Celebrity Investors : ಹೂಡಿಕೆಯಲ್ಲಿ ಹಿಂದೆ ಬಿದ್ದಿಲ್ಲ ಬಾಲಿವುಡ್ ಕಲಾವಿದರು!

ಗಳಿಕೆಯೊಂದಿದ್ದರೆ ಸಾಲದು.ಗಳಿಸಿದ ಹಣವನ್ನು ಡಬಲ್ ಮಾಡಲು ಹೂಡಿಕೆ ಕೂಡ ಮಾಡಬೇಕು. ಕೆಲ ಬುದ್ದಿವಂತರು ಲಾಭ ಬರುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಭವಿಷ್ಯ ಭದ್ರಪಡಿಸಿಕೊಳ್ಳುತ್ತಾರೆ. ಅದ್ರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಹಿಂದೆ ಬಿದ್ದಿಲ್ಲ.
 

10 Bollywood Celebrities And Their Startup Investments

ಮುಂಬೈ(ಡಿ. 20): ಕೇವಲ ನಟನೆ(Acting)ಯಿಂದ ಮಾತ್ರವಲ್ಲ ಜಾಹೀರಾತು ಸೇರಿದಂತೆ ಅನೇಕ ಮೂಲಗಳಿಂದ ಕಲಾವಿದರು ಹಣ ಸಂಪಾದನೆ ಮಾಡುತ್ತಾರೆ. ಅದನ್ನು ಒಳ್ಳೆ ಕಡೆ ಹೂಡಿಕೆ ಮಾಡುತ್ತಾರೆ. ಅನೇಕ ಬಾಲಿವುಡ್ (Bollywood)ಸೆಲೆಬ್ರಿಟಿಗಳು  ಸ್ಟಾರ್ಟ್‌ಅಪ್‌ಗಳಲ್ಲಿ ಹಣ ಹೂಡಿದ್ದಾರೆ ಎಂಬ ವಿಷ್ಯ  ಅನೇಕರಿಗೆ ತಿಳಿದಿಲ್ಲ. ಆರೋಗ್ಯ, ಕ್ರೀಡೆ, ಸೌಂದರ್ಯ, ತಂತ್ರಜ್ಞಾನ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಮಾಡಿರುವ ಹೂಡಿಕೆ ಬಗ್ಗೆ ವಿವರ ಇಲ್ಲಿದೆ.

ದೀಪಿಕಾ ಪಡುಕೋಣೆ (Deepika Padukone): ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಬಾಲಿವುಡ್‌ನ  ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದೆ. ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವಲ್ಲಿ ದೀಪಿಕಾ ಪಡುಕೋಣೆ ಮುಂದಿದ್ದಾರೆ. ಡ್ರಮ್ಸ್ ಫುಡ್ ಇಂಟರ್ನ್ಯಾಷನಲ್, ಫ್ಲೇವರ್ಡ್ ಗ್ರೀಕ್ ಮೊಸರು ಬ್ರ್ಯಾಂಡ್ ಎಪಿಗಾಮಿಯಾದ ಮೂಲ ಕಂಪನಿ,ಬೆಂಗಳೂರು ಮೂಲದ ಬಾಹ್ಯಾಕಾಶ ಟೆಕ್ ಸ್ಟಾರ್ಟ್ಅಪ್ ಬೆಲ್ಲಟ್ರಿಕ್ಸ್ ಏರೋಸ್ಪೇಸ್, ಎಡ್ಟೆಕ್ ಪ್ಲಾಟ್‌ಫಾರ್ಮ್ ಫ್ರಂಟ್‌ರೋ, ಡಿಜಿಟಲ್ ಪೆಟ್ ಕೇರ್ ಪ್ಲಾಟ್‌ಫಾರ್ಮ್ Supertails.com ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ಸ್ಟಾರ್ಟ್ಅಪ್ ಬ್ಲೂಸ್ಮಾರ್ಟ್ ನಲ್ಲಿ ಹೂಡಿಕೆ ಮಾಡಿದ್ದಾರೆ   

ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) : ನಟಿ ಜಾಕ್ವೆಲಿನ್ ಫರ್ನಾಂಡಿಸ್ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುತ್ತಾರೆ. ಮುಂಬೈ ಮೂಲದ ಸ್ಟಾರ್ಟ್ ಅಪ್ ರಾಕ್ಯಾನ್ ಬೆವರೇಜಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ.ರಾ ಪ್ರೆಸ್ಸೆರಿ ಬ್ರಾಂಡ್ ಅಡಿಯಲ್ಲಿ ಜ್ಯೂಸ್‌ಗಳನ್ನು ಮಾರಾಟ ಮಾಡುತ್ತದೆ.    

ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) : ಯೋಗ ಕ್ವೀನ್ ಶಿಲ್ಪಾ ಶೆಟ್ಟಿ 2018 ರಲ್ಲಿ ಬೇಬಿಕೇರ್ ಸ್ಟಾರ್ಟ್ಅಪ್ MamaEarth ನಲ್ಲಿ ಸುಮಾರು 1.6 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಶಿಲ್ಪಾ,ಯೋಗ, ವ್ಯಾಯಾಮ, ಇಮ್ಯುನಿಟಿ ಮತ್ತು ಡಯಟ್ ಗಾಗಿ ಸಿಂಪಲ್ ಸೋಲ್‌ಫುಲ್ ಎಂಬ ಹೆಸರಿನ ಅಪ್ಲಿಕೇಶನ್ ಶುರು ಮಾಡಿದ್ದಾರೆ.

ಸೋನು ಸೂದ್ (Sonu Sood) : ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿದ ನಟ ಸೋನು ಸೂದ್  ಸ್ಪೈಸ್ ಮನಿ ಎಂಬ ಗ್ರಾಮೀಣ ಫಿನ್‌ಟೆಕ್ ಸ್ಟಾರ್ಟಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಒಂದು ಕೋಟಿ ಗ್ರಾಮೀಣ ಸಬಲೀಕರಣದ ಗುರಿಯನ್ನು ಹೊಂದಿದೆ.

ಆಯುಷ್ಮಾನ್ ಖುರಾನಾ (Ayushmann Khurrana) :ವಿಭಿನ್ನ ಚಿತ್ರ,ಅಧ್ಬುತ ನಟನೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿರುವ ಆಯುಷ್ಮಾನ್ ಖುರಾನಾ,2019 ರಲ್ಲಿ ಮೊದಲ ಹೂಡಿಕೆ ಮಾಡಿದ್ದರು. ದಿ ಮ್ಯಾನ್ ಕಂಪನಿಯ ಬ್ರಾಂಡ್‌ ಪ್ರಚಾರ ಮಾಡಿದ ಅವರು, ಹೆಲಿಯೊಸ್ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ ನಲ್ಲಿ ಹೂಡಿಕೆ ಮಾಡಿದ್ದಾರೆ.  

ಆಲಿಯಾ ಭಟ್ (Alia Bhatt) :  ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿರುವ ಆಲಿಯಾ ಭಟ್, ಫ್ಯಾಷನ್ ಸ್ಟಾರ್ಟ್ಅಪ್ ಸ್ಟೈಲ್ ಕ್ರ್ಯಾಕರ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಫ್ಯಾಶನ್ ಮತ್ತು ಸೌಂದರ್ಯ ಬ್ರ್ಯಾಂಡ್ ನೈಕಾದಲ್ಲಿ ಕೂಡ ಹೂಡಿಕೆ  ಮಾಡಿದ್ದಾರೆ. 

ಶ್ರದ್ಧಾ ಕಪೂರ್ (Shraddha Kapoor) : ನಟನೆ ಮಾತ್ರವಲ್ಲ ಹೂಡಿಕೆ ಮೂಲಕ ಯುವಕರನ್ನು ಸೆಳೆದ ನಟಿ ಶ್ರದ್ಧಾ ಕಪೂರ್. 2021 ರಲ್ಲಿ,MyGlamm ನಲ್ಲಿ ಹೂಡಿಕೆ ಮಾಡಿದ್ದಾರೆ. 

ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) : ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹೂಡಿಕೆಯಲ್ಲೂ ಮುಂದಿದ್ದಾರೆ. ಪೌಷ್ಟಿಕಾಂಶ ಆಧಾರಿತ ಹೆಲ್ತ್ ಟೆಕ್ ಸ್ಟಾರ್ಟ್ ಅಪ್ ಪಾಸಿಬಲ್‌ನಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. ಬೆಂಗಳೂರು ಮೂಲದ ಎನ್ವಿರಾನ್ಮೆಂಟಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ ಅಂಬಿಯಲ್ಲಿ 50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.  

ಕತ್ರಿನಾ ಕೈಫ್(Katrina Kaif) : ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಕೈಫ್, ಸ್ವಂತ ಮೇಕಪ್ ಬ್ರ್ಯಾಂಡ್ ಕೇ ಬ್ಯೂಟಿ ಪ್ರಾರಂಭಿಸಿದ್ದು, ಫ್ಯಾಶನ್ ಮತ್ತು ಸೌಂದರ್ಯ ಬ್ರ್ಯಾಂಡ್ ನೈಕಾದಲ್ಲಿ ಹೂಡಿಕೆ ಮಾಡಿದ್ದಾಳೆ. 

ಪ್ರಿಯಾಂಕಾ ಚೋಪ್ರಾ (Priyanka Chopra) : ಬೇರೆ ಬೇರೆ ಕಂಪನಿಗಳಲ್ಲಿ ಹೂಡಿಕೆ ಮಾಡಿದ ನಟಿಯರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಕೂಡ ಒಬ್ಬರು. 2018 ರಲ್ಲಿ  ಯುಎಸ್ ಮೂಲದ ಡೇಟಿಂಗ್ ಅಪ್ಲಿಕೇಶನ್‌ ಬಂಬಲ್‌ನಲ್ಲಿ ಹೂಡಿಕೆ ಮಾಡಿದ್ದರು. ಪ್ರಿಯಾಂಕಾ ಹೋಬರ್ಟ್ ಶಾಲೆಯಲ್ಲಿ ಸುಮಾರು 59 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.  

ಇದನ್ನೂಓದಿ: 

1) Cryptocurrency:ಕೇಂದ್ರೀಯ ಮಂಡಳಿ ಸಭೆಯಲ್ಲಿ ಕ್ರಿಪ್ಟೋ ಸಂಪೂರ್ಣ ನಿಷೇಧಕ್ಕೆ RBI ಆಗ್ರಹ

2) Women Retirement Plan: ಪುರುಷರಿಗಿಂತ ಹೆಚ್ಚು ಉಳಿಸೋದು ಹೆಣ್ಮಕ್ಕಳು!

3) Divorced Celebrities Of 2021: ಈ ವರ್ಷ ವಿಚ್ಛೇದನ ಪಡೆದುಕೊಂಡ ತಾರೆಯರ ಪಟ್ಟಿ ಇಲ್ಲಿದೆ..

Latest Videos
Follow Us:
Download App:
  • android
  • ios