Asianet Suvarna News Asianet Suvarna News

Money Stuck in ATM : ಎಟಿಎಂ ಯಂತ್ರದಿಂದ ನಗದು ಬರದೆ ಖಾತೆಯಲ್ಲಿ ಹಣ ಕಟ್ ಆದ್ರೆ ತಕ್ಷಣ ಹೀಗೆ ಮಾಡಿ!

ಪ್ರತಿ ದಿನ ಎಟಿಎಂ ಬಳಸ್ತೇವೆ. ಕಾರ್ಡ್ ಹಾಕಿ ಹಣ ಪಡೆಯೋದು ನಮಗೆ ಗೊತ್ತಿದೆ. ಕೆಲವೊಮ್ಮೆ ಕೈಕೊಡುವ ಎಟಿಎಂ ಬಗ್ಗೆ ಎಲ್ಲಿ ದೂರು ನೀಡ್ಬೇಕು ಎಂಬುದು ತಿಳಿದಿಲ್ಲ. ಕೈಗೆ ಬರದ ಹಣ ಖಾತೆಯಲ್ಲಿ ಇಲ್ಲವೆಂದಾದ್ರೆ ಭಯ ಬೇಡ. 

How to recover money debited in account but stuck in ATM  follow these simple steps
Author
Bangalore, First Published Dec 22, 2021, 4:28 PM IST

Tech Desk: ಸ್ವಯಂಚಾಲಿತ ಟೆಲ್ಲರ್ ಯಂತ್ರ ಅಂದ್ರೆ ಎಟಿಎಂ (ATM )ನಈಗ ಜೀವನದ ಒಂದು ಭಾಗದಂತಾಗಿದೆ. ಹಣಕಾಸಿನ ಕೆಲಸವನ್ನು ಇದು ಸುಲಭಗೊಳಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಹಣಕ್ಕಾಗಿ ಬ್ಯಾಂಕ್‌(Bank)ಗಳಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ ವ್ಯಥೆಯನ್ನು ಜನ ಮರೆತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಎಟಿಎಂಗಳಿಂದ ಸುಲಭವಾಗಿ ಹಣವನ್ನು ಹಿಂಪಡೆಯಬಹುದು. ಕೇವಲ ಹಣ ಪಡೆಯುವುದು ಮಾತ್ರವಲ್ಲ ಈಗ ಎಟಿಎಂ ಮೂಲಕವೇ ಸಾಲ(Loan)ಕ್ಕೆ ಅರ್ಜಿ ಕೂಡ ಸಲ್ಲಿಸಬಹುದು. ಯಂತ್ರಗಳ ಕೆಲಸ ಮನುಷ್ಯ ಮಾಡಿದಂತಲ್ಲ. ಯಂತ್ರಗಳು ಯಾವಾಗ ಕೈಕೊಡುತ್ತವೆ ಎಂಬುದನ್ನು ಹೇಳುವುದು ಕಷ್ಟ. ತುರ್ತು ಪರಿಸ್ಥಿತಿಯಲ್ಲಿ ಎಟಿಎಂಗೆ ಹೋದರೆ ಅಲ್ಲಿ ಹಣವಿರುವುದಿಲ್ಲ. ಇಲ್ಲವೆ ಯಂತ್ರ ಹಾಳಾಗಿದೆ ಎಂಬ ಬೋರ್ಡ್ ಕಾಣಿಸುತ್ತದೆ. ಕೆಲವೊಮ್ಮೆ ಕಾರ್ಡ್,ಎಟಿಎಂ ಒಳಗೆ ಸಿಲುಕಿಕೊಳ್ಳುತ್ತದೆ. ಇಂಥ ಅನೇಕ ಸಮಸ್ಯೆಗಳಲ್ಲಿ ಎಟಿಎಂನಿಂದ ಹಣ ಬರದೆ ಇರುವು ಸಮಸ್ಯೆಯೂ ಒಂದಿದೆ.  

ಎಟಿಎಂಗೆ ಹೋಗಿ ಕಾರ್ಡ್ ಹಾಕಿ,ಪಿನ್ (Pin) ಸಂಖ್ಯೆ ನಮೂದಿಸಿ,ನಿಮಗೆ ಬೇಕಾಗುವ ಹಣದ ಮೊತ್ತ ನಮೂದಿಸಿ ಓಕೆ ಬಟನ್ ಒತ್ತುತ್ತೀರಿ. ಆದರೆ ಹಣ ಮಾತ್ರ ಯಂತ್ರದಿಂದ ಹೊರಗೆ ಬರುವುದಿಲ್ಲ. ಫಟ್ ಅಂತ ಮೊಬೈಲ್ ಗೆ ಮೆಸ್ಸೇಜ್ (Message )ಬರುತ್ತದೆ. ನಿಮ್ಮ ಖಾತೆಯಿಂದ ಇಷ್ಟು ಹಣ ವಿತ್ ಡ್ರಾ ಆಗಿದೆ ಅಂತ ಬರುತ್ತದೆ. ಹಣ ಖಾತೆಯಿಂದ ಕಟ್ ಆಗಿದೆ ಅಂದ್ಮೇಲೆ ಮಶಿನ್ ನಿಂದ ಬರಬೇಕಲ್ಲ ಅಂತಾ ನೀವು ಸ್ವಲ್ಪ ಹೊತ್ತು ಕಾಯ್ತಿರಾ. ರಿಸಿಪ್ಟ್ (Receipt) ಬರುತ್ತೆ ಹೊರತೂ ಹಣ ಬರುವುದಿಲ್ಲ. ಹೀಗಾದಾಗ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಹಣ ವಾಪಸ್ ಪಡೆಯೋದು ಹೇಗೆ ಎಂಬುದನ್ನು ನಾವು ಹೇಳ್ತೆವೆ.

ಎಟಿಎಂನಿಂದ ನಗದು ಹೊರ ಬರದೆ  ನಿಮ್ಮ ಖಾತೆಯಿಂದ ಹಣ ಕಡಿತಗೊಳಿಸಿದರೆ ನೀವು ಭಯಪಡುವ ಅಗತ್ಯವಿಲ್ಲ. ವಾಸ್ತವವಾಗಿ, ತಾಂತ್ರಿಕ ಸಮಸ್ಯೆಗಳಿಂದ ಇದು ಅನೇಕ ಬಾರಿ ಸಂಭವಿಸುತ್ತದೆ. ಈ ಹಣವನ್ನು ಹಿಂದಿರುಗಿಸಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ಗಳಿಗೆ ಸಮಯ ಮಿತಿಯನ್ನು ನಿಗದಿಪಡಿಸಿದೆ. ಆರ್ ಬಿಐ ಪ್ರಕಾರ, ಎಲ್ಲಾ ಬ್ಯಾಂಕ್‌ಗಳು ಡೆಬಿಟ್ ಮಾಡಿದ ಹಣವನ್ನು ಐದು  ಕೆಲಸದ ದಿನಗಳಲ್ಲಿ ಖಾತೆದಾರರಿಗೆ ವಾಪಸ್ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ ಪ್ರತಿದಿನ ಬ್ಯಾಂಕ್‌ 100 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ಹಣ ಬರದೆ ಹೋದಾಗ ಮಾಡಬೇಕಾದ ಕೆಲಸ :

ಎಟಿಎಂಗೆ ಹೋಗಿ ಹಣ ವಿತ್ ಡ್ರಾ ಮಾಡುವ ವೇಳೆ ಹಣ ಬರದೆ ಹೋದಲ್ಲಿ ಮೊದಲು ನಿಮ್ಮ ಖಾತೆಯನ್ನು ಪರಿಶೀಲಿಸಿ. ಕೆಲವರಿಗೆ ಬ್ಯಾಂಕ್ ನಿಂದ ಸಂದೇಶ ಬರುವುದಿಲ್ಲ. ಹಾಗಾಗಿ ಬ್ಯಾಲೆನ್ಸ್ (Balance )ಚೆಕ್ ಮಾಡಬೇಕು. ಬ್ಯಾಲೆನ್ಸ್ ಚೆಕ್ ಮಾಡಿದಾಗ ನಿಮ್ಮ ಖಾತೆಯಿಂದ ಹಣ ಕಡಿತವಾಗಿದೆಯೇ ಇಲ್ಲವೇ ಎಂಬ ಮಾಹಿತಿ ನಿಮಗೆ ಸಿಗುತ್ತದೆ. ಮೊದಲು ಇದನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. 
ಎಟಿಎಂನಿಂದ ಹಣ ಬರೆದ ಖಾತೆಯಿಂದ ಹಣ ಕಡಿತಗೊಂಡಿದ್ದರೆ ನೀವು 5 ದಿನಗಳವರೆಗೆ ಕಾಯಬೇಕಾಗುತ್ತದೆ. 

ಸಾಮಾನ್ಯವಾಗಿ  ಐದು ದಿನಗಳಲ್ಲಿ ಖಾತೆಗೆ ಹಣ ವಾಪಸ್ಸಾಗುತ್ತದೆ. ಒಂದು ವೇಳೆ ಐದು ದಿನಗಳ ನಂತರವೂ ಖಾತೆಗೆ ಹಣ ಬರದೆ ಹೋದಲ್ಲಿ ಈ ಬಗ್ಗೆ ನೀವು ಬ್ಯಾಂಕ್ ಗೆ ಮಾಹಿತಿ ನೀಡಬೇಕಾಗುತ್ತದೆ. ಕೆಲವೊಮ್ಮೆ ಬ್ಯಾಂಕ್ ದಾಖಲೆಗಳನ್ನು ಕೇಳುತ್ತದೆ. ಯಾವ ಎಟಿಎಂ ಶಾಖೆಯಲ್ಲಿ ನೀವು ವಹಿವಾಟು ನಡೆಸಿದ್ದೀರಿ? ಯಾವ ಸಮಯದಲ್ಲಿ ನಡೆಸಿದ್ದೀರಿ ಎಂಬ ಮಾಹಿತಿ ನೀಡಬೇಕಾಗುತ್ತದೆ. ನಿಮ್ಮ ಬಳಿ ಎಟಿಎಂನಿಂದ ಬಂದ ಸ್ಲಿಪ್ ಇದ್ದರೆ ಅದನ್ನು ತೋರಿಸಬೇಕಾಗುತ್ತದೆ. ಇಲ್ಲವೆ ಬ್ಯಾಂಕ್ ನಿಂದ ಬಂದ ಸಂದೇಶವಿದ್ದರೆ ಅದನ್ನು ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ. 

ಬ್ಯಾಂಕಿನಲ್ಲಿ ದೂರು ನೀಡಿದ 30 ದಿನಗಳಲ್ಲಿ ನಿಮ್ಮ ಖಾತೆಗೆ ಹಣ ವಾಪಸ್ ಬರುತ್ತದೆ. ಆಗ್ಲೂ ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದಾದರೆ ನೀವು ದೂರು ನಿವಾರಣಾ ಇಲಾಖೆಯ ಹಿರಿಯ ಅಧಿಕಾರಿಗೆ ದೂರು ನೀಡಬೇಕಾಗುತ್ತದೆ.ಕೆಲ ಬ್ಯಾಂಕ್ ಗಳು ಆನ್ಲೈನ್ ಮೂಲಕ ಹಾಗೂ ಸಹಾಯ ವಾಣಿ ಮೂಲಕವೂ ದೂರನ್ನು ಸ್ವೀಕರಿಸುತ್ತವೆ.

ಇದನ್ನೂ ಓದಿ:

1) Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!

2) Tie up for Tokenization:ಮಾಸ್ಟರ್ ಕಾರ್ಡ್-ಗೂಗಲ್ ಪೇ ಒಪ್ಪಂದ; ಟೋಕನೈಸ್ಡ್ ಕಾರ್ಡ್ ಸೇವೆಗೆ ಸಿದ್ಧ

3) How To Find UAN: ನಿಮ್ಮ PF ಖಾತೆ UAN ಮರೆತು ಹೋಯ್ತಾ? ಮುಂದೇನು ಮಾಡ್ಬೇಕು? ಇಲ್ಲಿದೆ ಮಾಹಿತಿ

Follow Us:
Download App:
  • android
  • ios