Flexible Work Culture: ಇಂಡಿಯಾ ಮಾರ್ಟ್‌ನಲ್ಲಿ ಇನ್ನು ವಾರಕ್ಕೊಮ್ಮೆ ಸಂಬಳ!

*ಇಂಡಿಯಾ ಮಾರ್ಟ್‌ನಿಂದ ಹೊಸ ಪ್ರಯೋಗ
*ಕಂಪನಿ ಸಿಬ್ಬಂದಿಗೆ  ಪ್ರತಿ ವಾರಾಂತ್ಯದಲ್ಲಿ  ಸಂಬಳ
*ವಾರದ ಸಂಬಳ ನೀಡುವ ಕ್ರಮ ಉದ್ಯೋಗಿ ಸ್ನೇಹಿ: ಸಿಇಓ

In a first Indiamart moves to weekly salary pay policy in India aims Flexible work culture mnj

ನವದೆಹಲಿ (ಫೆ. 08): ಇಂಡಿಯಾ ಮಾರ್ಟ್‌ (India Mart) ವಾಣಿಜ್ಯ ಕಂಪನಿ ತನ್ನ ಉದ್ಯೋಗಿಗಳಿಗೆ ವಾರದ ಸಂಬಳ (weekly salary) ನೀಡಲು ಮುಂದಾಗಿದೆ. ಈ ಮೂಲಕ ಪ್ರತಿ ವಾರದ ಸಂಬಳವನ್ನು ವಾರಾಂತ್ಯದಲ್ಲಿ ಸಿಬ್ಬಂದಿಗೆ ನೀಡಲಿರುವ ಭಾರತದ ಮೊಟ್ಟಮೊದಲ ಕಂಪನಿಯೆಂದು ಘೋಷಿಸಿಕೊಂಡಿದೆ. ಸಾಪ್ತಾಹಿಕ ಪಾವತಿಗಳು ಉದ್ಯೋಗಿಗಳಿಗೆ ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸುಲಭವಾಗುತ್ತದೆ. ನೌಕರರು ಪ್ರತಿ ವಾರ ಸಂಬಳವನ್ನು ಪಡೆಯುತ್ತಾರೆ, ಇದು ಅವರಿಗೆ ಬಿಲ್ ಪಾವತಿಗಳನ್ನು ನಿಗದಿಪಡಿಸಲು ಮತ್ತು ಅವರ ವೈಯಕ್ತಿಕ ಬಜೆಟನ್ನು ಸಂಘಟಿಸಲು ಸುಲಭಗೊಳಿಸುತ್ತದೆ ಎಂದು ಕಂಪನಿ ಹೇಳಿದೆ.

ವಾರದ ಸಂಬಳ ಉದ್ಯೋಗಿ ಸ್ನೇಹಿ: ಸಿಇಓ: ಸಾಮಾನ್ಯವಾಗಿ ಮನೆ ಬಾಡಿಗೆ, ಇಎಂಐಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿಂಗಳ ಸಂಬಳವನ್ನು ನಿಗದಿ ಪಡಿಸಲಾಗುತ್ತದೆ. ಆದರೆ ಇಂಡಿಯಾ ಮಾರ್ಟ್‌ ಸಿಒಒ ದಿನೇಶ್‌ ಗುಲಾಟಿ ( Dinesh Gulati), ‘ವಾರದ ಸಂಬಳ ನೀಡುವ ಕ್ರಮ ಉದ್ಯೋಗಿ ಸ್ನೇಹಿಯಾಗಿದೆ. ಇದು ಉದ್ಯೋಗಿಗಳಿಗೆ ತ್ವರಿತ ತೃಪ್ತಿ ನೀಡುತ್ತದೆ. ಕೋವಿಡ್‌ ಸಂಕಷ್ಟದ ಕಾಲದಲ್ಲಿ ಹಣದ ಅನಿವಾರ್ಯತೆ ಎದುರಾಗುವಾಗ ತಿಂಗಳಾಂತ್ಯದವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಪ್ರತಿವಾರ ಸಂಬಳ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: Post Office Scheme : ನಿವೃತ್ತಿಗೂ ಮುನ್ನ ಕೋಟ್ಯಧಿಪತಿ ಮಾಡುತ್ತೆ ಈ ಯೋಜನೆ!

ಕಂಪನಿಯು 2,724 ಖಾಯಂ ಉದ್ಯೋಗಿಗಳನ್ನು ಮತ್ತು 836 ಉದ್ಯೋಗಿಗಳನ್ನು ಗುತ್ತಿಗೆ ಆಧಾರದ ಮೇಲೆ ಹೊಂದಿದೆ. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಮತ್ತು ಅಮೆರಿಕಾಗಳಲ್ಲಿ ವಾರದ ಪಾವತಿಗಳು ಅಸ್ತಿತ್ವದಲ್ಲಿವೆ, ವಿಶೇಷವಾಗಿ ಗಂಟೆಯ ಆಧಾರದ ಮೇಲೆ ಕೆಲಸ ಮಾಡುವ ಉದ್ಯೋಗಿಗಳಿಗೆ. 

ಪರ-ವಿರೋಧ ಚರ್ಚೆ: ವಾರದ ಪಾವತಿಗಳು ಉದ್ಯೋಗಿಗಳು ತಮ್ಮ ನೈಜ-ಸಮಯದ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುವುದರಿಂದ ಉದ್ಯೋಗಿಗಳಿಗೆ ಪ್ರಯೋಜನಗಳು, ಅವರ ಆದ್ಯತೆಗಳು ಮತ್ತು ಜಾಗತಿಕ ಆರ್ಥಿಕತೆಯ ಬದಲಾಗುತ್ತಿರುವ ಡೈನಾಮಿಕ್ಸನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ  ವಾರಕ್ಕೊಮ್ಮೆ ಸಂಬಳವನ್ನು ವಿತರಿಸಲು ಇಂಡಿಯಾಮಾರ್ಟ್ ಈ ಉಪಕ್ರಮವನ್ನು ತೆಗೆದುಕೊಂಡಿದೆ.

ಆದಾಗ್ಯೂ, ಇಂಡಿಯಾಮಾರ್ಟ್‌ನ ಈ ಕ್ರಮವು ಟ್ವಿಟರ್‌ನಲ್ಲಿ ಇಂತಹ ಸಾಪ್ತಾಹಿಕ ಪಾವತಿಗಳು ಉದ್ಯೋಗಿಗಳಿಗೆ ಉತ್ತಮ ಹಣದ ಹರಿವನ್ನು ಉಂಟುಮಾಡುತ್ತದೆಯೇ ಅಥವಾ ಉದ್ಯೋಗಿಗಳು ತಿಂಗಳ ಅಂತ್ಯಕ್ಕೆ ವಿರುದ್ಧವಾಗಿ ಪ್ರತಿ ವಾರವೂ ಒಂದು ದೊಡ್ಡ ಮೊತ್ತವನ್ನು ಪಡೆಯುವುದರಿಂದ ಹೆಚ್ಚು ಖರ್ಚು ಮತ್ತು ಕಡಿಮೆ ಉಳಿತಾಯವನ್ನು ಉಂಟುಮಾಡುತ್ತದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇದು ತೆರಿಗೆ ಅನುಸರಣೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಪ್ರತಿಭೆಯನ್ನು ಉಳಿಸಿಕೊಳ್ಳಲು ಇದು ಉತ್ತಮ ಉಪಕ್ರಮವೆಂದು ಭಾವಿಸಿದ್ದಾರೆ. 

ಇದನ್ನೂ ಓದಿ: Data Centre : ಮುಂಬೈನಲ್ಲಿ ಅದಾನಿ ಕಂಪನಿಯಿಂದ ಡೇಟಾ ಸೆಂಟರ್ ಉದ್ಯಮ!

ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್‌ ಕರೆನ್ಸಿ: ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ (Union Budget) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ ಭಾರತದ ಮೊದಲ ಡಿಜಿಟಲ್‌ ಕರೆನ್ಸಿ (Digital Currency) 2023ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಹೆಚ್ಚುಕಮ್ಮಿ ಖಾಸಗಿ ಕಂಪನಿಗಳು ನಿರ್ವಹಿಸುತ್ತಿರುವ ಎಲೆಕ್ಟ್ರಾನಿಕ್‌ ವ್ಯಾಲೆಟ್‌ನಂತೆಯೇ ಇರಲಿದ್ದು, ಆದರೆ ಭಾರತ ಸರ್ಕಾರದಿಂದ ನಿರ್ವಹಣೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಕಾಗದದ ನೋಟಿನ ರೂಪದಲ್ಲಿರುವ ಹಣಕ್ಕೆ ಫಿಯೆಟ್‌ ಕರೆನ್ಸಿ ಎನ್ನುತ್ತಾರೆ. ಆರ್‌ಬಿಐ (RBI) ಬಿಡುಗಡೆ ಮಾಡಲಿರುವ ಡಿಜಿಟಲ್‌ ಕರೆನ್ಸಿಗೂ ಪೇಪರ್‌ ನೋಟಿಗೆ ಇರುವಂತೆ ಪ್ರತ್ಯೇಕ ನಂಬರ್‌ಗಳಿರುತ್ತವೆ. ಆದರೆ ಈ ನಂಬರ್‌ಗಳು ಯುನಿಟ್‌ಗಳಲ್ಲಿರುತ್ತವೆ. ಈ ಯುನಿಟ್‌ಗಳು ಆರ್‌ಬಿಐ ಮೂಲಕ ದೇಶದಲ್ಲಿ ಚಲಾವಣೆಯಾಗುವ ಕರೆನ್ಸಿಯ ಭಾಗವಾಗಿರುತ್ತವೆ. 

ಅಂದರೆ ಪೇಪರ್‌ ಕರೆನ್ಸಿಗೂ ಡಿಜಿಟಲ್‌ ಕರೆನ್ಸಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಡಿಜಿಟಲ್‌ ಕರೆನ್ಸಿಯೆಂಬುದು ಮುದ್ರಿತ ನೋಟಿನ ಎಲೆಕ್ಟ್ರಾನಿಕ್‌ ರೂಪವಷ್ಟೇ ಆಗಿರುತ್ತದೆ. ಒಂದರ್ಥದಲ್ಲಿ ಇದು ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಎಲೆಕ್ಟ್ರಾನಿಕ್‌ ವ್ಯಾಲೆಟ್‌ನಂತಿರುತ್ತದೆ. ಜನರು ಕಿಸೆಯಲ್ಲಿ ಪೇಪರ್‌ ಹಣ ಒಯ್ಯುವ ಬದಲು ಮೊಬೈಲ್‌ಗಳಲ್ಲಿ (Mobile) ವರ್ಚುವಲ್‌ ಹಣ ಒಯ್ಯುತ್ತಾರೆ ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios