6 ವರ್ಷದ ಬಾಲಕಿಗೆ ಶಾಲೆಯಲ್ಲೇ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ ವಿದ್ಯಾರ್ಥಿಗಳು: ಐ - ಪ್ಯಾಡ್‌ನಲ್ಲಿ ಸೆರೆ!
ಅಮೆರಿಕದ ಟೆಕ್ಸಾಸ್ ಜಿಲ್ಲೆಯ ಶಾಲೆಯೊಂದರಲ್ಲಿ 6 ವರ್ಷದ ಬಾಲಕಿಯನ್ನು ಪುರುಷ ವಿದ್ಯಾರ್ಥಿಯೊಬ್ಬನ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ, ಈ ಕೃತ್ಯವನ್ನು ಐ - ಪ್ಯಾಡ್‌ನಲ್ಲಿ ಸೆರೆ ಹಿಡಿಯಲಾಗಿದೆ.
ವಾಷಿಂಗ್ಟನ್ ಡಿಸಿ (ಮೇ 10, 2023): 6 ವರ್ಷದ ಸಹಪಾಠಿ ವಿದ್ಯಾರ್ಥಿನಿಗೆ ಪುರುಷ ವಿದ್ಯಾರ್ಥಿಯೊಬ್ಬನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ ಆರೋಪ ಅಮೆರಿಕದಲ್ಲಿ ಕೇಳಿಬಂದಿದೆ. ಈ ಹಿನ್ನೆಲೆ ಆ ಶಾಲೆಯ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಈ ಶಾಲೆಯ ಪರಿಸ್ಥಿತಿಯಿಂದ ಪೋಷಕರು ಮತ್ತು ಸಮುದಾಯದ ಸದಸ್ಯರು ಕೋಪಗೊಂಡಿದ್ದಾರೆ ಮತ್ತು ಶಾಲೆಯ ವಿರುದ್ಧ ಪ್ರತಿಭಟಿಸಲು ಜನರ ಸಂಖ್ಯೆ ಹೆಚ್ಚುತ್ತಿದೆ ಎಂದೂ ಸುದ್ದಿ ಮಾದ್ಯಮ ತಿಳಿಸಿದೆ.
ಹೌದು, ಅಮೆರಿಕದ ಟೆಕ್ಸಾಸ್ ಜಿಲ್ಲೆಯ ಶಾಲೆಯೊಂದರಲ್ಲಿ 6 ವರ್ಷದ ಬಾಲಕಿಯನ್ನು ಪುರುಷ ವಿದ್ಯಾರ್ಥಿಯೊಬ್ಬನ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ, ಈ ಕೃತ್ಯವನ್ನು ಐ - ಪ್ಯಾಡ್‌ನಲ್ಲಿ ಸೆರೆ ಹಿಡಿಯಲಾಗಿದೆ ಎಂದೂ ತಿಳಿದುಬಂದಿದೆ. ಕ್ಲಾಸ್‌ರೂಂನ ಡೆಸ್ಕ್‌ನಲ್ಲೇ ಈ ಆಘಾತಕಾರಿ ಕೃತ್ಯ ನಡೆದಿದ್ದು, ಶಾಲೆಯಲ್ಲಿ ಶಿಕ್ಷಕಿ ಇರುವಾಗಲೇ ಇಂತಹ ಕೃತ್ಯ ನಡೆದಿದೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಡ್ರಗ್ಸ್ ಸೇವಿಸಿ, ಅಶ್ಲೀಲ ಚಿತ್ರ ವೀಕ್ಷಿಸಿ 30 ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಕಾಮಪಿಶಾಚಿ!
ಇನ್ನು, ಈ ಅನಿರೀಕ್ಷಿತ ಸುದ್ದಿ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದ್ದರಿಂದ ಸಂಬಂಧಿತ ಹುಡುಗಿಯ ಕುಟುಂಬ ಸದಸ್ಯರು ಮತ್ತೊಂದು ಪ್ರತಿಭಟನೆಗೆ ಯೋಜಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. ವಯಸ್ಕರು ಈ ರೀತಿ ಮಾಡಲು ಕಷ್ಟಪಡುವ ವಿಷಯಗಳಿಗೆ 6 ವರ್ಷದ ಮಗುವನ್ನು ಒತ್ತಾಯಿಸಲಾಗಿದೆ. ಇದು ಅತ್ಯಂತ ಆಘಾತಕಾರಿ ವಿಷಯವಾಗಿದೆ ಮತ್ತು ಇದು ಆ ವಿದ್ಯಾರ್ಥಿನಿಯ ಸುತ್ತಲಿರುವ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ" ಎಂದೂ ಪ್ರತಿಭಟನಾನಿರತ ಪೋಷಕರಲ್ಲಿ ಒಬ್ಬರು ಹೇಳಿಕೊಂಡಿದ್ದಾರೆ.
ಏಪ್ರಿಲ್ 19 ರಂದು ಪ್ಲೇನ್‌ವ್ಯೂ ಸೌತ್ ಎಲಿಮೆಂಟರಿಯಲ್ಲಿ ಇಂತಹ ಆಘಾತಕಾರಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಹರಡಿದಾಗ ಮಾತ್ರ ಪೋಷಕರಿಗೆ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪ್ಲೇನ್‌ವ್ಯೂ ಹೆರಾಲ್ಡ್ ವರದಿ ಮಾಡಿದೆ. ಸಾರ್ವಜನಿಕರ ಆಕ್ರೋಶದ ನಂತರ ಅಧಿಕಾರಿಗಳು ಒಂದು ವಾರದ ನಂತರ ಈ ರೀತಿ ಘಟನೆ ನಡೆದಿರುವುದನ್ನು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪತಿಯ ಸಾವಿನ ನಂತರ ದು:ಖದ ಬಗ್ಗೆ ಪುಸ್ತಕ ಬರೆದ ಮಹಿಳೆ: ಕೊಲೆ ಆರೋಪದ ಮೇಲೆ ಬಂಧಿಸಿದ ಪೊಲೀಸರು!
ಈ ಮಧ್ಯೆ, ಆಘಾತಕಾರಿ ಘಟನೆಯ ನಂತರ ಯುವತಿಯ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದೇನೆ ಎಂದು ಹಲ್ಲೆಗೊಳಗಾದ 6 ವರ್ಷದ ಬಾಲಕಿಯ ಹಿರಿಯ ಸೋದರಸಂಬಂಧಿ ಹೇಳಿದ್ದಾರೆ. "ಅವಳು ತೊಂದರೆಯಲ್ಲಿದ್ದಾಳೆ; ಅವಳು, 'ನನ್ನ ಹೊಟ್ಟೆ ನೋಯುತ್ತದೆ. ನಾನು ಮಲಗಲು ಬಯಸುತ್ತೇನೆ," ಎಂದು ಹೆಳಿಕೊಂಡ ಬಗ್ಗೆ ಸೋದರಸಂಬಂಧಿ ಅಮೆರಿಕ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು, ಶಾಲೆಯಲ್ಲಿ ಊಟದ ವೇಳೆ ಒಬ್ಬ ಹುಡುಗ ತಾನು ಬೆತ್ತಲೆಯಾಗಿ ಆಕೆಗೆ ತೋರಿಸಿದ್ದಾನೆ ಎಂದು ಬಾಲಕಿ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಅಲ್ಲದೆ, ಘಟನೆಗೆ ಒಂದು ವಾರದ ಮೊದಲು, ತನ್ನನ್ನು ಡೆಸ್ಕ್ ಕೆಳಗೆ ಎಳೆದು ಪುರುಷ ವಿದ್ಯಾರ್ಥಿಯ ಮೇಲೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲಾಯಿತು ಎಂದೂ ಆಕೆ ನಂತರ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪತಿಯ ಸಾವಿನ ನಂತರ ದು:ಖದ ಬಗ್ಗೆ ಪುಸ್ತಕ ಬರೆದ ಮಹಿಳೆ: ಕೊಲೆ ಆರೋಪದ ಮೇಲೆ ಬಂಧಿಸಿದ ಪೊಲೀಸರು!