Sri Lanka on the verge of Bankrupt : ತರಕಾರಿ ಮಾರ್ಕೆಟ್ ಅಲ್ಲಿ ಗ್ರಾಮ್ ಲೆಕ್ಕದಲ್ಲಿ ಮಾರಾಟ!

ಈ ವರ್ಷ ದಿವಾಳಿಯಾಗಲಿದೆ ಶ್ರೀಲಂಕಾ
ವಿದೇಶಿ ಸಾಲಗಳ ಮರುಪಾವತಿಯಿಂದ ಖಜಾನೆ ಖಾಲಿ
ಆಹಾರ ಉತ್ಪನ್ನಗಳ ಬಿಕ್ಕಟ್ಟು ತೀವ್ರ

Sri Lanka on the verge of bankruptcy people buying hundred grams of milk and vegetables san

ಕೊಲಂಬೊ (ಜ.4): ಕೋವಿಡ್-19 ಸಾಂಕ್ರಾಮಿಕ ವೈರಸ್ (Covid-19 Pandemic) ವಿರುದ್ಧದ ಹೋರಾಟ, ಪ್ರವಾಸೋದ್ಯಮದ ಕುಸಿತ, ಸರ್ಕಾರಿ ವೆಚ್ಚಗಳಲ್ಲಿನ ಏರಿಕೆ, ತೆರಿಗೆಯಲ್ಲಿ ಕಡಿತ ಮತ್ತು ವಿದೇಶಗಳಿಂದ ಪಡೆದುಕೊಂಡಿರುವ ಅತಿಯಾದ ಸಾಲ (Foreign Debt ) ಈ ಎಲ್ಲವುಗಳಿಂದ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾ (Sri Lanka) ಈ ವರ್ಷ ದಿವಾಳಿಯಾಗೋದು ಖಚಿತ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರೊಂದಿಗೆ ಅತಿಯಾದ ಹಣದುಬ್ಬರ (Inflation) ಶ್ರೀಲಂಕಾ ಜನತೆಯ ಜೀವನವನ್ನು ಇನ್ನಷ್ಟು ಹೈರಾಣ ಮಾಡಿದ್ದು, ದಿನನಿತ್ಯದ ಅಗತ್ಯವಸ್ತುಗಳ ಬೆಲೆಯಲ್ಲಿ ನಿರೀಕ್ಷೆಗೂ ಮಿರಿ ಏರಿಕೆಯಾಗಿದೆ. ಇದರಿಂದಾಗಿ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೆಜಿಗಳ ಬದಲು ಗ್ರಾಮ್ ಗಳ ಲೆಕ್ಕದಲ್ಲಿ ಮಾರಾಟ ಮಾಡುವ ಸ್ಥಿತಿಗೆ ಶ್ರೀಲಂಕಾ ತಲುಪಿದೆ.

ಶ್ರೀಲಂಕಾ ಪಾಲಿಗೆ ಹೊಸ ವರ್ಷ ಮತ್ತಷ್ಟು ಕಠಿಣ ಸಮಯವನ್ನು ತಂದೊಡ್ಡಿದೆ. ಕಳೆದ ಕೆಲವು ವರ್ಷಗಳಿಂದ ಶ್ರೀಲಂಕಾದ ಆರ್ಥಿಕ ಸ್ಥಿತಿ ಹಾಗೂ ಅಲ್ಲಿನ ಸರ್ಕಾರದ ವೈಫಲ್ಯದ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದರೂ, ಈ ಬಾರಿ ಮಾತ್ರ ಶ್ರೀಲಂಕಾ ತನ್ನ ದಿವಾಳಿಯನ್ನು ಘೋಷಿಸುವುದು ಬಹುತೇಕ ನಿಶ್ಚಿತ ಎನ್ನವ ಹಂತಕ್ಕೆ ತಲುಪಿದೆ. ಭೌಗೋಳಿಕವಾಗಿ ತಮಿಳುನಾಡುಗಿಂತ ಅರ್ಧದಷ್ಟಿರುವ ಶ್ರೀಲಂಕಾ, 2 ರಿಂದ 2.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆದರೆ, ಶ್ರೀಲಂಕಾದ ಜಿಡಿಪಿಗೆ (GDP) ಪ್ರವಾಸೋದ್ಯಮದ (tourism) ಕೊಡುಗೆಯೇ ಶೇ.10ಕ್ಕಿಂತ ಹೆಚ್ಚಿದೆ. ಕೋವಿಡ್-19 ಸಾಂಕ್ರಾಮಿಕ ವೈರಸ್ ಮೊದಲಿಗೆ ಶ್ರೀಲಂಕಾದ ಸಂಪೂರ್ಣ ಪ್ರವಾಸೋದ್ಯಮವನ್ನು ಹಾಳು ಮಾಡಿದರೆ, ಇದರ ಬೆನ್ನಲ್ಲಿಯೇ ಚೀನಾದಿಂದ (China Debt) ಪಡೆದುಕೊಂಡ ಸಾಲದ ಸುಳಿಗೆ ಸಿಲುಕಿತು.

ದುರ್ಬಲ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ ಚೀನಾ, ಬಳಿಕ ಆ ದೇಶಗಳನ್ನು ತನ್ನ ನಿರ್ಧಾರಕ್ಕೆ ಅನುಗುಣವಾಗಿ ಆಡಿಸುತ್ತದೆ ಎನ್ನುವುದಕ್ಕೆ ಶ್ರೀಲಂಕಾ ಮತ್ತೊಂದು ಸಾಕ್ಷಿಯಾಗಿದೆ. ಈಗಾಗಲೇ ಪಡೆದ ಸಾಲವನ್ನು ಮರುಪಾವತಿ ಮಾಡಲಾಗಿದೆ ಹಂಬಂಟೋಟ (hambantota) ಬಂದರನ್ನು ಚೀನಾಗೆ 100 ವರ್ಷ ಲೀಸ್ ಗೆ ಶ್ರೀಲಂಕಾ ನೀಡಿದ್ದರೂ, ಇದರಿಂದ ಚೀನಾದ ಸಾಲದ ಸಂಪೂರ್ಣ ಮರುಪಾವತಿ ಸಾಧ್ಯವಾಗಿಲ್ಲ.

ಪಾಕ್, ಶ್ರೀಲಂಕಾವನ್ನು ಸಾಲದ ಹೊರೆಯಲ್ಲಿ ಮುಳುಗಿಸಿದ ಚೀನಾದಿಂದ ಬಾಂಗ್ಲಾದೇಶಕ್ಕೆ ಶಾಕ್!
ಅದರೊಂದಿಗೆ ದೇಶದ ಆರ್ಥಿಕ ಸಂಕಷ್ಟವು ಮಿತಿಮೀರಿದ್ದು, ದಿನನಿತ್ಯದ ಆಹಾರ ಉತ್ಪನ್ನಗಳು ಜನರಿಗೆ ಕೈಗೆ ಸಿಲುಕದೇ ಇರುವಷ್ಟು ಏರಿಕೆಯಾಗಿದೆ. ಒಟ್ಟಾರೆ ದೇಶದ ಖಜಾನೆಯೇ ಸಂಪೂರ್ಣವಾಗಿ ಖಾಲಿಯಾಗಿದೆ. ಇನ್ನು ಇಡೀ ಶ್ರೀಲಂಕಾ ಸರ್ಕಾರವನ್ನು ರಾಜಪಕ್ಷ ಕುಟುಂಬ ಆಳ್ವಿಕೆ ಮಾಡುತ್ತಿದೆ. ಗೋಟಬಯ ರಾಜಪಕ್ಷ (Gotabaya Rajapaksa) ಶ್ರೀಲಂಕಾ ಅಧ್ಯಕ್ಷರಾಗಿದ್ದರೆ, ಮಹಿಂದಾ ರಾಜಪಕ್ಷ ಪ್ರಧಾನಮಂತ್ರಿಯಾಗಿದ್ದಾರೆ. ಎಲ್ಲಾ ಅಧಿಕಾರಗಳೂ ಇವರ ಕುಟುಂಬಕ್ಕೆ ಮಾತ್ರವೇ ಸೀಮಿತವಾಗಿ ಉಳಿದಿವೆ. ವಿಶ್ವ ಬ್ಯಾಂಕ್ ನ (World Bank) ಅಂದಾಜಿನ ಪ್ರಕಾರ ಕೋವಿಡ್-19 ಆರಂಭವಾದ ಬಳಿಕ ಶ್ರೀಲಂಕಾದಲ್ಲಿ 5 ಲಕ್ಷ ಜನರು ಬಡತನ ರೇಖೆಗಿಂತ ಕೆಳಗಿಳಿದಿದ್ದರೆ, ಹಣದುಬ್ಬರ ಶೇ.11.1 ಆಗಿದೆ. ಆಹಾರ ಮತ್ತು ಪಾನೀಯಗಳ ಹಣದುಬ್ಬರ ಡಿಸೆಂಬರ್ ನಲ್ಲಿ 22.1 % ಆಗಿದೆ. ಖಜಾನೆ ಖಾಲಿಯಾಗಿರುವ ಕಾರಣ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ಶ್ರೀಲಂಕಾ ಇಲ್ಲ. ಒಂದು ಮೂಲದ ಪ್ರಕಾರ ಮೂರುಹೊತ್ತಿನ ಊಟಕ್ಕೂ ಶ್ರೀಲಂಕಾ ಜನ ಪರದಾಟ ನಡೆಸುತ್ತಿದ್ದಾರೆ. ಕಳೆದವರ್ಷವೇ ಶ್ರೀಲಂಕಾ ಸರ್ಕಾರ ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದರೆ, ಸೇನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ನೀಡಲಾಗಿದೆ. ಸಕ್ಕರೆ ಮತ್ತು ಅಕ್ಕಿಗೆ ಸರ್ಕಾರ ಬೆಲೆ ನಿಗದಿ ಮಾಡಿದ್ದರೂ, ಆ ಬೆಲೆಗೆ ವಸ್ತುಗಳನ್ನು ಖರೀದಿ ಮಾಡಲು ಜನರಿಂದ ಆಗುತ್ತಿಲ್ಲ.

Sri Lanka Braves Forex Crisis: ತಪ್ಪದೇ ಸಾಲ ಕಟ್ಟುತ್ತೇವೆಂದು ಭರವಸೆ ನೀಡಿದ ಶ್ರೀಲಂಕಾ
"ನನ್ನ ಗ್ರಾಮದ ತರಕಾರಿ ಮಾರುಕಟ್ಟೆಯಲ್ಲಿ 100 ಗ್ರಾಮ್ ಗಳ ತರಕಾರಿ ಪ್ಯಾಕೆಟ್ ಮಾರುತ್ತಿದ್ದೇನೆ. ಒಂದು ಕೆಜಿ ಹಾಲಿನ ಪೌಡರ್ ಪ್ಯಾಕೆಟ್ ಅನ್ನು ತಲಾ 100 ಗ್ರಾಮ್ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದೇನೆ. ಯಾಕೆಂದರೆ ಇಲ್ಲಿನ ಜನ 1 ಕೆಜಿ ಪ್ಯಾಕೆಟ್ ಅನ್ನು ತೆಗೆದುಕೊಳ್ಳುವ ಶಕ್ತಿಯಲ್ಲಿಲ್ಲ. ಅದಲ್ಲದೆ, 100 ಗ್ರಾಮ್ ಗಿಂತ ಹೆಚ್ಚಿನ ಬೀನ್ಸ್ ತೆಗೆದುಕೊಳ್ಳಲು ಜನರಲ್ಲಿ ಹಣವಿಲ್ಲ' ಎಂದು ಶ್ರೀಲಂಕಾ ನಿವಾಸಿಯೊಬ್ಬ ಬ್ರಿಟಿಷ್ ಪತ್ರಿಕೆಗೆ ಅಳಲು ತೋಡಿಕೊಂಡಿದ್ದಾನೆ. ಶ್ರೀಲಂಕಾದ ಎಲ್ಲಾ ಪಾಸ್ ಪೋರ್ಟ್ ಆಫೀಸ್ ಗಳಲ್ಲಿ ಜನರ ಸಾಲು ಕಾಣುತ್ತಿದೆ. ವಿದ್ಯಾವಂತರಾದ ನಾಲ್ಕು ಜನರ ಪೈಕಿ ಮೂರು ಜನ ಶ್ರೀಲಂಕಾ ಬಿಟ್ಟು ಬೇರೆ ದೇಶಕ್ಕೆ ತೆರಳುವ ಪ್ರಯತ್ನದಲ್ಲಿದ್ದಾರೆ.

Latest Videos
Follow Us:
Download App:
  • android
  • ios