Post Office Scheme : ನಿವೃತ್ತಿಗೂ ಮುನ್ನ ಕೋಟ್ಯಧಿಪತಿ ಮಾಡುತ್ತೆ ಈ ಯೋಜನೆ!

ತಾಳಿದವನು ಬಾಳಿಯಾನು ಎಂಬ ಮಾತಿದೆ. ಎಲ್ಲವೂ ಹೇಳಿದ ತಕ್ಷಣ ಸಿಗುವುದಿಲ್ಲ. ಅದಕ್ಕೆ ಕಾಯುವ ಅಗತ್ಯವಿರುತ್ತದೆ. ಆರ್ಥಿಕ ವೃದ್ಧಿ ಕೂಡ ಹಾಗೆಯೇ. ಆದ್ರೆ ಹಣ ಮಾಡಬೇಕೆನ್ನುವವರು ಖಾಲಿ ಕುಳಿತರೆ ಆಗುವುದಿಲ್ಲ. ಗಳಿಸಿದ ಹಣ ಡಬಲ್ ಮಾಡಲು ಸೂಕ್ತ ಸ್ಥಳದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
 

Post Office Scheme Invest In PPF And Get Crore Before Retirement

Business Desk:ಶ್ರೀಮಂತ(Rich)ರಾಗುವ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಕೋಟ್ಯಾಧಿಪತಿಯಾಗ್ಬೇಕೆಂದ್ರೆ ಸುಮ್ಮನೆ ಕುಳಿತ್ರೆ ಸಾಲುವುದಿಲ್ಲ. ಹೂಡಿಕೆ(Investment )ಮಾಡಬೇಕಾಗುತ್ತದೆ. ಕಡಿಮೆ ವಯಸ್ಸಿನಲ್ಲಿಯೇ ಹೂಡಿಕೆ ಶುರು ಮಾಡಿದ್ರೆ ನಿವೃತ್ತಿ (retirement) ಸಮಯದಲ್ಲಿ ಸಾಕಷ್ಟು ಹಣ (Money) ನಿಮ್ಮ ಕೈನಲ್ಲಿರುತ್ತದೆ. ದಿಢೀರ್ ಶ್ರೀಮಂತರಾಗಲು ಯಾರಿಂದಲೂ ಸಾಧ್ಯವಿಲ್ಲ. ಹೂಡಿಕೆ ಮಾಡಿದ್ರೆ ನೀವು ಕೆಲ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗ್ಬಹುದು. ಇದಕ್ಕೆ  ಹೆಚ್ಚಿನ ಹೂಡಿಕೆಯೂ ಅಗತ್ಯವಿಲ್ಲ.

ಆದರೆ ಪ್ರತಿ ತಿಂಗಳು ಕೆಲವು ರೂಪಾಯಿಗಳನ್ನು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬೇಕು. ಸಾರ್ವಜನಿಕ ಭವಿಷ್ಯ ನಿಧಿಯು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ನೀವು ಒಂದು ವರ್ಷದಲ್ಲಿ 1.5 ಲಕ್ಷ ರೂಪಾಯಿವರೆಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು, ಅಂದರೆ ತಿಂಗಳಿಗೆ 12,500 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಇಂದು ಪಿಪಿಎಫ್ ನಲ್ಲಿ ಹೂಡಿಕೆಯನ್ನು ಹೇಗೆ ಮಾಡುವುದು ಹಾಗೂ ಎಷ್ಟು ಸಮಯದವರೆಗೆ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

 ಇದನ್ನೂ ಓದಿ: Ambani cars ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ!

ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ನೀವು ಹೂಡಿಕೆ ಶುರು ಮಾಡಬಹುದು. ಪ್ರಸ್ತುತ, ಸರ್ಕಾರವು ಸಾರ್ವಜನಿಕ ಭವಿಷ್ಯ ನಿಧಿ ಖಾತೆಗೆ ಶೇಕಡಾ 7.1ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುತ್ತದೆ. ಇದರಲ್ಲಿ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಬಹುದು, ತಿಂಗಳ ಹೂಡಿಕೆಯ ಒಟ್ಟು ಮೌಲ್ಯ 12500 ರೂಪಾಯಿಯಾಗಿರುತ್ತದೆ. 15 ವರ್ಷಗಳ ನಂತರ 40,68,209 ರೂಪಾಯಿ ನಿಮ್ಮ ಕೈ ಸೇರುತ್ತದೆ. ಇದರಲ್ಲಿ ಒಟ್ಟು ಹೂಡಿಕೆ 22.5 ಲಕ್ಷ ರೂಪಾಯಿಯಾದ್ರೆ  ಬಡ್ಡಿ 18,18,209 ರೂಪಾಯಿಯಾಗಿರುತ್ತದೆ. 

ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ? : 

ಉದಾಹರಣೆ 1 : ನಿಮಗೆ 30 ವರ್ಷ ವಯಸ್ಸಾಗಿದೆ ಮತ್ತು ನೀವು ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ. 15 ವರ್ಷಗಳ ಕಾಲ ಪಿಪಿಎಫ್ ನಲ್ಲಿ ಪ್ರತಿ ತಿಂಗಳು 12500 ರೂಪಾಯಿಗಳನ್ನು ಠೇವಣಿ ಮಾಡಿದ ನಂತರ ನಿಮಗೆ 40,68,209 ರೂಪಾಯಿ ಸಿಗುತ್ತದೆ. ಈ ಹಣವನ್ನು ವಾಪಸ್ ಪಡೆಬೇಕಾಗಿಲ್ಲ. 5-5 ವರ್ಷಗಳ ಅವಧಿಗೆ ಪಿಪಿಎಫ್  ವಿಸ್ತರಿಸುತ್ತಿರಬಹುದು. ಅಂದರೆ, 15 ವರ್ಷಗಳ ನಂತರ, ಇನ್ನೂ 5 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಒಟ್ಟೂ 20 ವರ್ಷಗಳ ನಂತರ ಈ ಮೊತ್ತವು 66,58,288 ರೂಪಾಯಿಯಾಗುತ್ತದೆ. ಮತ್ತೆ ಐದು ವರ್ಷ ಹೂಡಿಕೆ ವಿಸ್ತರಿಸಿದ್ರೆ 1,03,08,015 ರೂಪಾಯಿ ನಿಮಗೆ ಸಿಗುತ್ತದೆ.

ಇದನ್ನೂ ಓದಿ: DIGITAL CURRENCY: ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್‌ ಕರೆನ್ಸಿ

ಉದಾಹರಣೆ 2 : ನೀವು 12500 ರೂಪಾಯಿ ಬದಲಿಗೆ ಸ್ವಲ್ಪ ಕಡಿಮೆ ಮೊತ್ತವನ್ನುಪಿಪಿಎಫ್ನಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ಹಾಗೂ   55 ನೇ ವಯಸ್ಸಿನಲ್ಲಿ ಕೋಟ್ಯಾಧಿಪತಿಯಾಗಲು ಬಯಸಿದ್ದರೆ ಸ್ವಲ್ಪ ಮೊದಲೇ ಹೂಡಿಕೆ ಶುರು ಮಾಡಬೇಕು. ಅಂದ್ರೆ 25 ನೇ ವಯಸ್ಸಿನಲ್ಲಿ, ನೀವು ಪ್ರತಿ ತಿಂಗಳು 10,000 ರೂಪಾಯಿಗಳನ್ನು ಹೂಡಬೇಕು. ಶೇಕಡಾ 7.1 ರ ಬಡ್ಡಿಯಂತೆ 15 ವರ್ಷಗಳ ನಂತರ ನೀವು ಒಟ್ಟು  32,54,567 ರೂಪಾಯಿ ಪಡೆಯುತ್ತೀರಿ. ಮತ್ತೆ ಐದೈದರಂತೆ 25 ವರ್ಷದವರೆಗೆ ವಿಸ್ತರಿಸಿದ್ರೆ ನಿಮಗೆ 30 ವರ್ಷದ ನಂತ್ರ 1,23,60,728 ರೂಪಾಯಿ ಸಿಗುತ್ತದೆ. 

ಉದಾಹರಣೆ 3 : ತಿಂಗಳಿಗೆ 10,000 ರೂಪಾಯಿಯ ಬದಲು ಕೇವಲ 7500 ರೂಪಾಯಿ ಠೇವಣಿ ಇಟ್ಟರೂ ನೀವು 55 ವರ್ಷಕ್ಕೆ ಕೋಟ್ಯಾಧಿಪತಿಯಾಗ್ಬಹುದು. ಅದಕ್ಕೆ ನೀವು 20 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಶೇಕಡಾ 7.1ರ  ಬಡ್ಡಿಯಲ್ಲಿ 15 ವರ್ಷಗಳ ಕಾಲ ಪಿಪಿಎಫ್ ನಲ್ಲಿ 7500 ರೂಪಾಯಿ ಠೇವಣಿ ಇರಿಸಿದರೆ, 15 ವರ್ಷಕ್ಕೆ 24,40,926 ರೂಪಾಯಿಯಾಗುತ್ತದೆ.ಅವಧಿ ವಿಸ್ತರಿಸುತ್ತ ಹೋದರೆ 35 ವರ್ಷಗಳ ನಂತರ 1,36,18,714 ರೂಪಾಯಿ ನಿಮಗೆ ಸಿಗುತ್ತದೆ.  

Latest Videos
Follow Us:
Download App:
  • android
  • ios