Asianet Suvarna News Asianet Suvarna News

ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!

"ಸಾಂಪ್ರದಾಯಿಕ ಭಾರತೀಯ ಹಾಸಿಗೆ" ಎಂದು ಲೇಬಲ್ ಮಾಡಲಾದ ಚಾರ್ಪಾಯಿಗೆ 1,12,075 ರೂ. ಬೆಲೆ ಇದೆ. ಅಲ್ಲದೆ, ಸ್ಟೂಲ್‌ಗಳಿರುವ ಬಣ್ಣ ಬಣ್ಣದ ಚಾರ್ಪಾಯಿ ಬೆಡ್ ಸೆಟ್ 1,44,304 ರೂ.ಗೆ ಮಾರಾಟವಾಗುತ್ತಿದೆ.!

humble charpai is being sold for 1 44 lakh rupees in etsy website ash
Author
First Published May 11, 2023, 11:46 AM IST

ನವದೆಹಲಿ (ಮೇ 11, 2023): ನಮ್ಮ ದೈನಂದಿನ ಜೀವನದಲ್ಲಿ ಸಾಕಷ್ಟು ಸಾಮಾನ್ಯವಾಗಿರುವ ಬಹಳಷ್ಟು ವಸ್ತುಗಳು   ಅಮೂಲ್ಯವಾದ ರತ್ನಗಳ ಬೆಲೆಗೆ ಮಾರಾಟವಾಗುತ್ತಿರುವುದನ್ನು ನಾವು ಇಂಟರ್‌ನೆಟ್‌ನಲ್ಲಿ ನೋಡಿದ್ದೇವೆ. ವೆಬ್‌ಸೈಟ್‌ವೊಂದರಲ್ಲಿ ಕಸದ ಕವರ್‌ ಸಹ 1 ಲಕ್ಷ ರೂ. ಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿತ್ತು. ಈಗ, ಉತ್ತರ ಭಾರತದಲ್ಲಿ ಹಾಗೂ ಹಲವು ಹಳ್ಳಿಗಳ ಕಡೆ ಜನ ಸಾಮಾನ್ಯರು ಬಳಸೋ ಚಾರ್ಪಾಯಿ ಅಥವಾ ಹಗ್ಗದ ಮಂಚಕ್ಕೆ ಅಮೆರಿಕದ ಇ - ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾಗುತ್ತಿದೆ. ಅದೂ ಬೆಲೆ ಎಷ್ಟು ಅಂತೀರಾ.. 1 ಲಕ್ಷಕ್ಕೂ ಹೆಚ್ಚು..! ಹೌದು, ಇದು ನಂಬಲು ಅಸಾಧ್ಯವಾದರೂ ನೀವು ನಂಬ್ಲೇಬೇಕ್!

ಈ ಇ - ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಹಗ್ಗದ ಮಂಚಕ್ಕೆ ಪಟ್ಟಿ ಮಾಡಿರುವ ಬೆಲೆಗಳ ಸ್ಕ್ರೀನ್‌ಶಾಟ್‌ಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಹಾಗಂತ ಇದು ಸುಳ್ಳು ಸುದ್ದಿ ಅನ್ಕೋಬೇಡಿ. ಆ ವೆಬ್‌ಸೈಟ್‌ನಲ್ಲೂ ಚಾರ್ಪಾಯಿ ಅಥವಾ ಹಗ್ಗದ ಮಂಚಕ್ಕೆ 1 ಲಕ್ಷಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. "ಸಾಂಪ್ರದಾಯಿಕ ಭಾರತೀಯ ಹಾಸಿಗೆ" ಎಂದು ಲೇಬಲ್ ಮಾಡಲಾದ ಚಾರ್ಪಾಯಿಗೆ 1,12,075 ರೂ. ಬೆಲೆ ಇದೆ. 

ಇದನ್ನು ಓದಿ: 6 ವರ್ಷದ ಬಾಲಕಿಗೆ ಶಾಲೆಯಲ್ಲೇ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ ವಿದ್ಯಾರ್ಥಿಗಳು: ಐ - ಪ್ಯಾಡ್‌ನಲ್ಲಿ ಸೆರೆ!

ಅಲ್ಲದೆ, ಸ್ಟೂಲ್‌ಗಳಿರುವ ಬಣ್ಣ ಬಣ್ಣದ ಚಾರ್ಪಾಯಿ ಬೆಡ್ ಸೆಟ್ 1,44,304 ರೂ.ಗೆ ಮಾರಾಟವಾಗುತ್ತಿದೆ.! ಇದೇ ರೀತಿ, ಇನ್ನೂ ಕೆಲವು ವೆರೈಟಿ ಚಾರ್ಪಾಯಿಯನ್ನು ನೋಡಲು ಬಯಸಿದರೆ Etsy ಯ ವೆಬ್‌ಸೈಟ್‌ನಲ್ಲಿ ನೀವು ನಮ್ಮ ದೇಸಿ ಚಾರ್ಪಾಯಿಯ ಹಲವಾರು ಪ್ರಕಾರಗಳನ್ನು ನೋಡಬಹುದು. 
 
ಮತ್ತು ಕೆಲವು ಜನರು ನಿಜವಾಗಿಯೂ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಆ ಹಗ್ಗದ ಮಂಚಗಳನ್ನು ಖರೀದಿಸಸಿದ್ದಾರೆ ಎಂಬುದನ್ನು ಸಹ ನೀವು ನಂಬ್ಲೇಬೇಕು. ಸ್ಟಾಕ್‌ ಕಡಿಮೆ ಇದೆ ಎಂಬ ಸಂದೇಶವನ್ನು ಸಹ ಪಟ್ಟಿ ಮಾಡಲಾಗಿದೆ. ನಾಲ್ಕು ಮಂಚಗಳು ಮಾತ್ರ ಸ್ಟಾಕ್‌ನಲ್ಲಿದೆ ಹಾಗೂ ಒಂದು ಮಂಚವನ್ನು ಖರೀದಿದಾರರೊಬ್ಬರ ಕಾರ್ಟ್‌ನಲ್ಲಿದೆ ಎಂದೂ ತಿಳಿದುಬಂದಿದೆ. ಇನ್ನು, ನೀವು ಸಹ ಇಷ್ಟು ಬೆಲೆ ಕೊಟಟ್ಟು ಚಾರ್ಪಾಯಿ ಅಥವಾ ಹಗ್ಗದ ಮಂಚಗಳನ್ನು ಖರೀದಿ ಮಾಡ್ತೀರಾ ಹೇಗೆ?

ಇದನ್ನೂ ಓದಿ: ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!

ಕೆಲ ದಿನಗಳ ಹಿಂದೆ ಬ್ಯಾಲೆನ್ಸಿಯಾಗ ಎಂಬ ಐಷಾರಾಮಿ ಬ್ರ್ಯಾಂಡ್‌ ಈ ಹಿಂದೆ ಕಸದ ಬ್ಯಾಗ್‌ಗಳಿಂದ ಸ್ಫೂರ್ತಿ ಪಡೆದ ಬ್ಯಾಗ್‌ವೊಂದನ್ನಿ ಬಿಡುಗಡೆ ಮಾಡಿತು. ಈ ಬ್ರಾಂಡ್ ಬ್ಯಾಗ್ ಅನ್ನು 1.4 ಲಕ್ಷ ರೂ.ಗೆ ಮಾರಾಟ ಮಾಡಿದೆ. ಬಳಸಿದ ವಸ್ತುಗಳ ವಿಷಯದಲ್ಲಿ ಕಸದ ಚೀಲವು ನಿಜವಾದ ಡಸ್ಟ್‌ಬಿನ್‌ಗಿಂತ ಭಿನ್ನವಾಗಿರುತ್ತದೆ. ಪ್ಲಾಸ್ಟಿಕ್ ಬದಲಿಗೆ, ಬಾಲೆನ್ಸಿಯಾಗಾ ಪೂರಕವಾದ ಕರು ಚರ್ಮದ ಚರ್ಮವನ್ನು ಬಳಸಿದ್ದಾರೆ. ಉಳಿದಂತೆ ಎಲ್ಲವೂ ಬಹುತೇಕ ಒಂದೇ ರೀತಿ ಕಾಣುತ್ತದೆ. ಬ್ರ್ಯಾಂಡ್ ತನ್ನ ಇತ್ತೀಚಿನ ಉತ್ಪನ್ನದ ಬಗ್ಗೆ ಸ್ವಲ್ಪ ಅರಿವನ್ನು ಹೊಂದಿದೆ ಮತ್ತು ಅದು ಎಷ್ಟು ವಿಲಕ್ಷಣವಾಗಿದೆ ಎಂದು ತಿಳಿದಿದೆ. ಈ ಬಗ್ಗೆ ವುಮೆನ್ಸ್ ವೇರ್ ಡೈಲಿಯೊಂದಿಗೆ ಮಾತನಾಡುತ್ತಾ, ಬಾಲೆನ್ಸಿಯಾಗದ ಸೃಜನಶೀಲ ನಿರ್ದೇಶಕಿ ಡೆಮ್ನಾ ಗ್ವಾಸಾಲಿಯಾ, "ವಿಶ್ವದ ಅತ್ಯಂತ ದುಬಾರಿ ಕಸದ ಚೀಲವನ್ನು ಮಾಡುವ ಅವಕಾಶವನ್ನು ನಾನು ಕಳೆದುಕೊಳ್ಳಲು ಸಾಧ್ಯವಾಗಲಿಲ್ಲ, ಏಕೆಂದರೆ ಫ್ಯಾಷನ್ ಸ್ಕ್ಯಾಂಡಲ್‌ ಅನ್ನು ಯಾರು ಇಷ್ಟಪಡುವುದಿಲ್ಲ?" ಎಂದೂ ಪ್ರಶ್ನೆ ಮಾಡಿದ್ದರು. 

ಇದನ್ನೂ ಓದಿ: ಪತಿಯ ಸಾವಿನ ನಂತರ ದು:ಖದ ಬಗ್ಗೆ ಪುಸ್ತಕ ಬರೆದ ಮಹಿಳೆ: ಕೊಲೆ ಆರೋಪದ ಮೇಲೆ ಬಂಧಿಸಿದ ಪೊಲೀಸರು!

Follow Us:
Download App:
  • android
  • ios