Asianet Suvarna News Asianet Suvarna News

Food Secrets: ಟೊಮೇಟೊ ಸಾಸ್ ಮತ್ತು ಟೊಮೇಟೊ ಕೆಚಪ್ ಒಂದೇ ಅಲ್ಲ !

ಟೊಮೇಟೊ ಸಾಸ್ (Tomato Sauce) ಮತ್ತು ಟೊಮೇಟೊ ಕೆಚಪ್ (Tomato Ketchup) ಬಗ್ಗೆ ಹೇಳುವಾಗ ಸಾಮಾನ್ಯವಾಗಿ ಎಲ್ಲರೂ ಅದನ್ನು ಒಂದೇ ಎಂದು ಪರಿಗಣಿಸುತ್ತಾರೆ. ಕೆಚಪ್ ಮತ್ತು ಸಾಸ್ ನೋಡಲು ಸಹ ಒಂದೇ ರೀತಿಯಿರುವ ಕಾರಣ ಇವೆರಡನ್ನೂ ಬೇರೆ ಬೇರೆಯೆಂದು ಪ್ರತ್ಯೇಕಿಸಿ ತಿಳಿಯುವುದು ಕಷ್ಟ. ಆದರೆ, ಟೊಮೇಟೊ ಸಾಸ್  ಮತ್ತು ಟೊಮೆಟೊ ಕೆಚಪ್ ಒಂದೇ ಅಲ್ಲ.

Tomato Sauce And Tomato Ketchup Are Not Same
Author
Bengaluru, First Published Jan 22, 2022, 8:11 PM IST

ಟೊಮೇಟೊವನ್ನು ಸಾಮಾನ್ಯವಾಗಿ  ಎಲ್ಲರ ಅಡುಗೆಮನೆಯಲ್ಲೂ ಬಳಸಲಾಗುತ್ತದೆ. ಟೊಮೇಟೋ ಬಾತ್, ಟೊಮೇಟೋ ಚಟ್ನಿ, ಸ್ಯಾಂಡ್‌ವಿಚ್, ಸಾರು, ಸಾಂಬಾರು ತಯಾರಿಸುವಾಗಲ್ಲೆಲ್ಲಾ ಟೊಮೇಟೋವನ್ನು ಮುಖ್ಯವಾಗಿ ಬಳಸಲಾಗುತ್ತದೆ. ಇವಿಷ್ಟೇ ಅಲ್ಲದೆ,ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಟೊಮೇಟೋ ಸಾಸ್ (Tomato Sauce) ಮತ್ತು ಟೊಮೇಟೋ ಕೆಚಪ್ (Tomato Ketchup) ಇದ್ದೇ ಇರುತ್ತದೆ. ಮನೆಯಲ್ಲಿರದಿದ್ದರೂ ಹೊರಗಡೆ ಏನಾದರೂ ತಿನ್ಲುವಾಗಲಾದರೂ ಕೆಚಪ್ ಅಥವಾ ಸಾಸ್ ಅನ್ನು ತಿಂದಿರುತ್ತೇವೆ. ಆದ್ರೆ ತಿಂದಿದ್ದು ಸಾಸ್ ಅಲ್ಲ ಕೆಚಪ್ ಅನ್ನೋ ಬಗ್ಗೆ ಹಲವು ಸಾರಿ ಕನ್ ಫ್ಯೂಶನ್ ಆಗೋದಿದೆ. ಹೆಚ್ಚಿನವರು ಕೆಚಪ್ ಮತ್ತು ಸಾಸ್ ಒಂದೇ ಎಂದು ತಿಳಿದುಕೊಂಡಿದ್ದಾರೆ. ಆದ್ರೆ ಅಸಲಿಗೆ ಟೊಮೇಟೊ ಸಾಸ್ ಮತ್ತು ಟೊಮೆಟೊ ಕೆಚಪ್ ಒಂದೇ ಅಲ್ಲ. ಹಾಗಿದ್ರೆ, ಟೊಮೇಟೊ ಸಾಸ್ ಮತ್ತು ಕೆಚಪ್ ನಡುವಿನ ವ್ಯತ್ಯಾಸವೇನು ?

ಟೊಮೇಟೋದಿಂದ ಕೆಚಪ್ ಹಾಗೂ ಸಾಸ್ ಎರಡನ್ನೂ ತಯಾರಿಸಬಹುದು. ಆದ್ರೆ ಕೆಚಪ್ ಹಾಗೂ ಸಾಸ್ ಎರಡೂ ಬೇರೆ ಬೇರೆ. ಎರಡರ ರುಚಿಯೂ ವ್ಯತ್ಯಸ್ತವಾಗಿದೆ. ಕೆಚಪ್, ಸಿಹಿ (Sweet) ಮತ್ತು ಹುಳಿಯಾದ ಪರಿಮಳವನ್ನು ಹೊಂದಿದೆ. ಆದ್ರೆ ಸಾಸ್ ಹೆಚ್ಚು ಹುಳಿಯಾಗಿರುತ್ತದೆ. ಸಾಸ್, ಒಂದು ದಪ್ಪವಾದ ದ್ರವವಾಗಿದ್ದು, ಆಹಾರದೊಂದಿಗೆ ಬಡಿಸಲಾಗುತ್ತದೆ, ಸಾಮಾನ್ಯವಾಗಿ ಖಾರದ ಸ್ನ್ಯಾಕ್ಸ್‌ಗಳನ್ನು ತಿನ್ನುವಾಗ ಇದನ್ನು ಬಳಸಲಾಗುತ್ತದೆ. ಕೆಚಪ್ ಅನ್ನು ಹೆಚ್ಚಾಗಿ ಕಾಂಡಿಮೆಂಟ್ ಅಥವಾ ಡಿಪ್ ಆಗಿ ಬಳಸಲಾಗುತ್ತದೆ. ಆದರೆ ಇತರ ವಿಧಾನಗಳಲ್ಲಿಯೂ ಬಳಸಬಹುದು. ಇದು ಸಿಹಿ, ಖಾರ ಮತ್ತು ಕಟುವಾಗಿರುತ್ತದೆ. ಸಾಸ್ ಒಂದು ಕಾಂಡಿಮೆಂಟ್ ಆಗಿರಬಹುದು, ಆದರೆ ಎಲ್ಲಾ ಕಾಂಡಿಮೆಂಟ್ಸ್ ಸಾಸ್ ಆಗಿರುವುದಿಲ್ಲ.

Side Effects of Ketchup: ಬೇಕಾಬಿಟ್ಟಿ ಟೊಮೇಟೊ ಕೆಚಪ್ ತಿಂದ್ರೆ ಆರೋಗ್ಯಕ್ಕೆ ತೊಂದ್ರೆ !

ಕೆಚಪ್ ಮತ್ತು ಸಾಸ್ ಬೇರೆ ಬೇರೆ !
ಕೆಚಪ್ ಪದವು ಚೀನೀ ‘ಕೊಚಿಯಾಪ್‌’ ಎಂಬ ಪದದಿಂದದ ಹುಟ್ಟಿಕೊಂಡಿದೆ. ಇದರ್ಥ 'ಮೀನಿನ ಉಪ್ಪುನೀರು' ಅಥವಾ 'ಮಸಾಲೆಯುಕ್ತ' ಎಂಬುದಾಗಿದೆ. ಸಾಸ್ ಎಂಬ ಪದವು ಲ್ಯಾಟಿನ್ ಪದ ‘ಸಲ್ಸಾಸ್‌’ನಿಂದ ಬಂದಿದೆ. ಇದರರ್ಥ 'ಉಪ್ಪುಸಹಿತ' ಎಂಬುದಾಗಿದೆ. ಕೆಚಪ್ ಅನ್ನು ಮೂಲತಃ ಹದಿನೇಳನೇ ಶತಮಾನದಲ್ಲಿ ಕಂಡುಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮೀನಿನ ಉಪ್ಪುನೀರು, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಮುಖ್ಯ ಪದಾರ್ಥಗಳಾಗಿ ಒಳಗೊಂಡಿರುವ ಸಾಸ್‌ಗೆ ಸಂಬಂಧಿಸಿದೆ. ಹದಿನೆಂಟನೇ ಮತ್ತು ಹತ್ತೊಂಬತ್ತನೇ ಶತಮಾನದಲ್ಲಿ, ವಿನೇಗರ್‌ ನೊಂದಿಗೆ ಎಲ್ಲಾ ಸಾಸ್‌ಗಳನ್ನು ಪ್ರಮುಖ ಪದಾರ್ಥಗಳಲ್ಲಿ ಒಂದಾಗಿ ಉಲ್ಲೇಖಿಸಲು ಈ ಪದವನ್ನು ಬಳಸಲಾಗುತ್ತಿತ್ತು. ಮತ್ತು ಇದು 20ನೇ ಶತಮಾನದ ಆರಂಭದಲ್ಲಿ ಮಾತ್ರ, ಇದು ಟೊಮೇಟೊ ರಸದೊಂದಿಗೆ ಸಂಬಂಧಿಸಿದೆ. 

ಕೆಚಪ್ ಮತ್ತು ಸಾಸ್ ನಡುವಿನ ವ್ಯತ್ಯಾಸಗಳು
ಕೆಚಪ್ ಅನ್ನು ಟೊಮೇಟೊ, ಸಕ್ಕರೆ, ವಿನೆಗರ್, ಅಸಿಟಿಕ್ ಆಮ್ಲ ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ. ಆದರೆ, ಟೊಮೇಟೊ ಸಾಸ್ ಅನ್ನು ಟೊಮೇಟೊ, ಎಣ್ಣೆ, ಮಾಂಸ ಅಥವಾ ತರಕಾರಿ ಸ್ಟಾಕ್, ಮಸಾಲೆಗಳಿಂದ ತಯಾರಿಸಲಾಗುತ್ತದೆ . ಮತ್ತು ಸಾಸ್ ತಯಾರಿಸುವಾಗ ವಿನೇಗರ್ ಅನ್ನು ಎಂದಿಗೂ ಬಳಸುವುದಿಲ್ಲ. ಕೆಚಪ್ ಸ್ವಭಾವತಃ ತಣ್ಣಗಿರುತ್ತದೆ. ಮತ್ತು ಹೀಗೆ ತಣ್ಣಗಾಗಿಯೇ ಬಡಿಸಲಾಗುತ್ತದೆ. ಆದರೆ ಎಲ್ಲಾ ವಿಧದ ಸಾಸ್‌ಗಳನ್ನು ಬಿಸಿಯಾಗಿ ನೀಡಲಾಗುತ್ತದೆ. 

Winter Food: ನಾಲಿಗೆ ಚಪ್ಪರಿಸುತ್ತಲೇ ಇರಬೇಕಿನಿಸೋ ರುಚಿ ರುಚೀ ಟೊಮ್ಯಾಟೋ ಕಾಯಿ ಚಟ್ನಿ

ಕೆಚಪ್ ಅನ್ನು ವಿವಿಧ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಆದರೆ ಸಾಸ್ ಅನ್ನು ಸಾಮಾನ್ಯವಾಗಿ ಮಸಾಲೆಗಳಿಲ್ಲದೆ ತಯಾರಿಸಲಾಗುತ್ತದೆ. ಇವೆರಡರ ನಡುವಿನ ವ್ಯತ್ಯಾಸದ ಮತ್ತೊಂದು ಪ್ರಮುಖ ಅಂಶವೆಂದರೆ, ಸಾಸ್ ಸಾಮಾನ್ಯವಾಗಿ ಸಕ್ಕರೆಯನ್ನು ಹೊಂದಿರುವುದಿಲ್ಲ ಆದರೆ ಕೆಚಪ್ ನಿರ್ದಿಷ್ಟ ಪ್ರಮಾಣದ ಸಕ್ಕರೆ ಮತ್ತು ಇತರ ಸಿಹಿ ಮಸಾಲೆಗಳನ್ನು ಹೊಂದಿರುತ್ತದೆ.  ಅಧ್ಯಯನಗಳ ಪ್ರಕಾರ, ಕೆಚಪ್ ಎರಡರಲ್ಲಿ ಉತ್ತಮವಾದ, ಆರೋಗ್ಯಕರ ಆಯ್ಕೆಯಾಗಿದೆ

Follow Us:
Download App:
  • android
  • ios