Data Centre : ಮುಂಬೈನಲ್ಲಿ ಅದಾನಿ ಕಂಪನಿಯಿಂದ ಡೇಟಾ ಸೆಂಟರ್ ಉದ್ಯಮ!
ಡೇಟಾ ಸೆಂಟರ್ ಉದ್ಯಮಕ್ಕೆ ಹೊಸ ಅಂಗಸಂಸ್ಥೆ ಸ್ಥಾಪಿಸಿದ ಅದಾನಿ ಗ್ರೂಪ್
ಈಗಾಗಲೇ ದೇಶದಲ್ಲಿ 6 ನಗರಗಳನ್ನು ಗುರುತಿಸಿರುವ ಕಂಪನಿ
ಮುಂಬೈ ಡೇಟಾ ಸೆಂಟರ್ ಲಿಮಿಟೆಡ್ ಹೆಸರಿನಲ್ಲಿ ಉದ್ಯಮ
ಮುಂಬೈ (ಫೆ.6): ಬಂದರುಗಳಿಂದ (Port) ಇಂಧನದವರೆಗೆ (Energy) ಎಲ್ಲಾ ಉದ್ಯಮಗಳ ಜಾಲ ಹೊಂದಿರುವ ಅದಾನಿ ಗ್ರೂಪ್ (Adani Group ) ಇನ್ನೊಂದು ಉದ್ಯಮಕ್ಕೆ ಕಾಲಿಟ್ಟಿದೆ. ದೇಶಕ್ಕೆ ಡೇಟಾ ಸೆಂಟರ್ ಗಳ ಅಗತ್ಯವನ್ನು ಮನಗಂಡಿರುವ ಅದಾನಿ ಗ್ರೂಪ್, ಅದಾನಿ ಎಂಟರ್‌ಪ್ರೈಸಸ್ (Adani Enterprises) ಮತ್ತು ಎಡ್ಜ್‌ಕಾನೆಕ್ಸ್ (EdgeConneX)ಯುರೋಪ್ ಬಿವಿಯ 50:50 ಜಂಟಿ ಉದ್ಯಮವಾಗಿರುವ ಅದಾನಿಕಾನೆಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮುಂಬೈ ಡೇಟಾ ಸೆಂಟರ್ ಲಿಮಿಟೆಡ್ ಅನ್ನು ಸಂಯೋಜಿಸಿದೆ ಫೆಬ್ರವರಿ 4 ರಂದು ಆರಂಭಿಸಿದೆ ಎಂದು ಅದಾನಿ ಸಮೂಹ ಸಂಸ್ಥೆಯು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ (stock exchange filing) ತಿಳಿಸಿದೆ.
ಮೊದಲ ಹಂತದಲ್ಲಿ ಈಗಾಗಲೇ ಮುಂಬೈ ನಲ್ಲಿ ಡೇಟಾ ಸೆಂಟರ್ ಆರಂಭಿಸುವ ಪ್ರಕ್ರಿಯೆ ಶುರುವಾಗಿದೆ. ನಂತರದ ದಿನಗಳಲ್ಲಿ ದೇಶದ ಇತರ ಐದು ನಗರಗಳಲ್ಲಿ ಡೇಟಾ ಸೆಂಟರ್ ಉದಯವಾಗಲಿದೆ ಎಂದು ಶತಕೋಟ್ಯಾಧಿಪತಿ ಗೌತಮ್ ಅದಾನಿ (Gautam Adani) ಹೇಳಿದ್ದಾರೆ.
ಹೊಸ ಘಟಕವು "ದತ್ತಾಂಶ ಕೇಂದ್ರಗಳು, ಮಾಹಿತಿ ತಂತ್ರಜ್ಞಾನ (ಐಟಿ)/ ಮಾಹಿತಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಸೇವೆಗಳು (ಐಟಿಇಎಸ್)/ ಕ್ಲೌಡ್ ಅನ್ನು ಅಭಿವೃದ್ಧಿಪಡಿಸಲು, ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ನೀಡುತ್ತದೆ. ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವುದು ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುವುದು ಈ ಉದ್ದೇಶಕ್ಕಾಗಿ ಭೂ ಸ್ವಾಧೀನ ಮತ್ತು ಅಭಿವೃದ್ಧಿ," ಎಂದು ಅದು ಹೇಳಿದೆ. MDCL ತನ್ನ ವ್ಯವಹಾರ ಕಾರ್ಯಾಚರಣೆಗಳನ್ನು ಸೂಕ್ತ ಸಮಯದಲ್ಲಿ ಆರಂಭಿಸಲಿದೆ ಎಂದು ಅದಾನಿ ಗ್ರೂಪ್ ಹೇಳಿದೆ.
ಫೆಬ್ರವರಿ 2021 ರಲ್ಲಿ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮುಂದಿನ ದಶಕದಲ್ಲಿ ಒಂದು ಗಿಗಾವ್ಯಾಟ್ (GW) ಡೇಟಾ ಸೆಂಟರ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರಮುಖ ಡೇಟಾ ಸೆಂಟರ್ ಆಪರೇಟರ್ ಎಡ್ಜ್‌ಕಾನೆಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿತ್ತು. AdaniConneX ಎಂಬ ಹೆಸರಿನ ಸಮಾನ ಜಂಟಿ ಉದ್ಯಮವು (JV), ಚೆನ್ನೈ, ನವಿ ಮುಂಬೈ, ನೋಯ್ಡಾ, ವಿಶಾಖಪಟ್ಟಣಂ ಮತ್ತು ಹೈದರಾಬಾದ್‌ನಿಂದ ಪ್ರಾರಂಭಿಸಿ ಭಾರತದಲ್ಲಿ ಹೈಪರ್‌ಸ್ಕೇಲ್ ಡೇಟಾ ಸೆಂಟರ್‌ಗಳ ನೆಟ್‌ವರ್ಕ್ ಅನ್ನು ನಿರ್ಮಿಸಲು ಗಮನಹರಿಸಲಿದೆ. ದತ್ತಾಂಶ ಕೇಂದ್ರವು ಅಗತ್ಯವಾದ ಸುರಕ್ಷಿತ ವ್ಯವಸ್ಥೆಯನ್ನು ಒದಗಿಸುತ್ತದೆ, ಇದರಲ್ಲಿ ಕಂಪ್ಯೂಟಿಂಗ್ ಮತ್ತು ನೆಟ್‌ವರ್ಕಿಂಗ್ ಉಪಕರಣಗಳನ್ನು ಸಂಗ್ರಹಿಸಲು, ಪ್ರಕ್ರಿಯೆಗೊಳಿಸಲು, ವಿತರಿಸಲು ಅಥವಾ ಹೆಚ್ಚಿನ ಪ್ರಮಾಣದ ಡೇಟಾವನ್ನು ಪ್ರವೇಶಿಸಲು ಕೇಂದ್ರೀಕರಿಸಲಾಗಿದೆ.
ಗೌತಮ್ ಅದಾನಿ ಅವರು ನವೆಂಬರ್ 2021 ರಲ್ಲಿ ತಮ್ಮ ಸಂಸ್ಥೆಯು ಹಸಿರು ಡೇಟಾ ಸಂಗ್ರಹಣೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರಬೇಕು ಎಂದು ಬಯಸಿದ್ದರು. ವೆಬ್ ಸೈಟ್‌ಗಳು ಸಂಪೂರ್ಣವಾಗಿ ಕ್ಲೀನ್ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ, 2070 ರ ವೇಳೆಗೆ ಶೂನ್ಯ ಇಂಗಾಲ ಸೇವೆಯನ್ನು ನೀಡುವಭಾರತದ ಗುರಿಯೊಂದಿಗೆ ಇದು ಹೊಂದಾಣಿಕೆಯಾಗಲಿದೆ.
Top Billionaires: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ ಈಗ ಏಷ್ಯಾದ ಶ್ರೀಮಂತ ವ್ಯಕ್ತಿ!
2025 ರ ವೇಳೆಗೆ ಭಾರತದ ಡಿಜಿಟಲ್ ಆರ್ಥಿಕತೆಯು USD 1 ಟ್ರಿಲಿಯನ್‌ಗೆ ತಲುಪುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಹೊಸ ಉದ್ಯಮ ಸೃಷ್ಟಿಯಾಗಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮದ ಪ್ರಕಾರ ಡೇಟಾ ಸ್ಥಳೀಕರಣವನ್ನು ಕಡ್ಡಾಯಗೊಳಿಸಿದೆ. ಆ ಕಾರಣದಿಂದಾಗಿ ಮಾಹಿತಿಯನ್ನು ಸಂಗ್ರಹಿಸಲು ಮತ್ತು ರಕ್ಷಿಸಲು ದೊಡ್ಡ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವನ್ನು ಹೊಂದಿದೆ. ದೇಶದ ಗಡಿಯ ಒಳಗಡೆಯೇ ಪ್ರಜೆಗಳ ಎಲ್ಲಾ ಮಾಹಿತಿಗಳು ಇರಬೇಕು ಎನ್ನುವುದನ್ನು ಡೇಟಾ ಸ್ಥಳೀಕರಣವೂ ಸೂಚಿಸುತ್ತದೆ. ಅದಾನಿ ಮಾತ್ರವಲ್ಲದೆ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಸೇರಿದಂತೆ ಇತರ ದೊಡ್ಡ ಕಾರ್ಪೊರೇಟ್‌ಗಳು ಸಹ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.
ಅದಾನಿ ಗ್ರೂಪ್‌ಗೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಸ್ತಾಂತರ!
ಅದಾನಿ ಸಮೂಹವು ಕಳೆದ ವರ್ಷ ಉತ್ತರ ಪ್ರದೇಶ ಸರ್ಕಾರದಿಂದ ಡೇಟಾ ಸೆಂಟರ್ ಗಾಗಿ ನೋಯ್ಡಾದಲ್ಲಿ ಭೂಮಿಯನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್ ತನ್ನ ಮೂರನೇ ಡೇಟಾ ಕೇಂದ್ರವನ್ನು ಚೆನ್ನೈನಲ್ಲಿ ಸ್ಥಾಪಿಸಲು ಅದಾನಿ ಗ್ರೂಪ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಕಳೆದ ವಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ರ ಬಜೆಟ್‌ನಲ್ಲಿ ದತ್ತಾಂಶ ಕೇಂದ್ರಗಳು ಮತ್ತು ಇಂಧನ ಸಂಗ್ರಹಣೆಯನ್ನು ಮೂಲಸೌಕರ್ಯ ಸ್ವತ್ತುಗಳಾಗಿ ವರ್ಗೀಕರಿಸಲು ಪ್ರಸ್ತಾಪಿಸಿದರು, ಇದು ಸಂಸ್ಥೆಗಳಿಗೆ ಅಗ್ಗದ ಮತ್ತು ದೀರ್ಘಾವಧಿಯ ಸಾಲವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ.