ.

Scroll to load tweet…


ಕೇವಲ ರಫ್ತು ಮಾತ್ರವಲ್ಲದೆ, ಗರ್ಕಿನ್ ಉದ್ಯಮವು ಗ್ರಾಮೀಣ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ, 65,000 ಎಕರೆಗಳಷ್ಟು ವಾರ್ಷಿಕ ಉತ್ಪಾದನಾ ಪ್ರದೇಶವನ್ನು ಹೊಂದಿರುವ ಸುಮಾರು 90,000 ಸಣ್ಣ ಮತ್ತು ಕನಿಷ್ಠ ರೈತರಿಂದ ಗುತ್ತಿಗೆ ಬೇಸಾಯದ ಅಡಿಯಲ್ಲಿ ಗರ್ಕಿನ್ಸ್ ಗಳನ್ನು ಬೆಳೆಸಲಾಗುತ್ತದೆ. ಸಂಸ್ಕರಿಸಿದ ಗರ್ಕಿನ್ಸ್ ಗಳನ್ನು ಕೈಗಾರಿಕಾ ಕಚ್ಚಾ ವಸ್ತುವಾಗಿ ಮತ್ತು ತಿನ್ನಲು ಸಿದ್ಧವಾಗಿರುವ ಜಾಡಿಗಳಲ್ಲಿ ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಇನ್ನು ಬೃಹತ್ ಉತ್ಪಾದನೆಯು ಇನ್ನೂ ಹೆಚ್ಚಿನ ಶೇಕಡಾವಾರು ಗರ್ಕಿನ್ಸ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಭಾರತದಲ್ಲಿ, ಸುಮಾರು 51 ಪ್ರಮುಖ ಕಂಪನಿಗಳು ಡ್ರಮ್‌ಗಳು ಮತ್ತು ರೆಡಿ-ಟು-ಈಟ್ ಗ್ರಾಹಕ ಪ್ಯಾಕ್‌ಗಳಲ್ಲಿ ಗರ್ಕಿನ್‌ಗಳನ್ನು ಸಂಸ್ಕರಣೆ ಮಾಡಿ ರಫ್ತು ಮಾಡುತ್ತಿವೆ.

Food Secrets: ಟೊಮೇಟೊ ಸಾಸ್ ಮತ್ತು ಟೊಮೇಟೊ ಕೆಚಪ್ ಒಂದೇ ಅಲ್ಲ !
40 ರಿಂದ 80 ಸಾವಿರದವರೆಗೆ ಆದಾಯ: ಗರ್ಕಿನ್ಸ್ ಬೆಳೆಯುವ ರೈತ ಕನಿಷ್ಠ ಒಂದು ಎಕರೆಯಲ್ಲಿ 4 ಮೆಟ್ರಿಕ್ ಟನ್ ಗಳನ್ನು ಉತ್ಪಾದನೆ ಮಾಡುತ್ತಾರೆ. ಇದರ ಆದಾಯ ಕನಿಷ್ಠ 40 ರಿಂದ 80 ಸಾವಿರದವರೆಗೆ ಇರಲಿದೆ. ಈ ಗರ್ಕಿನ್ಸ್ ಗಳು 90 ದಿನಗಳ ಬೆಳೆ. ವಾರ್ಷಿಕವಾಗಿ ರೈತರು ಎರಡು ಬೆಳೆಗಳನ್ನು ಬೆಳೆಯಬಹುದಾಗಿದೆ. ವಿದೇಶಿ ಖರೀದಿದಾರರ ಅಗತ್ಯತೆಗಳನ್ನು ಪೂರೈಸಲು ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಕರಣಾ ಘಟಕಗಳನ್ನು ಇಲ್ಲಿ ಸ್ಥಾಪಿಸಲಾಗಿದೆ.

Union Budget 2022 ಜಿಎಸ್‌ಟಿ ಕಡಿತ, EVಗೆ ರಿಯಾಯ್ತಿ, ಬೂಸ್ಟರ್ ಡೋಸ್ ನಿರೀಕ್ಷೆಯಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ!
ಗರ್ಕಿನ್ ತಯಾರಿಕೆ ಮತ್ತು ರಫ್ತು ಮಾಡುವ ಎಲ್ಲಾ ಕಂಪನಿಗಳು ISO, BRC, IFS, FSSC 22000 ಪ್ರಮಾಣೀಕೃತ ಮತ್ತು HACCP ಪ್ರಮಾಣೀಕೃತ ಪ್ರಮಾಣಪತ್ರಗಳನ್ನು ಹೊಂದಿವೆ. ಅದರಲ್ಲೂ ಕೆಲವು ಕಂಪನಿಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನೂ ಅಳವಡಿಸಿಕೊಂಡಿದೆ. ಇದು ಉದ್ಯೋಗಿಗಳಿಗೆ ಎಲ್ಲಾ ಪ್ರಯೋಜನಗಳನ್ನು ನೀಡಲಾಗಿದೆ ಎನ್ನುವುದನ್ನು ಖಚಿತಪಡಿಸುತ್ತವೆ.