Asianet Suvarna News Asianet Suvarna News

GDP growth ಗಣರಾಜ್ಯೋತ್ಸವಕ್ಕೆ IMF ಗುಡ್ ನ್ಯೂಸ್ , 2022ರಲ್ಲಿ ಭಾರತದ GDP ಶೇ.9ರಷ್ಟು ಪ್ರಗತಿ, ಅಮೆರಿಕ, ಚೀನಾಗೆ ಹೊಡೆತ!

  • ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿ, IMF ವರದಿ
  • ಚೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಜಿಡಿಪಿ ಕುಸಿತ
  • 2022ರ ಜಿಡಿಪಿ ವರದಿ ನೀಡಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ
IMF annouces world Economic outlook update 2022 India stands out with 9 pecent GDP growth ckm
Author
Bengaluru, First Published Jan 26, 2022, 6:48 PM IST

ನವದೆಹಲಿ(ಜ.26):  ದೇಶದೆಲ್ಲೆಡೆ ಗಣರಾಜ್ಯೋತ್ಸವ ದಿನಾಚರಣೆಯನ್ನು(India Republic Day) ಸಂಭ್ರಮದಿಂದ ಆಚರಿಸಲಾಗಿದೆ. ಇದರ ನಡುವೆ ಅಂತಾರಾಷ್ಟ್ರೀ ಹಣಕಾಸು ನಿಧಿ(IMF) ಸಿಹಿ ಸುದ್ದಿ ನೀಡಿದೆ. IMF ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಪ್ರಗತಿ ಕುರಿತ ವರದಿ(GDP growth estimates) ಪ್ರಕಟಿಸಿದೆ. ಈ ವರದಿ ಪ್ರಕಾರ ಅಮೆರಿಕ ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಜಿಡಿಪಿ ಕುಸಿತ ಕಂಡಿದ್ದರೆ, ಭಾರತ(India) ಶೇಕಡಾ 9 ರಷ್ಟುಏರಿಕೆ ದಾಖಲಿಸಲಿದೆ ಎಂದಿದೆ. 

ಕೊರೋನಾ ಹೊಡೆತ, ಆರ್ಥಿಕ ಹಿಂಜರಿತ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರಿತ್ಯ ಸೇರಿದಂತೆ ಹಲವು ಕಾರಣಗಳಿಂದ ಪ್ರತಿ ದೇಶದ ಜಿಡಿಪಿ ಕುಸಿತ ಕಾಣುತ್ತಿದೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ 2022ರಲ್ಲಿ ಭಾರತದ ಜಿಡಿಪಿ ಶೇಕಡಾ 9.5 ರಷ್ಟು ಏರಿಕೆ ಕಾಣಲಿದೆ ಎಂದು ಭವಿಷ್ಯ ನುಡಿದಿತ್ತು. ಇದೀಗ IMF ತನ್ನ ವರದಿಯಲ್ಲಿ ಭಾರತದ ಜಿಡಿಪಿ ಶೇಕಡಾ 9 ರಷ್ಟು ಪ್ರಗತಿ(GDP upgrade) ದಾಖಲಿಸಲಿದೆ ಎಂದಿದೆ. 

Indian GDP: ಈ ವರ್ಷ ಭಾರತದ ಆರ್ಥಿಕತೆ ಭರ್ಜರಿ ಶೇ.9.2ರಷ್ಟು ಏರಿಕೆ!

ಭಾರತದ ಜಿಡಿಪಿ ಪ್ರಗತಿ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಕರ್(Rajeev Chandrasekhar) ಸಂತಸ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ(PM Narendra Modi) ಆತ್ಮನಿರ್ಭರ್ ಭಾರತ್ ಯೋಜನೆ ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಪರಿಣಾಮ ಬಲಿಷ್ಟ ಆರ್ಥಿಕತೆ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಗರಿಷ್ಠ ಜಿಡಿಪಿ ಪ್ರಗತಿ ಸಾಧಿಸುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

 

ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಚೀನಾ, ಜರ್ಮನಿ, ಫ್ರಾನ್ಸ್, ಕೆನಡಾ, ರಷ್ಯಾ, ಮೆಕ್ಸಿಕೋ, ಇಟಲಿ ಸೇರಿದಂತೆ ಪ್ರಮುಖ ರಾಷ್ಟ್ರಗಳ ಜಿಡಿಪಿ ಕುಸಿತ ಕಾಣಲಿದೆ ಎಂದಿದೆ. ಈ ವರದಿಯಲ್ಲಿ ಜಪಾನ್ ಶೇಕಡಾ 4 ರಷ್ಟು ಜಿಡಿಪಿ ಪ್ರಗತಿ ಕಾಣಲಿದೆ ಎಂದು IMF ಹೇಳಿದ್ದರೆ ಭಾರತ ಶೇಕಡಾ 9 ರಷ್ಟು ಪ್ರಗತಿ ಕಾಣಲಿದೆ ಎಂದಿದೆ.

Sri Lanka on the verge of Bankrupt : ತರಕಾರಿ ಮಾರ್ಕೆಟ್ ಅಲ್ಲಿ ಗ್ರಾಮ್ ಲೆಕ್ಕದಲ್ಲಿ ಮಾರಾಟ!

2020-21ರ ಸಾಲಿನಲ್ಲಿ ಭಾರತ 7.3 ಶೇಕಡಾ ಜಿಡಿಪಿ ಪ್ರಗತಿ ಕಂಡಿತ್ತು.  2022-23ರಲ್ಲಿ ಭಾರತದಲ್ಲಿ ಜಿಡಿಪಿ ಜೊತೆಗೆ ಆರ್ಥಿಕ ಪ್ರಗತಿಯೂ ಹೆಚ್ಚಾಗಲಿದೆ ಎಂದು IMF ಹೇಳಿದೆ. ನಿರೀಕ್ಷಿತ ಸುಧಾರಣೆಗಳು, ಹೂಡಿಕೆ, ಸಾಲದ ಬೆಳವಣಿಗೆಗಳು ಉತ್ತಮವಾಗಿದೆ. ಹೀಗಾಗಿ ಆರ್ಥಿಕ ವಲಯದ ಪ್ರಗತಿ ನಿರೀಕ್ಷೆಗೂ ಮೀರಲಿದೆ ಎಂದು  IMF ತನ್ನ ವರದಿಯಲ್ಲಿ ಹೇಳಿದೆ.

IMF ವರದಿಯಲ್ಲಿ ವಿಶ್ವದ ಪ್ರಗತಿಯನ್ನು ಉಲ್ಲೇಖಿಸಿದೆ. 2021ರಲ್ಲಿ ಶೇಕಡಾ 5.9 ರಷ್ಟಿದ್ದರೆ, 2022ರಲ್ಲಿ ಶೇಕಡಾ 4.4 ರಷ್ಟಿದೆ ಎಂದಿದೆ.  ಪ್ರಸಕ್ತ ವರ್ಷದಲ್ಲಿ ವಿಶ್ವದ ಪ್ರಗತಿಯಲ್ಲಿ ಭಾರತದ ಕೊಡುಗೆ ಹೆಚ್ಚಾಗಿದೆ. ಇತರ ಬಲಿಷ್ಠ ರಾಷ್ಟ್ರಗಳು ಪ್ರಗತಿಗಿಂತ ಕುಸಿತ ಕಂಡಿದೆ.

ಭಾರತದ ಆರ್ಥಿಕಪ್ರಗತಿಯ ದರ ವಿಶ್ವದಲ್ಲೇ ಅತೀ ವೇಗದ್ದು!

ಪ್ರಮುಖವಾಗಿ ಚೀನಾ ಆರ್ಥಿಕತೆ, ಡಿಜಿಪಿಗೆ ಭಾರಿ ಹೊಡೆತ ಬಿದ್ದಿದೆ. ಕೊರೋನಾ ನಡುವೆ ಚೀನಾ ತಂದ ಕೆಲ ನೀತಿಗಳು ಜಿಡಿಪಿ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೋವಿಡ್ ಶೂನ್ಯ ಸಹಿಷ್ಣುತೆ ನೀತಿ, ಪ್ರಾಪರ್ಟಿ ಡೆವಲಪ್ಪರ್‌ಗಳಲ್ಲಿನ ಆರ್ಥಿಕ ಒತ್ತಡಗಳಿಂದ ಚೀನಾ ಪ್ರಗತಿ ಶೇಕಡಾ 0.8ರಷ್ಟು ಕುಸಿತ ಕಾಣಲಿದೆ ಎಂದು  ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿಯಲ್ಲಿ ಹೇಳಿದೆ. ಅಮರಿಕ ಜಿಡಿಪಿ ಪ್ರಗತಿ ಬದಲು ಕುಸಿತ ಕಾಣಲಿದೆ ಎಂದು  IMF ಹೇಳಿದೆ. ಶೇಕಡಾ 1.2 ರಷ್ಟು ಕುಸಿತ ಅಮೆರಿಕ ಅನುಭವಿಸಲಿದೆ ಎಂದಿದೆ. ವಿಶ್ವದ ಹಲವು ದೇಶಗಳು ಜಿಡಿಪಿ ಕುಸಿತದ ನಡುವೆ ಭಾರತ ಪ್ರಗತಿ ಸಾಧಿಸಿರುವುದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದೀಗ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ.

Follow Us:
Download App:
  • android
  • ios