Asianet Suvarna News Asianet Suvarna News

ಪ್ರಾಮಾಣಿಕರಿಗೆ ಮೋದಿ ಗೌರವ: 'ತೆರಿಗೆದಾರ ಚಾರ್ಟರ್‌'ನಲ್ಲಿ ಮಹತ್ವದ ಬದಲಾವಣೆ!

ಜನ ಸಾಮಾನ್ಯರ ಪ್ರಾಮಾಣಿಕತೆ ಮೇಲೆ ನಂಬಿಕೆ| ಪ್ರಮಾಣಿಕರಿಗೆ ಮೋದಿ ಗೌರವ| ಹೊಸ ಹಂತದ ಟ್ಯಾಕ್ಸ್ ಸುಧಾರಣೆ| ಪಾರದರ್ಶಕ ತೆರಿಗೆ ಪ್ರಾಮಾಣಿಕರಿಗೆ ಗೌರವ

PM Narendra Modi launches platform for Transparent Taxation
Author
Bangalore, First Published Aug 13, 2020, 11:42 AM IST

ನವದೆಹಲಿ(ಆ.13) ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಹಾಗೂ ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ತೆರಿಗೆದಾರಸ್ನೇಹಿ ಆಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ.

"

ಪಾರದರ್ಶಕ ತೆರಿಗೆ ಪ್ರಾಮಾಣಿಕರಿಗೆ ಗೌರವವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ ಸಾಮಾನ್ಯರ ಪ್ರಾಮಾಣಿಕತೆ ಮೇಲೆ ನಂಬಿಕೆ ಇದೆ ಎಂದಿದ್ದಾರೆ ಹಾಗೂ ಹೊಸ ಹಂತದ ಟ್ಯಾಕ್ಸ್ ಸುಧಾರಣೆ ಜಾರಿಗೊಳಿಸಿದ್ದಾರೆ.

ಪ್ರಧಾನಿಯಿಂದ ತೆರಿಗೆ ಸುಧಾರಣೆ ಪ್ರಕಟ!

ಮೋದಿ ಭಾಷಣದ ಮುಖ್ಯಾಂಗಳು:

* ವ್ಯವಸ್ಥಿತ ಸುಧಾರಣೆಯ ಮತ್ತೊಂದು ಹಂತಕ್ಕೆ ತಲುಪಿದೆ. ದೇಶದಲ್ಲಿ ವ್ಯವಸ್ಥಿತ ಸುಧಾರಣೆಯ ಸರಣಿ ಆರಂಭವಾಗಿದೆ. ಅದರ ಭಾಗವಾಗಿ ಇಂದಿನ ಯೋಜನೆ ಜಾರಿಯಾಗಿದೆ.

* ಅಸೆಸ್​ಮೆಂಟ್, ದೂರು, ಯಾವ ಪ್ರಕ್ರಿಯೆಯೂ ಮುಖಾಮುಖಿ ಇಲ್ಲ. ಅಧಿಕಾರಿ- ತೆರಿಗೆದಾರ ನಡುವೆ ನೇರ ಸಂಪರ್ಕ ಇಲ್ಲ. ಮುಖರಹಿತ ತೆರಿಗೆ ನಿರ್ಧರಣಾ ನಿಯಮ ಜಾರಿಗೊಳಿಸಲಾಗಿದ್ದು, ಭಯರಹಿತ, ಪ್ರಾಮಾಣಿಕ ತೆರಿಗೆ ವ್ಯವಸ್ಥೆ ಜಾರಿ. ಈ ವ್ಯವಸ್ಥೆ ಜಾರಿಗೆ ಕಾರಣರಾದವರಿಗೆ ಐಟಿ ಸಿಬ್ಬಂದಿಗೆ ಮೋದಿ ಅಭಿನಂದನೆ.

* 6 ವರ್ಷಗಳಲ್ಲಿ ನಮ್ಮ ಆದ್ಯತೆ ಬ್ಯಾಂಕಿಂಗ್​​ ವ್ಯವಸ್ಥೆ, ಹಣಕಾಸು ವ್ಯವಸ್ಥೆ ಬ್ಯಾಂಕಿಂಗ್​​ಗೆ ತರುವುದು . ಅಭದ್ರ ವಾತಾವರಣ ಭದ್ರಗೊಳಿಸುವುದಾಗಿತ್ತು. ಈಗ ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವುದು ಅಗತ್ಯ, ಇದ್ಕಾಗಿ ಪ್ರಾಮಾಣಿಕ ತೆರಿಗೆದಾರರ ಜೀವನ ಸರಳಗೊಳ್ಳಬೇಕು. ಅವರ ಜೀವನ ಸರಳಗೊಂಡಾಗ, ದೇಶವೂ ಮುಂದುವರಿಯುತ್ತದೆ.

ಈ 10 ರಾಜ್ಯಗಳು ಕೊರೋನಾ ಗೆದ್ದರೆ ದೇಶ ಗೆದ್ದಂತೆ: ಪಿಎಂ ಮೋದಿ!

* ತೆರಿಗೆ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆಗೊಳಿಸುವ ಪ್ರಯತ್ನ ಮಾಡಲಾಗಿದೆ. ಪ್ರತಿ ಯೋಜನೆ ಜನ ಕೇಂದ್ರಿತವಾಗಿರಬೇಕು. ಈ ಮುಂಚೆ ಅದು ಸರ್ಕಾರ ಕೇಂದ್ರಿತ, ಅಧಿಕಾರ ಕೇಂದ್ರಿತವಾಗಿತ್ತು. ಅಡ್ಡದಾರಿಗಳಿಂದ ಸಾಧನೆ, ಸುಧಾರಣೆ ಅಸಾಧ್ಯ. ತಪ್ಪು ದಾರಿಗಳಿಂದ ಗುರಿ ತಲುಪುವ ಕಾಲ ಈಗಿಲ್ಲ.

* ಈ ಬದಲಾವಣೆ ಸಾಧ್ಯವಾಗುತ್ತಿರುವುದು ಹೇಗೆ ? ಇದು ಶಕ್ತಿ ಮತ್ತು ಶಿಕ್ಷೆ ಭಯದಿಂದ ಬಂದಿರುವುದಲ್ಲ. ಸರ್ಕಾರದ ನೀತಿ ಸ್ಪಷ್ಟವಿದ್ದಾಗ ಗೊಂದಲ ಇರಲ್ಲ. ಜನಸಾಮಾನ್ಯರ ಪ್ರಾಮಾಣಿಕತೆ ಮೇಲೆ ನಂಬಿಕೆ ಇದೆ. ಸರ್ಕಾರಿ ವ್ಯವಸ್ಥೆಯಲ್ಲಿ ಜನರ ಹಸ್ತಕ್ಷೇಪ ಕಡಿಮೆ ಇದೆ. ತಂತ್ರಜ್ಞಾನ ಆಧರಿಸಿ ಕೆಲಸ ಮಾಡುವುದು ಟೆಂಡರ್​ನಿಂದ ಸೇವೆವರೆಗೂ ತಂತ್ರಜ್ಞಾನ ಬಳಕೆಯಾಗುತ್ತಿದೆ.

* ಪ್ರಾಮಾಣಿಕತೆ ಕಸುಬುದಾರಿಕೆಗೆ ಗೌರವ ನೀಡಲಾಗುತ್ತಿದೆ. ಈ ಮುಂಚೆ ಅನಿವಾರ್ಯತೆ, ಒತ್ತಡದಿಂದ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಅವುಗಳನ್ನೇ ಸುಧಾರಣೆ ಎಂದು ಕರೆಯಲಾಗುತ್ತಿತ್ತು. ಈಗ ಚಿಂತನೆ ಮತ್ತು ಕಾರ್ಯವೈಖರಿ ಎರಡೂ ಬದಲಾಗಿದೆ. ಸುಧಾರಣೆ ನೀತಿ ಆಧಾರಿತವಾಗಿರಬೇಕು, ತುಂಡು ತುಂಡಾಗಿರಬಾರದು, ಒಂದು ಸುಧಾರಣೆ ಮತ್ತೊಂದು ಸುಧಾರಣೆಗೆ ದಾರಿಯಾಗಬೇಕು. ಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿಬೇಕು.

* ತೆರಿಗೆ ವ್ಯವಸ್ಥೆ ತೆರಿಗೆದಾರರನ್ನು ಸಿಲುಕಿಸುವುದಕ್ಕಿಂತ. ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು

* ತೆರಿಗೆದಾರರಿಗೆ ಅಧಿಕಾರಿ ಯಾರೆಂಬುದು ತಿಳಿಯಬೇಕಿಲ್ಲ. ಇದುವರೆಗೂ ನಮ್ಮೂರಿನ ತೆರಿಗೆ ಕಚೇರಿಯಲ್ಲೇ ಕೆಲಸ ಆಗ್ತಿತ್ತು.  ಇನ್ನು ಮೇಲೆ ಈ ಪದ್ಧತಿ ಇರುವುದಿಲ್ಲ. ನಿಮ್ಮ ತೆರಿಗೆ ಸಮಸ್ಯೆಯನ್ನು ಇನ್ನೆಲ್ಲೋ ಕುಳಿತ ಅಧಿಕಾರಿ ಬಗೆಹರಿಸಬಹುದು. ಬೆಂಗಳೂರು, ಚೆನ್ನೈ, ಕೊಚ್ಚಿ, ಮುಂಬೈ ಹೀಗೆ ಇನ್ನೆಲ್ಲೋ ಕುಳಿತ ಅಧಿಕಾರಿ ಅಸೆಸ್ಮೆಂಟ್​ ಮಾಡಬಹುದು.

* ಯಾರ ಅಸೆಸ್ಮೆಂಟ್ ಯಾರು ಮಾಡಬೇಕೆಂಬುದನ್ನು ಕಂಪ್ಯೂಟರ್ ನಿರ್ಧರಿಸುತ್ತೆ. ಇದರಿಂದ, ತೆರಿಗೆ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹೆಚ್ಚುತ್ತೆ. ತೆರಿಗೆ ವ್ಯವಸ್ಥೆಯಲ್ಲಿ ಇನ್ನು ಲಂಚದ ಮಾತೇ ಇರುವುದಿಲ್ಲ. ಆಯಕಟ್ಟಿನ ಜಾಗಗಳಿಗೆ ಬರಲು ಲಂಚ ನೀಡುವ ವ್ಯವಸ್ಥೆ ಇರುವುದಿಲ್ಲ.

* ‘ತೆರಿಗೆದಾರ ಚಾರ್ಟರ್​’ನಲ್ಲಿ ಕ್ರಾಂತಿಕಾರಿ ಬದಲಾವಣೆ. ತೆರಿಗೆದಾರರ ಹಕ್ಕು, ಕರ್ತವ್ಯಗಳ ಸಮತೋಲನ. ತೆರಿಗೆದಾರರಿಗೆ ಉಚಿತ, ವಿನಮ್ರ, ತರ್ಕಬದ್ಧ ಸೇವೆ. ತೆರಿಗೆದಾರರ ಮಾತುಗಳ ಮೇಲೆ ವಿಶ್ವಾಸವಿಡಬೇಕಾಗುತ್ತದೆ. ಆಧಾರವಿಲ್ಲದೇ ತೆರಿಗೆದಾರರ ಮೇಲೆ ಸಂಶಯ ಇಲ್ಲ. ತೆರಿಗೆದಾರರಿಗೆ ಮೇಲ್ಮನವಿ ಸಲ್ಲಿಸುವ ಅಧಿಕಾರವಿದೆ.

* ತೆರಿಗೆ ಕಟ್ಟಿಸಿಕೊಳ್ಳುವುದು ಸರ್ಕಾರದ ಅಧಿಕಾರವಲ್ಲ. ತೆರಿಗೆ ಪಾವತಿಸುವುದು ತೆರಿಗೆದಾರರ ಕರ್ತವ್ಯ. ತೆರಿಗೆ ವ್ಯವಹಾರ ನಡೆಯುವುದು ಸೇವೆ ಮನೋಭಾವದಿಂದ, ತೆರಿಗೆದಾರರ ಪ್ರತಿ ಪೈಸೆ ಸದುಪಯೋಗಪಡಿಸಿಕೊಳ್ಳಬೇಕು.

* 2012-13ರಲ್ಲಿ ಒಟ್ಟು ರಿಟರ್ನ್​ಗಳ ಪೈಕಿ ಶೇ. 0.94 ತನಿಖೆಯಾಗ್ತಿತ್ತು. ಈಗ ತನಿಖೆಯ ಪ್ರಮಾಣ 4 ಪಟ್ಟು ಕಡಿಮೆಯಾಗಿದೆ. ಇದು ತೆರಿಗೆ ಇಲಾಖೆಯಲ್ಲಿನ ಬದಲಾವಣೆಗೆ ಸಾಕ್ಷಿ

ಕೊರೋನಾ ಹೊಡೆತ; ಬಾಷ್ ಆದಾಯ ಶೇ.64ರಷ್ಟು ಕುಸಿತ!

ಯಾಕೆ ಈ ಹೊಸ ವ್ಯವಸ್ಥೆ?

2020-21ರ ಬಜೆಟ್‌ನಲ್ಲಿ ತೆರಿಗೆದಾರರ ಚಾರ್ಟರ್‌ ಜಾರಿಗೊಳಿಸುವುದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು. ಅದರ ಭಾಗವಾಗಿ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ನಿರ್ದಿಷ್ಟಕಾಲಮಿತಿಯೊಳಗೆ ಕಡ್ಡಾಯವಾಗಿ ಸೇವೆಗಳು ಸಿಗುವಂತೆ ಮಾಡುವ ‘ಪಾರದರ್ಶಕ ತೆರಿಗೆ: ಪ್ರಾಮಾಣಿಕರಿಗೆ ಗೌರವ’ ಎಂಬ ತತ್ವದಡಿ ಹೊಸ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
 

Follow Us:
Download App:
  • android
  • ios