ಭಾರತದ ಅರ್ಥವ್ಯವಸ್ಥೆ ಏರುಗತಿಯಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ, ಸಣ್ಣ ಉದ್ಯಮ ಆರಂಭಿಸಲು ಬಯಸುವವರಿಗೆ ಇಲ್ಲಿದೆ ಕೆಲವೊಂದು ಮೂಲ ಸಲಹೆಗಳು…
ಭಾರತವು ಇದೀಗ ಏರುಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕ ದೇಶವಾಗಿದೆ. 11ನೇ ಸ್ಥಾನದಿಂದ ಭಾರತವು ನಾಲ್ಕನೇ ಅರ್ಥ ವ್ಯವಸ್ಥೆ ದೇಶವಾಗಿ ಹೊರಹೊಮ್ಮಿದ್ದು, ಇನ್ನೇನು 3ನೇ ಅತಿ ದೊಡ್ಡಅರ್ಥ ವ್ಯವಸ್ಥೆ ದೇಶವಾಗಲಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲಿ ಉದ್ಯಮ ಆರಂಭಿಸುವುದು ಈಗ ಸುಲಭವಾಗಿದೆ. ಇದಕ್ಕೆ ಸಂಬಂಧಿಸಿದಂತೆ Startup India ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಇದರ ಮೂಲಕ ನೀವು ನಿಮಗೆ ಇಷ್ಟವಾದ ಉದ್ಯಮ, ಅದಕ್ಕೆ ಸಿಗುವ ಆರ್ಥಿಕ ನೆರವು ಎಲ್ಲವನ್ನೂ ತಿಳಿದುಕೊಳ್ಳಬಹುದಾಗಿದೆ. ಹೊಸ ಉದ್ಯಮ ಆರಂಭಿಸುವ ಮುನ್ನ ಬೇಕಾಗಿರುವ ಕೆಲವು ಮೂಲ ಅಂಶಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಭಾರತದಲ್ಲಿ ಉದ್ಯಮವನ್ನು ಆರಂಭಿಸಲು ಕೆಲವು ಮುಖ್ಯ ಅಂಶಗಳು:
ಉದ್ಯಮದ ಪ್ರಕಾರವನ್ನು ಆರಿಸುವುದು:
ನೀವು ಯಾವ ರೀತಿಯ ಉದ್ಯಮವನ್ನು ಆರಂಭಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಉತ್ಪಾದನೆ, ಸೇವೆ ಅಥವಾ ವ್ಯಾಪಾರದಲ್ಲಿ ಯಾವುದಾದರೂ ಒಂದು ವಿಭಾಗವನ್ನು ಆರಿಸಿಕೊಳ್ಳಿ. ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ಅದಕ್ಕಾಗಿ ಸೂಕ್ತ ಪ್ಲಾನ್ ಮಾಡಿಕೊಳ್ಳುವುದು ಅತಿ ಅವಶ್ಯ. ಯೋಜನೆ ಸರಿಯಾಗಿದ್ದಲ್ಲಿ ವ್ಯಾಪಾರವೂ ಸುಗಮವಾಗಿರುತ್ತದೆ. ಪರಿಣಾಮಕಾರಿಯಾದ ವ್ಯಾಪಾರದ ಯೋಜನೆ ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಉದ್ಯಮದ ಗುರಿ, ಗ್ರಾಹಕರು, ಸ್ಪರ್ಧೆ ಮತ್ತು ಹಣಕಾಸು ಯೋಜನೆಗಳನ್ನು ಒಳಗೊಂಡಿರುವ ಒಂದು ಸಮಗ್ರ ವ್ಯಾಪಾರ ಯೋಜನೆಯನ್ನು ತಯಾರಿಸಿಕೊಳ್ಳಬೇಕಾಗುತ್ತದೆ.
ಅತಿಮುಖ್ಯವಾದದ್ದು ಹಣಕಾಸು:
ನಿಮ್ಮ ಉದ್ಯಮಕ್ಕೆ ಬೇಕಾದ ಹಣಕಾಸನ್ನು ಎಲ್ಲಿಂದ ಪಡೆಯುತ್ತೀರಿ ಎಂಬುದನ್ನು ನಿರ್ಧರಿಸಿ. ಸಾಲ, ಹೂಡಿಕೆ ಅಥವಾ ಸ್ವಂತ ಹಣವನ್ನು ಬಳಸಬಹುದು. ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ಅದರ ಆರಂಭಕ್ಕೆ ತಗಲುವ ಖರ್ಚು-ವೆಚ್ಚ ಎಷ್ಟು ಎಂಬುದರ ಬಗ್ಗೆ ಅಂದಾಜು ಯೋಜನೆ ತಯಾರಿಸಬೇಕಾಗುತ್ತದೆ. ಇವುಗಳನ್ನು ಪ್ರಾಥಮಿಕ ಹಂತದ ಖರ್ಚುಗಳೆಂದು ಕರೆಯಲಾಗುತ್ತದೆ. ಇದರ ನಂತರ ದುಡಿಯುವ ಬಂಡವಾಳದ ಅಂದಾಜು ತಯಾರಿಸಬೇಕು ಹಾಗೂ ಉದ್ಯಮವು ಸುಗಮವಾಗಿ ನಡೆಯಲು ಪ್ರತಿ ತಿಂಗಳು ಬರಬಹುದಾದ ಖರ್ಚು-ವೆಚ್ಚಗಳ ಲೆಕ್ಕ ಹಾಕಿಕೊಳ್ಳಬೇಕು. ವ್ಯಾಪಾರದ ಅಂದಾಜು ಲೆಕ್ಕ ಹಾಗೂ ವೆಚ್ಚಗಳನ್ನು ಸೇರಿಸಿ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಎಷ್ಟು ಲಾಭ ಬರಬಹುದು ಎಂಬುದನ್ನು ಲೆಕ್ಕ ಮಾಡಿ.
ಕಾನೂನು ಅಂಶಗಳು:
ನಿಮ್ಮ ಉದ್ಯಮವನ್ನು ನೋಂದಾಯಿಸಿ, ಪರವಾನಗಿಗಳನ್ನು ಪಡೆಯಿರಿ ಮತ್ತು ಕಾನೂನುಬದ್ಧವಾಗಿ ವ್ಯವಹಾರ ನಡೆಸಲು ಅಗತ್ಯವಿರುವ ಎಲ್ಲವನ್ನೂ ಮಾಡಿ. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರದ ನೋಂದಣಿ ಪ್ರಕ್ರಿಯೆಯನ್ನು ಅತಿ ಸರಳಗೊಳಿಸಲಾಗಿದ್ದು, ವ್ಯಾಪಾರ ಆರಂಭಿಸುವವರಿಗೆ ವರದಾನವಾಗಿದೆ. ವ್ಯಾಪಾರ ನೋಂದಣಿ ಮಾಡಿಕೊಳ್ಳಲು ಕೆಲವೊಂದು ನಿಯಮಗಳು ಇದ್ದು ಅದನ್ನು ಪಾಲಿಸಬೇಕಾಗುತ್ತದೆ. ಭಾರತದಲ್ಲಿ ತೆರಿಗೆ ಕಾನೂನುಗಳನ್ನು ತಿಳಿದುಕೊಂಡು, ನಿಮ್ಮ ಉದ್ಯಮಕ್ಕೆ ಸಂಬಂಧಿಸಿದ ತೆರಿಗೆಗಳನ್ನು ಸರಿಯಾಗಿ ಪಾವತಿಸಿ.
ಮಾರ್ಕೆಟಿಂಗ್ ಅಂಶ:
ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಗ್ರಾಹಕರಿಗೆ ತಲುಪಿಸಲು ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿ. ನಿಮ್ಮ ಉದ್ಯಮಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿ, ತರಬೇತಿ ನೀಡಿ ಮತ್ತು ಅವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿ. ನಿಮ್ಮ ಉದ್ಯಮವನ್ನು ಉತ್ತಮವಾಗಿ ನಿರ್ವಹಿಸಲು ಒಂದು ವ್ಯವಸ್ಥಿತವಾದ ರಚನೆಯನ್ನು ರಚಿಸಿ. ನಿಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ. ನಿಷ್ಠಾವಂತ ಹಾಗೂ ಪ್ರಾಮಾಣಿಕ ಉದ್ಯೋಗಿಗಳ ಪರಿಶ್ರಮವಿದ್ದರೆ ಮಾತ್ರ ಯಾವುದೇ ಕಂಪನಿ ಯಶಸ್ಸು ಗಳಿಸಲು ಸಾಧ್ಯ. ಹೀಗಾಗಿ ನಿಮ್ಮ ವ್ಯಾಪಾರಕ್ಕೆ ತಕ್ಕಂತೆ ನುರಿತ ಹಾಗೂ ಉತ್ತಮ ನೌಕರರನ್ನು ಕಂಪನಿಗೆ ನೇಮಿಸಿಕೊಳ್ಳಬೇಕಾಗುತ್ತದೆ.
