Asianet Suvarna News Asianet Suvarna News

Union Budget 2022 ಜಿಎಸ್‌ಟಿ ಕಡಿತ, EVಗೆ ರಿಯಾಯ್ತಿ, ಬೂಸ್ಟರ್ ಡೋಸ್ ನಿರೀಕ್ಷೆಯಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರ!

  • ಕೇಂದ್ರ ಬಜೆಟ್ ಮೇಲೆ ಭಾರತದ ಆಟೋ ಕ್ಷೇತ್ರದ ಚಿತ್ತ
  • ಮಾರಾಟ ಕುಸಿತ, ತೆರಿಗೆ ಸೇರಿದಂತೆ ಹಲವು ವಿನಾಯ್ತಿ ನಿರೀಕ್ಷೆ
  • ಆಟೋ ಮೊಬೈಲ್ ಕ್ಷೇತ್ರದಲ್ಲಿ GST 18% ಮೀರದಂತೆ ಕ್ರಮ
Union Budget 2022 Indian automobile sector is expecting booster dose to pushl slump industry ckm
Author
Bengaluru, First Published Jan 23, 2022, 8:43 PM IST

ನವದೆಹಲಿ(ಜ.23): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ವರ್ಷದ ಆಯವ್ಯಯಗಳ ಬಜೆಟ್ ಮಂಡಿಸಲು(Union Budget 2022) ಎಲ್ಲಾ ತಯಾರಿ ನಡೆಸಿದ್ದಾರೆ. ಫೆಬ್ರವರಿ 1 ರಂದು ಬಹುನಿರೀಕ್ಷಿತ ಕೇಂದ್ರ ಬಜೆಟ್ 2022 ಮಂಡನೆಯಾಗಲಿದೆ. ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆಗಳು ಅವಲಂಬನೆಗಳು ಹೆಚ್ಚಾಗಿದೆ. ಕೊರೋನಾ ಕಾರಣ ಆರ್ಥಿಕ ಹೊಡೆತ ಅನುಭವಿಸಿರುವ ಭಾರತದ ಹಲವು ಕ್ಷೇತ್ರಗಳು ಕೇಂದ್ರ ಬಜೆಟ್ ಮೇಲೆ ಕಣ್ಣಿಟ್ಟಿದೆ. ಇದರಲ್ಲಿ ಭಾರತದ ಆಟೋಮೊಬೈಲ್(Automobile Sector) ಕ್ಷೇತ್ರ ಕೂಡ ಒಂದು. ಈಗಾಗಲೇ ಹಲವು ಶಿಫಾರಸುಗಳನ್ನು ಮಾಡಿರುವ ಭಾರತೀಯ ಆಟೋ ಕ್ಷೇತ್ರ ಇದೀಗ ಬೂಸ್ಟರ್ ಡೋಸ್ ನಿರೀಕ್ಷೆಯಲ್ಲಿದೆ.

ಕೊರೋನಾ ಹೊಡೆತ(Coronavirus), ಲಾಕ್‌ಡೌನ್, ಆರ್ಥಿಕ ಹಿಂಜರಿತ, ಇಂಧನ ಬೆಲೆ ಏರಿಕೆ, ಕಚ್ಚಾವಸ್ತುಗಳ ಬೆಲೆ ಏರಿಕೆ, ಚಿಪ್ ಕೊರತೆ(Chip Shortage), ಆಮದು ಸುಂಕ ಸೇರಿದಂತೆ ಹಲವು ಕಾರಣಗಳಿಂದ ಭಾರತೀಯ ಆಟೋಮೊಬೈಲ್ ಕ್ಷೇತ್ರ ಸೊರಗಿದೆ. ವಾಹನ ಮಾರಾಟದಲ್ಲಿ ಕುಸಿತ ಕಂಡಿದೆ. ಹೀಗಾಗಿ ಬಹುತೇಕ ಆಟೋ ಕಂಪನಿಗಳು ಐಸಿಯುನಲ್ಲಿದೆ. ಹೀಗಾಗಿ ಈ ಬಾರಿಯ ಬಜೆಟ್‌ ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಬೂಸ್ಟರ್ ಡೋಸ್ ನೀಡಲಿದೆ ಅನ್ನೋ ವಿಶ್ವಾಸದಲ್ಲಿದೆ.

Budget 2022: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭ; ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಧಾನಿ ನರೇಂದ್ರ ಮೋದಿ(PM Narendra Modi) ಹಾಗೂ ಕೇಂದ್ರ ಹಣಕಾಸು ಇಲಾಖೆ ಬಜೆಟ್ ತಯಾರಿಗೂ ಮೊದಲು ಎಲ್ಲಾ ಉದ್ಯಮ ಕ್ಷೇತ್ರದ ದಿಗ್ಗಜರ ಜೊತೆ ಚರ್ಚೆ ನಡೆಸಿದೆ. ಉದ್ಯಮ ಕ್ಷೇತ್ರದವರಿಂದ  ಸಲಹೆಗಳನ್ನು ಪಡೆದುಕೊಂಡಿದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಆಸೋಸಿಯೇಶನ್(FADA) ಹಲವು ಸಲಹೆಗಳನ್ನು ನೀಡಿದೆ. ಈ ಮೂಲಕ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಸುಧಾರಣೆಗೆ ಮನವಿ ಮಾಡಿದೆ. 

ಈ ಬಾರಿಯ ಬಜೆಟ್‌ನಿಂದ ಭಾರತೀಯ ಆಟೋಮೊಬೈಲ್ ಕ್ಷೇತ್ರ ನಿರೀಕ್ಷಿಸುತ್ತಿರುವ ಬೂಸ್ಟರ್ ಡೋಸ್‌ನ ಹೈಲೈಟ್ಸ್:
ಆಟೋ ಮೊಬೈಲ್ ಕ್ಷೇತ್ರದಲ್ಲಿ GST 18% ಮೀರದಂತೆ ಕ್ರಮ
ರಫ್ತು ಹೆಚ್ಚಳ ಪ್ರೋತ್ಸಾಹಕ್ಕೆ RoDTEP ಲಾಭಂಶ ಶೇ.1ರಿಂದ ಹೆಚ್ಚಳ 
ಸರಕು ಸಾಗಾಣೆ ವಾಹನಗಳ ಬೇಡಿಕೆ ಹೆಚ್ಚಳಕ್ಕೆ ಸ್ಕ್ರಾಪ್ ನೀತಿ ಬದಲಾವಣೆ
ವಿದ್ಯುತ್ ಚಾಲಿತ ವಾಹನ ಉತ್ಪಾದಿಸುವ ಕಂಪನಿಗೆ ಟ್ಯಾಕ್ಸ್ ಹಾಲಿಡೇ
ವಾಹನ ತಯಾರಿಕಾ ಸಂಸ್ಥೆಗಳ ಮೇಲಿನ ಕಾರ್ಪೋರೇಟ್ ತೆರಿಗೆ ಕಡಿತ
ಸ್ಟಾರ್ಟ್ ಅಪ್ ಕಂಪನಿಗಳಿಗೆ LTCG ದರದಲ್ಲಿ ಮತ್ತಷ್ಟು ರಿಯಾಯ್ತಿ
ಸರಕು ವಹಿವಾಟು ತೆರಿಗೆ (CTT) ರದ್ದು ಮಾಡುವ ಸಾಧ್ಯತೆ

Budget 2022 Expectations: ಗೃಹ ಸಾಲದ ಬಡ್ಡಿ ಮೇಲೆ 5 ಲಕ್ಷ ರೂ. ಆದಾಯ ತೆರಿಗೆ ಕಡಿತದ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

ಭಾರತೀಯ ಆಟೋಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಲ್ಲಿ ಕೇಂದ್ರದ ಜಿಎಸ್‌ಟಿ ತೆರಿಗೆ ಕೂಡ ಒಂದಾಗಿದೆ. ಅತೀವ GST ತೆರಿಗೆಯಿಂದ ಆಟೋಕಂಪನಿಗಳಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದರಿಂದ ಕಡಿಮೆ ಬೆಲೆಯಲ್ಲಿ ಕಾರು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ವಾಹನ ಮಾರಾಟದಲ್ಲೂ ಕುಸಿತ ಹಾಗೂ ಉತ್ಪಾದನೆ ವೆಚ್ಚವೂ ಹೆಚ್ಚಳವಾಗುತ್ತಿದೆ. ಹೀಗಾಗಿ ಜಿಎಸ್‌ಟಿ ಶೇಕಡಾ 18 ಮೀರದಂತೆ ಕ್ರಮಕ್ಕೆ FADA ಆಗ್ರಹಿಸಿದೆ. ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಆಟೋ ಕ್ಷೇತ್ರದ ಮೇಲಿನ GST ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿ ಭಾರತದ ಆಟೋ ಕ್ಷೇತ್ರ ನಿಂತಿದೆ.

ದ್ವಿಚಕ್ರ ವಾಹನ ಐಷಾರಾಮಿ ವಸ್ತುವಲ್ಲ. ಇದು ಅಗತ್ಯತೆಯ ವಸ್ತುವಾಗಿದೆ. ಹೀಗಾಗಿ ದ್ವಿಚಕ್ರ ವಾಹನದ ಜಿಎಸ್‌ಟಿ ತೆರಿಗೆ ಶೇಕಡಾ 18 ಮೀರಬಾರದು. ಶೇಕಡಾ 28ರಷ್ಟು ಜಿಎಸ್‌ಟಿ ಹಾಗೂ ಶೇಕಡಾ 2 ರಷ್ಟು ಸೆಸ್ ತೆರಿಗೆ ಉತ್ತಮ ಕ್ರಮವಲ್ಲ ಎಂದು  FADA ಮನವಿ ಮಾಡಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ಆಟೋ ಕ್ಷೇತ್ರ ಅನಿವಾರ್ಯವಾಗಿ ಪ್ರತಿ 3 ರಿಂದ 4 ತಿಂಗಳಿಗೆ ವಾಹನದ ಬೆಲೆ ಏರಿಕೆ ಮಾಡುತ್ತಿದೆ. ಇದನ್ನು ನಿಯಂತ್ರಿಸಲು ಜಿಎಸ್‌ಟಿ ಕಡಿತ ಸೂಕ್ತ ಎಂದಿದೆ.

Union Budget 2022: ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ಕ್ಕೆ ಫಿಕ್ಸ್ ; ಜ. 31ರಿಂದ ಸಂಸತ್ತಿನ ಅಧಿವೇಶನ ಆರಂಭ

ಕಾರುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇಕಡಾ 5 ರಷ್ಟು ಕಡಿತಗೊಳಿಸಲು  FADA ಮನವಿ ಮಾಡಿದೆ. ಸದ್ಯ ಕಾರುಗಳ ಮೇಲೆ ಶೇಕಡಾ 12 ರಿಂದ 18 ಹಾಗೂ ಶೇಕಡಾ 28 ರಷ್ಟು ರಷ್ಟು ಜಿಎಸ್‌ಟಿ ತೆರಿಗೆ ಹಾಕಲಾಗುತ್ತಿದೆ. ಕಾರಿನ ಗಾತ್ರ, ಐಷಾರಾಮಿ ಆಧಾರಾದಲ್ಲಿ ಜಿಎಸ್‌ಟಿ ಹೆಚ್ಚಾಗಲಿದೆ. 

ಎಲೆಕ್ಟ್ರಿಕ್ ವಾಹನ ಉತ್ಪಾದನೆ:
ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಕಾರಣ ಭಾರತ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಇತರ ದೇಶಗಳ ಅವಲಂಬನೆ ಅಗತ್ಯವಾಗಿದೆ. ಪ್ರಮುಖವಾಗಿ ಬ್ಯಾಟರಿ ಉತ್ಪಾದನೆಯತ್ತ ಭಾರತವನ್ನು ಸದೃಢ ಮಾಡಬೇಕಿದೆ. ಭಾರತದಲ್ಲೇ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಉತ್ಪಾದನೆಗೆ ಬೆಂಬಲ ನೀಡಬೇಕು. ಇದರಿಂದ ಭಾರತ ಸ್ವಾವಲಂಬಿಯಾಗುವುದಲ್ಲದೇ ಇತರ ದೇಶಗ ಅವಲಂಬನೆ, ಆಮದು ಸುಂಕದ ಕಿರಿಕಿರಿ ತಪ್ಪಲಿದೆ.  ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಬೆಂಬಲ, ಸಬ್ಸಡಿಯ ಅಗತ್ಯವಿದೆ. LED ಬಲ್ಬ್ ಹಾಗೂ ಸೋಲಾರ್‌ಗೆ ನೀಡಿದ ಪೋತ್ಸಾಹ ಹಾಗೂ ಅಭಿಯಾನ ಎಲೆಕ್ಟ್ರಿಕ್ ವಾಹನಗಳಿಗೂ ಬೇಕಿದೆ. 

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಅದರಲ್ಲೂ ಸ್ಟಾರ್ಟ್ಅಪ್‌ಗೆ LTCG ದರದಲ್ಲಿ ಮತ್ತಷ್ಟು ರಿಯಾಯ್ತಿ ನೀಡಬೇಕಿದೆ. ಇದೇ ವೇಳೆ ಸರಕು ವಹಿವಾಟು ತೆರಿಗೆ (CTT) ರದ್ದು ಮಾಡಲು ಮನವಿ ಮಾಡಲಾಗಿದೆ. ಇದಕ್ಕೆ ಹಣಾಕಾಸು ಇಲಾಖೆ ಕೂಡ ಸ್ಪಂದಿಸಿದೆ. ಇತ್ತ ವಿದೇಶಕ್ಕೆ ವಾಹನಗಳ ರಫ್ತು ನೀತಿಯಲ್ಲೂ ಬದಲಾವಣೆ ಅವಶ್ಯಕತೆ ಇದೆ. ಹೆಚ್ಚಿನ ರಫ್ತಿಗೆ ಪ್ರೋತ್ಸಾಹ ನೀಡಬೇಕಿದೆ. ವಾಹನ ಗುಜುರಿ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಹೊಸ ವಾಹನಗಳ ಬೇಡಿಕೆ ಹೆಚ್ಚಿಸಲು ಮನವಿ ಮಾಡಿದೆ.
 

Follow Us:
Download App:
  • android
  • ios