500 ರೂ. ಹೂಡಿಕೆಯಿಂದ ಕೋಟ್ಯಧಿಪತಿಯಾಗಬಹುದಾ? ಇದು ಹೇಗೆ? ಅಲ್ಪ ಹಣದ ಹೂಡಿಕೆಯಿಂದ ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ...
ಲಕ್ಷಾಧಿಪತಿ, ಕೋಟ್ಯಧಿಪತಿ ಆಗುವ ಆಸೆ ಇಲ್ಲದ ಜನರು ಬಹಳ ಕಮ್ಮಿ ಎನ್ನಬಹುದೇನೋ. ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಒಂದಿಷ್ಟು ಹಣವನ್ನು ಕೂಡಿಟ್ಟರೆ ಮುಂದೆ ಅದೇ ಸಮುದ್ರ ಆಗುವುದೂ ಉಂಟು. ಆದರೆ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಡಿಪಾಸಿಟ್ ಮಾಡಿ ಇಡುವುದು ಹಲವರಿಗೆ ಕಷ್ಟವೂ ಆಗಿದೆ. ಆದರೆ ಕೇವಲ 500 ರೂಪಾಯಿ ಸೇವಿಂಗ್ಸ್‌ನಿಂದ ಆರಂಭಗೊಂಡು ಕೋಟ್ಯಧಿಪತಿಯಾಗಲು ಸಾಧ್ಯವಿದೆ. ತಿಂಗಳಿಗೆ ₹500 ರ ಸಣ್ಣ ಮೊತ್ತದಿಂದಲೇ ಹೂಡಿಕೆ ಆರಂಭಿಸಿ, ಪ್ರತಿ ವರ್ಷ ಸ್ವಲ್ಪ ಸ್ವಲ್ಪ ಹೆಚ್ಚುತ್ತಾ ಬಂದರೆ ದೀರ್ಘಾವಧಿಯ ಆರ್ಥಿಕ ಗುರಿಯತ್ತ ಗಮನಹರಿಸಿದರೆ ನಿಮ್ಮ ಕೋಟ್ಯಾಧಿಪತಿಯಾಗುವ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಿದ್ದರೆ ಅದು ಹೇಗೆ ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.
ಇದು ಸಾಧ್ಯವಾಗುವುದು ಮ್ಯೂಚುವಲ್ ಫಂಡ್‌ಗಳಿಂದ. ತಿಂಗಳಿಗೆ ಕೇವಲ 500 ರೂಪಾಯಿಗಳಿಂದ ಹೂಡಿಕೆ ಮಾಡಬಹುದು. ಇದನ್ನು SIP (Systematic Investment Plan) ಎಂದು ಕರೆಯುತ್ತಾರೆ. ನೀವು ನಿಯಮಿತವಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲು ಇದು ಒಂದು ಮಾರ್ಗವಾಗಿದೆ. ನೀವು 500 ರೂಪಾಯಿಗಳನ್ನು ಹೂಡಿಕೆ ಮಾಡಿದರೂ ಸಹ, ಸಮಯ ಕಳೆದಂತೆ ಸಂಯುಕ್ತ ಬಡ್ಡಿಯಿಂದಾಗಿ ಗಮನಾರ್ಹ ಮೊತ್ತವನ್ನು ಗಳಿಸಬಹುದು. ದೀರ್ಘಾವಧಿಯ ಹೂಡಿಕೆಗೆ ಇದು ಉತ್ತಮ ಮಾರ್ಗವಾಗಿದೆ.ಮ್ಯೂಚುವಲ್ ಫಂಡ್ ಎಸ್‌ಐಪಿ (SIP) ಮೂಲಕ ತಿಂಗಳಿಗೆ ಕೇವಲ ₹500 ಹೂಡಿಕೆ ಆರಂಭಿಸಿ, ಶಿಸ್ತುಬದ್ಧವಾಗಿ ಮುಂದುವರಿಸಿದರೆ ದೊಡ್ಡ ಮೊತ್ತದ ಸಂಪತ್ತು ಸೃಷ್ಟಿಸಬಹುದು. ಈ ಮೂಲಕ ಭವಿಷ್ಯದ ಜೀನವದಲ್ಲಿ ಆರ್ಥಿಕ ಸ್ವಾತಂತ್ರ್ಯ ಪಡೆಯಬಹುದಾಗಿದೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಹೇಗೆ?
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು, ನೀವು ಮೊದಲು ನೋಂದಾಯಿತ ಹಣಕಾಸು ಸಲಹೆಗಾರರನ್ನು ಹುಡುಕಬೇಕು ಅಥವಾ ಮ್ಯೂಚುವಲ್ ಫಂಡ್ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀವು ನಿಮ್ಮ ಹೂಡಿಕೆಯ ಗುರಿಗಳು, ಅಪಾಯ ಸಹಿಷ್ಣುತೆ ಮತ್ತು ಹೂಡಿಕೆ ಅವಧಿಯನ್ನು ಆಧರಿಸಿ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡಬಹುದು. ನೀವು SIP ಮೂಲಕ ಹೂಡಿಕೆ ಮಾಡಲು ಆರಿಸಿದರೆ, ನೀವು ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ಒಂದು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು. ಇದು ನಿಮ್ಮ ಹೂಡಿಕೆಯನ್ನು ನಿಯಂತ್ರಿಸಲು ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮ್ಯೂಚುವಲ್ ಫಂಡ್‌ಗಳಲ್ಲಿ ಕೇವಲ 500 ರೂಪಾಯಿಗಳಿಂದ ಹೂಡಿಕೆ ಮಾಡುವುದು ನಿಮ್ಮ ಹೂಡಿಕೆ ಪ್ರಯಾಣವನ್ನು ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ. ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದರೆ, ನೀವು ಗಮನಾರ್ಹವಾದ ಸಂಪತ್ತನ್ನು ಗಳಿಸಬಹುದು.
"ಸ್ಟೆಪ್-ಅಪ್" ಪರಿಕಲ್ಪನೆ:
ಇಲ್ಲಿ "ಸ್ಟೆಪ್-ಅಪ್" (Step-Up) ಎನ್ನುವ ಪರಿಕಲ್ಪನೆ ಬಹಳ ಮುಖ್ಯ. ಇದರ ಅರ್ಥ ಮೊದಲೇ ಹೇಳಿದಂತೆ ಪ್ರತಿ ವರ್ಷ ಹೂಡಿಕೆಯ ಮೊತ್ತವನ್ನು ಸ್ವಲ್ಪ ಹೆಚ್ಚಿಸುತ್ತಾ ಹೋಗಬೇಕು. ನಿಮ್ಮ ಸಂಬಳ ಹೆಚ್ಚಾದಂತೆ, ಹೂಡಿಕೆಯ ಮೊತ್ತವನ್ನೂ ಹೆಚ್ಚಿಸಬೇಕು. ಇದಕ್ಕೆ ಚಿಕ್ಕ ಉದಾಹರಣೆ ಕೊಡುವುದಾದರೆ. ನಿಮ್ಮ ಆರಂಭಿಕ ಹೂಡಿಕೆ: ತಿಂಗಳಿಗೆ 500 ರೂಪಾಯಿ ಇರುತ್ತದೆ ಎಂದುಕೊಳ್ಳಿ. ನೀವು 25 ವರ್ಷಗಳ ಪ್ಲ್ಯಾನ್ ಮಾಡಿರುತ್ತೀರಿ. ವಾರ್ಷಿಕ ಸ್ಟೆಪ್-ಅಪ್ ಅರ್ಥಾತ್ ಹೆಚ್ಚಳವಾಗಿ ಶೇಡಕಾ 10ರಷ್ಟು ಹೆಚ್ಚು ಹೂಡಿಕೆ ಮಾಡಬೇಕು. ಆಗ ನಿರೀಕ್ಷಿತ ಲಾಭ ಶೇಕಡಾ 15ರಷ್ಟಾಗುತ್ತದೆ. ಆಗ ಸಂಗ್ರಹವಾಗುವ ಮೊತ್ತವು 81 ಲಕ್ಷ ರೂಪಾಯಿಗಳು
ಅದೇ ರೀತಿ ಆರಂಭಿಕ ಹೂಡಿಕೆ: ತಿಂಗಳಿಗೆ 1 ಸಾವಿರ ರೂಪಾಯಿ ಇದ್ದರೆ, ವಾರ್ಷಿಕ ಸ್ಟೆಪ್-ಅಪ್ (ಹೆಚ್ಚಳ) ಶೇಕಡಾ 20 ರಷ್ಟು ಮಾಡಿದರೆ, ನಿರೀಕ್ಷಿತ ಲಾಭ: ಶೇಕಡಾ 15 ರಷ್ಟು ಆಗಿ, ನೀವು 1.6 ಕೋಟಿ ರೂಪಾಯಿ ಸಿಗುತ್ತದೆ. ಯಾವುದೇ ಹೂಡಿಕೆಯಲ್ಲಿ ಅಪಾಯವಿರುತ್ತದೆ, ಆದರೆ SIP ಗಳು ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ನೀವು ಸಣ್ಣ ಮೊತ್ತವನ್ನು ಹೂಡಿಕೆ ಮಾಡುತ್ತೀರಿ ಮತ್ತು ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಬಹುದು.
