56000 ದಾಟಿದ ಚಿನ್ನ ಸಾರ್ವಕಾಲಿಕ ದಾಖಲೆ: 73000ದ ಸನಿಹ ಬೆಳ್ಳಿ!

56000 ದಾಟಿದ ಚಿನ್ನ ಸಾರ್ವಕಾಲಿಕ ದಾಖಲೆ: 73000ದ ಸನಿಹ ಬೆಳ್ಳಿ| ಚಿನ್ನದ ದರ ಪ್ರತಿ 10 ಗ್ರಾಂ 1365 ರೂ ಹಾಗೂ ಬೆಳ್ಳಿಯ ದರ ಕೆಜಿಗೆ 5975 ರೂ. ಏರಿಕೆ 

Gold price rally unstoppable hits fresh all time high

ನವದೆಹಲಿ(A.೦೬): ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ ಉಂಟಾಗಿದ್ದು, ಬುಧವಾರ ದೆಹಲಿಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ ರೂ.1365 ಹಾಗೂ ಬೆಳ್ಳಿಯ ದರ ಕೆಜಿಗೆ 5975 ರೂ ಏರಿಕೆ ಕಂಡಿದೆ. ಆ ಮೂಲಕ ಚಿನ್ನದ ದರ 10 ಗ್ರಾಂಗೆ 56,181ಕ್ಕೆ ಮುಟ್ಟಿದರೆ, ಕೇಜಿ ಬೆಳ್ಳಿ ದರ 66,754ಕ್ಕೆ ಬಂದು ತಲುಪಿದೆ.

ಯಾವುದೇ ಕಂಪನಿ ಟಿಕ್‌ಟಾಕ್ ಖರೀದಿಸಿದರೆ ಸರ್ಕಾರಕ್ಕೆ ಪಾಲು ನೀಡಬೇಕು; ನಿರ್ಧಾರ ಸಮರ್ಥಿಸಿದ ಟ್ರಂಪ್!

ಇನ್ನು ಮುಂಬೈನಲ್ಲಿ ಹತ್ತು ಗ್ರಾಂ ಚಿನ್ನದ ದರ 1100 ಏರಿಕೆಯಾಗಿ ರೂ 53400ಗೆ ತಲುಪಿದೆ. ಕೇಜಿ ಬೆಳ್ಳಿ ದರದಲ್ಲಿ ರೂ 6450 ಏರಿಕೆಯಾಗಿ .71,500ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ದರ ಹೆಚ್ಚಳದ ಪರಿಣಾಮ ದೇಶೀಯ ಮಾರುಕಟ್ಟೆಗೂ ತಟ್ಟಿದೆ. ಹೀಗಾಗಿ ದರದಲ್ಲಿ ಭಾರೀ ಏರಿಕೆ ಉಂಟಾಗಿದೆ.

ಕಾರಣ ಏನು?:

ಮಾಚ್‌ರ್‍ ತಿಂಗಳ ಲಾಕ್‌ಡೌನ್‌ ನಂತರ ಬರೋಬ್ಬರಿ ಶೇ.60ರಷ್ಟುಬೆಲೆ ಹೆಚ್ಚಾಗಿದೆ. ಲಾಕ್‌ಡೌನ್‌ಗೂ ಮೊದಲು 22 ಕ್ಯಾರೆಟ್‌ 1 ಗ್ರಾಂ. ಚಿನ್ನ 3500 ರಿಂದ 3800 ರು. ಇತ್ತು. ಈಗ 22 ಕ್ಯಾರೆಟ್‌ 1 ಗ್ರಾಂ. 4,965 ರು. ಆಗಿದೆ. ಈ ಹಿಂದೆ ಬೆಳ್ಳಿ 1 ಗ್ರಾಂ. 40 ರು. ಇದ್ದದ್ದು, ಈಗ 65 ರು. ಆಗಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರದ ಬಿಕ್ಕಟ್ಟಿನಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ ಎಂದು ಕರ್ನಾಟಕ ಜ್ಯುವೆಲ​ರ್‍ಸ್ ಅಸೋಷಿಯೇಷನ್‌ ಅಧ್ಯಕ್ಷ ಟಿ.ಎ.ಶರವಣ ಮಾಹಿತಿ ನೀಡಿದರು.

ನಟ ಸುಶಾಂತ್‌ ಸಿಂಗ್ ರಜಪೂತ್ ಸಾವು: ಈಗ ಇ.ಡಿ. ಎಂಟ್ರಿ, ಪ್ರೇಯಸಿಗೆ ಸಂಕಷ್ಟ

‘ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ 65,000 ರು. ಮುಟ್ಟುವ ನಿರೀಕ್ಷೆ ಇದೆ. ಬೆಳ್ಳಿ 1 ಕೆ.ಜಿ. 75 ಸಾವಿರ ತಲುಪಬಹುದು. ಜನವರಿ ನಂತರ ಬೆಲೆ ಇಳಿಕೆಯಾಗುವ ಸೂಚನೆಗಳಿವೆ. ಜನರು ಅಗತ್ಯಕ್ಕೆ ತಕ್ಕಷ್ಟುಮಾತ್ರ ಖರೀದಿಸಬೇಕು. ವರಮಹಾಲಕ್ಷ್ಮಿ ಹಬ್ಬಕ್ಕೆ ನಮ್ಮ ಶಾಖೆಗಳಲ್ಲಿ 1 ಗ್ರಾಂ ಚಿನ್ನದ ಆಭರಣ ಖರೀದಿಸಿದರೆ, ಅಷ್ಟೇ ತೂಕದ ಬೆಳ್ಳಿ ನಾಣ್ಯ ಸಿಗಲಿದೆ. ವೇಸ್ಟೇಜ್‌ ಹಾಗೂ ಸ್ಟೋನ್‌ ಚಾರ್ಜಸ್‌ ಇರುವುದಿಲ್ಲ. ಹಬ್ಬಕ್ಕೆ ಲಕ್ಷ್ಮಿ ಮುಖವಾಡವಿರುವ ನೆಕ್ಲೆಸ್‌, ಡಾಬು-ಲಾಕ್‌ಚೈನ್‌, ಹಾರ, ಬಳೆಗಳು, ಆ್ಯಂಟಿಕ್‌ ಮತ್ತು ಟೆಂಪಲ್‌ ಜ್ಯುವೆಲರಿಗಳು ಖರೀದಿಯಾಗುತ್ತಿವೆ. ಕಾರ್ಮಿಕರ ಕೊರತೆಯಿಂದ ಬೇಡಿಕೆಗೆ ತಕ್ಕಷ್ಟುತಯಾರಿಕೆ ನಡೆಯುತ್ತಿಲ್ಲ’ ಎನ್ನುತ್ತಾರೆ ಟಿ.ಎ.ಶರವಣ.

Latest Videos
Follow Us:
Download App:
  • android
  • ios