ಭಾರತದ ಶೇಕಡಾ 76ರಷ್ಟು ಜೆನ್‌ಝಿಗಳ ಆದಾಯ ಮೂಲ ಯಾವುದು? ಯುವ ಸಮೂಹ ಒಂದು ಜಾಬ್ ಮಾಡಿ ಆದಾಯ ಪಡೆಯುತ್ತಾರಾ? ಇಲ್ಲಾ ಹಲವು ಮೂಲಗಳಿಂದ ಆದಾಯ ಪಡೆಯುತ್ತಾರ, ಹೀಗಿದ್ದರೆ ಯಾವ ಮೂಲಗಳಿಂದ ಆದಾಯ?
ನವದೆಹಲಿ (ಜು.31) ಜೆನ್‌ಝಿ ಯುವ ಸಮೂಹದ ಬಹುತೇಕರು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿಕೊಂಡು ಪ್ರತಿ ತಿಂಳು ಸ್ಯಾಲರಿ ಪಡೆಯುವ ಮನಸ್ಥಿತಿಯವರಲ್ಲ. ತಮ್ಮ ಮುಂದಿನ ಜೀವನಕ್ಕಾಗಿ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಮುಂದುವರಿಯುತ್ತಾರೆ. ಇನ್ನು ಉದ್ಯೋಗ ಎಂದು ಬಂದಾಗ ಹಲವು ಮೂಲಗಳಿಂದ ಆದಾಯ ಪಡೆಯುತ್ತಾರೆ. ತಿಂಗಳ ಸಂಬಳ ನೆಚ್ಚಿಕೊಂಡು ಜೀವನ ಸಾಗಿಸುವ ಪಟ್ಟಿಯಲ್ಲಿ ಜೆನ್‌ಝಿಗಳಿಲ್ಲ. ದೇಶದ ಜೆನ್‌ಝಿ ಸಮೂಹ ಒಂದಕ್ಕಿಂತ ಹೆಚ್ಚು ಆದಾಯ ಮೂಲಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹಲವು ಮೂಲಗಳಿಂದ ಆದಾಯ ಪಡೆಯುತ್ತಿದ್ದಾರೆ ಅನ್ನೋದು ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಬಳಿಕ ಬಯಲಾಗಿದೆ.
ಇದುವರೆಗೆ ಭಾರತದಲ್ಲಿ ಫಾರ್ಮ್ 16 ಹಾಗೂ ತಿಂಗಳ ಸ್ಯಾಲರಿಗೆ ಸೀಮಿತವಾಗಿದ್ದ ಆದಾಯ ತೆರಿಗೆ ಸಲ್ಲಿಕೆ ಇದೀಗ ಹಲವು ಮೂಲಗಳ ಸಲ್ಲಿಕೆಯಾಗಿ ಬದಲಾಗಿದೆ. ದೇಶದ ಶೇಕಡಾ 76ರಷ್ಟು ಜೆನ್‌ಝಿ ಸಮೂಹ ಒಂದಕ್ಕಿಂತ ಹೆಚ್ಚು ಆದಾಯ ಮೂಲವನ್ನು ಪಡೆಯುತ್ತಿದೆ. ಆದಾಯ ತೆರಿಗೆ ಸಲ್ಲಿಕೆ(ITR) ಸಲ್ಲಿಕೆ ವರದಿ ಪ್ರಕಾರ , ಜೆನ್‌ಝಿ ಯುವ ಸಮೂಹ ಸೈಡ್ ಬ್ಯೂಸಿನೆಸ್, ಷೇರು ಮಾರುಕಟ್ಟೆ ಟ್ರೆಡಿಂಗ್, ಫ್ರೀಲ್ಯಾನ್ಸಿಂಗ್, ಕಂಟೆಂಟ್ ಕ್ರಿಯೇಶನ್ ಸೇರಿದಂತೆ ಹಲವು ಮೂಲಗಳಿಂದ ಹಣ ಗಳಿಸುತ್ತಿದ್ದಾರೆ. ಸಾಂಪ್ರಾದಾಯಿಕ ಮಾಸಿಕ ಉದ್ಯೋಗವನ್ನು ಮಾತ್ರ ನೆಚ್ಚಿಕೊಂಡಿಲ್ಲ. ಇದರ ಜೊತೆಗೆ ಹಲವು ಮೂಲಗಳನ್ನು ಕಂಡುಕೊಂಡಿದ್ದು, ಆಧಾಯ ತೆರಿಗೆ ಸಲ್ಲಿಕೆಯಲ್ಲಿ ಬಯಲಾಗಿದೆ. ಹೀಗೆ ವಿವಿದ ಮೂಲಗಳಿಂದ ಆದಾಯಗಳಿಸುತ್ತಿರುವ ಈ ಸಮೂಹವನ್ನು ಹೈಬ್ರಿಡ್ ಟ್ಯಾಕ್ಸ್ ಪೇಯರ್ ಎಂದು ವರ್ಗೀಕರಿಸಲಾಗುತ್ತಿದೆ.
ITR3, ITR2 ಸಲ್ಲಿಕೆ ಏರಿಕೆ
ಭಾರತದಲ್ಲಿ ಹಲವು ವರ್ಷಗಳ ಕಾಲ ಫಾರ್ಮ್ 16 ಸಲ್ಲಿಕೆ ಹೆಚ್ಚಾಗಿತ್ತು. ಆದರೆ ಇದೀಗ ಐಟಿಐರ್ 3, ಐಟಿಆರ್ 2 ಸಲ್ಲಿಕೆ ಭಾರಿ ಏರಿಕೆಯಾಗಿದೆ. ವೃತ್ತಿಪರ ವ್ಯಾಪಾರ, ಟ್ರೇಡಿಂಗ್ ಆದಾಯ ಹೊಂದಿರುವ ತೆರಿಗೆದಾರರು ಸಲ್ಲಿಸುವ ಐಟಿಆರ್ 3 ರಿಟರ್ನ್ಸ್‌ನಲ್ಲಿ ಶೇಕಡಾ 35.4ರಷ್ಟು ಜಿಗಿತ ಕಂಡಿದೆ. ಇನ್ನು ಬಂಡವಾಳ ಹೂಡಿಕೆ ಹಾಗೂ ಷೇರು ಮಾರುಕಟ್ಟೆ ಲಾಭಾಂಶದ ಐಟಿಆರ್ 3 ಸಲ್ಲಿಕೆಯಲ್ಲಿ ಶೇಕಡಾ 17ರಷ್ಟು ಏರಿಕೆಯಾಗಿದೆ. ಈ ಮೂಲಕ ಯುವ ಸಮೂಹ ಸಂಬಳ ಹಣಕ್ಕಾಗಿ ಕಾದು ಕುಳಿತಿಲ್ಲ. ಇತರ ಉದ್ಯೋಗ, ಉದ್ಯಮ, ಷೇರು ಮಾರುಕಟ್ಟೆ ಟ್ರೇಡಿಂಗ್, ಕೆಂಟೆಂಟ್ ಕ್ರಿಯೇಶನ್ ಸೇರಿದಂತೆ ಹಲವು ಮೂಲಗಳಿಂದ ಆದಾಯಗಳಿಸುತ್ತಿದೆ ಅನ್ನೋದು ಐಟಿಆರ್ ವರದಿಯಲ್ಲಿ ಸಾಬೀತಾಗಿದೆ.
25 ರಿಂದ 35 ವರ್ಷ ವಯಸ್ಸಿನ ವಯೋಮಾನದವರು ಐಟಿಆರ್ 3 ಸಲ್ಲಿಕೆಯಲ್ಲಿ ಶೇಕಡಾ 42.3ರಷ್ಟು ಪಾಲು ಹೊಂದಿದ್ದಾರೆ. ಇನ್ನು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೆನ್‌ಝಿ ಯುವಕರು ಐಟಿಆರ್ 2 ಸಲ್ಲಿಕೆಯಲ್ಲಿ ಶೇಕಡಾ 18ರಷ್ಟು ಪಾಲು ಹೊಂದಿದ್ದಾರೆ. ವಿಶೇಷ ಅಂದರೆ ಈ ಝೆನ್‌ಜಿ ಸಮೂಹ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಾಕೆಟ್ ಮನಿ ಸೇರಿದಂತೆ ಇತರ ಖರ್ಚು ವೆಚ್ಚಗಳಿದಗೆ ಮ್ಯೂಚ್ಯುವಲ್ ಫಂಡ್, ಈಕ್ವಿಟಿ, ಡಿಜಿಟಲ್ ಹೂಡಿಕೆ, ಕ್ರಿಪ್ಟೋ ಕರೆನ್ಸಿ ಸೇರಿದಂತೆ ಹಲವು ಮೂಲಗಳಿಂದ ಆದಾಯಗಳಿಸುತ್ತಿದ್ದಾರೆ.


